ಕೋಲ್ಕೊತಾ: ಇಲ್ಲಿನ ಈಡನ್ ಗಾರ್ಡನ್ಸ್ನಲ್ಲಿ ಇತ್ತೀಚೆಗೆ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ (IPL 2024) ವೇಳೆ ಭಾರತದ ಮಾಜಿ ಕ್ರಿಕೆಟಿಗ ಮತ್ತು ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಮೆಂಟರ್ ಗೌತಮ್ ಗಂಭೀರ್ ನಾಲ್ಕನೇ ಅಂಪೈರ್ಗಳ ಜತೆ ಜಗಳವಾಡುತ್ತಿದ್ದ ವಿಡಿಯ ವೈರಲ್ ಆಗಿದೆ. ಗೌತಮ್ ಗಂಭೀರ್ ಗಲಾಟೆ ಮಾಡುವುದು ವಿಡಿಯೊ ವೈರಲ್ ಆಗಿದೆ. ಏಪ್ರಿಲ್ 21ರ ಭಾನುವಾರ ನಡೆದ ಪಂದ್ಯಾವಳಿಯ 36 ನೇ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದವು.
— Nihari Korma (@NihariVsKorma) April 22, 2024
ಎರಡನೇ ಇನ್ನಿಂಗ್ಸ್ನ 18 ನೇ ಓವರ್ ಪ್ರಾರಂಭವಾಗುವ ಮೊದಲು ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ಅಂಪೈರ್ ಜೊತೆ ವಾಗ್ವಾದ ಮಾಡಿದ್ದರು. ಈ ವೇಳೆ ಗಂಭೀರ್ ಕೂಡ ಡಗ್ಔಟ್ನಲ್ಲಿ ಜಗಳವಾಡಿದ್ದಾರೆ. ಅಯ್ಯರ್ ಅವರನ್ನು ನೋಡಿದ ಗಂಭೀರ್ ಬೇಗನೆ ಎದ್ದು ನಾಲ್ಕನೇ ಅಂಪೈರ್ ಕಡೆಗೆ ಧಾವಿಸಿ ಆಕ್ರಮಣಕಾರಿ ವಾಗ್ವಾದ ನಡೆಸಿದರು. ವಿಶೇಷವೆಂದರೆ, ಕೆಕೆಆರ್ ಮುಖ್ಯ ಕೋಚ್ ಚಂದ್ರಕಾಂತ್ ಪಂಡಿತ್ ಕೂಡ ಜಗಳದಲ್ಲಿ ತಮ್ಮ ಪಾಲೂ ಪಡೆದರು.
ಸುನಿಲ್ ನರೈನ್ ಅವರ ಬದಲಿಗೆ ರಹಮಾನುಲ್ಲಾ ಗುರ್ಬಾಜ್ ಅವರನ್ನು ಬದಲಿ ಫೀಲ್ಡರ್ ಆಗಿ ಕರೆತರಲು ಕೋಲ್ಕತಾ ನೈಟ್ ರೈಡರ್ಸ್ ಬಯಸಿದ್ದೇ ವಾದಕ್ಕೆ ಕಾರಣವಾಗಿತ್ತು. ಕೊನೆಯ ಎರಡು ಓವರ್ ಗಳಿಗೆ ಮೈದಾನಕ್ಕೆ ಹೊಸ ಫೀಲ್ಡರ್ಗಳನ್ನು ಕಳುಹಿಸುವುದು ಆ ತಂಡದ ಯೋಜನೆಯಾಗಿತ್ತು. ತಂಡದ ವಿನಂತಿಯನ್ನು ಆನ್-ಫೀಲ್ಡ್ ಅಂಪೈರ್ ತಕ್ಷಣ ನಿರಾಕರಿಸಿದರು. ಇದು ಗಂಭೀರ್ ಅಧಿಕಾರಿಯೊಂದಿಗೆ ಜಗಳ ಮಾಡಲು ಕಾರಣವಾಯಿತು. ಇದರ ಪರಿಣಾಮವಾಗಿ ಅದರ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
Virat Kohli : ಕೊಹ್ಲಿಗೆ ಮತ್ತೆ ಮೋಸ, ನೋ ಬಾಲ್ಗೆ ಔಟ್ ಕೊಟ್ಟರೇ ಮೂರನೇ ಅಂಪೈರ್?
