ಕ್ರೀಡೆ
Moto GP : ಫೋರ್ಚುಗಲ್ನಲ್ಲಿ ಭಾನುವಾರ ಮೋಟೊ ಜಿಪಿ ಮೊದಲ ಸುತ್ತಿನ ಫೈನಲ್ ರೇಸ್
ಪೋರ್ಚುಗಲ್ನಲ್ಲಿ ನಡೆಯುತ್ತಿರುವುದು ಪ್ರಸಕ್ತ ಋತುವಿನ ಮೊದಲ ರೇಸ್ ಆಗಿದ್ದು, ಸೆಪ್ಟೆಂಬರ್ನಲ್ಲಿ ಭಾರತದಲ್ಲಿ ಅಯೋಜನೆಗೊಂಡಿದೆ.
ಬೆಂಗಳೂರು: ಜಗತ್ತಿನ ಅತಿ ದೊಡ್ಡ ಮೋಟಾರ್ಸೈಕಲ್ ರೇಸ್ ಮೋಟೊ ಜಿಪಿಯ ಮೊದಲ ಸುತ್ತು ಮಾರ್ಚ್ 24ರಂದು ಪೋರ್ಚಗಲ್ನಲ್ಲಿ ಆರಂಭಗೊಂಡಿದೆ. ಅದರ ಫೈನಲ್ ರೇಸ್ ಭಾನುವಾರ (ಮಾರ್ಚ್ 26ರಂದು) ನಡೆಯಲಿದೆ. ಎರಡು ದಿನಗಳ ಅಭ್ಯಾಸದ ಬಳಿಕ ರೇಸರ್ಗಳು ಅಂತಿಮ ರೇಸ್ಗೆ ಸಜ್ಜಾಗಿದ್ದಾರೆ. ಇದು ಹಾಲಿ ಋತುವಿನ ಮೊದಲ ರೇಸ್ ಆಗಿದೆ. ಶನಿವಾರ ನಡೆದ ಅರ್ಹತಾ ಸುತ್ತಿನ ರೇಸ್ನಲ್ಲಿ ಹೋಂಡಾದ ಸವಾರ ಮಾರ್ಕ್ ಮಾರ್ಕ್ವೆಜ್ ಗೆಲುವು ಸಾಧಿಸಿದ್ದಾರೆ.
ಪೊರ್ಟಿಮೊದಲ್ಲಿ ನಡೆದ ಈ ರೇಸ್ನಲ್ಲಿ 1 ನಿಮಿಷ 37.226 ಸೆಕೆಂಡ್ಗಳಲ್ಲಿ ಒಂದು ಲ್ಯಾಪ್ ಪೂರ್ಣಗೊಳಿಸುವ ಮೂಲಕ ದಾಖಲೆ ಸೃಷ್ಟಿಸಿದ ಹೋಂಡಾದ ರೇಸರ್ ಮಾರ್ಕ್ವೆಜ್ ಫೈನಲ್ ರೇಸ್ ಗೆಲ್ಲುವ ಭರವಸೆ ವ್ಯಕ್ತಪಡಿಸಿದ್ದಾರೆ. 1’37.290 ರೇಸ್ ಮುಗಿಸಿದ ಡುಕಾಟಿಯ ಫ್ರಾನ್ಸೆಸ್ಕೊ ಬಗಾನಿಯಾ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಡುಕಾಟಿಯ ಸವಾರರೇ ಆಗಿರುವ ಜಾರ್ಜ್ ಮಾರ್ಟಿನಾ (1’37.454) ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.
ಒಟ್ಟು 21 ರೇಸ್ಗಳು
ಹಾಲಿ ಋತುವಿನಲ್ಲಿ ಒಟ್ಟು 21 ರೇಸ್ಗಳು ನಡೆಯಲಿದೆ. ಮಾರ್ಚ್ 24ರಂದು ಆರಂಭಗೊಂಡ ರೇಸ್ ನವೆಂಬರ್ 26ರಂದು ಕೊನೆಯಾಗಲಿದೆ. ಕೊನೇ ರೇಸ್ ವೆಲೆನ್ಸಿಯಾದಲ್ಲಿ ನಡೆಯಲಿದೆ. ಅದಕ್ಕಿಂತ ಮೊದಲು 21 ರಾಷ್ಟ್ರಗಳಲ್ಲಿ ಈ ರೇಸ್ ಸುತ್ತಲಿದೆ. ಗರಿಷ್ಠ ರೇಸ್ಗಳನ್ನು ಗೆಲ್ಲುವ ಸವಾರರು ಚಾಂಪಿಯನ್ಪಟ್ಟ ಪಡೆಯಲಿದ್ದಾರೆ. ಹೋಂಡಾ ಕಂಪನಿಯ ಮಾರ್ಕ್ ಮಾರ್ಕ್ವೆಜ್ ಸ್ಪರ್ಧೆಯಲ್ಲಿರುವ ಒಟ್ಟು 8 ಬಾರಿ ಚಾಂಪಿಯನ್ಪಟ್ಟ ಅಲಂಕರಿಸಿದ ರೇಸರ್ ಆಗಿದ್ದಾರೆ.
