ಲಖನೌ: ಕನ್ನಡಿಗ ಹಾಗೂ ಲಕ್ನೊ ಸೂಪರ್ ಜಯಂಟ್ಸ್ ತಂಡದ ನಾಯಕ ಹಾಲಿ ಅವೃತ್ತಿಯ ಐಪಿಎಲ್ನಲ್ಲಿ ನಿಧಾನಗತಿಯ ಬ್ಯಾಟಿಂಗ್ ಮುಂದುವರಿಸಿದ್ದಾರೆ. ಬುಧವಾರ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ 32 ಎಸೆತಗಳಿಗೆ 39 ರನ್ ಬಾರಿಸಿದ್ದಾರೆ. ಆವರ ಸ್ಟ್ರೈಕ್ರೇಟ್ ಕೇವಲ 121.87. ಇದು ಐಪಿಎಲ್ ಟೂರ್ನಿಗೆ ಸೂಕ್ತವಾದ ಬ್ಯಾಟಿಂಗ್ ಅಲ್ಲ. ಕಳೆದ ಕೆಲವು ತಿಂಗಳಿಂದ ಬ್ಯಾಟಿಂಗ್ನಲ್ಲಿ ಸತತವಾಗಿ ವೈಫಲ್ಯ ಕಾಣುತ್ತಿದ್ದ ಅವರು ಈ ಬಾರಿಯ ಐಪಿಎಲ್ನಲ್ಲಿಯೂ ಮತ್ತೆ ವೈಫಲ್ಯ ಕಾಣುವ ಲಕ್ಷಣಗಳಿಗೆ. ಒಟ್ಟಿನಲ್ಲಿ ಅವರ ಬ್ಯಾಟಿಂಗ್ ಬಗ್ಗೆ ಹಿರಿಯ ಆಟಗಾರರಿಗೆ ಹೆಚ್ಚು ಸಮಾಧಾನವಿಲ್ಲ. ಅಂತೆಯೇ ಭಾರತ ತಂಡದ ಮಾಜಿ ಕೋಚ್ ರವಿ ಶಾಸ್ತ್ರಿ ಕೂಡ ರಾಹುಲ್ ಬ್ಯಾಟಿಂಗ್ ವೈಖರಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಖಂಡಿತವಾಗಿಯೂ ಕೆ. ಎಲ್ ರಾಹುಲ್ ಸ್ಟ್ರೈಕ್ರೇಟ್ ಹೆಚ್ಚಿಸಿಕೊಂಡು ಆಡಲೇಬೇಕು. ಎಲ್ಲರೂ 160 ಸ್ಟ್ರೈಕ್ರೇಟ್ನಲ್ಲಿ ಆಡಬೇಕು ಎಂದು ಸಲಹೆ ಕೊಡುತ್ತಾರೆ. ಆದರೆ, ನಾನು ಕೂಡ ಸಾಲವುದಿಲ್ಲ ಎಂದು ನಾನು ಹೇಳುತ್ತೇನೆ. ಅವರು ರಾಜಸ್ಥಾನ್ ವಿರುದ್ಧ ಮಾಡಿದ್ದ 39 ರನ್ಗಳನ್ನು 70 ರನ್ಗಳಾಗಿ ಪರಿವರ್ತಿಸುವ ಅವಕಾಶ ಹೊಂದಿದ್ದರು. ಅದರಿಂದ ತಂಡದ ಮೊತ್ತವೂ 175 ರನ್ಗಳ ಗಡಿ ದಾಟಿತ್ತು. ಟಾಪ್ 3ಯಲ್ಲಿರುವ ಆಟಗಾರರು ಯಾವಾಗಲೂ ದೊಡ್ಡ ಮೊತ್ತದ ಸ್ಕೋರ್ ಮಾಡುವ ನಿಟ್ಟಿನಲ್ಲ ಯೋಜನೆ ರೂಪಿಸಿಕೊಳ್ಳಲೇಬೇಕು ಎಂದು ರವಿ ಶಾಸ್ತ್ರಿ ಸ್ಟಾರ್ ಸ್ಪೋರ್ಟ್ಸ್ ಜತೆ ಮಾತನಾಡುತ್ತಾ ಹೇಳಿದ್ದಾರೆ.
