Site icon Vistara News

RCB : ಕ್ರಿಕೆಟ್​ಗೆ ಗುಡ್​ ಬೈ ಹೇಳಿದ ಆರ್​ಸಿಬಿ ತಂಡದ ಮಾಜಿ ಬ್ಯಾಟರ್​

Gurukeerat

ನವದೆಹಲಿ: ದೇಶೀಯ ಕ್ರಿಕೆಟ್​ನಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದ ಕ್ರಿಕೆಟರ್​ ಮತ್ತು ಭಾರತದ ಮಾಜಿ ಅಂತಾ ರಾಷ್ಟ್ರೀಯ ಆಟಗಾರ ಗುರ್​​ಕೀರತ್ ಸಿಂಗ್ ಮಾನ್ ಶುಕ್ರವಾರ ಎಲ್ಲಾ ರೀತಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಅವರು ಐಪಿಎಲ್​ನಲ್ಲಿ ಆರ್​ಸಿಬಿ (RCB) ತಂಡವನ್ನು ಪ್ರತಿನಿಧಿಸಿದ್ದರು. ಬಲಗೈ ಬ್ಯಾಟ್ಸ್​​ಮನ್​ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸರಣಿ ಛಾಯಾಚಿತ್ರಗಳು ಮತ್ತು ಸಂದೇಶದ ಮೂಲಕ ನಿವೃತ್ತಿ ವಿಷಯವನ್ನು ಪ್ರಕಟಿಸಿದ್ದಾರೆ.

ತಮ್ಮ ನಿವೃತ್ತಿ ಸಂದೇಶದಲ್ಲಿ, ಮನ್ ತಮ್ಮ ವೃತ್ತಿಜೀವನದುದ್ದಕ್ಕೂ ಪಡೆದ ಬೆಂಬಲಕ್ಕಾಗಿ ಎಲ್ಲರಿಗೂ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.. ತಮ್ಮ ಕುಟುಂಬ, ಸ್ನೇಹಿತರು, ತರಬೇತುದಾರರು ಮತ್ತು ಸಹ ಆಟಗಾರರು ನಿರ್ವಹಿಸಿದ ಪ್ರಮುಖ ಪಾತ್ರಗಳನ್ನು ಅವರು ಸ್ಮರಿಸಿಕೊಂಡಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ (ಪಿಸಿಎ) ಅವರ ನಿರಂತರ ಬೆಂಬಲ, ಮಾರ್ಗದರ್ಶನ ಮತ್ತು ಪ್ರೋತ್ಸಾಹಕ್ಕಾಗಿ ಮನ್ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಇಂದು ನನ್ನ ನಂಬಲಾಗದ ಕ್ರಿಕೆಟ್ ಪ್ರಯಾಣದ ಅಂತ್ಯವನ್ನು ಪ್ರಕಟಿಸುತ್ತಿದ್ದೇನೆ . ಭಾರತವನ್ನು ಪ್ರತಿನಿಧಿಸುವುದು ಗೌರವ ಮತ್ತು ಭಾಗ್ಯ. ನನ್ನ ಕುಟುಂಬ, ಸ್ನೇಹಿತರು, ತರಬೇತುದಾರರು ಮತ್ತು ನನ್ನ ಸಹ ಆಟಗಾರರ ಬೆಂಬಲಕ್ಕಾಗಿ ನನ್ನ ಹೃದಯವು ಕೃತಜ್ಞತೆಯಿಂದ ತುಂಬಿದಕೊಂಡಿದೆ. ಪ್ರತಿಯೊಬ್ಬರೂ ನನ್ನ ವೃತ್ತಿಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದ್ದೀರಿ. ನನ್ನ ಪ್ರಯಾಣದುದ್ದಕ್ಕೂ ನನಗೆ ದೊರೆತ ನಿರಂತರ ಬೆಂಬಲ, ಮಾರ್ಗದರ್ಶನ ಮತ್ತು ಪ್ರೋತ್ಸಾಹಕ್ಕಾಗಿ ಬಿಸಿಸಿಐ ಮತ್ತು ಪಿಸಿಎಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ.” ಎಂದು ಮಾನ್​ ಬರೆದುಕೊಂಡಿದ್ದಾರೆ.

