ಮುಂಬಯಿ: ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವೆ ಮೈದಾನದಲ್ಲಿ ನಡೆದ ವಾಗ್ಯುದ್ದ ಸಿಕ್ಕಾಪಟ್ಟೆ ಸುದ್ದಿ ಮಾಡಿತ್ತು. ಎಲ್ಲ ಕಡೆಯೂ ಅದೇ ಚರ್ಚೆ ನಡೆದಿತ್ತು. ಅಫಘಾನಿಸ್ತಾನದ ಆಟಗಾರ ನವಿನ್ ಉಲ್ ಹಕ್ ಜಗಳದ ಸಾಲಿಗೆ ಸೇರಿಕೊಂಡು ಫೈಟ್ಗೆ ಇನ್ನಷ್ಟು ಕಿಚ್ಚು ಹಚ್ಚಿದ್ದಾರೆ. ಆಟಗಾರರ ಅಭಿಮಾನಿಗಳು ಕೂಡ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಜಗಳವಾಡಿಕೊಂಡಿದ್ದಾರೆ. ಏತನ್ಮಧ್ಯೆ, ಗೇಮ್ಡೆವಲಪರ್ ಒಬ್ಬರು ಈ ಇಬ್ಬರು ಆಟಗಾರರನ್ನು ಬಳಿಸಿಕೊಂಡು ಆನ್ಲೈನ್ ಗೇಮ್ ಒಂದನ್ನು ಸಿದ್ಧಪಡಿಸಿ ಬಿಟ್ಟಿದ್ದಾರೆ. ಇದರ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದ ನಂತರ, ಕೊಹ್ಲಿ ಮತ್ತು ಗಂಭೀರ್ ನಡುವೆ ಮಾತಿನ ಚಕಮಕಿ ನಡೆಯಿತು. ಈ ಘಟನೆ ಕ್ರಿಕೆಟ್ ಅಭಿಮಾನಿಗಳ ಗಮನವನ್ನು ಸೆಳೆದರೆ, ಕೋಡರ್ ಒಬ್ಬರು ಈ ಹೋರಾಟವನ್ನು ಆಧರಿಸಿ ಆಟವನ್ನು ನಿರ್ಮಿಸಿದ್ದಾರೆ.
ಇದನ್ನೂ ಓದಿ ವ: Virat kohli : ರನ್ಗಳಿಸಲು ವಿರಾಟ್ ಕೊಹ್ಲಿಗೆ ಹೊಸ ತಂತ್ರ ಹೇಳಿಕೊಟ್ಟ ರವಿ ಶಾಸ್ತ್ರಿ
ಆಟದಲ್ಲಿ ಕೊಹ್ಲಿ ಮತ್ತು ಗಂಭೀರ್ ಅವರ ಪಾತ್ರಗಳನ್ನು ತಮ್ಮ ತಂಡಗಳನ್ನು ಪ್ರತಿನಿಧಿಸುವ ಜೆರ್ಸಿ ಹಾಕಿಕೊಂಡಿದ್ದಾರೆ. ಕೋಡರ್ ಇಬ್ಬರನ್ನು ಮೈದಾನಕ್ಕೆ ಕರೆದುಕೊಂಡು ಬಂದು ಬ್ಯಾಟ್ ಮೂಲ ಪರಸ್ಪರ ಬಡಿದಾಡಿಕೊಳ್ಳುವ ರೀತಿಯ ತೋರಿಸಿದ್ದಾರೆ.
ಅಂದ ಹಾಗೆ ಈ ಜಗಳಕ್ಕಾಗಿ ಕೊಹ್ಲಿ ಮತ್ತು ಗಂಭೀರ್ ದೊಡ್ಡ ಮೊತ್ತದ ದಂಡವನ್ನು ಪಾವತಿಸಿದ್ದಾರೆ. ಕೊಹ್ಲಿ 1.07 ಕೋಟಿ ರೂಪಾಯಿ, ಗಂಭೀರ್ 25 ಲಕ್ಷ ರೂಪಾಯಿ ಹಾಗೂ ನವೀನ್ ಉಲ್ ಹಕ್ಗೆ 1.7 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಅಲ್ಲದೆ, ಈ ರೀತಿ ಮಾಡದಂತೆ ಎಚ್ಚರಿಕೆಯನ್ನೂ ನೀಡಲಾಗಿದೆ.
ಪ್ಲೇಆಫ್ ಮೇಲೆ ಆರ್ಸಿಬಿ- ಎಲ್ಎಸ್ಜಿ ಕಣ್ಣು
ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ತಂಡ ಆಡಿರುವ 10 ಪಂದ್ಯಗಳಲ್ಲಿ 5ರಲ್ಲಿ ಗೆಲುವು ಹಾಗೂ 5ರಲ್ಲಿ ಸೋಲು ಕಂಡಿದೆ. ಇದರೊಂದಿಗೆ ತಂಡವು 10 ಅಂಕಗಳು ಮತ್ತು -0.209 ನೆಟ್ ರನ್ರೇಟ್ನೊಂದಿಗೆ ಐಪಿಎಲ್ ಪಾಯಿಂಟ್ಸ್ ಟೇಬಲ್ನಲ್ಲಿ ಆರನೇ ಸ್ಥಾನದಲ್ಲಿದೆ.
ಕೃಣಾಲ್ ಪಾಂಡ್ಯ ನೇತೃತ್ವದ ಎಲ್ಎಸ್ಜಿ ತಂಡ ಐದು ಗೆಲುವು ಮತ್ತು ಅಷ್ಟೇ ಸೋಲುಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಚೆನ್ನೈ ವಿರುದ್ಧದ ಪಂದ್ಯ ಮಳೆಯಿಂದ ಕೊಚ್ಚಿ ಹೋಗಿತ್ತು. 11 ಅಂಕಗಳು 0.294 ನೆಟ್ ರನ್ರೇಟ್ಹೊಂದಿದೆ. ಎರಡೂ ತಂಡಗಳು ಪ್ಲೇಆಫ್ ಸ್ಥಾನ ಗಿಟ್ಟಿಸಿಕೊಳ್ಳುವುದಕ್ಕೆ ಎಲ್ಲ ಪಂದ್ಯಗಳಲ್ಲಿ ಗೆಲ್ಲಬೇಕಿದೆ.