Site icon Vistara News

IND VS AUS: ಮೊದಲ ಟೆಸ್ಟ್​; ಟಾಸ್​ ಗೆದ್ದ ಆಸ್ಟ್ರೇಲಿಯಾದಿಂದ ಬ್ಯಾಟಿಂಗ್​ ಆಯ್ಕೆ

IND VS AUS

#image_title

ನಾಗ್ಪುರ: ಪ್ರತಿಷ್ಠಿತ ಬಾರ್ಡರ್​-ಗವಾಸ್ಕರ್​(border gavaskar trophy) ಟೆಸ್ಟ್​ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್​ ಗೆದ್ದ ಪ್ರವಾಸಿ ಆಸ್ಟ್ರೇಲಿಯಾ ತಂಡ ಮೊದಲು ಬ್ಯಾಟಿಂಗ್​ ನಡೆಸುವ ನಿರ್ಧಾರ ಕೈಗೊಂಡಿದೆ. ರೋಹಿತ್​ ಪಡೆ ಮೊದಲು ಬೌಲಿಂಗ್​ ನಡೆಸಲಿದೆ.

ಶ್ರೀಕರ್​ ಭರತ್​ ಮತ್ತು ಸೂರ್ಯಕುಮಾರ್​ ಯಾದವ್​ ಈ ಪಂದ್ಯದ ಮೂಲಕ ಭಾರತ ಟೆಸ್ಟ್​ ತಂಡಕ್ಕೆ ಪದಾರ್ಪಣೆ ಮಾಡಿದರು. ಅಚ್ಚರಿ ಎಂಬಂತೆ ಲಂಕಾ ಮತ್ತು ಕಿವೀಸ್​ ವಿರುದ್ಧ ಮಿಂಚಿದ ಯುವ ಆಟಗಾರ ಶುಭಮನ್​ ಗಿಲ್ ಅವರನ್ನು ಈ ಪಂದ್ಯದಿಂದ ಕೈ ಬಿಡಲಾಯಿತು. ಪಂತ್​ ಅನುಪಸ್ಥಿತಿಯಲ್ಲಿ ಭರತ್​ ಕೀಪಿಂಗ್​ ಹೊಣೆ ಹೊರಲಿದ್ದಾರೆ. ಇದೇ ಮೊದಲ ಬಾರಿ ಅಂತಾರಾಷ್ಟ್ರೀಯ ಕ್ರಿಕೆಟ್​ ಆಡುತ್ತಿರುವ ಅವರು ಈ ಸರಣಿಯಲ್ಲಿ ಉತ್ತಮ ಕೀಪಿಂಗ್​ ನಿರ್ವಹಣೆ ತೋರಿದರೆ ಪಂತ್​ ಆಗಮನದ ವರೆಗೂ ಟೀಮ್​ ಇಂಡಿಯಾದಲ್ಲಿ ಮುಂದುವರಿಯುವ ಅವಕಾಶವಿದೆ.

ನಾಗ್ಪುರದ ವಿದರ್ಭ ಕ್ರಿಕೆಟ್​ ಅಸೋಸಿಯೇಶನ್​ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯುತ್ತಿದೆ. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ಗೇರುವ ದೃಷ್ಟಿಯಲ್ಲಿ ಉಭಯ ತಂಡಗಳಿಗೂ ಈ ಸರಣಿ ಪ್ರಮುಖವಾಗಿದೆ. ಸದ್ಯ ಎರಡೂ ತಂಡಗಳು ವಿಶ್ವ ರ್‍ಯಾಂಕಿಂಗ್‌ನಲ್ಲಿ ಮೊದಲೆರಡು ಸ್ಥಾನ ಅಲಂಕರಿಸಿವೆ. ಆಸ್ಟ್ರೇಲಿಯ 126, ಭಾರತ 115 ಅಂಕಗಳನ್ನು ಹೊಂದಿವೆ.

ನಾಗ್ಪುರದಲ್ಲಿ ಟೀಮ್​ ಇಂಡಿಯಾ ಈವರೆಗೆ 6 ಟೆಸ್ಟ್‌ ಪಂದ್ಯಗಳನ್ನಾಡಿದ್ದು, ನಾಲ್ಕನ್ನು ಗೆದ್ದಿದೆ. ಒಂದರಲ್ಲಿ ಸೋತಿದೆ. ಒಂದು ಪಂದ್ಯ ಡ್ರಾಗೊಂಡಿದೆ. ಹೀಗಾಗಿ ಈ ಪಂದ್ಯದಲ್ಲಿಯೂ ಭಾರತವೇ ಪೇವರಿಟ್​ ಎನ್ನಲಡ್ಡಿಯಿಲ್ಲ.

ತಂಡಗಳು

ಭಾರತ: ರೋಹಿತ್​ ಶರ್ಮಾ(ನಾಯಕ), ಚೇತೇಶ್ವರ ಪೂಜಾರ, ವಿರಾಟ್​ ಕೊಹ್ಲಿ, ಕೆ.ಎಲ್​. ರಾಹುಲ್, ಸೂರ್ಯಕುಮಾರ್​ ಯಾದವ್​, ಅಕ್ಷರ್​ ಪಟೇಲ್​, ಕೆ.ಎಸ್​ ಭರತ್​, ರವೀಂದ್ರ ಜಡೇಜಾ, ಆರ್​. ಅಶ್ವಿನ್​, ಮೊಹಮ್ಮದ್​ ಸಿರಾಜ್​, ಮೊಹಮ್ಮದ್​ ಶಮಿ.

ಇದನ್ನೂ ಓದಿ Border Gavaskar Trophy: ಬಾರ್ಡರ್-ಗವಾಸ್ಕರ್ ಟೆಸ್ಟ್​ ಸರಣಿಯ ಇತಿಹಾಸ, ರೋಚಕ ಸಂಗತಿಗಳ ಮಾಹಿತಿ

ಆಸ್ಟ್ರೇಲಿಯಾ: ಪ್ಯಾಟ್ ಕಮ್ಮಿನ್ಸ್ (ನಾಯಕ),ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲಾಬುಶೇನ್‌, ಸ್ಟೀವನ್​ ಸ್ಮಿತ್, ನಥಾನ್ ಲಿಯಾನ್, ಪೀಟರ್ ಹ್ಯಾಂಡ್ಸ್‌ಕಾಂಬ್,ಮ್ಯಾಥ್ಯೂ ರೆನ್‌ಶಾ, ಅಲೆಕ್ಸ್ ಕ್ಯಾರಿ, ಸ್ಕಾಟ್ ಬೋಲ್ಯಾಂಡ್. ಟಾಡ್‌ ಮರ್ಫಿ.

ಆರಂಭ: ಬೆಳಗ್ಗೆ 9.30, ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

Exit mobile version