Site icon Vistara News

ಘಾತಕ ವೇಗಿ ಶಾಹೀನ್ ಅಫ್ರಿದಿಗೆ ಸತತ ಸಿಕ್ಸರ್,ಬೌಂಡರಿ ಬಾರಿಸಿ ಚಳಿ ಬಿಡಿಸಿದ ಫಿನ್​ ಅಲೆನ್​​

Shaheen Afridi

ಆಕ್ಲೆಂಡ್​: ನ್ಯೂಜಿಲ್ಯಾಂಡ್​ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ(New Zealand vs Pakistan, 1st T20I) ಪಾಕಿಸ್ತಾನ ತಂಡದ ನಾಯಕ ಹಾಗೂ ಘಾತಕ ವೇಗಿ ಶಾಹೀನ್ ಅಫ್ರಿದಿ(Shaheen Afridi) ಸರಿಯಾಗಿಯೇ ದಂಡಿಸಿಕೊಂಡಿದ್ದಾರೆ. ಒಂದೇ ಓವರ್​ನಲ್ಲಿ 24 ರನ್​ ಬಿಟ್ಟು ಕೊಟ್ಟಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ತಾನೇ ಶ್ರೇಷ್ಠ ಬೌಲರ್​, ತನ್ನ ಬೌಲಿಂಗ್​ ದಾಳಿಯನ್ನು ಎದುರಿಸುವ ಬ್ಯಾಟರ್​ ಯಾರು ಇಲ್ಲ ಎಂದು ಜಂಬ ಕೊಚ್ಚಿಕೊಳ್ಳುತ್ತಿದ್ದ ಶಾಹೀನ್ ಅಫ್ರಿದಿಗೆ ನ್ಯೂಜಿಲ್ಯಾಂಡ್​ ಆರಂಭಿಕ ಆಟಗಾರ ಫಿನ್​ ಅಲೆನ್​ ತಮ್ಮ ಸ್ಫೋಟಕ ಬ್ಯಾಟಿಂಗ್​ ಮೂಲಕ ಸರಿಯಾಗಿಯೇ ಉತ್ತರ ನೀಡಿದ್ದಾರೆ. ಮೊದಲ ಓವರ್​ನಲ್ಲಿ ಕೇವಲ ಒಂದು ರನ್​ ನೀಡಿ ವಿಕೆಟ್​ ಪಡೆದಿದ್ದ ಅಫ್ರಿದಿ ತಮ್ಮ ದ್ವಿತೀಯ ಓವರ್​ನಲ್ಲಿ ಬರೋಬ್ಬರಿ 24 ರನ್​ ಬಿಟ್ಟುಕೊಟ್ಟು ದುಬಾರಿಯಾಗಿ ಪರಿಣಮಿಸಿದರು. ಫಿನ್​ ಅಲೆನ್​ ಅವರು ಅಫ್ರಿದಿಗೆ ಬಾರಿಸಿದ ಸಿಕ್ಸರ್​ ಮತ್ತು ಬೌಂಡರಿ ಈ ರೀತಿ ಇದೆ. 6, 4, 4, 4, 6, 0.


15 ಎಸೆತಗಳನ್ನು ಎದುರಿಸಿದ ಅಲೆನ್ 233.33 ಸ್ಟ್ರೈಕ್ ರೇಟ್‌ನಲ್ಲಿ 35 ರನ್ ಕಲೆಹಾಕಿದರು. ಅವರ ಈ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ ತಲಾ ಮೂರು ಬೌಂಡರಿ ಮತ್ತು ಸಿಕ್ಸರ್‌ಗಳು ಸಿಡಿದವು. ಇದರಲ್ಲಿ ಒಂದು ಸಿಕ್ಸರ್​ ಹೊರತುಪಡಿಸಿ ಉಳಿದ ಎಲ್ಲ ಬೌಂಡರಿ ಮತ್ತು ಸಿಕ್ಸರ್​ ಅಫ್ರಿದಿ ಓವರ್​ನಲ್ಲೇ ದಾಖಲಾಯಿತು.

ಪಂದ್ಯ ಸೋತ ಪಾಕ್​


ಈ ಪಂದ್ಯದಲ್ಲಿ ಪಾಕಿಸ್ತಾನ 46 ರನ್​ಗಳ ಸೋಲು ಕಂಡಿತು. ಆಕ್ಲೆಂಡ್​ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ನ್ಯೂಜಿಲ್ಯಾಂಡ್​ ನಾಯಕ ಕೇನ್​ ವಿಲಿಯಮ್ಸನ್​(57) ಮತ್ತು ಡೇರಿಯಲ್​ ಮಿಚೆಲ್​(61) ವಿಸ್ಫೋಟಕ ಬ್ಯಾಟಿಂಗ್​ ನೆರೆವಿನಿಂದ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ಗೆ 226 ರನ್​ ಬಾರಿಸಿತು. ಗುರಿ ಬೆನ್ನಟ್ಟಿದ ಪಾಕಿಸ್ತಾನ 18 ಓವರ್​ಗಳಲ್ಲಿ 180 ರನ್​ಗಳಿಗೆ ಸರ್ವಪತನ ಕಂಡಿತು. ಪಾಕ್​ ಪರ ಮಾಜಿ ನಾಯಕ ಬಾಬರ್​ ಅಜಂ 57 ರನ್​ ಗಳಿಸಿ ಮಿಂಚಿದರು.

ಉಭಯ ಆಡುವ ಬಳಗ

ಪಾಕಿಸ್ತಾನ ತಂಡ: ಮೊಹಮ್ಮದ್ ರಿಜ್ವಾನ್, ಸೈಮ್ ಅಯೂಬ್, ಬಾಬರ್ ಆಝಂ, ಫಖರ್ ಜಮಾನ್, ಇಫ್ತಿಕರ್ ಅಹ್ಮದ್, ಅಜಮ್ ಖಾನ್, ಅಮೀರ್ ಜಮಾಲ್, ಉಸಾಮಾ ಮಿರ್, ಶಾಹೀನ್ ಅಫ್ರಿದಿ (ನಾಯಕ), ಅಬ್ಬಾಸ್ ಅಫ್ರಿದಿ, ಹ್ಯಾರಿಸ್ ರೌಫ್.

ನ್ಯೂಜಿಲ್ಯಾಂಡ್​ ತಂಡ: ಫಿನ್ ಅಲೆನ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್ (ನಾಯಕ), ಡ್ಯಾರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಆಡಮ್ ಮಿಲ್ನೆ, ಮ್ಯಾಥ್ಯೂ ಹೆನ್ರಿ, ಟಿಮ್ ಸೌಥಿ, ಇಶ್ ಸೋಧಿ, ಬೆನ್ ಸಿಯರ್ಸ್.

Exit mobile version