Site icon Vistara News

Babar Azam : ಕ್ಲಾಸ್​​ನಲ್ಲಿ ಫಸ್ಟ್​, ಪರೀಕ್ಷೆಯಲ್ಲಿ ಫೇಲ್​ ; ಬಾಬರ್ ಬ್ಯಾಟಿಂಗ್ ಬಗ್ಗೆ ಜೋಕ್​ ಮಾಡಿದ್ದು ಯಾರು?

Babar Azam

ನವದೆಹಲಿ: ಭಾರತದಲ್ಲಿ ನಡೆಯುತ್ತಿರುವ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್​​ನಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಅಜಮ್​ (Babar Azam) ನಂ.1 ಏಕದಿನ ಬ್ಯಾಟರ್​ ಎಂಬ ಹೆಗ್ಗಳಿಕೆಯನ್ನು ಸಮರ್ಥಿಸಿಕೊಳ್ಳಲು ವಿಫಲರಾಗಿದ್ದಾರೆ. ಬ್ಯಾಟಿಂಗ್ ಸ್ನೇಹಿ ಪರಿಸ್ಥಿತಿಗಳಲ್ಲಿ ಆಡಿದ್ದರೂ ಎಂಟು ಇನ್ನಿಂಗ್ಸ್​ಗಳಲ್ಲಿ 5, 10, 50, 18, 74, 50, 9 ಮತ್ತು 66* ರನ್​ಗಳನ್ನು ಬಾರಿಸಿದ್ದಾರೆ. ವಿಶೇಷವಾಗಿ ಅವರ ಸ್ಟ್ರೈಕ್ ರೇಟ್ 82.69 ಆಗಿದ್ದು, ಅಭಿಮಾನಿಗಳು ಮತ್ತು ತಜ್ಞರಿಂದ ಟೀಕೆಗೆ ಗುರಿಯಾಗಿದೆ.

ಇತ್ತೀಚೆಗೆ, ಪಾಕಿಸ್ತಾನದ ಮಾಜಿ ಕ್ರಿಕೆಟಿಗರಾದ ಸಿಕಂದರ್ ಬಖ್ತ್ ಮತ್ತು ಅಬ್ದುಲ್ ರಜಾಕ್ ಅವರು ಪಾಕ್​ ನಾಯಕ ಬಾಬರ್ ಅವರ ಬ್ಯಾಟಿಂಗ್ ವಿಧಾನವನ್ನು ಟೀಕಿಸಿದ್ದರು. ರೋಹಿತ್ ಶರ್ಮಾ ಹಾಲಿ ವಿಶ್ವ ಕಪ್​ನಲ್ಲಿ ತೋರುತ್ತಿರುವ ಕೆಚ್ಚೆದೆಯ ಪ್ರದರ್ಶನವನ್ನು ನೋಡಿ ಕಲಿಯಬೇಕಾಗಿದೆ ಎಂದು ಹೇಳಿದ್ದರು.

ಆಟದ ವೈಖರಿಗೆ ಟೀಕೆ

ರಜಾಕ್ ಮತ್ತು ಸಿಕಂದರ್ ಭಕ್ತ್ ಅವರು ಆಧುನಿಕ ದಿನದ ದೈತ್ಯ ಆಟಗಾರ ಎನಿಕೊಂಡಿರುವ ಅಜಮ್​ ನಿರಾಶಾದಾಯಕ ಪ್ರದರ್ಶನವನ್ನು ಟೀಕಿಸಿದ್ದಾರೆ. ಕ್ರೀಸ್​ನಲ್ಲಿ ಬಾಬರ್ ಅಜಮ್ ಅವರ ಆಟದ ವೈಖರಿಯನ್ನು ಟೀಕಿಸಿದ್ದಾರೆ. ಮತ್ತು ಸಮಕಾಲೀನ ನಾಯಕನಾಗಿರುವ ರೋಹಿತ್​ ಅವರ ಹೋಲಿಕೆಯನ್ನು ಮಾಡಿದ್ದರು.

