Site icon Vistara News

French Open 2022 | ಇಬ್ಬರು ಬಲಿಷ್ಠ ಆಟಗಾರರ ನಡುವೆ ಸೆಣೆಸಾಟ! ನಡಾಲ್‌-ಜಾಕೋ ನಡುವೆ ಗೆಲ್ಲೋರ‍್ಯಾರು?

French Open 2022: ರಫಾಲ್‌ ನಡಾಲ್‌ ಹಾಗೂ ನವಾಕ್‌ ಜೊಕೊವಿಕ್‌ ನಡುವಿನ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಯಾರು ಗೆಲ್ಲಬಹುದು? ಈಗಿನ ಅಂಕಿ ಅಂಶಗಳ ಪ್ರಕಾರ ಯಾರಿಗೆ ಗೆಲ್ಲುವ ಸಾಧ್ಯತೆ ಹಾಗೂ ಅವಕಾಶ ಹೆಚ್ಚಿದೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಈ ಪಂದ್ಯ ಇಬ್ಬರು ಟೆನ್ನಿಸ್‌ ದಿಗ್ಗಜರ ನಡುವೆ ನಡೆಯಲಿದೆ. ಜೊಕೊವಿಕ್‌ ಹಾಗೂ ನಡಾಲ್‌ ಇಬ್ಬರೂ ಸ್ಟಾರ್ ಟೆನ್ನಿಸ್‌‌ ಆಟಗಾರರು. ಗೆಲುವು ಯಾರ ಪರವಾದರೂ ಪಂದ್ಯ ಮಾತ್ರ ಟೆನ್ನಿಸ್‌ ಅಭಿಮಾನಿಗಳಿಗೆ ಉತ್ತಮ ಮನೋರಂಜನೆ ನೀಡುವಲ್ಲಿ ಯಶಸ್ವಿಯಾಗುತ್ತದೆ. ಇಬ್ಬರು ಬಲಿಷ್ಠ ಆಟಗಾರರ ನಡುವಿನ ಸೆಣೆಸಾಟ ರೋಚಕವಾಗಿರಲಿದೆ ಎಂಬ ಭರವಸೆ ಹುಟ್ಟಿಸಿದೆ.

ಒಂದೆಡೆ 13 ಬಾರಿ ಚಾಂಪಿಯನ್‌ ಆಗಿರುವ ನಡಾಲ್.‌ ಮತ್ತೊಂದೆಡೆ ಡಿಫೆಂಡಿಂಗ್‌ ಚಾಂಪಿಯನ್‌ ಜೊಕೊವಿಕ್.‌ ಇಬ್ಬರ ಮುಖಾಮುಖಿ ಟೆನ್ನಿಸ್‌ ಅಭಿಮಾನಿಗಳಿಗೆ ಹಬ್ಬವಾಗಲಿದೆ.

ರಫಾಲ್‌ ನಡಾಲ್‌ ತಮ್ಮ ಗೆಲುವಿನ ಆಟವನ್ನು ಮುಂದುವರಿಸಿ 14ನೇ ಬಾರಿಯೂ ಚಾಂಪಿಯನ್‌ ಅಗುವ ಭರವಸೆಯಲ್ಲಿದ್ದಾರೆ. ಆದರೆ, ಈ ಬಾರಿ 4ನೇ ಸುತ್ತಿನಲ್ಲಿ ಫೆಲಿಕ್ಸ್‌ ಆಗರ್‌ ವಿರುದ್ಧದ ಪಂದ್ಯ ಸಮಾಧಾನಕರವಾಗಿಲ್ಲ. ಇದೇ ವೇಳೆ ಜೊಕೊವಿಕ್‌ ಪೂರ್ಣಪ್ರಮಾಣದ ಆತ್ಮವಿಶ್ವಾಸದಿಂದ ನಡಾಲ್‌ ವಿರುದ್ಧದ ಪಂದ್ಯಕ್ಕೆ ಮುನ್ನುಗ್ಗುತ್ತಿರುವುದು ಎದ್ದು ಕಾಣುತ್ತದೆ.