ಇದನ್ನೂ ಓದಿ : Moto GP : ಜಿಯೊ ಹವಾ; ಜಗತ್ತಿನ ಅತಿ ದೊಡ್ಡ ಮೋಟಾರ್ಸೈಕಲ್ ರೇಸ್ ಉಚಿತ ಪ್ರಸಾರ
ಭಾರತದಲ್ಲಿ ಇದೇ ಮೊದಲು ರೇಸ್
ಈ ಭಾರತದಲ್ಲಿ ಇದೇ ಮೊದಲ ಬಾರಿಗೆ ಮೊಟೊ ಜಿಪಿ ಸ್ಪರ್ಧೆ ನಡೆಯಲಿದೆ. ಮೊಟೊ ಜಿಪಿ ಆಯೋಜಕ ಸಂಸ್ಥೆಯಾಗಿರುವ ಡೊರ್ನಾದಿಂದ ಆತಿಥ್ಯ ಪಡೆಯಲು ಭಾರತದ ಫೇರ್ಸ್ಟ್ರೀಟ್ ಸ್ಪೋರ್ಟ್ಸ್ ಸಂಸ್ಥೆ ಯಶಸ್ಸು ಗಳಿಸಿದೆ. ಸೆಪ್ಟೆಂಬರ್ 22ರಿಂದ 24ರವರೆಗೆ ಗ್ರೇಟರ್ ನೊಯ್ಡಾದ ಬುದ್ಧ ಇಂಟರ್ನ್ಯಾಷನಲ್ ಸರ್ಕೀಟ್ನಲ್ಲಿ ರೇಸ್ ನಡೆಯಲಿದೆ. ಇದು ಈ ಋತುವಿನ 14ನೇ ರೇಸ್ ಆಗಿದೆ. ಭಾರತದ ಮೋಟಾರ್ ಸೈಕಲ್ ರೇಸ್ ಅಭಿಮಾನಿಗಳ ಪಾಲಿಗೆ ಇದು ಶುಭ ಸುದ್ದಿಯಾಗಿದೆ.
ಈ ಬಾರಿಯ ಮೊಟೊ ಜಿಪಿಯ ಭಾರತದಲ್ಲಿ ನೇರ ಪ್ರಸಾರದ ಹಕ್ಕನ್ನು ಜಿಯೊ ಸಂಸ್ಥೆ ತನ್ನದಾಗಿಸಿಕೊಂಡಿದೆ. ಜಿಯೊ ಸಿನಿಮಾದಲ್ಲಿ ಉಚಿತವಾಗಿ ವೀಕ್ಷಣೆ ಮಾಡಲು ಅವಕಾಶವಿದೆ.
2023ರ ಮೋಟೊ ಜಿಟಿ ವೇಳಾಪಟ್ಟಿ ಇಂತಿದೆ
- ಮಾರ್ಚ್ 24-26 ಪೋರ್ಚುಗಲ್ ಗ್ರ್ಯಾನ್ ಪ್ರಿ
- ಮಾರ್ಚ್ 31-ಏಪ್ರಿಲ್ 2 ಅರ್ಜೆಂಟೀನಾ ಗ್ರ್ಯಾನ್ ಪ್ರಿ
- ಏಪ್ರಿಲ್ 14-16 ಅಮೆರಿಕ ಗ್ರ್ಯಾನ್ ಪ್ರಿ
- ಏಪ್ರಿಲ್ 28-30 ಸ್ಪಾನಿಶ್ ಗ್ರ್ಯಾನ್ ಪ್ರಿ
- ಮೇ 12-14 ಫ್ರೆಂಚ್ ಗ್ರ್ಯಾನ್ ಪ್ರಿ
- ಜೂನ್ 09-11 ಇಟಲಿ ಗ್ರ್ಯಾನ್ ಪ್ರಿ
- ಜೂನ್ 16-18 ಜರ್ಮನ್ ಗ್ರ್ಯಾನ್ ಪ್ರಿ
- ಜೂನ್ 23-25 ಡಚ್ ಗ್ರ್ಯಾನ್ ಪ್ರಿ
- ಜುಲೈ 7-9 ಕಜಕಸ್ತಾನ ಗ್ರ್ಯಾನ್ ಪ್ರಿ
- ಆಗಸ್ಟ್ 4-6 ಬ್ರಿಟಿಷ್ ಗ್ರ್ಯಾನ್ ಪ್ರಿ
- ಆಗಸ್ಟ್ 4-6 ಆಸ್ಟ್ರೀಯಾ ಗ್ರ್ಯಾನ್ ಪ್ರಿ
- ಆಗಸ್ಟ್ 18-20 ಗ್ರ್ಯಾನ್ ಪ್ರಿ ವೊನ್ ಒಸ್ಟೆರಿಚ್, ಆಸ್ಟ್ರಿಯಾ
- ಸೆಪ್ಟೆಂಬರ್ 1-3 ಕ್ಯಾಟಲಾನ್ ಗ್ರ್ಯಾನ್ ಪ್ರಿ
- ಸೆಪ್ಟೆಂಬರ್ 8-10 ಸ್ಯಾನ್ ಮರಿನೊ ಗ್ರ್ಯಾನ್ ಪ್ರಿ
