Site icon Vistara News

ಭಾವಿ ಪತಿಯಿಂದ ಗಂಡು ಮಗುವಿಗೆ ತಾಯಿಯಾದ ರಷ್ಯಾದ Tennis ತಾರೆ

tennis

ಮಾಸ್ಕೊ: Tennis ಲೋಕದ ಅಪ್ರತಿಮ ಸುಂದರಿ ರಷ್ಯಾದ ಮಾಜಿ ಆಟಗಾರ್ತಿ ಮರಿಯಾ ಶರಪೋವಾ ಶುಕ್ರವಾರ ಗಂಡು ಮಗುವಿಗೆ ಜನುಮ ನೀಡಿದ್ದಾರೆ. ಕೆಲವು ತಿಂಗಳ ಹಿಂದೆ ತಮ್ಮ ಭಾವಿ ಪತಿಯೊಂದಿಗೆ ಎಂಗೇಜ್ಮೆಂಟ್‌ ಮಾಡಿಕೊಂಡಿದ್ದ ಅವರು ಇದೀಗ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ.

೩೫ ವರ್ಷದ ಶರಪೋವಾ ಮಗು ಹಾಗೂ ಪತಿಯೊಂದಿಗಿನ ಚಿತ್ರವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಥಿಯೋಡರ್‌ ಎಂದು ಹೆಸರಿಡಲಾಗಿದ್ದು, ರೋಮನ್‌ ಸಂಪ್ರದಾಯದ ಪ್ರಕಾರ ಜುಲೈ ತಿಂಗಳು ಎಂಬ ಅರ್ಥ ಹೊಂದಿದೆ.

ಐದು ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳ ಒಡತಿಯಾಗಿರುವ ಮರಿಯಾ ೨೦೨೦ರಲ್ಲಿ ೪೨ ವರ್ಷದ ಬ್ರಿಟನ್‌ ಮೂಲದ ಉದ್ಯಮಿ ಅಲೆಕ್ಸಾಂಡರ್‌ ಗಿಲ್ಕೆಸ್‌ ಅವರೊಂದಿಗೆ ನಿಶ್ವಿತಾರ್ಥ ಮಾಡಿಕೊಂಡಿದ್ದರು. ೩೫ ವರ್ಷದ ಅವರು ಕಳೆದ ಏಪ್ರಿಲ್‌ನಲ್ಲಿ ತಾವು ಗರ್ಭವತಿ ಎಂದು ಹೇಳಿಕೊಂಡಿದ್ದರು.

ತಮ್ಮ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಮಗುವಿನ ಜನನದ ಕುರಿತು ಬರೆದುಕೊಂಡಿದ್ದು, “ನಮ್ಮ ಕುಟುಂಬಕ್ಕೆ ಅತ್ಯಂತ ಸವಾಲಿನ, ಅತ್ಯಂತ ಸುಂದರ ಉಡುಗೊರೆ ಸಿಕ್ಕಿದೆ,ʼʼ ಎಂದಿದ್ದಾರೆ.

ಟೆನಿಸ್‌ ಸಾಧಕಿ

ಮರಿಯಾ ಶರಪೋವಾ ಅವರು ಒಟ್ಟು ಪ್ರತಿಷ್ಠಿತ ಎಲ್ಲ ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿಗಳನ್ನು ಗೆದ್ದಿರುವ ೧೦ ಟೆನಿಸ್‌ ಆಟಗಾರ್ತಿಯರಲ್ಲೊಬ್ಬರು. ೧೭ನೇ ವರ್ಷದಲ್ಲಿ ವಿಂಬಲ್ಡನ್‌ ಚಾಂಪಿಯನ್‌ (೨೦೦೪) ಅಗಿದ್ದ ಅವರು , ೨೦೦೬ರಲ್ಲಿ ಯುಎಸ್‌ ಓಪನ್‌, ೨೦೦೮ರಲ್ಲಿ ಆಸ್ಟ್ರೇಲಿಯನ್‌ ಒಪನ್‌ ಹಾಗೂ ೨೦೧೨ ಹಾಗೂ ೧೪ರಲ್ಲಿ ಫ್ರೆಂಚ್‌ ಒಪನ್‌ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು. ೨೦೧೨ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಅವರು ಬೆಳ್ಳಿ ಪದಕ ಗೆದ್ದಿದ್ದರು. ಫೈನಲ್‌ನಲ್ಲಿ ಅವರು ಅಮೆರಿಕದ ಸೆರೆನಾ ವಿಲಿಯಮ್ಸ್‌ ವಿರುದ್ಧ ಸೋಲೊಪ್ಪಿಕೊಂಡಿದ್ದರು.

ಇದನ್ನೂ ಓದಿ | ಟೆನಿಸ್‌ಗೆ ವಿದಾಯ ಹೇಳುವರೇ ರೋಜರ್‌ ಫೆಡರರ್‌

Exit mobile version