Site icon Vistara News

IPL 2023 : ಗಿಲ್​ ಮತ್ತು ಗ್ರೀನ್​​ ಮಾತ್ರ ಹೊಗಳಿ ಕೊಹ್ಲಿಯನ್ನು ಮತ್ತೆ ನಿರ್ಲಕ್ಷಿಸಿದ ಗಂಗೂಲಿ!

Ganguly ignored Kohli again, praising only Gill and Green!

ನವದೆಹಲಿ: ವಿರಾಟ್ ಕೊಹ್ಲಿ ಮತ್ತು ಸೌರವ್ ಗಂಗೂಲಿ ನಡುವಿನ ಮುನಿಸಿಗೆ ಬ್ರೇಕ್ ಬಿದ್ದಿದೆ ಎಂದು ಹೇಳಲಾಗಿತ್ತು. ಇತ್ತೀಚೆಗೆ ಆರ್​ಸಿಬಿ ಮತ್ತು ಡೆಲ್ಲಿ ನಡುವಿನ ಪಂದ್ಯದ ಬಳಿಕ ಅವರಿಬ್ಬರೂ ಕೈ ಕುಲುಕಿದ್ದು ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಹೀಗಾಗಿ ಅವರ ಕೋಪ ತಣ್ಣಗಾಗಿದೆ ಎಂದು ಭಾವಿಸಲಾಗಿತ್ತು. ಆದರೆ, ಆ ಸುದ್ದ ಪೂರ್ಣ ಸತ್ಯವಲ್ಲ ಎಂಬ ವಿಚಾರ ಈಗ ಗೊತ್ತಾಗಿದೆ. ಬಿಸಿಸಿಐ ಮಾಜಿ ಅಧ್ಯಕ್ಷರ ಇತ್ತೀಚಿನ ಟ್ವೀಟ್ ಇಂಥದ್ದೊಂದು ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ. ಐಪಿಎಲ್ 2023ರ ಅಂತಿಮ ಡಬಲ್ ಹೆಡರ್​​ ಪಂದ್ಯಗಳಲ್ಲಿ ಮೂರು ಶತಕಗಳು ದಾಖಲಾಗಿದ್ದವು. ಕ್ಯಾಮೆರಾನ್ ಗ್ರೀನ್, ಕೊಹ್ಲಿ ಮತ್ತು ಶುಭಮನ್ ಗಿಲ್ ಸೆಂಚುರಿ ಬಾರಿಸಿದ್ದರು. ಆದರೆ, ಮಾಜಿ ನಾಯಕ ಗಿಲ್​ ಮತ್ತು ಗ್ರೀನ್ ಅವರ ಆಟವನ್ನು ಮಾತ್ರ ಶ್ಲಾಘಿಸಿದ್ದಾರೆ. ಅದನ್ನು ಐಪಿಎಲ್​ನ ಸ್ಟ್ಯಾಂಡರ್ಡ್​ ಎಂದು ಕರೆದಿದ್ದಾರೆ. ಕೊಹ್ಲಿಯ ಹೆಸರನ್ನು ಬಿಟ್ಟಿದ್ದಾರೆ. ಈ ಮೂಲಕ ಹಳೆ ಕೋಪ ಮುಗಿದಿಲ್ಲ ಎಂದು ಕ್ರಿಕೆಟ್​ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

“ಈ ದೇಶವು ಎಂತಹ ಪ್ರತಿಭೆಯನ್ನು ಸೃಜಿಸುತ್ತಿದೆ/ ಶುಬ್ಮನ್ ಗಿಲ್… ವಾವ್… ಎರಡು ಅದ್ಭುತ ಆಟಗಳು, “ಎಂದು ಗಂಗೂಲಿ ಟ್ವೀಟ್ ಮಾಡಿದ್ದಾರೆ. ಗಂಗೂಲಿ ಅವರ ಟ್ವೀಟ್ ವಿಶೇಷವಾಗಿ ಗ್ರೀನ್ ಮತ್ತು ಗಿಲ್ ಅವರ ಅವಳಿ ಶತಕಗಳನ್ನು ಗುರಿಯಾಗಿಸಿಕೊಂಡಿದೆ. ಏಕೆಂದರೆ ಅವರು ಭವಿಷ್ಯ ಮತ್ತು ಅವರು ಉಲ್ಲೇಖಿಸಿದ ‘ಪ್ರತಿಭೆಗಳು. ಆದಾಗ್ಯೂ, ಅಭಿಮಾನಿಗಳು ಟ್ವೀಟ್​​ನಲ್ಲಿ ಒಂದು ಲೋಪವನ್ನು ಹುಡುಕಿದ್ದಾರೆ. ದಾಖಲೆಯ 7 ನೇ ಐಪಿಎಲ್ ಶತಕವನ್ನು ಗಳಿಸಿದ ಮತ್ತು ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ಅವರನ್ನು ಹಿಂದಿಕ್ಕಿದ ಕೊಹ್ಲಿಯ ಹೆಸರನ್ನು ಉಲ್ಲೇಖಿಸದಿರುವುದು.

ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿದ್ದಾಗ ಕೊಹ್ಲಿಯನ್ನು ಭಾರತದ ಏಕದಿನ ನಾಯಕ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಈ ವಿಚಾರದಲ್ಲಿ ಅವರ ನಡುವೆ ಮುನಿಸು ಇರುವುದು ಗೊತ್ತಾಗಿತ್ತು. ಅಂತರೆಯೇ ಐಪಿಎಲ್ 2023ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೊದಲ ಮುಖಾಮುಖಿ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ಕ್ರಿಕೆಟ್ ನಿರ್ದೇಶಕ ಗಂಗೂಲಿ ಅವರನ್ನು ಕೊಹ್ಲಿ ಕಡೆಗಣಿಸಿದ್ದರು, ಪಂದ್ಯ ಮುಕ್ತಾಯದ ಬಳಿಕ ಪರಸ್ಪರ ಅಭಿನಂದಿಸಲಿಲ್ಲ ಎಂದು ಹೇಳಲಾಗಿತ್ತು. ಇದು ಈ ಋತುವಿನ ಮೊದಲ ವಿವಾದವಾಯಿತು, ಸಾಮಾಜಿಕ ಜಾಲತಾಣಗಳಲ್ಲಿ ಕೋಲಾಹಲ ಸೃಷ್ಟಿಸಿತ್ತು. ಕೊಹ್ಲಿ ಮತ್ತು ಗಂಗೂಲಿ ಇನ್ನೂ ಪರಸ್ಪರ ದ್ವೇಷ ಹೊಂದಿದ್ದಾರೆಯೇ ಎಂಬುದಾಗಿ ಪ್ರಶ್ನಿಸಲಾಗಿತ್ತು. ಆದರೆ, ಎಲ್ಲವೂ ಸುಳ್ಳು ಎನ್ನುವಂತೆ ಎರಡನೇ ಬಾರಿ ಮುಖಾಮುಖಿ ಆದಾಗ ಅವರು ಪರಸ್ಪರ ಕೈ ಕುಲುಕಿದ್ದರು. ಇದೀಗ ಮತ್ತೆ ಅದೇ ವಿಚಾರ ಚರ್ಚೆಗೆ ಬಂದಿದೆ.

ಕೊಹ್ಲಿ ಮತ್ತು ಗಂಗೂಲಿ ಮೊದಲಿನಿಂದಲೂ ಉತ್ತಮ ಸಂಬಂಧವನ್ನು ಹೊಂದಿದ್ದರು. 2021ರ ವಿಶ್ವಕಪ್ ನಂತರ ಕೊಹ್ಲಿ ಭಾರತದ ಟಿ20 ಐ ನಾಯಕತ್ವವನ್ನು ತ್ಯಜಿಸಿದ್ದರು. ಒಡಿಐ ಮತ್ತು ಟೆಸ್ಟ್​​ನಲ್ಲಿ ನಾಯಕನಾಗಿ ಮುಂದುವರಿಯಲು ಬಯಸಿದ್ದರು ಎಂದು ವರದಿಗಳು ಹೇಳುತ್ತವೆ. ಅವರಿಗೆ 2023ರಲ್ಲಿ ಭಾರತದಲ್ಲಿ ನಡೆಯುವ ಏಕ ದಿನ ವಿಶ್ವ ಕಪ್​ನಲ್ಲಿ ತಂಡವನ್ನು ಮುನ್ನಡೆಸುವ ಗುರಿ ಇತ್ತು. ಆದರೆ, ಆಯ್ಕೆ ಸಮಿತಿ ಕೊಹ್ಲಿಯನ್ನು ನಾಯಕತ್ವದಿಂದ ಇಳಿಯಲು ಸೂಚಿಸಿತು ಎನ್ನಲಾಗಿದೆ. ರೋಹಿತ್ ಶರ್ಮಾ ಅವರಿಗೆ ಹೊಸ ನಾಯಕರಾಗಿ ಪಟ್ಟ ಕಟ್ಟಲಾಯಿತು. ಈ ವೇಳೆ ಪತ್ರಿಕಾಗೋಷ್ಠಿಯಲ್ಲಿ ತಮಗಾದ ಅನ್ಯಾಯವನ್ನ ಹೇಳಿಕೊಂಡರು. ಕೊನೆಗೆ ಬಿಸಿಸಿಐ ನೂರು ಸಬೂಬುಗಳನ್ನು ಹೇಳಿತು.

ದಕ್ಷಿಣ ಆಫ್ರಿಕಾದಲ್ಲಿ ಸರಣಿ ಸೋತ ಒಂದು ತಿಂಗಳ ನಂತರ, ಕೊಹ್ಲಿ ಭಾರತದ ಟೆಸ್ಟ್ ನಾಯಕ ಸ್ಥಾನದಿಂದ ಕೆಳಗಿಳಿದರು. ಅಂತೆಯೇ 2022ರ ಕೊಹ್ಲಿಗೆ ಕೆಟ್ಟ ವರ್ಷವಾಯಿತು. ಆದರೆ, 2022ರ ಏಷ್ಯಾ ಕಪ್​ ಬಳಿಕ ಕೊಹ್ಲಿ ಫಾರ್ಮ್​ ಕಂಡುಕೊಂಡರು. ಇದೀಗ ಮತ್ತೆ ಬ್ಯಾಟಿಂಗ್​ನ ಅಬ್ಬರ ಮುಂದುವರಿಸಿದ್ದಾರೆ.

Exit mobile version