Site icon Vistara News

Fifa World Cup | ಫಿಫಾ ವಿಶ್ವ ಕಪ್​ ಫುಟ್ಬಾಲ್​ ಜಾತ್ರೆಗೆ ಅದ್ಧೂರಿ ಚಾಲನೆ

fifa world cup

ದೋಹಾ: ಕತಾರ್‌ ಆತಿಥ್ಯದಲ್ಲಿ ನಡೆಯುತ್ತಿರುವ ಫಿಫಾ ಫುಟ್ಬಾಲ್​ ವಿಶ್ವ ಕಪ್(Fifa World Cup)-2022ಕ್ಕೆ ಭಾನುವಾರ ಅಧಿಕೃತ ಚಾಲನೆ ದೊರಕಿದೆ. ಉದ್ಘಾಟನಾ ಸಮಾರಂಭವು ದೋಹಾ ಸಮೀಪದ ಅಲ್​ಬೆತ್ ಕ್ರೀಡಾಂಗಣದಲ್ಲಿ ಕತಾರಿ ಸಾಂಸ್ಕೃತಿಕ ನೃತ್ಯ ಮತ್ತು ಹಾಡುಗಳ ಮೂಲಕ ಈ ಕಲರ್​ಫುಲ್​ ಜಾತ್ರೆಗೆ ಚಾಲನೆ ನೀಡಲಾಯಿತು.

ಮಧ್ಯಪ್ರಾಚ್ಯ ರಾಷ್ಟ್ರವೊಂದರಲ್ಲಿ ಈ ಇಷ್ಟು ದೊಡ್ಡ ಟೂರ್ನಿ ಆಯೋಜಿಸುತ್ತಿರುವುದು ಇತಿಹಾಸದಲ್ಲಿ ಇದೇ ಮೊದಲು. ಉದ್ಘಾಟನಾ ಕಾರ್ಯಕ್ರಮದ ವೇಳೆ ಫ್ರಾನ್ಸ್ ತಂಡದ ಮಾಜಿ ದಿಗ್ಗಜ ಮಾರ್ಸೆಲ್ ಡೆಸೈಲಿ ವಿಶ್ವ ಕಪ್ ಟ್ರೋಫಿಯನ್ನು ಎತ್ತಿ ಕೂಟಕ್ಕೆ ಮತ್ತಷ್ಟು ಮೆರಗು ತಂದರು.

32 ದೇಶಗಳ ಧ್ವಜಗಳೊಂದಿಗೆ ವಿಶೇಷ ಪ್ರದರ್ಶನ

ಉದ್ಘಾಟನಾ ಸಮಾರಂಭದಲ್ಲಿ ಈ ಬಾರಿಯ ವಿಶ್ವ ಕಪ್‌ನಲ್ಲಿ ಭಾಗವಹಿಸುವ 32 ದೇಶಗಳ ಧ್ವಜಗಳನ್ನು ವಿಶೇಷ ಪ್ರದರ್ಶನ ನಡೆಸಲಾಯಿತು. ಅದರಂತೆ ಅದ್ಭುತ ತಂತ್ರಜ್ಞಾನದ ಮೂಲಕ ಪ್ರತಿ ದೇಶದ ಜರ್ಸಿಯನ್ನು ವೇದಿಕೆ ಮೇಲೆ ಪ್ರದರ್ಶನಗೊಳಿಸಿ ನೆರದಿದ್ದ ಅಭಿಮಾನಿಗಳಿಗೆ ಭರಪೂರ ರಂಜನೆ ನೀಡಿಲಾಯಿತು.

ಉದ್ಘಾಟನಾ ಸಮಾರಂಭ ಮುಕ್ತಾಯಗೊಂಡ ಬಳಿಕ ಕತಾರ್‌ ಹಾಗೂ ಈಕ್ವೆಡಾರ್‌ ತಂಡಗಳ ನಡುವೆ ಮೊದಲ ಪಂದ್ಯ ನಡೆಯಿತು.

ಇದನ್ನೂ ಓದಿ | Fifa World Cup | ಗಾಯದ ಸಮಸ್ಯೆಯಿಂದಾಗಿ ಫ್ರಾನ್ಸ್​ ತಂಡದ ಕರೀಂ ಬೆಂಜೆಮಾ ಫಿಫಾ ವಿಶ್ವ ಕಪ್​ನಿಂದ ಔಟ್​

Exit mobile version