- ಸೆಪ್ಟೆಂಬರ್ 22-24 ಇಂಡಿಯನ್ ಗ್ರ್ಯಾನ್ ಪ್ರಿ
- ಸೆಪ್ಟೆಂಬರ್ 29-ಅಕ್ಟೋಬರ್ 1 ಜಪಾನ್ ಗ್ರ್ಯಾನ್ ಪ್ರಿ
- ಅಕ್ಟೋಬರ್ 13-15 ಇಂಡೋನೇಷ್ಯಾ ಗ್ರ್ಯಾನ್ ಪ್ರಿ
- ಅಕ್ಟೋಬರ್ 20-22 ಆಸ್ಟ್ರೇಲಿಯನ್ ಗ್ರ್ಯಾನ್ ಪ್ರಿ
- ಅಕ್ಟೋಬರ್ 27-29 ಥಾಯ್ಲೆಂಡ್ ಗ್ರ್ಯಾನ್ ಪ್ರಿ
- ನವೆಂಬರ್ 10-12 ಮಲೇಷ್ಯಾ ಗ್ರ್ಯಾನ್ ಪ್ರಿ
- ನವೆಂಬರ್ 17-19 ಕತಾರ್ ಗ್ರ್ಯಾನ್ ಪ್ರಿ
- ನವೆಂಬರ್ 24-26 ವಲೆನ್ಸಿಯಾ ಗ್ರ್ಯಾನ್ ಪ್ರಿ
ಕ್ರಿಕೆಟ್
IPL 2023: ಕೊಹ್ಲಿ ದಾಖಲೆ ಮುರಿಯುವರೇ ಶುಭಮನ್ ಗಿಲ್?
ಈಗಾಗಲೇ ಆರೆಂಜ್ ಕ್ಯಾಪ್ ಪಡೆದಿರುವ ಶುಭಮನ್ ಗಿಲ್ ಅವರು ವಿರಾಟ್ ಕೊಹ್ಲಿಯ ದಾಖಲೆಯೊಂದನ್ನು ಮುರಿಯಲು ಸಜ್ಜಾಗಿದ್ದಾರೆ.
ಅಹಮದಾಬಾದ್: ನ್ಯೂ ಬ್ಯಾಟಿಂಗ್ ಸೆನ್ಸೇಷನಲ್ ಶುಭಮನ್ ಗಿಲ್ ಅವರು ಇದೀಗ ಐಪಿಎಲ್ನಲ್ಲಿ ವಿರಾಟ್ ಕೊಹ್ಲಿಯ ದಾಖಲೆಯೊಂದರ ಮೇಲೆ ಕಣ್ಣಿಟ್ಟಿದ್ದಾರೆ. ಸದ್ಯ 851 ರನ್ ಗಳಿಸಿರುವ ಗಿಲ್ ಅವರು ಚೆನ್ನೈ ವಿರುದ್ಧದ ಪಂದ್ಯದಲ್ಲಿ 122ರನ್ ಗಳಿಸಿದರೆ ವಿರಾಟ್ ಅವರ ಹೆಸರಿನಲ್ಲಿದ್ದ ದಾಖಲೆ ಪತನಗೊಳ್ಳಲಿದೆ.
ಮುಂಬೈ ಇಂಡಿಯನ್ಸ್ ವಿರುದ್ಧದ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಅಮೋಘ ಶತಕ ಬಾರಿಸಿ ಮಿಂಚಿದ್ದ ಗಿಲ್ ಅವರು ಈ ಬಾರಿಯ ಐಪಿಎಲ್ನ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದರು. 730 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದ ಡು ಪ್ಲೆಸಿಸ್ ಇದೀಗ ದ್ವಿತೀಯ ಸ್ಥಾನಕ್ಕೆ ಕುಸಿದಿದ್ದಾರೆ. ಸದ್ಯ ಗಿಲ್ ಅವರು 851 ರನ್ ಬಾರಿಸಿದ್ದಾರೆ. ಆರ್ಸಿಬಿ ತಂಡ ಸೋತು ಹೊರ ಬಿದ್ದ ಕಾರಣ ಡು ಪ್ಲೆಸಿಸ್ಗೆ ಇನ್ನು ಗಿಲ್ ದಾಖಲೆ ಮುರಿಯುವ ಅವಕಾಶವಿಲ್ಲ.
