Site icon Vistara News

Dhruv Jurel : ಧ್ರುವ್​ ಜುರೆಲ್ ಧೋನಿಗೆ ಹೋಲಿಕೆ; ಗವಾಸ್ಕರ್​ ಮಾತಿಗೆ ಗಂಗೂಲಿ ಆಕ್ಷೇಪ

Dhruv Jurel

ಬೆಂಗಳೂರು: ಟೀಮ್ ಇಂಡಿಯಾದ 24 ವರ್ಷದ ವಿಕೆಟ್ ಕೀಪರ್ ಬ್ಯಾಟರ್​ ಧ್ರುವ್ ಜುರೆಲ್ (Dhruv Jurel) ಪ್ರಸ್ತುತ ಇಂಗ್ಲೆಂಡ್ ವಿರುದ್ಧ ಚೊಚ್ಚಲ ಟೆಸ್ಟ್ ಸರಣಿಯನ್ನು ಆಡುತ್ತಿದ್ದಾರೆ. ಅವರು ಚೊಚ್ಚಲ ಪಂದ್ಯದಲ್ಲಿಯೇ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಅವರನ್ನು ಮುಂದಿನ ಎಂಎಸ್ ಧೋನಿ ಎಂದು ಕರೆದಿದ್ದಾರೆ. ಆದರೆ, ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಗವಾಸ್ಕರ್ ಹೇಳಿಕೆಯನ್ನು ಆಕ್ಷೇಪಿಸಿದ್ದಾರೆ.

ರಾಂಚಿಯಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್​​ನಲ್ಲಿ ಧ್ರುವ್ ಜುರೆಲ್ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್​​ಗಳನ್ನು ಆಡಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದಿ್ದರು. ಮೊದಲ ಇನ್ನಿಂಗ್ಸ್​ನಲ್ಲಿ ಜುರೆಲ್ 90 ರನ್ ಗಳಿಸಿದ್ದರೆ, 2 ನೇ ಇನ್ನಿಂಗ್ಸ್ನಲ್ಲಿ, ಜುರೆಲ್ ಅಜೇಯ 36* ರನ್ ಗಳಿಸಿದ್ದರು. ಇಂಗ್ಲೆಂಡ್ ನೀಡಿದ 192 ರನ್​ಗಳ ಗುರಿಯನ್ನು ಬೆನ್ನಟ್ಟಿದ್ದ ಭಾರತಕ್ಕೆ ಎದುರಾಗಿದ್ದ ಸಂಕಷ್ಟವನ್ನು ಅವರು ನಿಭಾಯಿಸಿದ್ದರು. ಹೀಗಾಗಿ ಸಹಜವಾಗಿ ಜುರೆಲ್ ಅವರನ್ನು ಧೋನಿ ಎಂಬುದಾಗಿ ಗವಾಸ್ಕರ್​ ಕರೆದಿದ್ದರು.

ಸುನಿಲ್ ಗವಾಸ್ಕರ್ ಹೇಳಿದ್ದೇನು?

ಸುನಿಲ್ ಗವಾಸ್ಕರ್ ಟೆಸ್ಟ್​​ನಲ್ಲಿ ಧ್ರುವ್ ಜುರೆಲ್ ಆಡದಿಂದ ಸಂಪೂರ್ಣವಾಗಿ ಪ್ರಭಾವಿತರಾಗಿದ್ದಾರೆ. ಅವರ ಆಟದಲ್ಲಿ ಉತ್ತಮ ರಕ್ಷಣಾತ್ಮಕ ಕಾರ್ಯವಿಧಾನ ಕೂಡ ಇದೆ. ಜುರೆಲ್ ಅದ್ಭುತ ಆಟದ ಲಹರಿ ಹೊಂದಿದ್ದಾರೆ ಮತ್ತು ಸ್ಪಿನ್ ಬೌಲರ್​ಗಳ ವಿರುದ್ಧ ಅವರ ಸಾಮರ್ಥ್ಯವು ತುಂಬಾ ನಿಖರವಾಗಿದೆ ಎಂದು ಗವಾಸ್ಕರ್​ ಬಣ್ಣಿಸಿದ್ದರು.

ಇದನ್ನೂ ಓದಿ : TPL 3: ಹುಬ್ಬಳ್ಳಿಯಲ್ಲಿ ಟಿಪಿಎಲ್ ಸೀಸನ್-3 ಶುಭಾರಂಭ

ಜುರೆಲ್​ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಅದೇ ರಿತಿ ಕೀಪಿಂಗ್, ಮತ್ತು ಸ್ಟಂಪ್​​ಗಳ ಹಿಂದೆ ಅವರ ಕೆಲಸವು ಅಷ್ಟೇ ಅದ್ಭುತವಾಗಿದೆ. ಅವರ ಆಟದ ಎಚ್ಚರಿಕೆಯನ್ನು ನೋಡುವ ಮೂಲಕ ಮತ್ತೊಬ್ಬ ಎಂಎಸ್ ಧೋನಿಯನ್ನು ಕಾಣಬಹುದು ಎಂದು ಗವಾಸ್ಕರ್ ಹೇಳಿದ್ದರು.