ರಾಜಸ್ಥಾನ್ ತಂಡ ಅತ್ಯುತ್ತಮವಾಗಿ ಆಡಲಿಲ್ಲ. ಒಂದು ವೇಳೆ ಆಡಿದ್ದರೆ ಎಲ್ಎಸ್ಜಿ ತಂಡಕ್ಕೆ ಹಿನ್ನಡೆಯಾಗುತ್ತಿತ್ತು. ಹೀಗಾಗಿ ಈ ಪಂದ್ಯದಲ್ಲಿ ಎರಡೂ ತಂಡಗಳು ಕಲಿಯುಂಥದ್ದು ಸಾಕಷ್ಟಿದೆ. ಆರಂಭಿಕ ಆಟಗಾರರು ಹೆಚ್ಚು ರನ್ ಬಾರಿಸಲು ಮುಂದಾಗಲೇಬೇಕು. ಎಲ್ಎಸ್ಜಿ ಹಾಗೂ ರಾಜಸ್ಥಾನ್ ತಂಡಗಳು ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆದುಕೊಂಡಿವೆ. ಇನ್ನೇನು ಟೂರ್ನಿಯ ಆರಂಭಿಕ ಹಂತದಲ್ಲಿದ್ದೇವೆ. ಹೀಗಾಗಿ ಕಲಿಯುಂಥದ್ದು ಸಾಕಷ್ಟಿದೆ ಎಂದು ಶಾಸ್ತ್ರಿ ನುಡಿದರು.
ಲಕ್ನೊ ತಂಡಕ್ಕೆ ಜಯ
ಬುಧವಾರ ರಾತ್ರಿ ಜೈಪುರದಲ್ಲಿ ನಡೆದ ಸಣ್ಣ ಮೊತ್ತದ ರೋಚಕ ಐಪಿಎಲ್ ಮೇಲಾಟದಲ್ಲಿ ಲಕ್ನೋ ಸೂಪರ್ಜೈಂಟ್ಸ್ 10 ರನ್ಗಳ ಅಂತರದಿಂದ ಗೆದ್ದು ರಾಜಸ್ಥಾನ್ ರಾಯಲ್ಸ್ಗೆ ಆಘಾತವಿಕ್ಕಿದೆ. ನಾಲ್ಕು ವರ್ಷಗಳ ಬಳಿಕ ಇಲ್ಲಿ ನಡೆದ ಮೊದಲ ಐಪಿಎಲ್ ಪಂದ್ಯ ಇದಾಗಿದೆ. ಲಕ್ನೋ ಈ ಪಂದ್ಯ ಗೆದ್ದು 8 ಅಂಕ ಸಂಪಾದಿಸಿದರೂ ರನ್ ರೇಟ್ ಆಧಾರದಲ್ಲಿ ಹಿಂದಿರುವ ಕಾರಣ ದ್ವಿತೀಯ ಸ್ಥಾನದಲ್ಲೇ ಮುಂದುವರಿದಿದೆ. ರಾಜಸ್ಥಾನ್(8 ಅಂಕ) ಅಗ್ರಸ್ಥಾನದಲ್ಲಿ ಉಳಿದಿದೆ.
ಜೈಪುರದ ಸವಾಯ್ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಲಕ್ನೋ ಸೂಪರ್ಜೈಂಟ್ಸ್ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 154 ರನ್ ಪೇರಿಸಿತು. ಜವಾಬಿತ್ತ ರಾಜಸ್ಥಾನ್ ತನ್ನ ಪಾಲಿನ ಆಟದಲ್ಲಿ 6 ವಿಕೆಟ್ ಕಳೆದುಕೊಂಡು 144 ರನ್ ಗಳಿಸಲಷ್ಟೇ ಶಕ್ತವಾಯಿತು.