ಬೆಂಗಳೂರು: ಭಾರತದ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಇತ್ತೀಚೆಗೆ ಅಸಾಧಾರಣ ಫಾರ್ಮ್ನಲ್ಲಿದ್ದಾರೆ. ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗದ ಬೌಲಿಂಗ್ ವಿಭಾಗದ ನೇತೃತ್ವ ವಹಿಸಿದ್ದು. ಪವರ್ಪ್ಲೇ ಅವಧಿಯಲ್ಲಿ ಸತತವಾಗಿ ವಿಕೆಟ್ಗಳನ್ನು ಕಬಳಿಸುತ್ತಿದ್ದಾರೆ. 29 ವರ್ಷದ ಈ ಹೈದರಾಬಾದ್ ಮೂಲದ ವೇಗಿ ಐಸಿಸಿ ಏಕ ದಿನ ಬೌಲಿಂಗ್ ರ್ಯಾಂಕ್ ಪಟ್ಟಿಯಲ್ಲೂ ಅಗ್ರ ಸ್ಥಾನ ಪಡೆದುಕೊಂಡಿದೆ. ಹೀಗಾಗಿ ಅವರು ಗಾಯಗೊಂಡಿರುವ ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ ಅವರಿಗೆ ಪರ್ಯಾಯ ಆಯ್ಕೆ ಎಂದು ಹೇಳಲಾಗುತ್ತಿದೆ.
ಅಕ್ಟೋಬರ್ ಮತ್ತು ನವೆಂಬರ್ನಲ್ಲಿ 2023ರ ಏಕ ದಿನ ವಿಶ್ವ ಕಪ್ಗೆ ಆತಿಥ್ಯ ವಹಿಸಲಿದೆ. ಇದೇ ವೇಳೆ ಸಿರಾಜ್ ಕೂಡ ಉತ್ತಮ ಫಾರ್ಮ್ಗೆ ಬಂದಿದ್ದಾರೆ. ಇದೇ ವೇಳೆ ಬುಮ್ರಾ ಲಭ್ಯತೆಯ ಬಗ್ಗೆಯೂ ಅನುಮಾನ ಉಂಟಾಗಿದೆ. ಈ ಕುರಿತು ಮಾತನಾಡಿದ ಭಾರತ ತಂಡದ ಮಾಜಿ ವೇಗಿ ಆರ್.ಪಿ.ಸಿಂಗ್, ಬುಮ್ರಾ ಅವರ ಬದಲಿಗೆ ಸಿರಾಜ್ ಅತ್ಯುತ್ತಮ ಆಯ್ಕೆ ಎಂದು ಹೇಳಿದರು.
“ನಾನು ಸಿರಾಜ್ ಅವರನ್ನು ಬಹಳ ಸಮಯದಿಂದ ನೋಡುತ್ತಿದ್ದೇನೆ. ಅವರು ಭಾರತೀಯ ತಂಡಕ್ಕೆ ಸೇರಿದಾಗ, ಅವರ ಗ್ರಾಫ್ ಅತ್ಯುತ್ತಮವಾಗಿತ್ತು. ಆದರೆ ನಿಧಾನವಾಗಿ ಅವರ ಆಟದ ಪ್ರಭಾವ ಕುಸಿಯಲು ಆರಂಭವಾಯಿತು. ಅದೇ ರೀತಿ ಅವರು ಫಿಟ್ನೆಸ್ಗೂ ಹೆಚ್ಚಿನ ಆಸಕ್ತಿ ತೋರಿದರು. ಹೀಗಾಗಿ ಅವರಿಂದ ಉತ್ತಮ ಬೌಲಿಂಗ್ ಪ್ರದರ್ಶನ ಮೂಡಿ ಬರುತ್ತಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಜತೆ ಮಾತನಾಡುತ್ತಾ ಆರ್ಪಿ ಸಿಂಗ್ ಹೇಳಿದ್ದಾರೆ.
ಹೈದರಾಬಾದ್ ಮೂಲದ ವೇಗದ ಬೌಲರ್ ಬಗ್ಗೆ ಮತ್ತಷ್ಟು ಮೆಚ್ಚುಗೆ ವ್ಯಕ್ತಪಡಿಸಿದ ಆರ್ಪಿ ಸಿಂಗ್, ಅವರು ಬುಮ್ರಾ ಅವರ ಬದಲಿಯಾಗುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಅದೇ ರೀತಿ ಮುಂದಿನ ಮೊಹಮ್ಮದ್ ಶಮಿಯಾಗುವ ಆಯ್ಕೆಯೂ ಇದೆ ಎಂದು ಹೇಳಿದರು.
15 ವಿಕೆಟ್ ಕಬಳಿಸಿದ ಸಿರಾಜ್
ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2023 ರಲ್ಲಿ, ಸಿರಾಜ್ ಒಂಬತ್ತು ಪಂದ್ಯಗಳಿಂದ 17.13 ರ ಸರಾಸರಿ ಮತ್ತು 7.34 ಎಕಾನಮಿಯಲ್ಲಿ 15 ವಿಕೆಟ್ಗಳೊಂದಿಗೆ ಜಂಟಿ ಮೂರನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಅವರ 15 ವಿಕೆಟ್ಗಳಲ್ಲಿ ಎಂಟು ವಿಕೆಟ್ಗಳು ಪವರ್ಪ್ಲೇ ಅವಧಿಯಲ್ಲಿ ಸಿಕ್ಕಿರುವುದು.
ಐಪಿಎಲ್ 2022 ರಲ್ಲಿ ಪವರ್ಪ್ಲೇ ಅವಧಿಯಲ್ಲಿ 10.23 ಬೌಲಿಂಗ್ ಎಕಾನಮಿ ಹೊಂದಿದ್ದ ಸಿರಾಜ್ ಪ್ರಸ್ತುತ ಋತುವಿನಲ್ಲೂ ಮಿಂಚುತ್ತಿದ್ದಾರೆ. ಮುಂಬರುವ ವಿಶ್ವ ಟೆಸ್ಟ್ ಚಾಂಪಿಯಷಿಪ್ ಫೈನಲ್ ಮತ್ತು ಏಕದಿನ ವಿಶ್ವಕಪ್ 2023 ರಲ್ಲಿ ಈ ವೇಗದ ಬೌಲರ್ ತನ್ನ ಫಾರ್ಮ್ ಮುಂದುವರಿಸುವ ಸಾಧ್ಯತೆಗಳಿವೆ.