French Open 2022: ಫ್ರೆಂಚ್ ಓಪನ್ ಸೆಮಿ ಫೈನಲ್ ಪಂದ್ಯದಲ್ಲಿ ಅಲೆಕ್ಸಾಂಡರ್ ಜ್ವರೆವ್ ಎರಡನೇ ಸೆಟ್ ವೇಳೆ ಗಾಯಗೊಂಡು ನಿರ್ಗಮಿಸಿದ್ದರಿಂದ ರಫಾಲ್ ನಡಾಲ್ ಯಾವುದೇ ಪ್ರತಿರೋಧ ಇಲ್ಲದೆ ಫ್ರೆಂಚ್ ಓಪನ್ ಫೈನಲ್ ಪ್ರವೇಶಿಸಿದ್ದಾರೆ. ಈಗಾಗಲೇ 13 ಬಾರಿ ಚಾಂಪಿಯನ್ ಆಗಿರುವ ನಡಾಲ್‌ಗೆ ಈ ಪಂದ್ಯ ಮಹತ್ವದ್ದು. ಗೆದ್ದರೆ 14 ಬಾರಿ ಚಾಂಪಿಯನ್ ಆದ ಹಾಗೆ ಆಗುತ್ತದೆ.
ಗಾಯ ಯಾವಾಗ? ಹೇಗಾಯಿತು?
ಮೊದಲ ಸೆಟ್: ಮೊದಲಿಗೆ ನಡಾಲ್ ಸ್ಕೋರ್ ಖಾತೆಯನ್ನು ತೆರದರು. ಆದರೆ, ನಂತರ ಅಲೆಕ್ಸಾಂಡರ್ ಸತತ ಎರಡು ಆಟವನ್ನು ಗೆದ್ದು ಲೀಡ್‌ನಲ್ಲಿದ್ದರು. ನಂತರ, ನಡಾಲ್ ಎಂದಿನಂತೆ ಅದ್ಭುತವಾದ ಕಮ್‌ಬ್ಯಾಕ್ ಮಾಡಿದರು. ಮೊದಲ ಸೆಟ್ ಟೈ ಬ್ರೇಕರ್ ಹಂತಕ್ಕೆ ತಲುಪಿ ಕುತೂಹಲ ಹೆಚ್ಚಿಸಿತು. ನೆಕ್ ಟು ನೆಕ್ ಸೆಣಸಾಟದಲ್ಲಿ ನಡಾಲ್ 7-6 (ಟೈ ಬ್ರೇಕರ್‌ನಲ್ಲಿ 10-08) ರಲ್ಲಿ ಗೆಲುವು ಸಾಧಿಸಿ 1-0 ಅಂತರದ ಮುನ್ನಡೆ ಸಾಧಿಸಿದರು.
ಎರಡನೇ ಸೆಟ್: ಇಬ್ಬರು ಬಲಿಷ್ಠ ಆಟಗಾರರು ಸ್ಕೋರ್ ಕಳೆದುಕೊಳ್ಳದೇ ಆಟವಾಡುತ್ತಿದ್ದರು. ಒಂದು ಸಣ್ಣ ತಪ್ಪು ಮಾಡಿದರೂ ಎದುರಾಳಿಗೆ ಅಂಕ ಸಿಗುತ್ತದೆ. ಆದರೆ, ಈ ಇಬ್ಬರು ಆಟಗಾರರು ಯಾವುದೇ ತಪ್ಪಿಗೆ ಅವಕಾಶ ನೀಡದೇ ಆಡುತ್ತಿದ್ದರು. ಈ ಸೆಟ್‌ನಲ್ಲಿ ಕೂಡ ಇಬ್ಬರ ನಡುವೆ ನೆಕ್ ಟು ನೆಕ್ ಫೈಟ್ ಜಾರಿಯಲ್ಲಿತ್ತು. ಈ ಸೆಟ್ ಕೂಡ 6-6 ರೊಂದಿಗೆ ಟೈ ಬ್ರೇಕರ್ ಹಂತಕ್ಕೆ ತಲುಪಿತು.
ಆದರೆ, ಈ ಸೆಟ್‌ನಲ್ಲಿ ಅಚಾನಕ್ ಆಗಿ ಅಲೆಕ್ಸಾಂಡರ್ ಅವರ ಕಾಲು ಉಳುಕಿತು. ಕಾಲು ಉಳುಕಿದ ನೋವಿನಲ್ಲಿ ಅಲೆಕ್ಸಾಂಡರ್ ಬಳಲುವಂತಾಯಿತು. ಅಲೆಕ್ಸಾಂಡರ್ ಮುಂದೆ ಆಟವಾಡುವುದು ಅನುಮಾನವಾಗಿತ್ತು. ಕಾಲು ನೋವು ತೀವ್ರಗೊಂಡರೆ ಅವರು ಆಡುವುದು ಸಾಧ್ಯವಿರಲಿಲ್ಲ. ಹಾಗೇ ಆಯಿತು! ಕಾಲು ನೋವು ತೀವ್ರಗೊಂಡು ಅವರನ್ನು ಕೂಡಲೇ ವೀಲ್‌ಚೇರ್‌ನಲ್ಲಿ ತಪಾಸಣೆಗೆ ಕರೆದೊಯ್ಯಬೇಕಾಯಿತು. ಈ ಸಂದರ್ಭದಲ್ಲಿ ಜೊತೆಯಲ್ಲೇ ಇದ್ದು ನಡಾಲ್ ಸಾಂತ್ವಾನ ಹೇಳಿದರು. ನಡಾಲ್ ತೋರಿದ ಮಾನವೀಯತೆ ಟೆನಿಸ್ ಪ್ರಿಯರ ಮೆಚ್ಚುಗೆಗೆ ಪಾತ್ರವಾಯಿತು.
ಅಲೆಕ್ಸಾಂಡರ್ ಅವರ ನಿರ್ಗಮನದಿಂದ ಸೆಮಿ ಫೈನಲ್ ಪಂದ್ಯಕ್ಕೆ ಮಂಗಳ ಹೇಳಬೇಕಾಯಿತು. 13 ಬಾರಿ ಚಾಂಪಿಯನ್ ಆಗಿ, ಈ ಬಾರಿಯೂ ಉತ್ತಮ ಪ್ರದರ್ಶನ ನೀಡಿದ ರಫಾಲ್ ನಡಾಲ್ ಫೈನಲ್‌ಗೆ ತಲುಪಿದರು. ಈ ಬಾರಿಯೂ ಚಾಂಪಿಯನ್ ಆಗಿ ಒಂದು ಹೊಸ ದಾಖಲೆಯನ್ನು ಬರೆಯಲು ನಡಾಲ್ ಸಿದ್ಧರಾಗಿದ್ದಾರೆ. ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ನಾರ್ವೆಯ ಕ್ಯಾಸ್ಪರ್ ರುಡ್, ಕ್ರೊಯೇಷಿಯಾದ ಮರಿನ್ ಚಿಲಿಚ್‌ರನ್ನು 3-6, 6-4, 6-2, 6-2