ಪಾಕಿಸ್ತಾನ ಮೂಲದ ‘ಜಿಯೋ ಸೂಪರ್’ ಚಾನೆಲ್​ನಲ್ಲಿ ಮಾತನಾಡಿರುವ ಭಕ್ತ್ ಮತ್ತು ರಜಾಕ್, ಬಾಬರ್ ತರಗತಿಯಲ್ಲಿ ಅಗ್ರಸ್ಥಾನದಲ್ಲಿರುವ ಆದರೆ ಮೆಟ್ರಿಕ್ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವ ವಿದ್ಯಾರ್ಥಿಯನ್ನು ಹೋಲುತ್ತಾರೆ ಎಂದು ಹೇಳಿದ್ದಾರೆ. ದ್ವಿಪಕ್ಷೀಯ ಪಂದ್ಯಗಳಲ್ಲಿ ಕ್ರಿಕೆಟಿಗನ ಸ್ಥಿರ ಪ್ರದರ್ಶನವನ್ನು ಉಲ್ಲೇಖಿಸಿದ ಅವರು ಪ್ರಮುಖ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಅತ್ಯುತ್ತಮ ಪ್ರದರ್ಶನಗಳ ಸರಮಾಲೆಯೊಂದಿಗೆ ವಿಶ್ವದ ನಂಬರ್ ಒನ್ ಬ್ಯಾಟರ್​ ಎನಿಸಿಕೊಂಡಿದ್ದ ಬಾಬರ್​ ವಿಶ್ವ ಕಪ್​ಗೆ ಪ್ರವೇಶಿಸಿದ್ದರು/ ಈಗ ಎಂಟು ಇನ್ನಿಂಗ್ಸ್​ಗಳಲ್ಲಿ ಅತ್ಯಂತ ದುರ್ಬಲ ಪ್ರದರ್ಶನ ನೀಡಿದ್ದಾರೆ.

ಭಾರತ ಒಗ್ಗಟ್ಟಿಗೆ ಬೆಂಬಲ

ಈ ವಿಶ್ವಕಪ್​ನಲ್ಲಿ ಭಾರತ ತಂಡದ ಅಜೇಯ ಓಟದ ಬಗ್ಗೆಯೂ ಮಾತನಾಡಿದ ರಜಾಕ್, ತಂಡದ ಒಗ್ಗಟ್ಟು ಅವರನ್ನು ಪ್ರಬಲ ಶಕ್ತಿಯನ್ನಾಗಿ ಮಾಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. “ಅವರು ತಮ್ಮ ದೇಶಕ್ಕಾಗಿ ಆಡುತ್ತಿದ್ದಾರೆ. ಇತರ ಬ್ಯಾಟರ್​ಗಳು ರನ್ ಗಳಿಸಿದಾಗ ವಿರಾಟ್ ಕೊಹ್ಲಿಯ ಪ್ರತಿಕ್ರಿಯೆಯನ್ನು ನೋಡಿದರೆ ಎಲ್ಲವೂ ಗೊತ್ತಾಗುತ್ತದೆ. ಅವರು ತಾವೇ ಒಂದು ರನ್ ಗಳಿಸಿದಂತೆ ಸಂಭ್ರಮಿಸುತ್ತಾರೆ ಎಂದು ರಜಾಕ್ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ : Shakib Al Hasan : ಕ್ರೀಡಾ ಸ್ಫೂರ್ತಿ ಮರೆತ ಶಕಿಬ್​ ವಿಶ್ವ ಕಪ್​ ಟೂರ್ನಿಯಿಂದಲೇ ಔಟ್​​

