Site icon Vistara News

Gautam Gambhir: ಕೊಹ್ಲಿಯ ದಾಖಲೆಯ ಶತಕದ ಬಳಿಕ ಭಾವುಕ ಪೋಸ್ಟ್​ ಮಾಡಿದ ಗಂಭೀರ್​!

gautam gambhir

ಮುಂಬಯಿ: ವಿರಾಟ್​ ಕೊಹ್ಲಿಯ(virat kohli) ಬದ್ಧ ವೈರಿಯಾಗಿರುವ ಗೌತಮ್​ ಗಂಭೀರ್​(Gautam Gambhir) ಅವರು ಭಾವನಾತ್ಮಕ ಪತ್ರವೊಂದನ್ನು ಬರೆದು ಕೊಹ್ಲಿಯ ದಾಖಲೆಯ ಶತಕವನ್ನು(virat kohli 50th century) ಕೊಂಡಾಡಿದ್ದಾರೆ. ಕೊಹ್ಲಿಯ ಸಾಧನೆ ಕಂಡು ಅವರ ದಿವಂಗತ ತಂದೆ ಇಂದು ತುಂಬಾ ಹೆಮ್ಮೆಪಡುತ್ತಾರೆ ಎಂದಿದ್ದಾರೆ.

ಪೋಸ್ಟ್​ನಲ್ಲಿ ಏನಿದೆ?

‘50 ಶತಕಗಳನ್ನು ಬಾರಿಸುವ ಮೂಲಕ ಕ್ರಿಕೆಟ್​ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮೀರಿ ನಿಂತು ಸಾಧನೆ ಮಾಡಿದ ವಿರಾಟ್‌ಗೆ ಅಭಿನಂದನೆಗಳು!! ಅವರ ದಿವಂಗತ ತಂದೆ ಇಂದು ತುಂಬಾ ಹೆಮ್ಮೆಪಡುತ್ತಾರೆ ಮತ್ತು ಅವರ ಮಗನ ಸಾಧನೆಯನ್ನು ನೋಡಿ ತುಂಬ ಸಂತಸಪಟ್ಟಿರುತ್ತಾರೆ ಎಂದು ನನಗೆ ಖಾತ್ರಿಯಿದೆ!!’ ಎಂದು ಬರೆದುಕೊಂಡಿದ್ದಾರೆ. ಅಸಲಿಗೆ ಇದು ಗೌತಮ್​ ಗಂಭಿರ್​ ಅವರು ಮಾಡಿದ ಟ್ವೀಟ್​ ಅಲ್ಲ. ಅವರ ಹೆಸರಿನ ನಕಲಿ ಖಾತೆಯಿಂದ ಈ ಟ್ವೀಟ್​ ಮಾಡಲಾಗಿದೆ.

ಕೊಹ್ಲಿ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದ ಗಂಭೀರ್​

ಸೆಮಿಫೈನಲ್​ಗೂ ಮುನ್ನ ಗಂಭೀರ್​ ಅವರು, ಕೊಹ್ಲಿಯನ್ನು ಟಿವಿಯಲ್ಲಿ ಹೆಚ್ಚು ತೋರಿಸುವ ಕಾರಣ ಭಾರತ ತಂಡ ದುರ್ಬಲವಾಗಿದೆ. ಅವರ ಫೋಟೊ ಮತ್ತು ವಿಡಿಯೊವನ್ನೇ ತೋರಿಸುತ್ತಿದ್ದರೆ ವಿಶ್ವ ಕಪ್ ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ಟೂರ್ನಿಯುದ್ದಕ್ಕೂ ವಿರಾಟ್ ಕೊಹ್ಲಿಯ ಮೇಲೆ ಮಾತ್ರ ಗಮನ ಹರಿಸಲಾಗಿದೆ. ಸ್ಟಾರ್ ಸ್ಪೋರ್ಟ್ಸ್​ನ ಎಲ್ಲ ಕಾರ್ಯಕ್ರಮಗಳಲ್ಲಿ ಕೊಹ್ಲಿಯೇ ಬರುತ್ತಿದ್ದಾರೆ. ಕೊಹ್ಲಿ ಅಭಿಮಾನಿಗಳಿಗೆ, ಅವರನ್ನು ಎಲ್ಲೆಡೆ ನೋಡುವುದು ಉತ್ತಮವಾಗಿರಬಹುದು, ವೈಯಕ್ತಿಕ ಆಟಗಾರನಿಗಿಂತ ತಂಡದ ಮೇಲೆ ಗಮನ ಹರಿಸಬೇಕು ಎಂಬುದೇ ನನ್ನ ನಂಬಿಕೆ ಎಂದು ಗಂಭೀರ್ ಹೇಳಿದ್ದರು. ಈ ವಿಡಿಯೊ ವೈರಲ್​ ಆಗಿತ್ತು.

