ಚೆನ್ನೈ: ಐಪಿಎಲ್ 2023ನೇ ಆವೃತ್ತಿಯಲ್ಲಿ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈಗಲೂ ಟ್ರೆಂಡ್ನಲ್ಲಿದೆ. ನಾಯಕ ಧೋನಿಯ (MS Dhoni ) ಬಗ್ಗೆಯೂ ಮಾತುಕತೆಗಳು ನಡೆಯುತ್ತಲೇ ಇವೆ. ಇವೆಲ್ಲದರ ನಡುವೆ ಟೂರ್ನಿ ನಡೆಯುವ ವೇಳೆ ನಾಯಕ ಧೋನಿ ಮತ್ತು ಆಲ್ರೌಂಡರ್ ರವೀಂದ್ರ ಜಡೇಜಾ (Ravindra Jadeja) ನಡುವೆ ಮನಸ್ತಾಪಗಳಿವೆ ಎಂಬ ಸುದ್ದಿಯೊಂದು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು. ಅವರಿಬ್ಬರೂ ಪರಸ್ಪರ ಮುನಿಸಿಕೊಂಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಸಿಇಒ ಕಾಶಿ ವಿಶ್ವನಾಥನ್ ಅವರು ಸಮಸ್ಯೆ ಪರಿಹಾರಕ್ಕೆ ಶತ ಪ್ರಯತ್ನ ಮಾಡತ್ತಿದ್ದಾರೆ ಎಂಬುದಾಗಿ ವರದಿಯಾಗಿದೆ. ಈ ಸುದ್ದಿಯ ಬಗ್ಗೆ ಇದೀಗ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ನಿವೃತ್ತಿ ಪಡೆದುಕೊಂಡಿರುವ ಮಧ್ಯಮ ಕ್ರಮಾಂಕದ ಬ್ಯಾಟರ್ ಅಂಬಾಟಿ ರಾಯುಡು ಮಾನಾಡಿದ್ದಾರೆ. ಅಂಥದ್ದೊಂಡು ಪ್ರಸಂಗವೇ ಇರಲಿಲ್ಲ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ.
ಸಿಎಸ್ಕೆ ಮಾಜಿ ಬ್ಯಾಟರ್ ಅಂಬಾಟಿ ರಾಯುಡು ಅವರು ರವೀಂದ್ರ ಜಡೇಜಾ ಮತ್ತು ಎಂಎಸ್ ಧೋನಿ ನಡುವೆ ಭಿನ್ನಾಭಿಪ್ರಾಯವಿದೆ ಎಂಬ ವದಂತಿಗಳನ್ನು ಸಾರಸಗಟು ತಳ್ಳಿ ಹಾಕಿದ್ದಾರೆ. ಜಡೇಜಾ ಅವರನ್ನು 2022ರಲ್ಲಿ ಸಿಎಸ್ಕೆ ನಾಯಕನನ್ನಾಗಿ ಹೆಸರಿಸಲಾಯಿತ್ತು. ಸತತ ಸೋಲಿನ ನಂತರ ಧೋನಿ ಮತ್ತೆ ನಾಯಕತ್ವ ವಹಿಸಿಕೊಂಡಿದ್ದರು. ಇದೇ ವೇಳೆ ಜಡೇಜಾ ಚೆನ್ನೈ ಶಿಬಿರವನ್ನು ತೊರೆದಿದ್ದರು. ಇದು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಚರ್ಚೆಗೆ ಕಾರಣಗಳಾಗಿದ್ದವು. ಜತೆಗೆ ಜಡಶೇಜಾ ಇನ್ಸ್ಟಾಗ್ರಾಮ್ನಲ್ಲಿ ಸಿಎಸ್ಕೆ ತಂಡವನ್ನು ಅನ್ಫಾಲೋ ಮಾಡುವ ಮೂಲಕ ಚರ್ಚೆಗೆ ಇನ್ನಷ್ಟು ಆಸ್ಪದ ಕೊಟ್ಟಿದ್ದರು. ಆದರೆ ಇದ್ಯಾವುದೂ ಧೋನಿ ಮತ್ತು ಜಡೇಜಾ ಗಲಾಟೆಯ ಪರಿಣಾಮವಲ್ಲ ಎಂದು ಅಂಬಾಟಿ ಹೇಳಿದ್ದಾರೆ.