ಇನ್ನೊಬ್ಬ ಧೋನಿ ಎಂದಿಗೂ ಇರಲು ಸಾಧ್ಯವಿಲ್ಲ ಎಂದು ನನಗೆ ತಿಳಿದಿದೆ. ಆದರೆ ಅವರು ಹೊಂದಿರುವ ಮನಸ್ಥಿತಿ ಬೇರೆಯವರಿಗೆ ಇರಬಹುದು. ಜುರೆಲ್ ಗೆ ಆ ಆಟದ ಅರಿವು ಇದೆ. ಸ್ಮಾರ್ಟ್ ಕ್ರಿಕೆಟರ್” ಎಂದು ಗವಾಸ್ಕರ್ ಹೇಳಿದ್ದರು.

ಧರ್ಮಶಾಲಾದಲ್ಲಿ ನಡೆಯಲಿರುವ 5 ನೇ ಮತ್ತು ಸರಣಿಯ ಅಂತಿಮ ಟೆಸ್ಟ್ ಪಂದ್ಯದಲ್ಲಿ ಧ್ರುವ್ ಜುರೆಲ್ ಕಾಣಿಸಿಕೊಂಡರೆ ಬಿಸಿಸಿಐನ ಕೇಂದ್ರ ಗುತ್ತಿಗೆ ಪಟ್ಟಿಗೆ ಸೇರ್ಪಡೆಗೊಳ್ಳಲಿದ್ದಾರೆ. ಸರ್ಫರಾಜ್ ಖಾನ್ ಅವರೊಂದಿಗೆ, ಜುರೆಲ್ ವೇತನ ವ್ಯವಸ್ಥೆಯ ಗ್ರೇಡ್ ಸಿ ಗೆ ಸೇರಲಿದ್ದಾರೆ.

ಗಂಗೂಲಿ ವ್ಯತಿರಿಕ್ತ ಹೇಳಿಕೆ

ಗವಾಸ್ಕರ್ ಅವರ ಹೇಳಿಕೆಯನ್ನು ಗಂಗೂಲಿ ತಿರಸ್ಕರಿಸಿದ್ದಾರೆ. ಜುರೆಲ್ ಬ್ಯಾಟಿಂಗ್ ಮಾಡಿದ ರೀತಿಯನ್ನು ಗಂಗೂಲಿ ಶ್ಲಾಘಿಸಿದ್ದಾರೆ. ಎಂಎಸ್ ಧೋನಿ ತಮ್ಮದೇ ಆದ ಶೈಲಿಯನ್ನು ಹೊಂದಿದ್ದಾರೆ ಮತ್ತು ಜುರೆಲ್ ಅವರನ್ನು ಅನುಕರಿಸಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. ಧೋನಿ ಲೆಜೆಂಡ್ ಆಗಲು 15-20 ವರ್ಷಗಳನ್ನು ತೆಗೆದುಕೊಂಡಿದ್ದರಿಂದ ಇಬ್ಬರನ್ನೂ ಹೋಲಿಸುವುದು ಸರಿಯಲ್ಲಿ ಎಂದು ಗಂಗೂಲಿ ನುಡಿದಿದ್ದಾರೆ.

ಧ್ರುವ್ ಜುರೆಲ್, ಕಠಿಣ ಪಿಚ್​ನಲ್ಲಿ ಒತ್ತಡದಲ್ಲಿ ಆಡಿದ್ದಾರೆ. ಅವರು ಉತ್ತಮ ಟೆಸ್ಟ್​ ಪಂದ್ಯವನನ್ನು ಹೊಂದಿದ್ದರು. ಅವರು ಪ್ರತಿಭಾವಂತರು ಎಂದು ಗಂಗೂಲಿ ಹೊಗಳಿದ್ದಾರೆ.

ಜುರೆಲ್ ಪ್ರತಿಭೆಯನ್ನು ಹೊಂದಿದ್ದಾರೆ. ಅದರ ಬಗ್ಗೆ ಯಾವುದೇ ಸಂದೇಹವಿಲ್ಲ. ಆದರೆ ಎಂಎಸ್ ಧೋನಿ ಆಗಲು 20 ವರ್ಷಗಳು ಬೇಕಾಯಿತು. ಆದ್ದರಿಂದ ಅವರನ್ನು ಅವರ ಪಾಡಿಗೆ ಆಡಲು ಬಿಡಿ. ಸ್ಪಿನ್, ವೇಗ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಒತ್ತಡದಲ್ಲಿ ಪ್ರದರ್ಶನ ನೀಡುವ ಜುರೆಲ್ ಅವರ ಸಾಮರ್ಥ್ಯ ಚೆನ್ನಾಗಿದೆ ಎಂದು ಗಂಗೂಲಿ ಹೇಳಿದ್ದಾರೆ.

Exit mobile version