ಇದನ್ನೂ ಓದಿ ICC World Cup Final: ಫೈನಲ್​ ಪಂದ್ಯ ವೀಕ್ಷಿಸಬೇಡಿ; ಅಮಿತಾಭ್​ಗೆ ನೆಟ್ಟಿಗರ ಆಗ್ರಹ

2011 ರಲ್ಲಿ ಭಾರತ 50 ಓವರ್​ಗಳ ವಿಶ್ವಕಪ್ ಗೆಲ್ಲಲು ಗಂಭೀರ್ ಅವರ ಕೊಡುಗೆ ದೊಡ್ಡದಿದೆ. ಎಂಎಸ್ ಧೋನಿ ಅವರ ಅಜೇಯ 91 ರನ್​ಗಳಷ್ಟೇ ಗಂಭೀರ್ ಅವರ ಅರ್ಧ ಶತಕದ ಬಗ್ಗೆ ಮಾತನಾಡಲಾಗುವುದಿಲ್ಲ. ಗಂಭೀರ್ ಅವರ 97 ರನ್ 28 ವರ್ಷಗಳ ನಂತರ ಭಾರತ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಕೂಡ. ಈ ಬಗ್ಗೆಯೂ ಗಂಭೀರ್​ಗೆ ಬೇಸರವಿದೆ. 2013-2023ರ ಅವಧಿಯಲ್ಲಿ ಭಾರತ 9 ಐಸಿಸಿ ಟೂರ್ನಿಗಳಲ್ಲಿ ಆಡಿತ್ತು. ಆದರೆ, ಒಂದೇ ಒಂದು ಕಪ್​ ಗೆದ್ದಿಲ್ಲ. ಅದಕ್ಕೆ ಕೊಹ್ಲಿಯೇ ಕಾರಣ ಎಂದಿದ್ದಾರೆ ಗಂಭೀರ್​. ತಂಡಕ್ಕೆ ಸಾಕಷ್ಟು ಮನ್ನಣೆ ಸಿಗುತ್ತಿಲ್ಲ ಮತ್ತು ಕೊಹ್ಲಿಯ ಮೇಲೆ ಮಾತ್ರ ಗಮನ ಹರಿಸಲಾಗಿದೆ ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

ವಿಶ್ವಕಪ್​ನ ಗುಂಪು ಹಂತದಲ್ಲಿ ಭಾರತವು ಎಲ್ಲ ಪಂದ್ಯಗಳನ್ನು ಗೆಲ್ಲಲು ಕೊಹ್ಲಿಯ ಅಪಾರ ಕೊಡುಗೆ ಇದೆ ನಿಜ. ಆದರೆ ಇವರೊಬ್ಬರೆ ಇದಕ್ಕೆ ಕಾರಣ ಎನ್ನುವುದರಲ್ಲಿ ಅರ್ಥವಿಲ್ಲ. ರೋಹಿತ್ ಶರ್ಮಾ, ಮೊಹಮ್ಮದ್ ಶಮಿ, ಜಸ್​ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ ಮತ್ತು ಕೆಎಲ್ ರಾಹುಲ್ ಸರಿ ಎಲ್ಲ ಆಟಗಾರರು ಕೊಡುಗೆ ನೀಡಿದ್ದಾರೆ. ಆದಾಗ್ಯೂ, ಪ್ರಸಾರಕರು ಮತ್ತು ಅಭಿಮಾನಿಗಳು ಈ ಎಲ್ಲ ಆಟಗಾರರ ಮೇಲೆ ಗಮನ ಹರಿಸಿಲ್ಲ, ಕೇವಲ ಕೊಹ್ಲಿ ಮೇಲೆ ಗಮನ ಸೆಳೆಯುತ್ತಿದ್ದಾರೆ ಎಂದು ಹೇಳಿದ್ದರು.

Exit mobile version