ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ಮತ್ತು ಖ್ಯಾತ ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ಅವರು ಶೂ ಉದ್ಯಮಿ ಕಮಲೇಶ್ ಪಾರಿಖ್ ಮತ್ತು ಅವರ ಪುತ್ರ ಧ್ರುವ್ ಪಾರಿಖ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಕ್ರಿಮಿನಲ್ ನಂಬಿಕೆ ದ್ರೋಹ ಸಂಬಂಧಿಸಿದ ಐಪಿಸಿ ಸೆಕ್ಷನ್ 406 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಸ್ಪೋರ್ಟ್ಸ್ ಶೂ ವ್ಯವಹಾರದಲ್ಲಿ ಹೂಡಿಕೆ ಮಾಡುವ ಭರವಸೆ ನೀಡುವ ಮೂಲಕ ಪಾರಿಖ್ ತ ಮಗೆ ಮೋಸ ಮಾಡಿದ್ದಾರೆ ಎಂದು ಚೋಪ್ರಾ ಆರೋಪಿಸಿದ್ದಾರೆ.
ಹರಿಪರ್ವತ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್ಐಆರ್ಎನಲ್ಲಿ ಚೋಪ್ರಾ ತಮ್ಮ ಸ್ಪೋರ್ಟ್ಸ್ ಶೂ ವ್ಯವಹಾರದಲ್ಲಿ ಹೂಡಿಕೆ ಮಾಡಲು ಧ್ರುವ್ ಪಾರಿಖ್ಗೆ 57.8 ಲಕ್ಷ ರೂ. ನೀಡಿದ್ದರು. ಧ್ರುವ್ 30 ದಿನಗಳಲ್ಲಿ 20% ಲಾಭದೊಂದಿಗೆ ಹಣವನ್ನು ಹಿಂದಿರುಗಿಸುವ ಎಂದು ಔಪಚಾರಿಕ ಒಪ್ಪಂದವನ್ನು ಮಾಡಿಕೊಂಡಿದ್ದರು. ವಸೂಲಾತಿಗಾಗಿ ಪೋಸ್ಟ್-ಡೇಟೆಡ್ ಚೆಕ್ ಗಳನ್ನು ನೀಡಿದ್ದರು. ಆದರೆ, ಒಂದು ವರ್ಷದ ನಂತರ ಕೇವಲ 24.5 ಲಕ್ಷ ರೂ.ಗಳನ್ನು ಮಾತ್ರ ಹಿಂದಿರುಗಿಸಿದ್ದರು. ಅದರಲ್ಲಿ ಎರಡು ಚೆಕ್ ಗಳನ್ನು ಬೌನ್ಸ್ ಆಗಿದ್ದವು. ನೋಟಿಸ್ ಗಳ ಮೂಲಕ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಿದರೂ, ಪಾರಿಖ್ ಗಳು ಹ ಣ ಕೊಟ್ಟಿರಲಿಲ್ಲ. ಇದು ಚೋಪ್ರಾಗೆ 33.2 ಲಕ್ಷ ರೂ.ಗಳ ಅಸಲು ಮೊತ್ತ ಬಾಕಿ ಉಳಿದುಕೊಂಡಿತ್ತು.
ಹಣ ನೀಡದೇ ಮೋಸ
ನಾವು ನೋಟರಿ ಮಾಡಿದ ಒಪ್ಪಂದವನ್ನು ಮಾಡಿಕೊಂಡಿದ್ದೇವೆ. ಧ್ರುವ್ 30 ದಿನಗಳಲ್ಲಿ 20% ಲಾಭದೊಂದಿಗೆ ಹಣವನ್ನು ಹಿಂದಿರುಗಿಸಬೇಕು ಅದಕ್ಕಾಗಿ ಅವರು ಪೋಸ್ಟ್-ಡೇಟೆಡ್ ಚೆಕ್ಗಳನ್ನು ನೀಡಿದ್ದರು. ಆದಾಗ್ಯೂ, ಒಂದು ವರ್ಷದ ನಂತರ, ಕೇವಲ 24.5 ಲಕ್ಷ ರೂ.ಗಳನ್ನು ಮಾತ್ರ ನೀಡದ್ದಾರೆ ಎಂದು ಚೋಪ್ರಾ ಹೇಳಿದ್ದಾರೆ.