ಕಳೆದ ನಾಲ್ಕು ಇನ್ನಿಂಗ್ಸ್ಗಳಲ್ಲಿ ಮೂರು ಶತಕ ಬಾರಿಸಿರುವ ಗಿಲ್ ಇದೀಗ ಹೊಸ ಮೈಲಿಗಲ್ಲು ಸ್ಥಾಪಿಸುವ ಸನಿಹದಲ್ಲಿದ್ದಾರೆ. 2016ರಲ್ಲಿ ವಿರಾಟ್ ಕೊಹ್ಲಿ ಅವರು ಗಳಿಸಿದ್ದ 973ರನ್ ಗಳ ದಾಖಲೆಯನ್ನು ಮುರಿಯಲು ಮುಂದಾಗಿದ್ದಾರೆ. ಇದಕ್ಕೆ ಗಿಲ್ ಅವರಿಗೆ ಬೇಕಿರುವುದು 122ರನ್ಗಳ ಗುರಿ. ಫೈನಲ್ ಪಂದ್ಯದಲ್ಲಿ ಶತಕದೊಂದಿ ಈ ಮೊತ್ತ ಪೇರಿಸಿದಲ್ಲಿ ಗಿಲ್ ಅವರು ಐಪಿಎಲ್ನ ಇತಿಹಾಸದ ಪುಟ ಸೇರಲಿದ್ದಾರೆ.
ಫೈನಲ್ ಪಂದ್ಯಕ್ಕೆ ಉಭಯ ತಂಡಗಳು
ಗುಜರಾತ್ ಟೈಟನ್ಸ್: ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ಡೇವಿಡ್ ಮಿಲ್ಲರ್, ವೃದ್ಧಿಮಾನ್ ಸಹಾ, ರಶೀದ್ ಖಾನ್, ರಾಹುಲ್ ತೇವಾಟಿಯಾ, ವಿಜಯ್ ಶಂಕರ್/ ಸಾಯಿ ಸುದರ್ಶನ್, ಮೊಹಮ್ಮದ್ ಶಮಿ, ಯಶ್ ದಯಾಳ್, ನೂರ್ ಅಹ್ಮದ್/ ಜೋಶುವಾ ಲಿಟಲ್, ಮೋಹಿತ್ ಶರ್ಮಾ.
ಇದನ್ನೂ ಓದಿ IPL 2023 : ತಮ್ಮ ದೇಹದಲ್ಲಿರುವ ಟ್ಯಾಟೂಗಳ ಅರ್ಥ ವಿವರಿಸಿದ ಸೂರ್ಯಕುಮಾರ್!
ಚೆನ್ನೈ ಸೂಪರ್ ಕಿಂಗ್ಸ್: ಮಹೇಂದ್ರ ಸಿಂಗ್ ಧೋನಿ(ನಾಯಕ), ರವೀಂದ್ರ ಜಡೇಜಾ, ಡೆವೊನ್ ಕಾನ್ವೆ, ಋತುರಾಜ್ ಗಾಯಕ್ವಾಡ್, ಅಂಬಾಟಿ ರಾಯುಡು/ಅಜಿಂಕ್ಯ ರಹಾನೆ, ಮೊಯೀನ್ ಅಲಿ, ಶಿವಂ ದುಬೆ, ದೀಪಕ್ ಚಹರ್, ತುಷಾರ್ ದೇಶಪಾಂಡೆ, ಮಥೀಶಾ ಪತಿರಾಣಾ, ಮಹೀಶ್ ತೀಕ್ಷಣ.
ಕ್ರೀಡೆ
Wrestlers Protest: ಕುಸ್ತಿಪಟುಗಳ ಪ್ರತಿಭಟನೆಗೆ ಬೆಂಬಲ ಸೂಚಿಸಿದ ವಿಶ್ವ ಚಾಂಪಿಯನ್ ಕವಾಯ್
ಭಾರತೀಯ ಕ್ರೀಡಾಪಟುಗಳು ಶಾಂತಿಯಿಂದ ಅಭ್ಯಾಸ ನಡೆಸುವ ವಾತಾವರಣ ಶೀಘ್ರದಲ್ಲೇ ಸೃಷ್ಟಿಯಾಗಲಿ ಎಂದು ಹೇಳುವ ಮೂಲಕ ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತೆ ಕವಾಯ್ ಅವರು ಕುಸ್ತಿಪಟುಗಳಿಗೆ ಬೆಂಬಲ ಸೂಚಿಸಿದ್ದಾರೆ.
ನವದೆಹಲಿ: ಡಬ್ಲ್ಯುಎಫ್ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಪಟ್ಟು ಹಿಡಿದು ಕಳೆದ ಸುಮಾರು ಒಂದು ತಿಂಗಳಿನಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಭಾರತದ ಒಲಿಂಪಿಯನ್ ಕುಸ್ತಿಪಟುಗಳಿಗೆ ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತೆ ರಿಸಾಕೊ ಕವಾಯ್ ಅವರ ಬೆಂಬಲವೊಂದು ದೊರೆತಿದೆ.
