Site icon Vistara News

WTC Final 2023 : ನಮ್ಮ ತಂಡ ಚೆನ್ನಾಗಿದೆ, ಆಟಗಾರರು ಸರಿಯಿಲ್ಲ! ಮಾಜಿ ಆಟಗಾರನ ಮಾತಿನೇಟು

Gautam Gambhir speaks about WTC Final

ನವ ದೆಹಲಿ: ಭಾರತೀಯ ಕ್ರಿಕೆಟ್ ಪ್ರೇಮಿಗಳು ತಮ್ಮಿಷ್ಟದ ಆಟಗಾರರ ಬಗ್ಗೆ ಗೀಳನ್ನು ಹೊಂದಿದ್ದಾರೆಯೇ ಹೊರತು ಇಡೀ ತಂಡದ ಬಗ್ಗೆ ಅಲ್ಲ ಎಂದು ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಆರೋಪಿಸಿದ್ದಾರೆ. ನ್ಯೂಜಿಲೆಂಡ್, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ನಂತಹ ತಂಡಗಳಲ್ಲಿನ ಆಟಗಾರರು ಯಾವಾಗಲೂ ತಮ್ಮ ದೇಶಕ್ಕೆ ಮೊದಲ ಆದ್ಯತೆ ನೀಡುತ್ತಾರೆ. ಆದರೆ ಭಾರತ ತಂಡದಲ್ಲಿ ಆಟಗಾರರು ನಾವೇ ದೊಡ್ಡವರು ಎಂದು ಅಂದುಕೊಳ್ಳುತ್ತಾರೆ. ಇಂಥ ಮನೋಭಾವವೇ ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್​ ಫೈನಲ್​ನಲ್ಲಿ (WTC IPL 2023) ಭಾರತ ತಂಡದ ಸೋಲಿಗೆ ಕಾರಣ ಎಂದು ಅವರು ಹೇಳಿದ್ದಾರೆ.

ನಮ್ಮ ದೇಶದ ಕ್ರಿಕೆಟ್​ ಪ್ರೇಮಿಗಳು ತಂಡದ ಬಗ್ಗೆ ಅಭಿಮಾನ ಹೊಂದಿಲ್ಲ. ಅವರಿಗೆ ವೈಯಕ್ತಿಕವಾಗಿ ತಮ್ಮಿಷ್ಟದ ಆಟಗಾರರನ್ನು ಬೆಂಬಲಿಸುವ ಗೀಳು. ಇದು ಆಟಗಾರರಿಗೆ ಸಲೀಸು ಎನಿಸಿದೆ. ಅವರು ತಂಡಕ್ಕಿಂತ ನಾವೇ ದೊಡ್ಡವರು ಎಂದು ಭಾವಿಸುವಂತೆ ಮಾಡಿದೆ. ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್​ನಂಥ ದೇಶಗಳು ತಂಡಕ್ಕೆ ಹಚ್ಚಿನ ಗೌರವ ಕೊಡುತ್ತದೆ. ವೈಯಕ್ತಿಕ ಆಟಗಾರರ ಬಗ್ಗೆ ಅಭಿಮಾನ ಕಡಿಮೆ ಎಂದು ಗಂಭೀರ್​ ಕ್ರೀಡಾ ಚರ್ಚೆಯೊಂದರಲ್ಲಿ ಮಾತನಾಡುತ್ತಾ ಹೇಳಿದ್ದಾರೆ.

1983ರ ವಿಶ್ವಕಪ್ ಫೈನಲ್ ನಂತರ ಕಪಿಲ್ ದೇವ್ ಟ್ರೋಫಿಯನ್ನು ಹಿಡಿದಿರುವ ಚಿತ್ರವನ್ನು ಭಾರತೀಯ ಅಭಿಮಾನಿಗಳು ಯಾವಾಗಲೂ ನೆನಪಿಸಿಕೊಳ್ಳುತ್ತಾರೆ. ಭಾರತದ ಫೈನಲ್​ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಮೊಹಿಂದರ್ ಅಮರನಾಥ್ ಅವರನ್ನು ಯಾರೂ ನೆನಪಿಸಿಕೊಳ್ಳುವುದಿಲ್ಲ ಎಂದು ಗಂಭೀರ್ ಅಭಿಪ್ರಾಯಪಟ್ಟರು.

ಇದೇ ವೇಳೆ ಗಂಭೀರ್​ ಮುಂದಿನ ದಿನಗಳಲ್ಲಿ ಭಾರತ ಟೆಸ್ಟ್ ತಂಡದಲ್ಲಿ ಬದಲಾವಣೆ ಉಂಟಾಗಲಿದೆ ಎಂದು ಹೇಳಿದರು. ಡಬ್ಲ್ಯುಟಿಸಿ ಋತುವಿನಲ್ಲಿ ನಮ್ಮ ತಂಡದ ಕೆಲವು ಆಟಗಾರರು ಸ್ಥಾನ ಕಳೆದಕೊಳ್ಳಲಿದ್ದಾರೆ ಎಂದರು. ಹೀಗಾಗಿ ರೋಹಿತ್, ಕೊಹ್ಲಿ, ರಹಾನೆ ಮತ್ತು ಜಡೇಜಾ ಅವರಂತಹ ಆಟಗಾರರು 2025ರವರೆಗೆ ಆಡುವುದು ಅನುಮಾನ ಎಂದು ಎನಿಸಿದೆ. ಗಂಭೀರ್ ಈ ಆಟಗಾರರನ್ನೇ ಬೊಟ್ಟು ಮಾಡಿ ತೋರಿಸಿದ್ದಾರೆ ಎಂದು ಹೇಳಲಾಗಿದೆ.

ನಿಸ್ಸಂಶಯವಾಗಿ, ತಂಡದ ಸಂಯೋಜನೆ ಬಗ್ಗೆ ಮಾತುಕತೆಗಳು ನಡೆಯುತ್ತವೆ. ಮುಂದಿನ ಎರಡು ವರ್ಷಗಳಲ್ಲಿ ನಾವು ಆಡಲು ಬಯಸುವ ಕ್ರಿಕೆಟ್​​ನ ಬ್ರಾಂಡ್ ಹೇಗಿರಬೇಕು ಎಂಬ ಚಿಂತನೆ ನಡೆಯುತ್ತಿದೆ. ಯಾವ ತಂಡ ಉತ್ತಮ ಎಂಬ ಚರ್ಚೆ ನಡೆಯುತ್ತಿದೆ ತಂಡಕ್ಕಾಗಿ ಉತ್ತಮವಾಗಿ ಆಡಬಲ್ಲ ಆಟಗಾರರು ಯಾರು ಎಂಬೆಲ್ಲ ಪ್ರಶ್ನೆಗಳನ್ನು ಕಂಡುಕೊಳ್ಳಬೇಕಾಗಿದೆ. ದೇಶೀಯ ಕ್ರಿಕೆಟ್​ನಲ್ಲಿ ಸಾಕಷ್ಟು ಆಟಗಾರರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಉತ್ತಮ ಸಂಯೋಜನೆ ರೂಪುಗೊಳ್ಳಬಹುದು ಎಂದು ಹೇಳಲಾಗಿದೆ.

Exit mobile version