ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ನ 17ನೇ ಆವೃತ್ತಿ (IPL 2024) ಭಾನುವಾರ ಕೊನೆಗೊಂಡಿತು. ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡ ಫೈನಲ್ನಲ್ಲಿ (IPL FInal) ಎಸ್ಆರ್ಎಚ್ (SRH) ತಂಡವನ್ನು ಸೋಲಿಸಿ ಮೂರನೇ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿತು. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಈ ಏಕಮುಖ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಕೆಕೆಆರ್ ಪ್ರಾಬಲ್ಯ ಸಾಧಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಈ ಬಾರಿಯ ಟೂರ್ನಿ ಅತ್ಯಂತ ರೋಚಕವಾಗಿತ್ತು. ಬ್ಯಾಟ್ ಹಾಗೂ ಬಾಲ್ನಲ್ಲಿ ಎಲ್ಲ ತಂಡಗಳು ಅಸಾಮಾನ್ಯ ಸಾಧನೆಗಳನ್ನು ತೋರಿದವು. ಇದರ ಜತೆಗೆ ಹಲವಾರು ದಾಖಲೆಗಳು (IPL Recrords) ಕೂಡ ಸೃಷ್ಟಿಯಾದವು. ಐಪಿಎಲ್ನಲ್ಲಿ ಅತ್ಯಧಿಕ ಸ್ಕೋರ್ ದಾಖಲಾಗಿದ್ದು ಮತ್ತು ಟಿ 20 ಯಲ್ಲಿ ಅತಿ ಹೆಚ್ಚು ಸ್ಕೋರ್ ಚೇಸ್ ಮಾಡಿದ ದಾಖಲೆಯೂ ಸೃಷ್ಟಿಯಾಯಿತು.
📽️ 𝗥𝗔𝗪 𝗥𝗘𝗔𝗖𝗧𝗜𝗢𝗡𝗦
— IndianPremierLeague (@IPL) May 26, 2024
Moments of pure joy, happiness, jubilation, and happy tears 🥹
What it feels to win the #TATAIPL Final 💜
Scorecard ▶️ https://t.co/lCK6AJCdH9#KKRvSRH | #Final | #TheFinalCall | @KKRiders pic.twitter.com/987TCaksZz
ಐಪಿಎಲ್ 2024 ಪಂದ್ಯಾವಳಿಯುದ್ದಕ್ಕೂ 74 ಪಂದ್ಯಗಳನ್ನು (70 ಲೀಗ್ ಪಂದ್ಯಗಳು) ನಡೆಯಿತು. ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಮೂಲಕ ಆಟದ ಗತ್ತು ಬದಲಾಗಿತ್ತು. ಪಂದ್ಯವೊಂದರಲ್ಲಿ 200 ರನ್ ಸಾಮಾನ್ಯವಾಗಿತ್ತು. ಹಾಗೆಂದು ಅದು ಗೆಲುವಿನ ಮೊತ್ತವಾಗಿರಲಿಲ್ಲ ಅದನ್ನೂ ಚೇಸ್ ಮಾಡಲಾಗುತ್ತಿತ್ತು.
ಕೆಕೆಆರ್ ಉತ್ತಮ ಪ್ರದರ್ಶನ
ಲೀಗ್ ಹಂತದ ಬಳಿಕ ಕೋಲ್ಕತಾ ನೈಟ್ ರೈಡರ್ಸ್ (KKR) ಆಡಿರುವ 14 ಪಂದ್ಯಗಳಲ್ಲಿ 9ರಲ್ಲಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿತ್ತು . ಸನ್ರೈಸರ್ಸ್ ಹೈದರಾಬಾದ್ 8 ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿತ್ತು. ರಾಜಸ್ಥಾನ್ ರಾಯಲ್ಸ್ (ಆರ್ಆರ್) ಅದೇ ಸಂಖ್ಯೆಯ ಗೆಲುವುಗಳನ್ನು ಹೊಂದಿತ್ತು. ನೆಟ್ರನ್ರೇಟ್ ಅವರನ್ನು 3 ನೇ ಸ್ಥಾನಕ್ಕೆ ತಳ್ಳಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ ) ಸತತ 6 ಗೆಲುವುಗಳೊಂದಿಗೆ 4 ನೇ ಸ್ಥಾನದಲ್ಲಿತ್ತು.
ಕ್ವಾಲಿಫೈಯರ್ 1 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು 8 ವಿಕೆಟ್ಗಳಿಂದ ಸೋಲಿಸಿ ಫೈನಲ್ಗೆ ಪ್ರವೇಶಿಸಿತ್ತು. ಎಲಿಮಿನೇಟರ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ರಾಜಸ್ಥಾನ್ ರಾಯಲ್ಸ್ ವಿರುದ್ಧ 4 ವಿಕೆಟ್ಗಳ ನಿರಾಶಾದಾಯಕ ಸೋಲು ಅನುಭವಿಸಿತು. ಕ್ವಾಲಿಫೈಯರ್ 2 ರಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 36 ರನ್ಗಳಿಂದ ಆರ್ಆರ್ ಸೋತಿತು.