ಎರಡು ವಾರಗಳ ಹಿಂದೆ ಕುಸ್ತಿಪಟುಗಳು ತಮ್ಮ ಪ್ರತಿಭಟನೆಗೆ ಬೆಂಬಲಿಸುವಂತೆ ಒಲಿಂಪಿಕ್ ಪದಕ ವಿಜೇತರು ಸೇರಿ ತಾರಾ ವಿದೇಶಿ ಅಥ್ಲೀಟ್‌ಗಳನ್ನು ವಿನಂತಿಸಿಕೊಂಡಿದ್ದರು. ಇದೀಗ ಮೂರು ಬಾರಿಯ ವಿಶ್ವ ಚಾಂಪಿಯನ್ ಜಪಾನ್‌ನ ರಿಸಾಕೊ ಕವಾಯ್ ಅವರು ಕುಸ್ತಿಪಟುಗಳ ಬೆಂಬಲಕ್ಕೆ ನಿಂತಿದ್ದಾರೆ. ಇದರೊಂದಿಗೆ ಕುಸ್ತಿಪಟುಗಳಿಗೆ ಬೆಂಬಲವಾಗಿ ಬಂದ ಮೊದಲ ಉನ್ನತ ಮಟ್ಟದ ಅಂತಾರಾಷ್ಟ್ರೀಯ ಕುಸ್ತಿಪಟು ಎನಿಸಿಕೊಂಡಿದ್ದಾರೆ. ಕವಾಯ್ ಅವರು ಟೋಕಿಯೊದಲ್ಲಿ ನಡೆದ 57 ಕೆಜಿ ಮಹಿಳಾ ಫ್ರೀಸ್ಟೈಲ್ನಲ್ಲಿ ಚಿನ್ನ ಗೆದ್ದ ವೇಟ್ ಲಿಫ್ಟರ್.
ಕುಸ್ತಿಪಟುಗಳ ಪ್ರತಿಭಟನೆಯ ಕುರಿತು ಬಿಬಿಸಿ ನ್ಯೂಸ್ನ ವೀಡಿಯೋವನ್ನು ರಿಟ್ವೀಟ್ ಮಾಡುವ ಮೂಲಕ, “ಭಾರತೀಯ ಕ್ರೀಡಾಪಟುಗಳು ಶಾಂತಿಯಿಂದ ಅಭ್ಯಾಸ ನಡೆಸುವ ವಾತಾವರಣ ಶೀಘ್ರದಲ್ಲೇ ಸೃಷ್ಟಿಯಾಗಲಿ” ಎಂದು ಹೇಳುವ ಮೂಲಕ ಕವಾಯ್ ಬೆಂಬಲ ಸೂಚಿಸಿದ್ದಾರೆ.
ಅಪ್ರಾಪ್ತ ವಯಸ್ಕ ಸೇರಿದಂತೆ ಏಳು ಮಹಿಳಾ ಅಥ್ಲೀಟ್‌ಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಬ್ರಿಜ್ ಭೂಷಣ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ವಿನೇಶ್ ಫೋಗಟ್, ಬಜರಂಗ್ ಪುನಿಯಾ ಮತ್ತು ಸಾಕ್ಷಿ ಮಲಿಕ್ ಸೇರಿದಂತೆ ಪ್ರಮುಖರು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ Wrestlers Protest: ಪ್ರತಿಭಟನೆಯಲ್ಲಿ ಪ್ರಧಾನಿ ಮೋದಿ,ಯೋಗಿ ಹೆಸರು ಬಳಕೆ; ಬ್ರಿಜ್ ಭೂಷಣ್ ಆರೋಪ
ಇತ್ತೀಚೆಗೆ ಕುಸ್ತಿಪಟುಗಳು ಸಾವಿರಾರು ಪ್ರತಿಭಟನಾಕಾರರ ಬೆಂಬಲದೊಂದಿಗೆ ಇಂಡಿಯಾ ಗೇಟ್ ತನಕ ಕ್ಯಾಂಡಲ್ ಮಾರ್ಚ್ ಮಾಡಿದ್ದರು. ಇದೇ ವೇಳೆ ಮಾತನಾಡಿದ್ಧ ವಿನೇಶ್ ಪೋಗಟ್ ಇದು ಕೇವಲ ಆರಂಭವಷ್ಟೇ ಅಸಲಿ ಹೋರಾಟ ಇನ್ನು ಮುಂದೆ ಇದೆ ಎಂದು ಹೇಳುವ ಮೂಲಕ ಉಗ್ರ ಹೋರಟದ ಎಚ್ಚರಿಕೆಯನ್ನು ನೀಡಿದ್ದರು.
