ಮುಂಬಯಿ: ಭಾರತದಲ್ಲಿ ಈಗಾಗಲೇ ಪುರುಷರ ಮತ್ತು ಮಹಿಳೆಯರ ಟಿ20 ಕ್ರಿಕೆಟ್ ಲೀಗ್ ಚಾಲ್ತಿಯಲ್ಲಿದೆ. ಇದೀಗ ಮತ್ತೊಂದು ಪ್ರಯೋಗ ಎಂಬಂತೆ ಚೊಚ್ಚಲ ಆವೃತ್ತಿಯ “ಟಿ10 ಇಂಡಿಯಾ ಮಾಸ್ಟರ್ಸ್ ಕ್ರಿಕೆಟ್”(Indian Masters T10) ಟೂರ್ನಿ ಆರಂಭಗೊಳ್ಳಲಿದೆ. ಇದೇ ವರ್ಷ ಜೂನ್‌ನಲ್ಲಿ ಈ ಟೂರ್ನಿಗೆ ಚಾಲನೆ ಸಿಗಲಿದೆ.
ಈ ಟೂರ್ನಿ ಜೂನ್ 14ರಿಂದ ಆರಂಭಗೊಂಡು 28ರ ವರೆ 12 ದಿನಗಳ ಕಾಲ ಒಟ್ಟು 6 ತಂಡಗಳ ನಡುವೆ 19 ಪಂದ್ಯಗಳು ನಡೆಯಲಿವೆ. ದೇಶದ ವಿವಿಧ ನಗರಗಳು ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ. ಪ್ರತಿ ತಂಡದಲ್ಲೂ ಬಾಲಿವುಡ್ ನಟ, ನಟಿಯರ ಸಹ ಮಾಲಿಕತ್ವ ಕೂಡ ಇರಲಿದೆ.
ಈಗಾಗಲೇ ಐಸಿಸಿಯಿಂದ ಮಾನ್ಯತೆ ಪಡೆದಿರುವ ವಿಶ್ವದ ಏಕೈಕ ಟಿ10 ಲೀಗ್ ಎನಿಸಿರುವ ಅಬುಧಾಬಿ ಲೀಗ್‌ನ ಆಯೋಜಕರಾದ ಟಿ ಟೆನ್ ಗ್ಲೋಬಲ್ ಸ್ಪೋರ್ಟ್ಸ್ ಸಂಸ್ಥೆಯು ಈ ಇಂಡಿಯಾ ಮಾಸ್ಟರ್ಸ್ ಟೂರ್ನಿಯನ್ನೂ ಆಯೋಜಿಸುತ್ತಿದೆ. ಭಾರತದ ಮಾಜಿ ಕ್ರಿಕೆಟಿಗರಾದ ಸುರೇಶ್ ರೈನಾ, ಮೊಹಮದ್ ಕೈಫ್(mohammad kaif), ರಾಬಿನ್ ಉತ್ತಪ್ಪ(robin uthappa), ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್ ಜತೆ ವಿದೇಶಿ ತಾರೆಯರಾದ ಕ್ರಿಸ್ ಗೇಲ್, ಡ್ವೇನ್ ಬ್ರಾವೋ, ಜ್ಯಾಕ್ ಕಾಲಿಸ್ ಸೇರಿ ಒಟ್ಟು 90ಕ್ಕೂ ಹೆಚ್ಚು ನಿವೃತ್ತ ಕ್ರಿಕೆಟಿಗರು ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದನ್ನೂ ಓದಿ Team Leaders Of IPL 2023: ಐಪಿಎಲ್ 2023ನೇ ಆವೃತ್ತಿಯ ತಂಡಗಳ ನಾಯಕರು ಇವರು
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಹೇಳಿರುವ ಕ್ರಿಕೆಟಿಗರಿಗೆ ಹಲವು 20 ಕ್ರಿಕೆಟ್ ಟೂರ್ನಿ ಈಗಾಗಲೇ ಚಾಲ್ತಿಯಲ್ಲಿದೆ ಇದೀಗ ಟ10 ಕ್ರಿಕೆಟ್ ಟೂರ್ನಿ ಆರಂಭವಾಗಲಿದೆ. ಈ ಟೂರ್ನಿಯ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅಭಿಪ್ರಾಯ ಹಂಚಿಕೊಂಡ ರಾಬಿನ್ ಉತ್ತಪ್ಪ ‘ಬಾಲ್ಯದಲ್ಲಿ ನಾವು ಟೆನಿಸ್ ಬಾಲ್‌ನಲ್ಲಿ 10 ಓವರ್ಗಳ ಕ್ರಿಕೆಟ್ ಆಡುತ್ತಿದ್ದೆವು. ಅಂತದ್ದೇ ಅನುಭವ ಟಿ10 ಲೀಗ್‌ನಲ್ಲೂ ಸಿಗಲಿದೆ. ಜತೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಹೇಳಿರುವ ದಿಗ್ಗಜ ಆಟಗಾರರು ಮತ್ತೆ ಮೈದಾನದಲ್ಲಿ ಬ್ಯಾಟ್ ಬೀಸುವ ಮೂಲಕ ತಮ್ಮ ನೆಚ್ಚಿನ ಅಭಿಮಾನಿಗಳನ್ನು ರಂಜಿಸಲು ಇದು ಉತ್ತಮ ಅವಕಾಶ” ಎಂದರು.