Site icon Vistara News

Virat Kohli : ಕೊಹ್ಲಿಯಾಗಲಿ, ಇನ್ಯಾರೇ ಆಗಲಿ ನಂಗೆ ಯಾರೂ ಸಾಟಿಯಿಲ್ಲ ಎಂದ ಗಂಭೀರ್​

Virat Kohli

ನವದೆಹಲಿ: ಭಾರತದ ಮಾಜಿ ಕ್ರಿಕೆಟ್ ಆರಂಭಿಕ ಆಟಗಾರ ಮತ್ತು ಎರಡು ಬಾರಿ ವಿಶ್ವಕಪ್ ವಿಜೇತ ಗೌತಮ್ ಗಂಭೀರ್ ಅವರು ತಮ್ಮ, ವಿರಾಟ್ ಕೊಹ್ಲಿ ಮತ್ತು ವೇಗಿ ನವೀನ್-ಉಲ್-ಹಕ್ ನಡುವಿನ ತೀವ್ರ ವಾಕ್ಸಮರದ ಬಗ್ಗೆ ಮಾತನಾಡಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ನಡುವಿನ ಐಪಿಎಲ್ 2023 ರ ಪಂದ್ಯದ ಸಮಯದಲ್ಲಿ ಗಲಾಟೆ ನಡೆದಿತ್ತು.

ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಮತ್ತು ನವೀನ್-ಉಲ್-ಹಕ್ ಮೈದಾನದಲ್ಲಿ ವಾಕ್ಸಮರದಲ್ಲಿ ತೊಡಗಿದ್ದರು. ಅದನ್ನು ಬಿಡಿಸಲು ಬಂದ ಗಂಭೀರ್ ಮತ್ತು ಕೊಹ್ಲಿ ನಡುವೆ ಗಲಾಟೆ ನಡೆದಿತ್ತು. ಅಫ್ಘಾನ್ ವೇಗದ ಬೌಲರ್ ಕಡೆಗೆ ವಿರಾಟ್ ಕೊಹ್ಲಿ ತೋರಿದ ಸನ್ನೆಗಳು ಪರಿಸ್ಥಿತಿಯನ್ನು ಹದಗೆಡಿಸಿತ್ತು. ಇದು ಆನ್ ಫೀಲ್ಡ್ ಅಂಪೈರ್ ಗಳು ಮತ್ತು ಸಹ ಆಟಗಾರರ ಮಧ್ಯಪ್ರವೇಶದಿಂದ ಕೊನೆಗೊಂಡಿತ್ತು. ಆದರೆ, ಪಂದ್ಯ ಮುಗಿದ ಬಳಿಕ ಲಕ್ನೊ ತಂಡದ ಮೆಂಟರ್​ ಗೌತಮ್ ಗಂಭೀರ್ ವಿಷಯದ ಬಗ್ಗೆ ಮಧ್ಯ ಪ್ರವೇಶಿಸಿದ್ದರು. ಈ ವೇಳೆ ಗಲಾಟೆ ತಾರಕ್ಕೇರಿತ್ತು.

ಆರ್ಸಿಬಿಯ ರೋಮಾಂಚಕ ಗೆಲುವಿನ ನಂತರ ಆಟಗಾರರು ಕೈಕುಲುಕುವ ಸಮಯದಲ್ಲಿ ಉದ್ವಿಗ್ನತೆ ಮತ್ತೆ ಭುಗಿಲೆದ್ದಿತು. ಆಗ ಎಲ್ಎಸ್​ಜಿ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುತ್ತಿದ್ದ ಗೌತಮ್ ಗಂಭೀರ್ ಅವರು ವಿರಾಟ್ ಕೊಹ್ಲಿ ಅವರೊಂದಿಗೆ ಮಾತಿನ ಚಕಮಕಿ ನಡೆಸಿದರು. ವಾಗ್ವಾದವು ಮುಂದುವರಿಯದಂತೆ ಇತರ ಆಟಗಾರರ ನೋಡಿಕೊಂಡರು.

ಗೌತಮ್ ಗಂಭೀರ್ ವರ್ಸಸ್​ ವಿರಾಟ್ ಕೊಹ್ಲಿ?

ಎಎನ್ಐ ಪಾಡ್​ಕಾಸ್ಟ್​​ನಲ್ಲಿ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಗೌತಮ್ ಗಂಭೀರ್ ವಿರಾಟ್ ಕೊಹ್ಲಿ ಮತ್ತು ನವೀನ್ ಉಲ್-ಹಕ್ ಘಟನೆಯ ಬಗ್ಗೆ ವಿಷಯದ ಬಗ್ಗೆ ಮಾತನಾಡಿದ್ದಾರೆ. ತಂಡವೊಂದರ ಮಾರ್ಗದರ್ಶಕರಾಗಿ ಆಟಗಾರರನ್ನು ರಕ್ಷಿಸುವ ಜವಾಬ್ದಾರಿಯನ್ನು ನಾನು ಹೊಂದಿದ್ದೆ. ಈ ವಿಚಾರದಲ್ಲಿ ನನಗೆ ಯಾರೂ ಸರಿಸಾಟಿಯೇ ಇಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : BCCI : ಬಿಸಿಸಿಐ ಸಂಪತ್ತು ಕ್ರಿಕೆಟ್​​ ಆಸ್ಟ್ರೇಲಿಯಾಕ್ಕಿಂತ 28 ಪಟ್ಟು ಹೆಚ್ಚು; ಬಹಿರಂಗವಾಯ್ತು ಒಟ್ಟು ಮೊತ್ತ

