Site icon Vistara News

Rohit Sharma: ಬೇಜವಾಬ್ದಾರಿ ತೋರಿದ ಗಿಲ್​ಗೆ ಮೈದಾನದಲ್ಲೇ ಜಾಡಿಸಿದ ರೋಹಿತ್​; ವಿಡಿಯೊ ವೈರಲ್​

Furious Rohit Sharma

ಮೊಹಾಲಿ: 14 ತಿಂಗಳ ಬಳಿಕ ಟಿ20 ಪಂದ್ಯದಲ್ಲಿ ಕಣಕ್ಕಿಳಿದಿದ್ದ ರೋಹಿತ್​ ಶರ್ಮ(Rohit Sharma) ಅವರು ಅಫಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ(India vs Afghanistan, 1st T20I) ಶೂನ್ಯಕ್ಕೆ ಔಟಾದರು. ಅವರ ಈ ವಿಕೆಟ್​ ಪತನಕ್ಕೆ ಸಹ ಆಟಗಾರ ಶುಭಮನ್​ ಗಿಲ್(Shubman Gill)​ ಕಾರಣ. ರನ್​ ಗಳಿಸುವ ಅವಕಾಶ ಇದ್ದರೂ ಕೂಡ ಗಿಲ್​ ಓಡದೆ ರೋಹಿತ್​ ರನೌಟ್​ ಆಗುವಂತೆ ಮಾಡಿದರು. ಇದೇ ಸಿಟ್ಟಿನಲ್ಲಿ ರೋಹಿತ್​ ಮೈದಾನದಲ್ಲೇ ರೊಚ್ಚಿಗೆದ್ದು ಗಿಲ್​ಗೆ ಬೈದಿದ್ದಾರೆ(Rohit Sharma Blasts Shubman Gill). ಈ ವಿಡಿಯೊ ವೈರಲ್​(viral video) ಆಗಿದೆ.

ಮೊಹಾಲಿಯ ಐ.ಎಸ್‌.ಬಿಂದ್ರಾ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡ ಭಾರತ ಉತ್ಕೃಷ್ಟ ಮಟ್ಟದ ಬೌಲಿಂಗ್​ ಪ್ರದರ್ಶನ ತೋರುವ ಮೂಲಕ ಎದುರಾಳಿ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಯಿತು. ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ಗೆ 158ರನ್ ಬಾರಿಸಿತು.

ಸುಲಭ ಗುರಿಯನ್ನು ಬೆನ್ನಟ್ಟಿದ ಭಾರತ ಮೊದಲ ಓವರ್​ನಲ್ಲಿಯೇ ನಾಯಕ ರೋಹಿತ್​ ವಿಕೆಟ್​ ಕಳೆದುಕೊಂಡಿತು. ಮೊದಲ ಓವರ್​ನ ದ್ವಿತೀಯ ಎಸೆತದಲ್ಲಿ ರೋಹಿತ್​ ಶರ್ಮ ಅವರು ಸಿಂಗಲ್​ ತೆಗೆಯುವ ಪ್ರಯತ್ನ ಮಾಡಿದರು. ಆದರೆ ನಾನ್​ಸ್ಟ್ರೈಕ್​ನಲ್ಲಿದ್ದ ಗಿಲ್​ ಉದಾಸಿನ ತೋರಿದವರಂತೆ ರನ್​ ಓಡುವ ಬದಲು ಸುಮ್ಮನೆ ನಿಂತರು. ಇದರಿಂದ ರೋಹಿತ್​ ಶರ್ಮ ರನೌಟ್​ ಆದರು. ಬೇಜವಾಬ್ದಾರಿ ತೋರಿದ ಸಿಟ್ಟಿನಲ್ಲಿ ರೋಹಿತ್ ತಾಳ್ಮೆ ಕಳೆದುಕೊಂಡು ಮೈದಾನದಲ್ಲೇ ಗಿಲ್​ಗೆ ಜಾಡಿಸಿದ್ದಾರೆ. ಕಾಮೆಂಟ್ರಿಯಲ್ಲಿಯೂ ರೋಹಿತ್​ ಸಿಟ್ಟಿನ ಬಗ್ಗೆ ಹೇಳಲಾಯಿತು. ಇದರ ವಿಡಿಯೊ ವೈರಲ್​ ಆಗಿದೆ.

ಗೆಲುವಿನ ಮೂಲಕ ದಾಖಲೆ ಬರೆದ ರೋಹಿತ್​


ಶೂನ್ಯಕ್ಕೆ ಔಟಾದ ಹೊರತಾಗಿಯೂ ರೋಹಿತ್​ ಶರ್ಮ ವಿಶೇಷ ದಾಖಲೆಯೊಂದನ್ನು ಮಾಡಿದ್ದಾರೆ. ಟಿ20ಯಲ್ಲಿ 100 ಪಂದ್ಯಗಳ ಗೆಲುವಿನ ಸರದಾರ ಎನಿಸಿಕೊಂಡಿದ್ದಾರೆ. ಭಾರತದ ಆರಂಭಿಕ ಬ್ಯಾಟರ್​ ರೋಹಿತ್​​ 2 ಎಸೆತಗಳಲ್ಲಿ ಡಕ್ಔಟ್ ಆದ ಹೊರತಾಗಿಯೂ, ಪುರುಷರ ಟಿ20 ಐನಲ್ಲಿ 100 ಗೆಲುವಿನ ಭಾಗವಾದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಪುರುಷರ ಟಿ20ಯನಲ್ಲಿ 100ನೇ ಗೆಲುವಿನ ಮೈಲಿಗಲ್ಲನ್ನು ತಲುಪಿದ ಮೊದಲ ಆಟಗಾರ ಹಾಗೂ ಒಟ್ಟಾರೆ ನಾಲ್ಕನೇ ಕ್ರಿಕೆಟರ್​ ಎಂಬ ಖ್ಯಾತಿ ಅವರದ್ದಾಗಿದೆ.

ಇದನ್ನೂ ಓದಿ Rohit Sharma : ಡಕ್​ ಔಟ್ ಆದರೂ ವಿಶೇಷ ದಾಖಲೆ ಬರೆದ ರೋಹಿತ್​ ಶರ್ಮಾ

ಅತಿ ಹೆಚ್ಚು ಟಿ20 ಪಂದ್ಯಗಳನ್ನು ಗೆದ್ದ ಆಟಗಾರರು


111 – ಡ್ಯಾನಿ ವ್ಯಾಟ್

100 – ಅಲಿಸ್ಸಾ ಹೀಲಿ

100 – ಎಲಿಸ್ ಪೆರ್ರಿ

100* – ರೋಹಿತ್ ಶರ್ಮಾ

94 – ಮೆಗ್ ಲ್ಯಾನಿಂಗ್

89 – ಸುಜಿ ಬೇಟ್ಸ್

86 – ಶೋಯೆಬ್ ಮಲಿಕ್

Exit mobile version