ಭಾರತ ಪರ ಮೂರು ಪಂದ್ಯಗಳನ್ನು ಆಡಿದ್ದ ಮಾನ್

ಮಾನ್ ಅವರ ನಿವೃತ್ತಿಯು ವಿಶಿಷ್ಟ ಕ್ರಿಕೆಟ್ ವೃತ್ತಿಜೀವನದ ಅಂತ್ಯವನ್ನು ಸೂಚಿಸುತ್ತದೆ ಅವರು ಮೂರು ಏಕದಿನ ಅಂತರರಾಷ್ಟ್ರೀಯ (ಏಕದಿನ) ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದರು. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಭಾರತೀಯ ತಂಡದ ಭಾಗವಾಗಿರುವುದು ಮತ್ತು ಜನವರಿ 2016 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಆಡಿರುವುದು ಅಂತರರಾಷ್ಟ್ರೀಯ ಕ್ರಿಕೆಟ್​ನ ಅವರ ಪ್ರಯಾಣವಾಗಿದೆ.

ಇದನ್ನೂ ಓದಿ: ICC World Cup 2023 : ವಿರಾಟ್​ ಅಲ್ಲ ರೋಹಿತ್​ ಅಲ್ಲ, ಫೇವರಿಟ್ ಆಟಗಾರನನ್ನು ಹೆಸರಿಸಿದ ರಬಾಡ

2016ರಲ್ಲಿ ಮೆಲ್ಬೋರ್ನ್​ನಲ್ಲಿ ನಡೆದ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಮಾನ್​ ಏಕದಿನ ಕ್ರಿಕೆಟ್​​ಗೆ ಪಾದಾರ್ಪಣೆ ಮಾಡಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್​​ನ ತಮ್ಮ ಅಲ್ಪಾವಧಿಯಲ್ಲಿ ಒಟ್ಟು 13 ರನ್ ಮಾತ್ರ ಗಳಿಸಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಮಾನ್ ಹಲವು ತಂಡಗಳಲ್ಲಿ ಆಡಿದ್ದರು. ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕೋಲ್ಕತಾ ನೈಟ್ ರೈಡರ್ಸ್ ಮತ್ತು ಇತ್ತೀಚೆಗೆ ಗುಜರಾತ್ ಟೈಟಾನ್ಸ್ ಸೇರಿದಂತೆ ಹಲವಾರು ತಂಡಗಳನ್ನು ಪ್ರತಿನಿಧಿಸಿದ್ದರು.

41 ಐಪಿಎಲ್ ಪಂದ್ಯಗಳು

ಅವರ ಐಪಿಎಲ್ ವೃತ್ತಿಜೀವನದಲ್ಲಿ 41 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 21.29 ಸರಾಸರಿಯಲ್ಲಿ 511 ರನ್ ಗಳಿಸಿದ್ದಾರೆ. ಎರಡು ಅರ್ಧಶತಕಗಳು ಸೇರಿದಂತೆ 121.09 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಅವರು ಲೀಗ್ ನಲ್ಲಿ ಐದು ವಿಕೆಟ್ ಗಳನ್ನು ಸಹ ಪಡೆದುಕೊಂಡಿದ್ದಾರೆ. ಮನ್ ಅವರ ಪ್ರಥಮ ದರ್ಜೆ ಕ್ರಿಕೆಟ್ ಪ್ರಭಾವಶಾಲಿಯಾಗಿದೆ. ಅವರು 49 ಪಂದ್ಯಗಳಲ್ಲಿ ಭಾಗವಹಿಸಿದ್ದು, 43.91 ಸರಾಸರಿಯಲ್ಲಿ 2942 ರನ್ ಗಳಿಸಿದ್ದಾರೆ. ಇದರಲ್ಲಿ ಆರು ಶತಕಗಳು ಮತ್ತು 18 ಅರ್ಧಶತಕಗಳು ಸೇರಿವೆ. ಲಿಸ್ಟ್ ಎ ಕ್ರಿಕೆಟ್​​ನಲ್ಲಿ ಅವರು 77 ಪಂದ್ಯಗಳನ್ನು ಆಡಿದ್ದಾರೆ ಮತ್ತು 46.60 ಸರಾಸರಿಯಲ್ಲಿ 2703 ರನ್ ಗಳಿಸಿದ್ದಾರೆ. ಇದರಲ್ಲಿ ಮೂರು ಶತಕಗಳು ಮತ್ತು 21 ಅರ್ಧಶತಕಗಳು ಸೇರಿವೆ.

Exit mobile version