ಭಾರತದ ಬೌಲರ್​ಗಳು ಉರಿಚೆಂಡಿನ ದಾಳಿ ಮಾಡುತ್ತಿದ್ದಾರೆ. ಬ್ಯಾಟರ್​ಗಳು ಅಬ್ಬರಿಸುತ್ತಿದ್ದಾರೆ. ಎರಡು ತಿಂಗಳ ಹಿಂದೆ ಪಾಕಿಸ್ತಾನದ ಬೌಲರ್​ಗಳು ಉತ್ತಮ ದಾಳಿ ಸಂಘಟಿಸುತ್ತಿದ್ದರು ಮತ್ತು ಅದಕ್ಕಾಗಿಯೇ ನಾವು ಉತ್ತಮ ಫಲಿತಾಂಶ ಪಡೆಯುತ್ತಿದ್ದೆವು . ನಮ್ಮನ್ನು ವಿಶ್ವದ ನಂ.1 ಬೌಲಿಂಗ್​ ದಾಳಿ ಎಂದು ಕರೆಸಿಕೊಂಡಿದ್ದೆವು. ಅದೇ ಘಟಕವು ವಿಕೆಟ್​​ ಪಡೆಯಲು ವಿಫಲವಾಗುತ್ತಿದೆ. ಈಗ ನಾವು ನಮ್ಮ ಬೌಲರ್​ಗಳನ್ನು ಪ್ರಶ್ನಿಸುತ್ತಿದ್ದೇವೆ. ಆದರೆ ಭಾರತ ತಂಡದ ಏಕತೆ ಮತ್ತು ಅವರ ಆತ್ಮವಿಶ್ವಾಸಕ್ಕಾಗಿ ನಾನು ರೋಹಿತ್ ಶರ್ಮಾ ಅವರನ್ನು ಪ್ರಶಂಸುವೆ ಎಂಬುದಾಗಿ ರಜಾಕ್ ಹೇಳಿದ್ದಾರೆ.

ಪರಿಸ್ಥಿತಿಯ ಅನುಕೂಲ

“ಭಾರತವು ತವರಿನ ಪರಿಸ್ಥಿತಿಯನ್ನು ಹೆಚ್ಚು ಬಳಸಿಕೊಳ್ಳುತ್ತಿದೆ. ಮೊದಲ ಹತ್ತು ಓವರ್​ಗಳಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅವರು ಪ್ರಾರಂಭಿಸಿದ ರೀತಿಯೇ ಉದಾಹರಣೆ. ಅದು ಅವರಿಗೆ ಉತ್ತಮ ಮುನ್ನಡೆಯನ್ನು ಕಲ್ಪಿಸಿತು. 11 ರಿಂದ30 ಓವರ್​ ತನಕ ಪ್ರತಿ ಓವರ್​ಗೆ ಮೂರು-ನಾಲ್ಕು ರನ್​ಗಳನ್ನು ತೆಗೆದರು. ಕೊನೆಯ 10 ಓವರ್​ಗಳಲ್ಲಿ ಅವರು ಮತ್ತೆ ಮುನ್ನಡೆ ಸಾಧಿಸಿದರು. ಈ ಪಿಚ್​ನಲ್ಲಿ 250 ರನ್ ಸಾಕು ಎಂದು ಅವರಿಗೆ ತಿಳಿದಿತ್ತು. ಆದರೆ ಇನ್ನೂ ಆಕ್ರಮಣಕಾರಿ ಬ್ರಾಂಡ್ ಕೆಲಸ ಮಾಡಿತು ಎಂದು ರಜಾಕ್ ಹೇಳಿದ್ದಾರೆ.

“ಪಿಚ್ ಭಾರತದ ಪರವಾಗಿದೆ. ಪಿಚ್ ಹೇಗೆ ಪ್ರತಿಕ್ರಿಯಿಸುತ್ತದೆ ಎಂದು ಭಾರತಕ್ಕೆ ತಿಳಿದಿದೆ ಎಂದು ಅನಿಸುತ್ತದೆ. ಅವರು ಬ್ಯಾಟಿಂಗ್​ನಲ್ಲಿ ಹೆಚ್ಚು ಲಾಭ ಪಡೆಯುತ್ತಿದ್ದಾರೆ. ಅವರು ಬೌಲಿಂಗ್ ಮಾಡುವಾಗ ವಿಕೆಟ್​ನ ಗುರಿ ಹೊಂದಿದ್ದಾರೆ, “ಎಂದು ರಜಾಕ್ ಹೇಳಿಕೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version