ಕೋಲ್ಕತ್ತಾ : ಈಡನ್ ಗಾರ್ಡನ್ಸ್ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. 2024ರ ಋತುವಿನಲ್ಲಿ ಎರಡನೇ ಗೆಲುವಿಗಾಗಿ ಪ್ರವಾಸಿ ತಂಡ 223 ರನ್ಗಳ ಕಠಿಣ ಗುರಿಯನ್ನು ಬೆನ್ನಟ್ಟಿದೆ. ಈ ಪಂದ್ಯದಲ್ಲಿ, ಎರಡನೇ ಓವರ್ನಲ್ಲಿ ಆರ್ಸಿಬಿ ಚೇಸಿಂಗ್ ಸಮಯದಲ್ಲಿ ನಾಟಕೀಯ ಕ್ಷಣವೊಂದು ಅನಾವರಣಗೊಂಡಿತು.
ಇದನ್ನೂ ಓದಿ: Virat Kohli : ಮೊದಲ ಓವರ್ ಬೌಲಿಂಗ್ ಮಾಡುವಂತೆ ನಟಿಸಿ ಪ್ರೇಕ್ಷಕರನ್ನು ಖುಷಿಪಡಿಸಿದ ಕೊಹ್ಲಿ, ಇಲ್ಲಿದೆ ವಿಡಿಯೊ
ವಿರಾಟ್ ಕೊಹ್ಲಿಯನ್ನು ಔಟ್ ಮಾಡಲಾಗಿದ್ದು, ಇದು ವಿವಾದಾತ್ಮಕ ಕ್ಷಣ ಕಾರಣವಾಯಿತು. ಮೈದಾನದಿಂದ ಹೊರಡುವ ಮೊದಲು ಕೊಹ್ಲಿ ಅಂಪೈರ್ ವಿರುದ್ಧ ತಮ್ಮ ಹತಾಶೆಯನ್ನು ವ್ಯಕ್ತಪಡಿಸಿದರು. 7 ಎಸೆತಕ್ಕೆ 18 ರನ್ ಬಾರಿಸಿ ಬ್ಯಾಟಿಂಗ ಮಾಡುತ್ತಿದ್ದ ಕೊಹ್ಲಿಗೆ ನಿತೀಶ್ ರಾಣಾ ಎಸೆತ ದೊಡ್ಡ ಫುಲ್ಟಾಸ್ ಎಸೆತವನ್ನು ಹೊಡೆಲು ಮುಂದಾದರು. ಮಧ್ಯದ ಬ್ಯಾಟ್ಗೆ ತಗುಲಿ ಅದು ರಿಟರ್ನ್ ಕ್ಯಾಚ್ ಆಗಿ ಪರಿವರ್ತನೆಗೊಂಡಿತು. ಅದು ಎಸೆತ ಎತ್ತರದಲ್ಲಿದ್ದ ಕಾರಣ ಫೀಲ್ಡಿಂಗ್ ಅಂಪೈರ್ಗಳು ನೊ ಬಾಲ್ ಪರಿಶೀಲನೆಗೆ ಮುಂದಾದರು.
ಕೊಹ್ಲಿಯ ವಿಮರ್ಶೆಯ ಹೊರತಾಗಿಯೂ ಅವರು ಕ್ರೀಸ್ಗಿಂತ ಹೊರಗೆ ಬ್ಯಾಟ್ ಮಾಡುತ್ತಿರುವುದು ಕಾಣಿಸಿಕೊಂಡಿತು. ಚೆಂಡಿನ ಪಥವು ಸೊಂಟದ ಕೆಳಗೆ ಇದೆ ಎಂದು ದೃಢಪಡಿಸಿತು. ಹೀಗಾಗಿ ಅಂಪೈರ್ ಔಟ್ ಕೊಟ್ಟರು. ಆದರೆ, ಕೊಹ್ಲಿಗೆ ಅದು ಸಮಾಧಾನವಾಗಿಲ್ಲ. ಅವರು ಅಲ್ಲಿಯೇ ಅಂಪೈರ್ಗಳ ಜತೆ ಜಗಳವಾಡಿ ಹೊರಗೆ ನಡೆದರು. ಅಲ್ಲದೆ, ಡಗ್ಔಟ್ಗೆ ನಡೆದ ಬಳಿಕೂ ಕೊಹ್ಲಿ ಅಸಮಾಧಾನಗೊಂಡಿದ್ದರು.