ಕ್ರಿಕೆಟ್
IPL 2023: ಫೈನಲ್ ಪಂದ್ಯಕ್ಕೆ ಹೇಗಿರಲಿದೆ ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್
ಗುಜರಾತ್ ಟೈಟನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಫೈನಲ್ ಕದನಕ್ಕೆ ಕ್ಷಣಗಣನೆ ಆರಂಭವಾಗಿದೆ. ಉಭಯ ತಂಡಗಳ ಈ ಹೋರಾಟ ಇಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.
ಅಹಮದಾಬಾದ್: ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಫೈನಲ್ ಕದನಕ್ಕೆ ಕ್ಷಣಗಣನೆ ಆರಂಭವಾಗಿದೆ. ಉಭಯ ತಂಡಗಳ ಈ ಪ್ರಶಸ್ತಿ ಸಮರಕ್ಕೆ ನರೇಂದ್ರ ಮೋದಿ ಸ್ಟೇಡಿಯಂ ಸರ್ವ ವಿಧದಲ್ಲೂ ಸಜ್ಜಾಗಿ ನಿಂತಿದೆ. ಈ ಪಂದ್ಯಕ್ಕೆ ಇತ್ತಂಡಗಳ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ ಎಂಬ ಮಾಹಿತಿ ಇಂತಿದೆ.
ಸಮಬಲದ ತಂಡಗಳು
ಎರಡೂ ತಂಡಗಳು ಸಮಬಲದಿಂದ ಕೂಡಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ದಾಳಿ ಸಂಘಟಿಸುವಲ್ಲಿ ಎರಡೂ ತಂಡಗಳು ಬಲಿಷ್ಠವಾಗಿದೆ. ಗುಜರಾತ್ ಪರ ಶುಭಮನ್ ಗಿಲ್, ಸಾಯಿ ಸುದರ್ಶನ್, ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯ ಅತ್ಯಂತ ಅಪಾಯಕಾರಿಗಳು. ಚೆನ್ನೈ ಪರ ಋತುರಾಜ್ ಗಾಯಕ್ವಾಡ್, ಡೆವೋನ್ ಕಾನ್ವೆ, ರಹಾನೆ ಮತ್ತು ಶಿವಂ ದುಬೆ ಕೂಡ ಸಿಡಿಯಬಲ್ಲರು. ಆದರೆ ಮೊಯಿನ್ ಅಲಿ ಈ ಆವೃತ್ತಿಯಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಹೀಗಾಗಿ ಅವರು ಮಹತ್ವದ ಪಂದ್ಯದಲ್ಲಿ ಆಡಬೇಕಾದ ಅನಿವಾರ್ಯತೆ ಇದೆ.
ಮುಖಾಮುಖಿ
ಚೆನ್ನೈ ಮತ್ತು ಗುಜರಾತ್ ತಂಡಗಳು ಇದುವರೆಗೆ ಐಪಿಎಲ್ನಲ್ಲಿ 4 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಗುಜರಾತ್ ಮೂರು ಬಾರಿ ಗೆದ್ದಿದೆ. ಚೆನ್ನೈ ತಂಡ ಒಂದು ಪಂದ್ಯ ಗೆದ್ದಿದೆ. ಈ ಗೆಲುವು ಇದೇ ಆವೃತ್ತಿಯ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ದಾಖಲಾಗಿತ್ತು. ಅಹಮದಾಬಾದ್ನಲ್ಲೇ ನಡೆದ ಉದ್ಘಾಟನ ಪಂದ್ಯದಲ್ಲಿ ಚೆನ್ನೈ ವಿರುದ್ಧ ಗುಜರಾತ್ ಗೆದ್ದು ತನ್ನ ಅಭಿಯಾನವನ್ನು ಆರಂಭಿಸಿತ್ತು. ಇದೀಗ ಅಂತಿಮ ಪಂದ್ಯದಲ್ಲಿಯೂ ಇತ್ತಂಡಗಳು ಮುಖಾಮುಖಿಯಾಗಿವೆ. ಇಲ್ಲಿ ಯಾರಿಗೆ ಅದೃಷ್ಟ ಒಲಿಯಲಿದೆ ಎಂಬುದು ಈ ಪಂದ್ಯದ ಕೌತುಕ.
ಸಂಭಾವ್ಯ ತಂಡಗಳು
ಗುಜರಾತ್ ಟೈಟನ್ಸ್: ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ಡೇವಿಡ್ ಮಿಲ್ಲರ್, ವೃದ್ಧಿಮಾನ್ ಸಹಾ, ರಶೀದ್ ಖಾನ್, ರಾಹುಲ್ ತೇವಾಟಿಯಾ, ವಿಜಯ್ ಶಂಕರ್/ ಸಾಯಿ ಸುದರ್ಶನ್, ಮೊಹಮ್ಮದ್ ಶಮಿ, ಯಶ್ ದಯಾಳ್, ನೂರ್ ಅಹ್ಮದ್/ ಜೋಶುವಾ ಲಿಟಲ್, ಮೋಹಿತ್ ಶರ್ಮಾ.
