ಮುಂಬಯಿ: ಗೌತಮ್ ಗಂಭಿರ್(Gautam Gambhir) ಅವರು ಭಾರತ ತಂಡದ ಕೋಚ್ ಆಗುತ್ತಿದ್ದಂತೆ ಅವರ ಮೇಲೆ ಭಾರೀ ನಿರೀಕ್ಷೆ ಇರಿಸಲಾಗಿತ್ತು. ಆದರೆ, ಅವರ ಕೋಚಿಂಗ್ನಲ್ಲಿ ಭಾರತ ತಂಡ ಆಡಿದ ಮೊದಲ ಏಕದಿನ ಸರಣಿಯಲ್ಲೇ ದುರ್ಬಲ ಲಂಕಾ ವಿರುದ್ಧ ಹೀನಾಯವಾಗಿ ಸೋಲು ಕಂಡಿದೆ. ಜತೆಗೆ 27 ವರ್ಷಗಳ ಬಳಿಕ ಭಾರತ ತಂಡ ಲಂಕಾ ವಿರುದ್ಧ ಸರಣಿ ಸೋಲು ಕಂಡ ಅಪಮಾನಕ್ಕೂ ಒಳಗಾಗಿದೆ. ಇದೇ ಕಾರಣದಿಂದ ನೆಟ್ಟಿಗರು ಗಂಭೀರ್ ಅವರನ್ನು ಮೀಮ್ಸ್ಗಳ ಮೂಲಕ ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ.
‘ಭಾರತ ತಂಡಕ್ಕೆ ಕಠಿಣವಾದ ವಿದೇಶಿ ಕ್ರಿಕೆಟ್ ಸರಣಿ ಯಾವದು ಎಂದು ಪ್ರಶ್ನೆ ಮಾಡಿದರೆ ಆಟಗಾರರು, ಇಂಗ್ಲೆಂಡ್ ಅಥವಾ ಆಸ್ಟ್ರೇಲಿಯಾ? ಎಂದು ಹೇಳುತ್ತಾರೆ. ಆದರೆ, ಗಂಭೀರ್ ಮಾತ್ರ ಶ್ರೀಲಂಕಾ ಪ್ರವಾಸ ಕಠಿಣ ಎನ್ನುತ್ತಾರೆ ಎಂದು ನೆಟ್ಟಿಗರೊಬ್ಬರು ಟ್ರೋಲ್ ಮಾಡಿದ್ದಾರೆ. ಮತ್ತೊಬ್ಬ ನೆಟ್ಟಿಗ ಬಿಸಿಸಿಐ ಗಂಭೀರವಾಗಿ ಚಿಂತಿಸಬೇಕಿದೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಆಟಗಾರರು ಆಡದೇ ಇದ್ದರೆ ಕೋಚ್ ಏನು ಮಾಡಲು ಸಾಧ್ಯ ಎಂದು ಗಂಭೀರ್ ಪರ ಬ್ಯಾಟ್ ಬೀಸಿದ್ದಾರೆ.
ಇದನ್ನೂ ಓದಿ Gautam Gambhir : ಗೌತಮ್ ಗಂಭೀರ್ಗೆ ವಿಶೇಷ ಸಂದೇಶ ಕಳುಹಿಸಿದ ದ್ರಾವಿಡ್; ಭಾವುಕರಾದ ನೂತನ ಕೋಚ್!
ಬುಧವಾರ ಕೊಲೊಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ತಂಡ 249 ರನ್ ಬಾರಿಸಿ ಸವಾಲೊಡ್ಡಿತು. ಈ ಸಾಧಾರಣ ಮೊತ್ತ ಬೆನ್ನತ್ತಿದ ಭಾರತ ತಂಡವು 26.1 ಓವರ್‌ಗಳಲ್ಲಿ 138 ರನ್‌ಗಳಿಸಿ ಆಲೌಟ್ ಆಗುವ ಮೂಲಕ 110 ರನ್‌ಗಳಿಂದ ಸೋಲನುಭವಿಸಿತು. ಭಾರತದ ಪರ ರೋಹಿತ್ ಶರ್ಮ (35), ವಾಷಿಂಗ್ಟನ್ ಸುಂದರ್ (30) ರನ್ ಗಳಿಸಿದರು. ಉಳಿದ ಯಾವ ಬ್ಯಾಟರ್‌ಗಳೂ ರನ್ ಕಲೆಹಾಕುವಲ್ಲಿ ಯಶಸ್ವಿಯಾಗಲಿಲ್ಲ. ಹೀಗಾಗಿ ಪಂದ್ಯ ಸೋತಿತು. ಸತತ ಮೂರು ಪಂದ್ಯಗಳಲ್ಲೂ ಶ್ರೀಲಂಕಾ ತಂಡವು ಸ್ಪಿನ್ ದಾಳಿ ನಡೆಸುವ ಮೂಲಕ ಭಾರತ ತಂಡವನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಯಿತು. ಸ್ಪಿನ್ಗೆ ಹೆಚ್ಚಾಗಿ ಉತ್ತಮ ಬ್ಯಾಟ್ ಬೀಸುತ್ತಿದ್ದ ಭಾರತ ಲಂಕಾದಲ್ಲಿ ಪರದಾಟ ನಡೆಸಿದ್ದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.
ಪಂದ್ಯದ ಸೋಲಿಗೆ ಸಹ ಆಟಗಾರರ ಬ್ಯಾಟಿಂಗ್ ವೈಫಲ್ಯವೇ ಕಾರಣ ಎಂದು ರೋಹಿತ್ ನೇರ ಆರೋಪವನ್ನು ಕೂಡ ಮಾಡಿದ್ದಾರೆ. ನಾನು ತಂಡದ ಗೆಲುವಿಗಾಗಿ ಪ್ರಯತ್ನಪಟ್ಟಿದ್ದೇನೆ. ಆದರೆ, ಉಳಿದ ಆಟಗಾರರು ಬ್ಯಾಟಿಂಗ್ ವೈಫಲ್ಯ ಕಂಡರು. ಒಬ್ಬರೇ ಆಡಿ ಪಂದ್ಯವನ್ನು ಗೆಲ್ಲಿಸುವುದು ಕಷ್ಟ ಎಂದು ಹೇಳುವ ಮೂಲಕ ಬಹಿರಂಗವಾಗಿಯೇ ಸಹ ಆಟಗಾರರ ಕಳಪೆ ಪ್ರದರ್ಶನದ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.
ಸೋಲಿನ ಬಳಿಕ ಮಾತನಾಡಿದ ನಾಯಕ ರೋಹಿತ್, “ದೇಶೀಯ ಕ್ರಿಕೆಟ್ ಆಡುವುದು ಬಹಳ ಮುಖ್ಯ. ನಾವು ಮುಖ್ಯವಾಗಿ ಟೆಸ್ಟ್ ಮತ್ತು ಏಕದಿನ ಸರಣಿಗೆ ದೇಶೀಯ ಕ್ರಿಕೆಟ್ ಪ್ರದರ್ಶನ ನೋಡಿ ಆಟಗಾರರನ್ನು ಆಯ್ಕೆ ಮಾಡಬೇಕಾಗಿದೆ. ನಮ್ಮ ದೇಶೀಯ ಕ್ರಿಕೆಟ್, ಭಾರತೀಯ ಕ್ರಿಕೇಟ್‌ನ ಬೆನ್ನೆಲುಬು” ಎಂದು ಹೇಳಿದ್ದಾರೆ.