ದೋಹಾ : ಕಳೆದ ಬಾರಿಯ ಚಾಂಪಿಯನ್ ಫ್ರಾನ್ಸ್ ತಂಡ ಫಿಫಾ ವಿಶ್ವ ಕಪ್‌ನ ಕ್ವಾರ್ಟರ್ ಫೈನಲ್ಸ್ ಹಂತಕ್ಕೆ ಪ್ರವೇಶ ಪಡೆದಿದೆ. ಭಾನುವಾರ ನಡೆದ ೧೬ನೇ ಸುತ್ತಿನ ಪಂದ್ಯದಲ್ಲಿ ಪೋಲೆಂಡ್ ವಿರುದ್ಧ ೩-೧ ಗೋಲ್‌ಗಳ ಅಧಿಕಾರಯುತ ಜಯ ಸಾಧಿಸುವ ಮೂಲಕ ಎಂಟರ ಘಟ್ಟಕ್ಕೆ ಪ್ರವೇಶ ಪಡೆಯಿತು. ತಡರಾತ್ರಿ ನಡೆಯಲಿರುವ ಇಂಗ್ಲೆಂಡ್ ಹಾಗೂ ಸೆನೆಗಲ್ ನಡುವಿನ ಪಂದ್ಯದ ವಿಜೇತರು ಕ್ವಾರ್ಟರ್ ಫೈನಲ್ಸ್ ಹಂತದಲ್ಲಿ ಫ್ರಾನ್ಸ್‌ಗೆ ಎದುರಾಗಲಿದೆ.
ಇಲ್ಲಿನ ಅಲ್ ತುಮಾಮ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯದಲ್ಲಿ ಚಾಂಪಿಯನ್ ತಂಡದ ಘನತೆಗೆ ತಕ್ಕಂತೆ ಆಡಿದ ಫ್ರಾನ್ಸ್ ತಂಡ ಸುಲಭ ಜಯ ತನ್ನದಾಗಿಸಿಕೊಂಡಿತು. ಫ್ರಾನ್ಸ್ ಪರ ಕೈಲಿಯಾನ್ ಎಂಬಾಪೆ (೭೪, ೯೦+೧ ನಿಮಿಷ) ಅವಳಿ ಗೋಲ್‌ಗಳನ್ನು ಬಾರಿಸಿದರೆ, ಒಲಿವರ್ ಗಿರೋವ್ಡ್ (೪೪ನೇ ನಿಮಿಷ) ಒಂದು ಗೋಲ್ ಬಾರಿಸಿದರು. ಪೋಲೆಂಡ್ ಪರ ರಾಬರ್ಟ್ ಲೆವೊಂಡಸ್ಕಿ (೯೦+೯ನೇ ನಿಮಿಷ) ಏಕೈಕ ಗೋಲ್ ಬಾರಿಸಿದರು.
ಈ ಪಂದ್ಯದಲ್ಲಿ ಒಂದು ಗೋಲ್ ಬಾರಿಸಿದ ಫ್ರಾನ್ಸ್‌ನ ಒಲಿವರ್ ಗಿರೌಡ್, ಆ ತಂಡದ ಪರ ಅತ್ಯಂತ ಹೆಚ್ಚು ಅಂತಾರಾಷ್ಟ್ರೀಯ ಗೋಲ್‌ಗಳನ್ನು ಬಾರಿಸಿದ ದಾಖಲೆ ಮಾಡಿದರು. ಅವರ ಖಾತೆಯಲ್ಲಿ ಈಗ ೫೨ ಗೋಲ್‌ಗಳಿವೆ. ಅವರು ಥೆರಿ ಹೆನ್ರಿಯ (೫೧ ಗೋಲ್) ದಾಖಲೆ ಮುರಿದರು.
ಇದನ್ನೂ ಓದಿ |MS Dhoni | ಫಿಫಾ ವಿಶ್ವ ಕಪ್ ಸ್ಟೇಡಿಯಮ್‌ನಲ್ಲಿ ಧೋನಿ ಅಭಿಮಾನಿಗಳ ಕಲರವ, ಜರ್ಸಿ ಹಿಡಿದು ಸಂಭ್ರಮ