ಇದನ್ನೂ ಓದಿ IPL 2023 : ತಮ್ಮ ದೇಹದಲ್ಲಿರುವ ಟ್ಯಾಟೂಗಳ ಅರ್ಥ ವಿವರಿಸಿದ ಸೂರ್ಯಕುಮಾರ್!
ಚೆನ್ನೈ ಸೂಪರ್ ಕಿಂಗ್ಸ್: ಮಹೇಂದ್ರ ಸಿಂಗ್ ಧೋನಿ(ನಾಯಕ), ರವೀಂದ್ರ ಜಡೇಜಾ, ಡೆವೊನ್ ಕಾನ್ವೆ, ಋತುರಾಜ್ ಗಾಯಕ್ವಾಡ್, ಅಂಬಾಟಿ ರಾಯುಡು/ಅಜಿಂಕ್ಯ ರಹಾನೆ, ಮೊಯೀನ್ ಅಲಿ, ಶಿವಂ ದುಬೆ, ದೀಪಕ್ ಚಹರ್, ತುಷಾರ್ ದೇಶಪಾಂಡೆ, ಮಥೀಶಾ ಪತಿರಾಣಾ, ಮಹೀಶ್ ತೀಕ್ಷಣ.
ಕ್ರೀಡೆ
Malaysia Masters: ಪ್ರಣಯ್ ಫೈನಲ್‌ಗೆ; ಭಾರತಕ್ಕೆ ಒಂದು ಪದಕ ಖಾತ್ರಿ
ಮಲೇಷ್ಯಾ ಮಾಸ್ಟರ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಸ್ಟಾರ್ ಶಟ್ಲರ್ ಪಿವಿ ಸಿಂಧು ಸೋತು ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಕೌಲಾಲಂಪುರ: ಇಲ್ಲಿ ನಡೆಯುತ್ತಿರುವ ಮಲೇಷ್ಯಾ ಮಾಸ್ಟರ್ ಬ್ಯಾಡ್ಮಿಂಟನ್(Malaysia Masters) ಟೂರ್ನಿಯಲ್ಲಿ ಭಾರತದ ಸ್ಟಾರ್ ಶಟ್ಲರ್ ಎಚ್.ಎಸ್. ಪ್ರಣಯ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಆದರೆ ಪದಕ ಭರವಸೆಯಾಗಿದ್ದ ಅನುಭವಿ ಆಟಗಾರ್ತಿ ಪಿ.ವಿ. ಸಿಂಧು ಸೆಮಿಫೈನಲ್‌ನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಶನಿವಾರ ನಡೆದ ಸೆಮಿಫೈನಲ್ ಪಂದ್ಯದ ಮೊದಲ ಗೇಮ್ ವೇಳೆ ಪ್ರಣಯ್ ಅವರ ಎದುರಾಳಿ ಇಂಡೋನೇಷ್ಯಾದ ಕ್ರಿಸ್ಟಿಯನ್ ಆದಿನಾಥ ಅವರ ಎಡ ಮೊಣಕಾಲಿಗೆ ಗಂಭೀರ ಗಾಯವಾದ ಕಾರಣದಿಂದ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಲಾಯಿತು. ಈ ವೇಳೆ 19-17ರ ಮುನ್ನಡೆಯಲ್ಲಿದ್ದ ಪ್ರಣಯ್ ಅವರು ನೇರವಾಗಿ ಫೈನಲ್ ಟಿಕೆಟ್ ಪಡೆದರು. ಇಂದು(ಭಾನುವಾರ) ನಡೆಯುವ ಫೈನಲ್‌ನಲ್ ಹಣಾಹಣಿಯಲ್ಲಿ ಪ್ರಣಯ್ ಚೀನಾದ ವೆಂಗ್ ಹಾಂಗ್ ಯಾಂಗ್ ಸವಾಲು ಎದುರಿಸಲಿದ್ದಾರೆ.
ಇದನ್ನೂ ಓದಿ Malaysia Masters: ಸೆಮಿಫೈನಲ್ಗೆ ಲಗ್ಗೆಯಿಟ್ಟ ಸಿಂಧು,ಪ್ರಣಯ್; ಶ್ರೀಕಾಂತ್ಗೆ ಸೋಲು
ಇದು ಪ್ರಸಕ್ತ ಋತುವಿನಲ್ಲಿ ಪ್ರಣಯ್ ಕಾಣುತ್ತಿರುವ ಮೊದಲ ಫೈನಲ್ ಆಗಿದೆ. ಕಳೆದ ವರ್ಷ ಸ್ವಿಸ್ ಓಪನ್ ಟೂರ್ನಿಯಲ್ಲಿ ರನ್ನರ್ ಅಪ್ ಆದ ಬಳಿಕ ಪ್ರಣಯ್ ಮೊದಲ ಸಲ ಪ್ರಶಸ್ತಿ ಸುತ್ತು ಪ್ರವೇಶಿಸಿದ್ದಾರೆ. ಗಾಯಗೊಂಡ ಆದಿನಾಥ 2019ರ ವಿಶ್ವ ಜೂನಿಯರ್ ಚಾಂಪಿಯನ್ ಆಗಿದ್ದಾರೆ.