ಬದಲಾದ ಪರಿಸ್ಥಿತಿ
2022 ರಲ್ಲಿ ಋತುವಿನ ನಂತರ ನಾಯಕ ಧೋನಿ ನಾಯಕತ್ವನ್ನು ಹೆಗಲೇರಿಸಿಕೊಳ್ಳಲು ನಿರ್ಧರಿಸಿದರು. ಅದಕ್ಕೂ ಮೊದಲು ಜಡೇಜಾ ಅವರನ್ನು ತಮ್ಮ ತಂಡದಿಂದ ಬಿಡುಗಡೆ ಮಾಡಬಾರದು ಎಂದು ಮ್ಯಾನೇಜ್ಮೆಂಟ್ಗೆ ಹೇಳಿದ್ದರು. ಐಪಿಎಲ್ 2023ಕ್ಕೂ ಮೊದಲು ಧೋನಿ ಜಡೇಜಾ ಅವರೊಂದಿಗೆ ಸಂಭಾಷಣೆ ನಡೆಸಿದ್ದರು ಎಂಬುದಾಗಿ ಅಂಬಾಟಿ ಹೇಳಿದ್ದಾರೆ. ಫೈನಲ್ನ ಕೊನೆಯ ಎರಡು ಎಸೆತಗಳಲ್ಲಿ ಎರಡು ಬೌಂಡರಿಗಳನ್ನು ಹೊಡೆದ ನಂತರ ಜಡೇಜಾ ಸಿಎಸ್ಕೆ 2023ರ ಐಪಿಎಲ್ ಟ್ರೋಫಿಯನ್ನು ಸಿಎಸ್ಕೆ ತಂಡಕ್ಕೆ ತಂದಕೊಟ್ಟಿದ್ದರು. ಹೀಗಾಗಿ ಧೋನಿ ಮತ್ತು ಜಡೇಜಾಗೆ ಗಲಾಟೆ ಇರಲಿಲ್ಲ ಎಂದು ಅಂಬಾಟಿ ಹೇಳಿದ್ದಾರೆ.
ಇದನ್ನೂ ಓದಿ : MS Dhoni: ಧೋನಿ ಮನೆಯಲ್ಲಿರುವ ಗ್ಯಾರೇಜ್ ಕಂಡು ಬೆರಗಾದ ವೆಂಕಟೇಶ್ ಪ್ರಸಾದ್
ಜಡ್ಡು (ಜಡೇಜಾ) ಮಹಿ ಭಾಯ್ ಬಗ್ಗೆ ಅಸಮಾಧಾನಗೊಂಡಿದ್ದಾರೆ ಎಂದು ನಾನು ಭಾವಿಸುವುದಿಲ್ಲ. ತಂಡವು ಉತ್ತಮವಾಗಿ ಕಾರ್ಯನಿರ್ವಹಿಸದ ಕಾರಣ ಅವರು ದುಃಖಿತರಾಗಿದ್ದರು. ಆ ವರ್ಷ ಎಲ್ಲರ ಪ್ರದರ್ಶನಗಳು ನಿರೀಕ್ಷಿತ ಮಟ್ಟದಲ್ಲಿರಲಿಲ್ಲ ಎಂದು ರಾಯುಡು ಬಿಹೈಂಡ್ ವುಡ್ಸ್ ಟಿವಿ ಯೂಟ್ಯೂಬ್ ಚಾನೆಲ್ನಲ್ಲಿ ರಾಯುಡು ಹೇಳಿದ್ದಾರೆ. ಸಿಎಸ್ಕೆ ತಂಡ 2022ರ ಋತುವಿ ಪಾಯಿಂಟ್ಸ್ ಟೇಬಲ್ನಲ್ಲಿ ಕೆಳಗಿನಿಂದ ಎರಡನೇ ಸ್ಥಾನದಲ್ಲಿ ನಿಂತಿರುವುದೇ ಈ ಸುದ್ದಿಗೆ ಪ್ರಮುಖ ಕಾರಣವಾಗಿತ್ತು.
ಅವರು (ಧೋನಿ) ಈ ತಂಡವನ್ನು ಬೆಳೆಸಿದ್ದಾರೆ ಹಾಗೂ ಜಡ್ಡು (ಜಡೇಜಾ) ಅವರನ್ನು ಇಂದಿನ ಸ್ಥಿತಿಗೆ ತಂದಿದ್ದಾರೆ. ಧೋನಿ ಜಡೇಜಾ ಅವರನ್ನು 10-12 ವರ್ಷಗಳಿಂದ ಚೆನ್ನಾಗಿ ನಡೆಸಿಕೊಂಡಿದ್ದಾರೆ. ಧೋನಿ ಬೆಳೆಸಿದ ಪ್ರತಿಭೆಯಿಂದಲೇ ಈ ಬಾರಿಯ ಟ್ರೋಫಿ ಸಿಎಸ್ಕೆ ಪಾಲಾಯಿತು. ಇದಕ್ಕಾಗಿ ಧೋನಿ ಖಂಡಿತಾ ಸಂತೋಷ ಪಡುತ್ತಾರೆ ಎಂಬುದಾಗಿ ಅಂಬಾಟಿ ರಾಯುಡು ಹೇಳಿದ್ದಾರೆ.