“ನಾನು ಧ್ರುವ್ ಅವರ ತಂದೆ ಕಮಲೇಶ್ ಅವರೊಂದಿಗೆ ಮಾತನಾಡಿದ್ದೇನೆ . ಅವರು ತಮ್ಮ ಮಗನ ಪರವಾಗಿ ಒಪ್ಪಂದವನ್ನು ಗೌರವಿಸಯವ ಭರವಸೆ ಕೊಟ್ಟಿದ್ದರು. ಹಾಗೆ ಮಾಡಲು ವಿಫಲರಾಗಿದ್ದಾರೆ. ಲೀಗಲ್ ನೋಟಿಸ್ಗಳನ್ನು ನೀಡಲಾಯಿತು ಆದರೆ ತಂದೆ ಮತ್ತು ಮಗ ಇಬ್ಬರೂ ಮಾತುಕತೆ ನಿಲ್ಲಿಸಿದ್ದಾರೆ. ಇದರಿಂದಾಗಿ ಅಸಲು ಮೊತ್ತವಾದ 33.3 ಲಕ್ಷ ರೂ.ಗಳನ್ನು ವಸೂಲಿ ಮಾಡುವುದು ಸವಾಲಾಗಿ ಪರಿಣಮಿಸಿತು” ಎಂದು ಚೋಪ್ರಾ ಆರೋಪಿಸಿದ್ದಾರೆ.
ಸಾಕ್ಷಿಗಳ ಪರಿಶೀಲನೆ
ದಾಖಲೆಗಳು ಮತ್ತು ಪುರಾವೆಗಳನ್ನು ಪರಿಶೀಲಿಸಲಾಗುತ್ತಿದೆ. ತನಿಖೆಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಟೇಷನ್ ಹೌಸ್ ಅಧಿಕಾರಿ ಅರವಿಂದ್ ಕುಮಾರ್ ಖಚಿತಪಡಿಸಿದ್ದಾರೆ. ಆರೋಪಿಗಳನ್ನು ವಿಚಾರಣೆಗೆ ಕರೆಸಲಾಗುವುದು ಎಂದು ನುಡಿದಿದ್ದಾರೆ.
“ದೂರುದಾರರು ಒದಗಿಸಿದ ದಾಖಲೆಗಳು ಮತ್ತು ಪುರಾವೆಗಳನ್ನು ಪರಿಶೀಲಿಸಲಾಗುತ್ತಿದೆ. ತನಿಖೆಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಆರೋಪಿಗಳನ್ನು ವಿಚಾರಣೆಗೆ ಕರೆಯಲಾಗುವುದು ಎಂದು ಸ್ಟೇಷನ್ ಹೌಸ್ ಅಧಿಕಾರಿ ಅರವಿಂದ್ ಕುಮಾರ್ ತಿಳಿಸಿದ್ದಾರೆ.
ದೀಪಕ್ ಚಾಹರ್ ತಂದೆಗೂ ಮೋಸ ಮಾಡಿದ್ದರು
ಪಾರಿಖ್ ದಂಪತಿಗಳು ಕಾನೂನು ಸಮಸ್ಯೆಗಳನ್ನು ಎದುರಿಸುತ್ತಿರುವುದು ಇದೇ ಮೊದಲಲ್ಲ. ಈ ವರ್ಷದ ಆರಂಭದಲ್ಲಿ, ಕ್ರಿಕೆಟಿಗ ದೀಪಕ್ ಚಾಹರ್ ಅವರ ತಂದೆ ಅವರು ವ್ಯವಹಾರ ಉದ್ಯಮದಲ್ಲಿ 10 ಲಕ್ಷ ರೂ.ಗಳನ್ನು ವಂಚಿಸಿದ್ದಾರೆ ಎಂದು ಆರೋಪಿಸಿದ್ದರು. ಹಣವನ್ನು ಹಿಂದಿರುಗಿಸುವಂತೆ ಕೇಳಿದಾಗ ನಿಂದನೆ ಮತ್ತು ಬೆದರಿಕೆಗಳನ್ನು ಹಾಕಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.