ಈವರೆಗೆ ರಫಾಲ್‌ ವರ್ಸಸ್‌ ಜೊಕೊವಿಕ್‌

ಈ ಬಾರಿ 59ನೇ ಬಾರಿ ಈ ಎರಡೂ ದಿಗ್ಗಜರು ಮುಖಾಮುಖಿಯಾಗುತ್ತಿದ್ದಾರೆ. ಜೊಕೊವಿಕ್‌ ಹಾಗೂ ನಡಾಲ್‌ ಈವರೆಗೆ ಮುಖಾಮುಖಿಯಾದ ಪಂದ್ಯಗಳಲ್ಲಿ ಜೊಕೊವಿಕ್‌ ಲೀಡ್‌ನಲ್ಲಿದ್ದಾರೆ. ಈವರೆಗಿನ ಒಟ್ಟು ಪಂದ್ಯದಲ್ಲಿ ಜೊಕೊವಿಕ್‌ 30-28 ಅಂತರದಿಂದ ನಡಾಲ್‌ ವಿರುದ್ಧ ಮುನ್ನೆಡೆ ಸಾಧಿಸಿದ್ದಾರೆ.

ಗೆಲುವಿನ ಲೆಕ್ಕಾಚಾರವೇನು?:

ಇಂದಿನ ಪಂದ್ಯದಲ್ಲಿ ಜೊಕೊವಿಕ್‌ ಗೆಲ್ಲಬೇಕು ಎಂದು ಅಭಿಮಾನಿಗಳು ಆಸೆಯಲ್ಲಿದ್ದಾರೆ. ಆದರೆ, ಯಾರು ಗೆಲ್ಲುತ್ತಾರೆ ಎಂದು ನಿರ್ದಿಷ್ಟವಾಗಿ ಹೇಳುವುದು ಕಷ್ಟ.

ಈ ಬಾರಿಯ ಸರಣಿಯಲ್ಲಿ ಜೊಕೊವಿಕ್‌ ಯಾವುದೇ ವೀಕ್‌ನೆಸ್‌ ಬಿಟ್ಟುಕೊಟ್ಟಿಲ್ಲ. ಈವರೆಗಿನ ಎಲ್ಲಾ ಪಂದ್ಯದಲ್ಲೂ ಜೊಕೊವಿಕ್‌ ಅದ್ಭುತ ಆಟವನ್ನಾಡಿದ್ದಾರೆ. ಅದ್ಭುತವಾದ ಗ್ರೌಂಡ್‌ ಶಾಟ್‌ಗಳೊಂದಿಗೆ ಪಂದ್ಯವನ್ನು ಗೆದ್ದಿದ್ದಾರೆ.

ನಡಾಲ್‌ ಈ ಬಾರಿ ಫುಟ್‌ ಇಂಜುರಿ ಇಂದ ಬಳಲಿದ್ದು, ಅವರಿಂದ ಉತ್ತಮ ಆಟದ ನಿರೀಕ್ಷೆ ಅನುಮಾನವಾಗಿದೆ.
ಬಲಿಷ್ಠ ಆಟಗಾರರಾದ ನಡಾಲ್‌ ಬೇಸ್‌ ಲೈನ್‌ಗಿಂತ ಬಹಳ ಹಿಂದಿದ್ದು, ನಿಧಾನವಾಗಿ ಸ್ಕೋರ್‌ ಮಾಡುತ್ತಾರೆ. ಆದರೆ, ಮ್ಯಾಚನ್ನು ಕೈಚೆಲ್ಲಲು ಅವಕಾಶ ನೀಡುವುದಿಲ್ಲ.

ಈ ಪಂದ್ಯ ಪ್ಯಾರಿಸ್‌ನಲ್ಲಿ ನಡೆಯುತ್ತಿರುವುದರಿಂದ ನಡಾಲ್‌ ಗೆಲ್ಲಲು ಇದಾವುದೂ ಲೆಕ್ಕವಾಗುವುದಿಲ್ಲ. ನಡಾಲ್‌ ಪ್ಯಾರಿಸ್‌ನಲ್ಲಿ ಗೆಲ್ಲುವುದು ಹೇಗೆ ಎಂದು ತಿಳಿದಿದ್ದಾರೆ.

ಈ ಅಂಶಗಳನ್ನು ಗಮನಿಸಿದಾಗ ರಫಾಲ್‌ ನಡಾಲ್‌ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿದುಬರುತ್ತದೆ.

ಇದನ್ನೂ ಓದಿ: French Open 2022 | ನಡಾಲ್‌ಗೆ ಐತಿಹಾಸಿಕ 106ನೇ ಗೆಲುವು, ಟಾಪ್‌ ಆಟಗಾರರು ಔಟ್‌

Exit mobile version