Site icon Vistara News

French Open Final: ದಾಖಲೆಯ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆಲ್ಲುವರೇ ಜೊಕೋವಿಕ್‌?

french open final

ಪ್ಯಾರಿಸ್​: ಇಲ್ಲಿ ನಡೆಯುತ್ತಿರುವ ಫ್ರೆಂಚ್​ ಓಪನ್​ ಟೆನಿಸ್​ ಟೂರ್ನಿಯಲ್ಲಿ ವಿಶ್ವದ ನಂ.1 ಶ್ರೇಯಾಂಕ ಕಾರ್ಲೋಸ್‌ ಅಲ್ಕರಾಜ್‌(carlos alcaraz) ಅವರನ್ನು 6-3, 5-7, 6-1, 6-1 ಅಂತರದಿಂದ ಮಣಿಸಿ ಫೈನಲ್​ಗೆ ನೆಗೆದಿರುವ ನೊವಾಕ್‌ ಜೊಕೋವಿಕ್‌(Novak Djokovic) ವಿಶ್ವ ದಾಖಲೆಯೊಂದನ್ನು ಮಾಡುವ ನಿರೀಕ್ಷೆಯಲ್ಲಿದ್ದಾರೆ.

7ನೇ ಫ್ರೆಂಚ್​ ಓಪನ್​ ಫೈನಲ್​ ಪ್ರವೇಶ ಪಡೆದಿರುವ ಅವರು ದಾಖಲೆಯ 23ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆಲ್ಲುವ ಚಿತ್ತ ನೆಟ್ಟಿದ್ದಾರೆ. ಸದ್ಯ ನಡಾಲ್(Rafael Nadal)​ ಮತ್ತು ಜೋಕೊ 22 ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಪಡೆದು ಜಂಟಿ ದಾಖಲೆ ಹೊಂದಿದ್ದಾರೆ. ಆದರೆ ಭಾನುವಾರ ನಡೆಯುವ ಪ್ರಶಸ್ತಿ ಸುತ್ತಿನಲ್ಲಿ ನೊವಾಕ್‌ ಜೊಕೋವಿಕ್‌ ಚಾಂಪಿಯನ್​ ಪಟ್ಟ ಅಲಂಕರಿಸಿದರೆ ನಡಾಲ್​ ಅವರು ಹಿಂದಿಕ್ಕಿ ಅಗ್ರಸ್ಥಾನ ಪಡೆಯಲಿದ್ದಾರೆ. ಮಂಡಿ ನೋವಿನ ಕಾರಣದಿಂದಾಗಿ ಈ ಬಾರಿ ನಡಾಲ್ ಕಣಕ್ಕಿಳಿಯಲಿಲ್ಲ.

ಭಾನುವಾರ ನಡೆಯುವ ಈ ಫೈನಲ್​ ಪಂದ್ಯದಲ್ಲಿ ಜೊಕೋವಿಕ್‌ ಅವರು ಕ್ಯಾಸ್ಪರ್‌ ರೂಡ್‌(Casper Ruud) ಸವಾಲನ್ನು ಎದುರಿಸಲಿದ್ದಾರೆ. ಶುಕ್ರವಾರ ನಡೆದಿದ್ದ ಸೆಮಿಫೈನಲ್​ ಪಂದ್ಯದಲ್ಲಿ ಸರ್ಬಿಯಾದ ಜೊಕೋವಿಕ್‌ ಸ್ಪೇನ್​ನ ಕಾರ್ಲೋಸ್‌ ಅಲ್ಕರಾಜ್‌ ಅವರನ್ನು 6-3, 5-7, 6-1, 6-1 ಅಂತರದಿಂದ ಮಣಿಸಿದ್ದರು. ಇದು ಅಲ್ಕರಾಜ್‌ ವಿರುದ್ಧ ಆಡಿದ 2ನೇ ಪಂದ್ಯದಲ್ಲಿ ಜೋಕೊ ಸಾಧಿಸಿದ ಮೊದಲ ಗೆಲುವು. ಜೊಕೋ ಈವರೆಗೆ ಈ ಟೂರ್ನಿಯಲ್ಲಿ 6 ಬಾರಿ ಫೈನಲ್ ತಲುಪಿದ್ದರೂ ಕೇವಲ 2 ಸಲ ಮಾತ್ರ ಚಾಂಪಿಯನ್​ ಆದ್ದಾರೆ.

ಇದನ್ನೂ ಓದಿ French Open Final: ದಾಖಲೆಯ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆಲ್ಲುವರೇ ಜೊಕೋವಿಕ್‌?

ಮಹಿಳಾ ಫೈನಲ್​ಗೆ ಕ್ಷಣಗಣನೆ

ಶನಿವಾರ ನಡೆಯುವ ಫ್ರೆಂಚ್‌ ಓಪನ್‌ ಗ್ರ್ಯಾನ್ ಸ್ಲಾಮ್ ಟೂರ್ನಿಯ ಮಹಿಳಾ ಫೈನಲ್​ ಪಂದ್ಯದಲ್ಲಿ ಹಾಲಿ ಚಾಂಪಿ​ಯನ್‌ ಐಗಾ ಸ್ವಿಯಾ​ಟೆಕ್‌ ಹಾಗೂ ಚೆಕ್‌ ಗಣ​ರಾ​ಜ್ಯದ ಕ್ಯಾರೋ​ಲಿನಾ ಮುಕೋವಾ ಪ್ರಶ​ಸ್ತಿ​ಗಾಗಿ ಸೆಣ​ಸಲಿದ್ದಾರೆ. ವಿಶ್ವ ನಂ.1 ಪೋಲೆಂಡ್‌ನ ಐಗಾ ಸತತ 2ನೇ ಬಾರಿ ಪ್ರಶಸ್ತಿ ಗೆಲ್ಲುವ ನಿರೀ​ಕ್ಷೆ​ಯ​ಲ್ಲಿ​ದ್ದರೆ, ಚೊಚ್ಚಲ ಬಾರಿ ಗ್ರ್ಯಾನ್‌​ಸ್ಲಾಂ ಫೈನ​ಲ್‌​ಗೇ​ರಿ​ರುವ ಶ್ರೇಯಾಂಕ ರಹಿತ ಮುಕೋವಾ ಮೊದಲ ಪ್ರಯ​ತ್ನ​ದಲ್ಲೇ ಚಾಂಪಿ​ಯನ್‌ ಪಟ್ಟ ಅಲಂಕರಿಸಿಸುವ ವಿಶ್ವಾಸದಲ್ಲಿದ್ದಾರೆ. ಲೀಗ್​ ಹಂತದಲ್ಲಿ ಬಲಿಷ್ಠ ಆಟಗಾರ್ತಿಯನ್ನು ಮಗುಚಿ ಹಾಕಿರುವ ಅವರು ಸ್ಮರಣೀಯ ಗೆಲುವನ್ನು ಎದುರು ನೋಡುತ್ತಿದ್ದಾರೆ.

Exit mobile version