“ಒಬ್ಬ ಮಾರ್ಗದರ್ಶಕನಾಗಿ, ನನ್ನ ಆಟಗಾರರ ಮೇಲೆ ಯಾರೂ ದಬ್ಬಾಳಿಕೆ ಮಾಡಲು ಸಾಧ್ಯವಿಲ್ಲ. ನನಗೆ ಬೇರೆಯವರಿತಿಂಗ ವಿಭಿನ್ನ ನಂಬಿಕೆ ಇದೆ. ಆಟ ನಡೆಯುವವರೆಗೂ, ನನಗೆ ಮಧ್ಯಪ್ರವೇಶಿಸುವ ಹಕ್ಕು ಇರಲಿಲ್ಲ, ಆದರೆ ಆಟ ಮುಗಿದ ನಂತರ, ಯಾರಾದರೂ ನನ್ನ ಆಟಗಾರರೊಂದಿಗೆ ವಾದಕ್ಕೆ ಇಳಿದರೆ, ಅವರನ್ನು ರಕ್ಷಿಸಲು ನನಗೆ ಎಲ್ಲಾ ಹಕ್ಕುಗಳಿವೆ” ಎಂದು ಗಂಭೀರ್ ಪ್ರತಿಪಾದಿಸಿದ್ದಾರೆ.

ಈ ಹೇಳಿಕೆಯು ಕ್ರಿಕೆಟ್ ಆಟದ ಸಮಯದಲ್ಲಿ ಮಾತ್ರವಲ್ಲದೆ ಪಂದ್ಯದ ನಂತರದ ಸಂದರ್ಭಗಳಲ್ಲಿಯೂ ಉಂಟುಮಾಡುವ ತೀವ್ರತೆ ಮತ್ತು ಉತ್ಸಾಹಕ್ಕೆ ಒಂದು ಉದಾಹರಣೆಯಾಗಿದೆ. ತಮ್ಮ ಆಟಗಾರರನ್ನು ರಕ್ಷಿಸುವಲ್ಲಿ ಗಂಭೀರ್ ಅವರ ಬಲವಾದ ನಿಲುವು ಅವರು ಇರುವ ತಂಡದ ಬಗ್ಗೆ ಅವರು ಹೊಂದಿರುವ ಆಳವಾದ ನಿಷ್ಠೆ ಮತ್ತು ರಕ್ಷಣೆಯ ಪ್ರಜ್ಞೆಯನ್ನು ಬಹಿರಂಗಪಡಿಸುತ್ತದೆ.

ಯುವರಾಜ್​ ಹೆಸರೇಳಿ ಧೋನಿಯ ಮೇಲೆ ನಂಜು ಕಾರಿದ ಗೌತಮ್​ ಗಂಭೀರ್​

ಬೆಂಗಳೂರು: ಭಾರತ ತಂಡದ ಮಾಜಿ ಆರಂಭಿಕ ಬ್ಯಾಟರ್​ ಒಂದಿಲ್ಲೊಂದು ವಿವಾದ ಸೃಷ್ಟಿಸುತ್ತಲೇ ಇರುತ್ತಾರೆ. ತಾವು ನೇರ ಮಾತಿನ ವ್ಯಕ್ತಿ ಎಂದು ಅವರು ಹೇಳಿಕೊಂಡಿರುವ ಹೊರತಾಗಿಯೂ ಅವರ ವಿಮರ್ಶೆಗಳು ಕೆಲವರ ಮೇಲಷ್ಟೇ ಸೀಮಿತವಾಗಿರುತ್ತದೆ. ಅವರ ಪ್ರಮುಖ ಗುರಿ ವಿರಾಟ್​ ಕೊಹ್ಲಿಯಾದರೆ ಮತ್ತೊಬ್ಬರು ಮಾಜಿ ನಾಯಕ ಎಂ ಎಸ್​ ಧೋನಿ (MS Dhoni). ಇತ್ತೀಚೆಗೆ ಗಂಭೀರ್​ ಮಾಜಿ ವೇಗದ ಬೌಲರ್ ಶ್ರೀಶಾಂತ್ ವಿರುದ್ಧ ಮೈದಾನದಲ್ಲೇ ಕಿಡಿಕಾರಿದ ಪ್ರಕರಣವೂ ನಡೆದಿದೆ. ಇದೀಗ ಮತ್ತೊಂದು ಬಾರಿ ಅವರು ಧೋನಿಯ ಸಾಧನೆಯ ವಿರುದ್ಧ ಮಾತನಾಡಿದ್ದು ಅವೆಲ್ಲರೂ ಪಿಆರ್​ ತಂತ್ರ ಎಂಬುದಾಗಿ ಹೇಳಿಕೊಂಡಿದ್ದಾರೆ.

