ದೋಹಾ: ಕತಾರ್ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವ ಕಪ್ ಟೂರ್ನಿಯಲ್ಲಿ ಮೊರೊಕ್ಕೊ ತಂಡ ಸೆಮಿಫೈನಲ್ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ಸೋತು ಫೈನಲ್ ರೇಸ್ನಿಂದ ಹೊರಬಿದ್ದಿದೆ. ಆದರೆ ಈ ಟೂರ್ನಿಯಲ್ಲಿ ಅತ್ಯಂತ ಶ್ರೇಷ್ಠ ಪ್ರದರ್ಶನ ತೋರಿದ ಗೋಲ್ ಕೀಪರ್ ಯಾಸಿನ್ ಬೌನೌ ಫುಟ್ಬಾಲ್ ಪ್ರೇಮಿಗಳ ಹೃದಯ ಗೆದ್ದಿದ್ದಾರೆ. ಇದೀಗ ಅವರು ಫುಟ್ಬಾಲ್ ಹೊರತಾಗಿ ತಮ್ಮ ಪುತ್ರನ ವಿಚಾರದಲ್ಲಿ ಮತ್ತೆ ಸುದ್ದಿಯಾಗಿದ್ದಾರೆ.
ಕಳೆದ ಫೋರ್ಚುಗಲ್ ವಿರುದ್ಧ ನಡೆದ ಕ್ವಾರ್ಟರ್ ಫೈನಲ್ ಪಂದ್ಯದ ಗೆಲುವಿನ ಬಳಿಕ ಮಾಧ್ಯಮದ ಜತೆ ಮಾತನಾಡುವ ವೇಳೆ ಅವರ ಮುದ್ದಿನ ಮಗ ಐಸ್ ಕ್ರೀಮ್ ಎಂದು ಮೈಕ್ ತಿನ್ನಲೆತ್ನಿಸಿದ್ದಾನೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕ್ವಾರ್ಟರ್ ಫೈನಲ್ ವಿಜಯದ ನಂತರ ಯಾಸಿನ್ ಅವರನ್ನು ಸಂದರ್ಶಿಸಲು ವರದಿಗಾರನೊಬ್ಬ ಅವರ ಮುಂದೆ ಮೈಕ್ ಹಿಡಿದ ಕೂಡಲೇ ಅದರ ಮೇಲಿನ ನೇರಳೆ ಬಣ್ಣದ ಹೊದಿಕೆಯನ್ನು ಚೀಪಲು ಯಾಸಿನ್ ಪುತ್ರ ಮುಂದಾಗಿದ್ದಾನೆ. ಇದೇ ವೇಳೆ ಯಾಸಿನ್ ಮಗನಿಗೆ ಇದು ಐಸ್ ಕ್ರೀಮ್ ಅಲ್ಲ ಎಂದು ಹೇಳಿದ್ದಾರೆ. ಆದರೂ ಆತ ಎರಡನೇ ಬಾರಿ ಮೈಕ್ ಚೀಪಲು ಯತ್ನಿಸಿದ್ದಾನೆ ಈ ವಿಡಿಯೊ ನೋಡುಗರಿಗೆ ಖಷಿ ನೀಡಿದೆ.
ಇಂದು (ಶನಿವಾರ ಡಿ.17) ನಡೆಯುವ ಫಿಫಾ ವಿಶ್ವ ಕಪ್ ಟೂರ್ನಿಯ ಮೂರನೇ ಸ್ಥಾನದ ಪಂದ್ಯದಲ್ಲಿ ಮೊರಾಕ್ಕೊ ಬಲಿಷ್ಠ ಕ್ರೊವೇಶಿಯಾ ಸವಾಲನ್ನು ಎದುರಿಸಲಿದೆ.
ಇದನ್ನೂ ಓದಿ | Fifa World Cup | ಫಿಫಾ ವಿಶ್ವ ಕಪ್ ಫೈನಲ್ಗೂ ಮುನ್ನ ಎಸ್ಬಿಐ ಪಾಸ್ಬುಕ್ ಫುಲ್ ಟ್ರೆಂಡ್; ಕಾರಣ ಏನು?