ಸಿಂಧುಗೆ ಸೋಲು
ಪದಕ ಭರವಸೆಯಾಗಿದ್ದ ಅವಳಿ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ. ಸಿಂಧು ಅವರು ಸೆಮಿಫೈನಲ್ ಪಂದ್ಯದಲ್ಲಿ ಎಡವಿ ಸೋಲು ಕಂಡರು. ಇಂಡೋನೇಷ್ಯಾದ ಗ್ರೆಗೋ ರಿಯಾ ಮರಿಸ್ಕಾ ಟುಂಜುಂಗ್ ವಿರುದ್ಧ 14-21, 17-21 ನೇರ ಗೇಮ್‌ಗಳಿಂದ ಪರಾಭವಗೊಂಡರು. ಇದು ಟುಂಜುಂಗ್ ವಿರುದ್ಧ ಸಿಂಧು ಅನುಭವಿಸಿದ ಸತತ 2ನೇ ಸೋಲು. ಇದಕ್ಕೂ ಮೊದಲು ಈ ಇಂಡೋನೇಷ್ಯಾ ಆಟಗಾರ್ತಿ ವಿರುದ್ಧ ಸತತ 7 ಗೆಲುವು ಸಾಧಿಸಿದ ಹೆಗ್ಗಳಿಕೆ ಸಿಂಧು ಅವರದಾಗಿತ್ತು. ಆದರೆ ಇಲ್ಲಿ ಕೆಲ ಸ್ವಯಂ ತಪ್ಪುಗಳಿಂದ ಪಂದ್ಯದಲ್ಲಿ ಸೋಲು ಕಂಡರು.
-
ಕರ್ನಾಟಕ22 hours ago
ವಿಸ್ತಾರ ಯುಗಾದಿ ಕಥಾ ಸ್ಪರ್ಧೆ ಬಹುಮಾನ: ಚಂದ್ರಶೇಖರ್ ಡಿ.ಆರ್ ಪ್ರಥಮ, ದಾದಾಪೀರ್ ಜೈಮನ್ ದ್ವಿತೀಯ, ಪೂರ್ಣಿಮಾ ಮಾಳಗಿಮನಿ ತೃತೀಯ
-
ಕರ್ನಾಟಕ22 hours ago
Karnataka Cabinet Expansion: ಪ್ರಮಾಣ ವಚನ ಸಮಾರಂಭ ಬಹಿಷ್ಕಾರ; ಊರಿಗೆ ಹೊರಟ ಒಂದೇ ಜಿಲ್ಲೆಯ 5 ಶಾಸಕರು!
-
ಕಿರುತೆರೆ20 hours ago
Deepak Gowda: ‘ಶ್ರೀರಸ್ತು ಶುಭಮಸ್ತು’ಧಾರಾವಾಹಿಯಿಂದ ಹೊರನಡೆದ ದೀಪಕ್ ಗೌಡ; ಪಾತ್ರಕ್ಕೆ ಬಂದವರು ಕಿರುತೆರೆಗೆ ಹೊಸಬರಲ್ಲ!
-
ಕರ್ನಾಟಕ16 hours ago
Karnataka Cabinet: ತಾತನನ್ನು ಮಿನಿಸ್ಟರ್ ಮಾಡಿ ಪ್ಲೀಸ್: ರಾಹುಲ್ ಗಾಂಧಿಗೆ ಪತ್ರ ಬರೆದ ಟಿ.ಬಿ. ಜಯಚಂದ್ರ ಮೊಮ್ಮಗಳು
-
ಕ್ರಿಕೆಟ್12 hours ago
World Cup 2023 : ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ವೇಳೆ ವಿಶ್ವಕಪ್ ವೇಳಾಪಟ್ಟಿ ಪ್ರಕಟ
-
ದೇಶ4 hours ago
New Parliament Building: ಇಂದು ಹೊಸ ಸಂಸತ್ ಭವನ ಉದ್ಘಾಟನೆ; ಹೇಗೆ ನಡೆಯಲಿದೆ ಕಾರ್ಯಕ್ರಮ?
-
ಕರ್ನಾಟಕ13 hours ago
Tumkur News: ಹೆಜ್ಜೇನು ದಾಳಿ; ಮೂವರು ಮಕ್ಕಳು ಸೇರಿ 9 ಮಂದಿಗೆ ಗಾಯ
-
EXPLAINER3 hours ago
ವಿಸ್ತಾರ Explainer: ಹೊಸ ಸಂಸತ್ ಭವನದಲ್ಲಿ ಸ್ಥಾಪಿತಗೊಂಡ ತಮಿಳುನಾಡಿನ ಚಿನ್ನದ ಸೆಂಗೋಲ್; ಏನಿದರ ಮಹತ್ವ?