ಇದನ್ನೂ ಓದಿ: IPL 2024 : ಕ್ಯಾಚ್ ಬಿಟ್ಟಿದ್ದು ಮಿಚೆಲ್ ಸ್ಟಾರ್ಕ್, ಬೆಚ್ಚಿ ಬಿದ್ದಿದ್ದು ಜಾಹ್ನವಿ ಕಪೂರ್; ಇಲ್ಲಿದೆ ವಿಡಿಯೊ
ಫೈನಲ್ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವು ಬ್ಯಾಟ್ ಮತ್ತು ಬೌಲಿಂಗ್ನಲ್ಲಿ ಅದ್ಭುತ ಪ್ರದರ್ಶನವನ್ನು ಪ್ರದರ್ಶಿಸಿತು. ಎಸ್ಆರ್ಎಚ್ ತಂಡವನ್ನು 8 ವಿಕೆಟ್ಗಳಿಂದ ಸೋಲಿಸಿತು. ಹೀಗೆ ಪಂದ್ಯಾವಳಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದ ಕೆಲವು ಆಟಗಾರರು ಐಪಿಎಲ್ನಲ್ಲಿ ಗಮನ ಸೆಳೆದರು. ಅವರಿಗೆ ಫೈನಲ್ ಬಳಿಕ ಆಯಾಯ ವಿಭಾಗದಲ್ಲಿ ವಿಶೇಷ ಪ್ರಶಸ್ತಿಗಳನ್ನು ನೀಡಲಾಯಿತು. ಅವರ ವಿವರ ಈ ಕೆಳಗಿನಂತಿವೆ.
Nitish Kumar Reddy concludes a successful season for Sunrisers Hyderabad 🧡
— IndianPremierLeague (@IPL) May 26, 2024
He wins the Emerging Player award for his impressive performances throughout 🏆#TATAIPL | #TheFinalCall | @SunRisers pic.twitter.com/MwZT9IuFep
ವಿಶೇಷ ಪ್ರಶಸ್ತಿಗಳ ವಿಜೇತರ ಪಟ್ಟಿ ಇಲ್ಲಿದೆ
ಪಂಚ್ ಇವಿ ಎಲೆಕ್ಟ್ರಿಕ್ ಸ್ಟ್ರೈಕರ್ ಆಫ್ ದಿ ಮ್ಯಾಚ್ (ಫೈನಲ್) – ವೆಂಕಟೇಶ್ ಅಯ್ಯರ್
- ಮೈ 11 ಸರ್ಕಲ್ ಅಲ್ಟಿಮೇಟ್ ಫ್ಯಾಂಟಸಿ ಪ್ಲೇಯರ್ ಆಫ್ ದಿ ಮ್ಯಾಚ್ (ಫೈನಲ್) – ಮಿಚೆಲ್ ಸ್ಟಾರ್ಕ್
- ಏಂಜೆಲ್ ಒಂದು ಅತಿ ದೊಡ್ವಡ ಸಿಕ್ಸರ್ (ಫೈನಲ್) – ವೆಂಕಟೇಶ್ ಅಯ್ಯರ್
- ರುಪೇ ಆನ್ ದಿ ಗೋ ಫೋರ್ಸ್ ಆಫ್ ಮ್ಯಾಚ್ (ಫೈನಲ್) – ರಹಮಾನುಲ್ಲಾ ಗುರ್ಬಾಜ್
- ಗ್ರೀನ್ ಡಾಟ್ ಬಾಲ್ಸ್ ಆಫ್ ದಿ ಮ್ಯಾಚ್ (ಫೈನಲ್) – ಹರ್ಷಿತ್ ರಾಣಾ
- ಪಂದ್ಯಶ್ರೇಷ್ಠ (ಫೈನಲ್) – ಮಿಚೆಲ್ ಸ್ಟಾರ್ಕ್
- ಪಂಚ್ ಇವಿ ಎಲೆಕ್ಟ್ರಿಕ್ ಸ್ಟ್ರೈಕರ್ ಆಫ್ ದಿ ಸೀಸನ್ – ಜೇಕ್ ಫ್ರೇಸರ್-ಮೆಕ್ಗುರ್ಕ್
- ಮೈ 11 ಸರ್ಕಲ್ ಅಲ್ಟಿಮೇಟ್ ಫ್ಯಾಂಟಸಿ ಪ್ಲೇಯರ್ ಆಫ್ ದಿ ಸೀಸನ್ – ಸುನಿಲ್ ನರೈನ್
- ಏಂಜೆಲ್ ಒನ್ ಸೂಪರ್ ಸಿಕ್ಸರ್ಸ್ ಆಫ್ ದಿ ಸೀಸನ್ – ಅಭಿಷೇಕ್ ಶರ್ಮಾ
- ರುಪೇ ಆನ್ ದಿ ಗೋ ಫೋರ್ಸ್ ಆಫ್ ದಿ ಸೀಸನ್ – ಟ್ರಾವಿಸ್ ಹೆಡ್
- ಎಮರ್ಜಿಂಗ್ ಪ್ಲೇಯರ್ – ನಿತೀಶ್ ರೆಡ್ಡಿ
- ಫೇರ್ ಪ್ಲೇ ಅವಾರ್ಡ್ ಆಫ್ ದಿ ಸೀಸನ್ – ಸನ್ ರೈಸರ್ಸ್ ಹೈದರಾಬಾದ್
- ಕ್ಯಾಚ್ ಆಫ್ ದಿ ಸೀಸನ್ – ರಮಣ್ದೀಪ್ ಸಿಂಗ್
- ಆರೆಂಜ್ ಕ್ಯಾಪ್ – ವಿರಾಟ್ ಕೊಹ್ಲಿ
- ಪರ್ಪಲ್ ಕ್ಯಾಪ್ – ಹರ್ಷಲ್ ಪಟೇಲ್
- ಅತ್ಯಂತ ಮೌಲ್ಯಯುತ ಆಟಗಾರ – ಸುನಿಲ್ ನರೈನ್