ಯುವರಾಜ್ ಸಿಂಗ್ ಅವರ ಮಾರ್ಕೆಟಿಂಗ್ ಪರಾಕ್ರಮದ ಬಗ್ಗೆ ಚರ್ಚಿಸುವಾಗ ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ಮಾಜಿ ನಾಯಕ ಎಂಎಸ್ ಧೋನಿ ವಿರುದ್ಧ ಸೂಕ್ಷ್ಮವಾಗಿ ವ್ಯಂಗ್ಯವಾಡಿ. ಕ್ರಿಕೆಟ್ ಸಮುದಾಯವನ್ನು ಕೆರಳಿಸಿದ್ದಾರೆ. ಪಾಡ್​​ಕಾಸ್ಟ್​​ನ ಅವರ ಮಾತುಗಳು ಅಭಿಮಾನಿಗಳು ಮತ್ತು ತಜ್ಞರಲ್ಲಿ ಚರ್ಚೆಗಳನ್ನು ಹುಟ್ಟುಹಾಕಿದೆ.

2011 ರ ವಿಶ್ವಕಪ್​ನಲ್ಲಿ ಮ್ಯಾನ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಪಡೆದ ಯುವರಾಜ್ ಸಿಂಗ್ ಅವರಿಗೆ ಉತ್ತಮ ಪಿಆರ್ ಏಜೆನ್ಸಿ ಇರಲಿಲ್ಲ. ಹೀಗಾಗಿ ಅವರ ಸಾಧನೆ ನಗಣ್ಯವಾಯಿತು ಗೌತಮ್ ಗಂಭೀರ್ ಗಮನಸೆಳೆದರು. ಮೊದಲ ನೋಟದಲ್ಲಿ ಸರಿ ಎಂದು ತೋರುವ ಈ ಹೇಳಿಕೆಯು ಕೆಲವೊಂದು ಸೂಕ್ಷ್ಮತೆಗಳನ್ನು ಹೊಂದಿರುವುದಂತೂ ನಿಜ. ಎಎನ್ಐ ಜೊತೆಗಿನ ಸಂಭಾಷಣೆಯಲ್ಲಿ ಗಂಭೀರ್ ಅವರನ್ನು 2011 ರ ವಿಶ್ವಕಪ್ ಫೈನಲ್​​ನಲ್ಲಿ ಗಂಭೀರ್​ ನಿರ್ಣಾಯಕ ಇನ್ನಿಂಗ್ಸ್ 97 ರನ್​ಗಳ ಬಗ್ಗೆ ಕೇಳಲಾಯಿತು. ಈ ವೇಳೆ ಅವರು ಅಲ್ಲಿ ಎಂಎಸ್ ಧೋನಿ 91* (ಔಟಾಗದೆ) ರನ್​ ಬಾರಿಸಿದ ಕಾರಣ ತಮ್ಮ ಇನಿಂಗ್ಸ್​ ಕಳೆಗುಂದಿತು ಎಂಬರ್ಥದಲ್ಲ ಮಾತನಾಡಿದ್ದಾರೆ.

“ಯುವರಾಜ್ ಸಿಂಗ್ ಅವರಿಗೆ ಸಿಗಬೇಕಾದ ಮನ್ನಣೆ ಸಿಗಲಿಲ್ಲವೇ” ಎಂದು ಪಾಡ್​ಕಾಸ್ಟ್​ ಮಾಡುತ್ತಿದ್ದ ಸ್ಮಿತಾ ಪ್ರಕಾಶ್ ಕೇಳಿದರು. ಇದಕ್ಕೆ ಉತ್ತರಿಸಿದ ಗಂಭೀರ್, “ನಿಮಗೆ ತಿಳಿದಿದೆ, ನೀವೇ ಹೇಳಿ. 2011 ರ ವಿಶ್ವಕಪ್​ನ ಮ್ಯಾನ್​ ಆಫ್​ ದಿ ಸೀರಿಸ್​ ಗೆದ್ದ ಆಟಗಾರ ಯುವರಾಜ್​. ಅವರ ಬಗ್ಗೆ ಎಷ್ಟು ಜನರು ಮಾತನಾಡುತ್ತಾರೆ? ಬಹುಶಃ ಅವರು ಉತ್ತಮ ಪಿಆರ್ ಏಜೆನ್ಸಿಯನ್ನು ಹೊಂದಿಲ್ಲದ ಕಾರಣ ಅವರ ಸಾಧನೆ ಮಂಕಾಯಿತು ಎಂದು ಹೇಳಿದ್ದಾರೆ.

Exit mobile version