ದೋಹಾ: ನೆದರ್ಲೆಂಡ್ಸ್ ಮತ್ತು ಈಕ್ವೆಡಾರ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡ ಕಾರಣ ಆತಿಥೇಯ ರಾಷ್ಟ್ರವೆಂಬ ಒಂದೇ ಕಾರಣಕ್ಕಾಗಿ ಪ್ರತಿಷ್ಠಿತ ಫಿಫಾ ವಿಶ್ವ ಕಪ್ (Fifa World Cup) ಪಂದ್ಯಾವಳಿಯಲ್ಲಿ ಆಡುವ ಅವಕಾಶ ಪಡೆದ ಕತಾರ್ ಈ ಕೂಟದಿಂದ ಹೊರಬಿದ್ದ ಮೊದಲ ತಂಡವೆಂಬ ಅವಮಾನಕ್ಕೆ ಸಿಲುಕಿದೆ. ಇದಕ್ಕೂ ಮುನ್ನ ಕತಾರ್ ತಂಡ ಸೆನೆಗಲ್ ವಿರುದ್ಧ ಸೋಲು ಕಂಡಿತ್ತು.
ಶುಕ್ರವಾರದ ದ್ವಿತೀಯ ಪಂದ್ಯದಲ್ಲಿ ಕತಾರ್ ರಕ್ಷಣಾ ವಿಭಾಗದಲ್ಲಿ ಮಾಡಿದ ಸತತ ತಪ್ಪುಗಳಿಂದ ಸೆನೆಗಲ್ ಎದುರು 1-3 ಗೋಲುಗಳ ಸೋಲಿಗೆ ತುತ್ತಾಯಿತು. ಕತಾರ್ ತನ್ನ ಮೊದಲ ಪಂದ್ಯದಲ್ಲಿ ಈಕ್ವೆಡಾರ್‌ಗೆ ಶರಣಾಗಿತ್ತು.
ಸೆನೆಗಲ್ ಈ ಪಂದ್ಯದ ನೆಚ್ಚಿನ ತಂಡವಾಗಿತ್ತು. ಇದಕ್ಕೆ ತಕ್ಕ ಪ್ರದರ್ಶನ ನೀಡಿತು. 3 ಗೋಲುಗಳನ್ನು ಕ್ರಮವಾಗಿ ಬೌಲಯೆ ದಿಯ (41ನೇ ನಿಮಿಷ), ಫಮಾರ ದೈಧಿಯು (48ನೇ ನಿಮಿಷ) ಹಾಗೂ ಬಂಬ ಡಿಯೆಂಗ್ (84ನೇ ನಿಮಿಷ) ಅವರಿಂದ ದಾಖಲಾಯಿತು. ಕತಾರ್ ಪರ ಮೊಹಮ್ಮದ್ ಮುಂಟಾರಿ ಏಕೈಕ ಗೋಲನ್ನು 78ನೇ ನಿಮಿಷದಲ್ಲಿ ಹೊಡೆದರು.
ಕತಾರ್ ಕೊನೆಯ ಪಂದ್ಯದಲ್ಲಿ ಬಲಿಷ್ಠ ನೆದರ್ಲೆಂಡ್ಸ್ ವಿರುದ್ಧ ಸೆಣಸಲಿದೆ. ಈ ಪಂದ್ಯದಲ್ಲಾದರೂ ಗೆದ್ದು ತವರಿನ ಅಭಿಮಾನಿಗಳಿಗೆ ಒಂದಿಷ್ಟು ಸಮಾಧಾನ ನೀಡಲಿದೆಯಾ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ | FIFA World Cup | ಬ್ರೆಜಿಲ್‌ನ ಸ್ಟಾರ್ ಆಟಗಾರ ನೇಮರ್ ಗುಂಪು ಹಂತದ ಪಂದ್ಯಗಳಿಗೆ ಅಲಭ್ಯ