Site icon Vistara News

Fifa World Cup| ಆಪರೇಷನ್ ಥಿಯೇಟರ್‌ನಲ್ಲೇ ಫಿಫಾ ವಿಶ್ವ ಕಪ್​ ಪಂದ್ಯ ವೀಕ್ಷಿಸಿದ ರೋಗಿ!

fifa world cup

ಮುಂಬಯಿ: ಕ್ರೀಡಾ ಪ್ರೇಮಿಗಳು ತಮ್ಮ ನೆಚ್ಚಿನ ತಂಡ ಅಥವಾ ಆಟವನ್ನು ವೀಕ್ಷಿಸಲು ಯಾವುದೇ ರೀತಿಯ ಕಸರತ್ತು ಮಾಡಲು ಸಿದ್ಧರಿರುತ್ತಾರೆ. ಆದರೆ ಇಲ್ಲೊಬ್ಬ ಫುಟ್ಬಾಲ್​ನ ಅಪ್ಪಟ ಅಭಿಮಾನಿ ಆಸ್ಪತ್ರೆಯಲ್ಲಿ ಆಪರೇಷನ್ ಮಾಡಿಸಿಕೊಳ್ಳುತ್ತಿರುವಾಗಲೇ ಫಿಫಾ ವಿಶ್ವ ಕಪ್(Fifa World Cup) ಪಂದ್ಯ ವನ್ನು ವೀಕ್ಷಿಸಿ ಎಲ್ಲರನ್ನು ನಿಬ್ಬೆರಗಾಗಿಸಿದ್ದಾನೆ. ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಫುಟ್ಬಾಲ್​ ಅಭಿಮಾನಿಯ ಈ ಫೋಟೊ ಕಂಡ ತಕ್ಷಣವೇ ಉದ್ಯಮಿ ಆನಂದ್ ಮಹೀಂದ್ರಾ ಅವರು ಟ್ವಿಟರ್​ನಲ್ಲಿ ಈ ಫೋಟೊ ಶೇರ್​ ಮಾಡುವ ಮೂಲಕ “ಈ ವ್ಯಕ್ತಿ ಕೆಲವು ರೀತಿಯ ಟ್ರೋಫಿಗೆ ಅರ್ಹನಲ್ಲವೇ” ಎಂದು ಟ್ವೀಟ್​ ಮಾಡಿದ್ದಾರೆ.

ಪೋಲೆಂಡ್‌ ನಗರದ ಕೀಲ್ಸ್‌ನಲ್ಲಿರುವ ಆಸ್ಪತ್ರೆಯಲ್ಲಿ ಈ ಚಿತ್ರವನ್ನು ತೆಗೆಯಲಾಗಿದೆ. ವರದಿಗಳ ಪ್ರಕಾರ ನವೆಂಬರ್ 25 ರಂದು ವ್ಯಕ್ತಿ ತನ್ನ ದೇಹದ ಶಸ್ತ್ರಚಿಕಿತ್ಸೆಗೆ ಒಳಗಾದರು. ಆಪರೇಷನ್​ಗೂ ಮುನ್ನ ಆತ ಶಸ್ತ್ರಚಿಕಿತ್ಸೆ ಮಾಡುವಾಗ ವೇಲ್ಸ್ ಮತ್ತು ಇರಾನ್ ನಡುವಿನ ಪಂದ್ಯವನ್ನು ವೀಕ್ಷಿಸಬಹುದೇ ಎಂದು ಶಸ್ತ್ರಚಿಕಿತ್ಸಕರನ್ನು ಕೇಳಿದ್ದ. ಆಸ್ಪತ್ರೆಯ ಅಧಿಕಾರಿಗಳು ಇದಕ್ಕೆ ಅನುಮತಿ ನೀಡಿ ಆಪರೇಷನ್​ ರೂಮ್​ನಲ್ಲಿ ಟೆಲಿವಿಷನ್ ಸೆಟ್ ಅಳವಡಿಸಿ ಈ ಅಭಿಮಾನಿಯ ಆಸೆಯನ್ನು ನೆರವೇರಿಸಿದ್ದಾರೆ.

ಇದನ್ನೂ ಓದಿ | Fifa World Cup | ತಂಡದಿಂದ ಹೊರಕ್ಕಿಟ್ಟಿದ್ದಕ್ಕೆ ಮುನಿಸು; ಗೆಲುವಿನ ಸಂಭ್ರಮಾಚರಣೆ ಮಾಡದ ರೊನಾಲ್ಡೊ

Exit mobile version