Site icon Vistara News

Fifa World Cup | ಅರ್ಜೆಂಟೀನಾ ತಂಡದ ಪಂದ್ಯ ನೋಡಲು ರಜೆ ಅರ್ಜಿ ಬರೆದ ಕೇರಳದ ವಿದ್ಯಾರ್ಥಿಗಳು!

fifa kerala

ಕಲ್ಲಿಕೋಟೆ: ಕತಾರ್​ನಲ್ಲಿ ನಡೆಯತ್ತಿರುವ ಫಿಫಾ ವಿಶ್ವ ಕಪ್​(Fifa World Cup) ಕ್ರೇಜ್ ಹೆಚ್ಚಾಗಿ ಕೇರಳದಲ್ಲೇ ಕಾಣಸಿಗುತ್ತಿದೆ. ಈಗಾಗಲೇ ಹಲವಾರು ಕೇರಳಿಗರು ತಮ್ಮ ನೆಚ್ಚಿನ ಫುಟ್ಬಾಲ್​ ಆಟಗಾರ ಗೇಮ್​ ನೋಡಲು ಹಲವು ಕಸರತ್ತುಗಳನ್ನು ಮಾಡಿ ಸುದ್ದಿಯಾಗಿದ್ದಾರೆ. ಈ ಪಟ್ಟಿಗೆ ಇದೀಗ ನೂತನ ನಿದರ್ಶನವೊಂದು ಸೇರ್ಪಡೆಯಾಗಿದೆ. ಅರ್ಜೆಂಟೀನಾ ಪಂದ್ಯವನ್ನು ನೋಡಲು ಕಲ್ಲಿಕೋಟೆಯ ಐವರು ವಿದ್ಯಾರ್ಥಿಗಳು ಬರೆದ ರಜೆ ಅರ್ಜಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ನವೆಂಬರ್ 22 ರಂದು ಅರ್ಜೆಂಟೀನಾ ಮತ್ತು ಸೌದಿ ಅರೇಬಿಯಾ ನಡುವಿನ ಪಂದ್ಯದಲ್ಲಿ ಮೆಸ್ಸಿ ಆಟವನ್ನು ವೀಕ್ಷಿಸಲು ಕೇರಳದ ಕಲ್ಲಿಕೋಟೆಯ ಐವರು ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ ರಜೆ ಅರ್ಜಿ ನೀಡಿದ್ದರು ಅದರಂತೆ ಮಕ್ಕಳ ಈ ಪ್ರಾಮಾಣಿಕ ಮನವಿಗೆ ಮಕ್ಕಳಿಗೆ ರಜೆ ನೀಡಲಾಗಿತ್ತು. ಈ ವಿಚಾರ ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಮಕ್ಕಳ ಈ ರಜಾ ಅರ್ಜಿ ಟ್ವಿಟರ್​ನಲ್ಲಿ ಗಮನ ಸೆಳೆದಿದೆ. ಇನ್ನು ಈ ಮಕ್ಕಳು 100ಕ್ಕೂ ಹೆಚ್ಚು ಅಭಿಮಾನಿಗಳ ಸಹಿಯನ್ನು ಕೂಡಾ ಸಂಗ್ರಹಿಸಿದ್ದರು.

ಇದನ್ನೂ ಓದಿ | Fifa World Cup | ಲಿಯೊನೆಲ್ ಮೆಸ್ಸಿ ಆಟ ನೋಡಲು ಕೇರಳದಿಂದ ಕತಾರ್​ಗೆ ಕಾರಿನಲ್ಲೇ ಪ್ರಯಾಣಿಸಿ ಬಂದ 5 ಮಕ್ಕಳ ತಾಯಿ!

Exit mobile version