Site icon Vistara News

Moto GP : ಫೋರ್ಚುಗಲ್​ನಲ್ಲಿ ಭಾನುವಾರ ಮೋಟೊ ಜಿಪಿ ಮೊದಲ ಸುತ್ತಿನ ಫೈನಲ್​ ರೇಸ್​

Final race of Moto GP today in Portugal

#image_title

ಬೆಂಗಳೂರು: ಜಗತ್ತಿನ ಅತಿ ದೊಡ್ಡ ಮೋಟಾರ್​ಸೈಕಲ್​ ರೇಸ್​ ಮೋಟೊ ಜಿಪಿಯ ಮೊದಲ ಸುತ್ತು ಮಾರ್ಚ್ 24ರಂದು ಪೋರ್ಚಗಲ್​ನಲ್ಲಿ ಆರಂಭಗೊಂಡಿದೆ. ಅದರ ಫೈನಲ್​ ರೇಸ್​ ಭಾನುವಾರ (ಮಾರ್ಚ್​ 26ರಂದು) ನಡೆಯಲಿದೆ. ಎರಡು ದಿನಗಳ ಅಭ್ಯಾಸದ ಬಳಿಕ ರೇಸರ್​ಗಳು ಅಂತಿಮ ರೇಸ್​ಗೆ ಸಜ್ಜಾಗಿದ್ದಾರೆ. ಇದು ಹಾಲಿ ಋತುವಿನ ಮೊದಲ ರೇಸ್ ಆಗಿದೆ. ಶನಿವಾರ ನಡೆದ ಅರ್ಹತಾ ಸುತ್ತಿನ ರೇಸ್​ನಲ್ಲಿ ಹೋಂಡಾದ ಸವಾರ ಮಾರ್ಕ್​ ಮಾರ್ಕ್ವೆಜ್​ ಗೆಲುವು ಸಾಧಿಸಿದ್ದಾರೆ.

ಪೊರ್ಟಿಮೊದಲ್ಲಿ ನಡೆದ ಈ ರೇಸ್​ನಲ್ಲಿ 1 ನಿಮಿಷ 37.226 ಸೆಕೆಂಡ್​ಗಳಲ್ಲಿ ಒಂದು ಲ್ಯಾಪ್​ ಪೂರ್ಣಗೊಳಿಸುವ ಮೂಲಕ ದಾಖಲೆ ಸೃಷ್ಟಿಸಿದ ಹೋಂಡಾದ ರೇಸರ್​ ಮಾರ್ಕ್ವೆಜ್​ ಫೈನಲ್​ ರೇಸ್​ ಗೆಲ್ಲುವ ಭರವಸೆ ವ್ಯಕ್ತಪಡಿಸಿದ್ದಾರೆ. 1’37.290 ರೇಸ್​ ಮುಗಿಸಿದ ಡುಕಾಟಿಯ ಫ್ರಾನ್ಸೆಸ್ಕೊ ಬಗಾನಿಯಾ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಡುಕಾಟಿಯ ಸವಾರರೇ ಆಗಿರುವ ಜಾರ್ಜ್​ ಮಾರ್ಟಿನಾ (1’37.454) ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.

ಒಟ್ಟು 21 ರೇಸ್​ಗಳು

ಹಾಲಿ ಋತುವಿನಲ್ಲಿ ಒಟ್ಟು 21 ರೇಸ್​ಗಳು ನಡೆಯಲಿದೆ. ಮಾರ್ಚ್​ 24ರಂದು ಆರಂಭಗೊಂಡ ರೇಸ್​ ನವೆಂಬರ್​ 26ರಂದು ಕೊನೆಯಾಗಲಿದೆ. ಕೊನೇ ರೇಸ್​ ವೆಲೆನ್ಸಿಯಾದಲ್ಲಿ ನಡೆಯಲಿದೆ. ಅದಕ್ಕಿಂತ ಮೊದಲು 21 ರಾಷ್ಟ್ರಗಳಲ್ಲಿ ಈ ರೇಸ್​​ ಸುತ್ತಲಿದೆ. ಗರಿಷ್ಠ ರೇಸ್​ಗಳನ್ನು ಗೆಲ್ಲುವ ಸವಾರರು ಚಾಂಪಿಯನ್​ಪಟ್ಟ ಪಡೆಯಲಿದ್ದಾರೆ. ಹೋಂಡಾ ಕಂಪನಿಯ ಮಾರ್ಕ್​ ಮಾರ್ಕ್ವೆಜ್​ ಸ್ಪರ್ಧೆಯಲ್ಲಿರುವ ಒಟ್ಟು 8 ಬಾರಿ ಚಾಂಪಿಯನ್​ಪಟ್ಟ ಅಲಂಕರಿಸಿದ ರೇಸರ್ ಆಗಿದ್ದಾರೆ.

ಇದನ್ನೂ ಓದಿ : Moto GP : ಜಿಯೊ ಹವಾ; ಜಗತ್ತಿನ ಅತಿ ದೊಡ್ಡ ಮೋಟಾರ್​ಸೈಕಲ್​ ರೇಸ್​ ಉಚಿತ ಪ್ರಸಾರ

ಭಾರತದಲ್ಲಿ ಇದೇ ಮೊದಲು ರೇಸ್​

ಈ ಭಾರತದಲ್ಲಿ ಇದೇ ಮೊದಲ ಬಾರಿಗೆ ಮೊಟೊ ಜಿಪಿ ಸ್ಪರ್ಧೆ ನಡೆಯಲಿದೆ. ಮೊಟೊ ಜಿಪಿ ಆಯೋಜಕ ಸಂಸ್ಥೆಯಾಗಿರುವ ಡೊರ್ನಾದಿಂದ ಆತಿಥ್ಯ ಪಡೆಯಲು ಭಾರತದ ಫೇರ್​ಸ್ಟ್ರೀಟ್​ ಸ್ಪೋರ್ಟ್ಸ್​ ಸಂಸ್ಥೆ ಯಶಸ್ಸು ಗಳಿಸಿದೆ. ಸೆಪ್ಟೆಂಬರ್​ 22ರಿಂದ 24ರವರೆಗೆ ಗ್ರೇಟರ್​ ನೊಯ್ಡಾದ ಬುದ್ಧ ಇಂಟರ್​ನ್ಯಾಷನಲ್​ ಸರ್ಕೀಟ್​ನಲ್ಲಿ ರೇಸ್ ನಡೆಯಲಿದೆ. ಇದು ಈ ಋತುವಿನ 14ನೇ ರೇಸ್ ಆಗಿದೆ. ಭಾರತದ ಮೋಟಾರ್​ ಸೈಕಲ್​ ರೇಸ್​ ಅಭಿಮಾನಿಗಳ ಪಾಲಿಗೆ ಇದು ಶುಭ ಸುದ್ದಿಯಾಗಿದೆ.

ಈ ಬಾರಿಯ ಮೊಟೊ ಜಿಪಿಯ ಭಾರತದಲ್ಲಿ ನೇರ ಪ್ರಸಾರದ ಹಕ್ಕನ್ನು ಜಿಯೊ ಸಂಸ್ಥೆ ತನ್ನದಾಗಿಸಿಕೊಂಡಿದೆ. ಜಿಯೊ ಸಿನಿಮಾದಲ್ಲಿ ಉಚಿತವಾಗಿ ವೀಕ್ಷಣೆ ಮಾಡಲು ಅವಕಾಶವಿದೆ.

2023ರ ಮೋಟೊ ಜಿಟಿ ವೇಳಾಪಟ್ಟಿ ಇಂತಿದೆ

Exit mobile version