Site icon Vistara News

Fifa World Cup | ರೊನಾಲ್ಡೊ ರೀತಿ ಟಿಶರ್ಟ್ ತೆಗೆದು ಸಂಭ್ರಮಾಚರಣೆ ಮಾಡಿದ ಮಹಿಳಾ ಅಭಿಮಾನಿ!

cristiano ronaldo celebration

ದೋಹಾ: ಪೋರ್ಚುಗಲ್​ನ ಖ್ಯಾತ ಫುಟ್ಬಾಲ್​ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಅವರ ಅಪ್ಪಟ ಅಭಿಮಾನಿ, ಅಮೇರಿಕ ಮಾಜಿ ಗಾಲ್ಫ್ ಆಟಗಾರ್ತಿ ಪೈಜ್ ಸ್ಪಿರಾನಾಕ್ ಅವರು ರೊನಾಲ್ಡೊ ರೀತಿಯಲ್ಲಿ ಗೆಲುವಿನ ಸಂಭ್ರಮಾಚರಣೆ ಮಾಡಿದ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಕತಾರ್​ನಲ್ಲಿ ನಡೆಯುತ್ತಿರುವ ಫಿಫಾ ಫುಟ್ಬಾಲ್​ ವಿಶ್ವಕಪ್​ನಲ್ಲಿ ಫೋರ್ಚುಗಲ್​ ತಂಡ ಈಗಾಗಲೇ ನಾಕೌಟ್​ ಪ್ರವೇಶಿಸಿದೆ. ಈ ತಂಡದ ಸಾರಥ್ಯ ವಹಿಸಿರುವ ರೊನಾಲ್ಡೊ ಅವರು ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಇದೀಗ ಅವರ ಅಭಿಮಾನಿಯಾದ ಸ್ಪಿರಾನಾಕ್ ತಾವು ಧರಿಸಿದ ಟಾಪ್ ತೆಗೆದು ರೊನಾಲ್ಡೊ ರೀತಿಯಲ್ಲಿಯೇ ಸಂಭ್ರಮಾಚರಣೆ ಮಾಡಿದ ವಿಡಿಯೊ ಎಲ್ಲಡೆ ವೈರಲ್​ ಆಗಿದೆ.

ರೊನಾಲ್ಡೊ ಅವರ ಮೇಲಿನ ಪ್ರೀತಿಯನ್ನು ತೋರಿಸಲು, ಸ್ಪಿರಾನಾಕ್ ವಿಡಿಯೊವೊಂದನ್ನು ಪೋಸ್ಟ್ ಮಾಡಿದ್ದು ಅದರಲ್ಲಿ ಅವರು ರೊನಾಲ್ಡೊ ಅವರಂತೆ ಫುಟ್ಬಾಲ್​ ಚೆಂಡನ್ನು ಕಾಲಿನಿಂದ ಒದ್ದು ಗೋಲ್ ಪೋಸ್ಟ್​ಗೆ ಬಾರಿಸಿದ್ದಾರೆ. ಬಳಿಕ ತಮ್ಮ ಟಿಶರ್ಟ್ ತೆಗೆದು ಗೆಲುವಿನ ಸಂಭ್ರಮ ಆಚರಿಸುವ ಬಗೆಯನ್ನು ಅನುಕರಣೆ ಮಾಡಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ಇದೇ ವೇಳೆ ಮಾತನಾಡಿದ ಸ್ಪಿರಾನಾಕ್ ‘ನಾನು ಫುಟ್ಬಾಲ್ ಅಭಿಮಾನಿಯಾಗಿರಲಿಲ್ಲ, ಆದರೆ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಮೇಲಿನ ಪ್ರೀತಿ ನನ್ನನ್ನು ಈ ಕ್ರೀಡೆಯ ಕಡೆ ಒಲವು ಹೆಚ್ಚುವಂತೆ ಮಾಡಿತು. ಕತಾರ್​ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವ ಕಪ್​ನಲ್ಲಿ ಪೋರ್ಚುಗಲ್​ ತಂಡ ಗೆಲ್ಲಬೇಕು ಜತೆಗೆ ರೊನಾಲ್ಡೊ ಅವರು ಇನ್ನೂ ಹೆಚ್ಚಿನ ಗೋಲ್​ ಬಾರಿಸಬೇಕು’ ಎಂದು ಹೇಳಿದರು.

ಇದನ್ನೂ ಓದಿ | Fifa World Cup | ಕೋಸ್ಟರಿಕಾ ವಿರುದ್ಧ ಗೆದ್ದರೂ ಫಿಫಾ ವಿಶ್ವಕಪ್​ ಟೂರ್ನಿಯಿಂದ ಜಾರಿ ಬಿದ್ದ ಜರ್ಮನಿ!

Exit mobile version