ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ರ 43ನೇ ಪಂದ್ಯದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಮೆಂಟರ್ ಗೌತಮ್ ಗಂಭೀರ್ ನಡುವೆ ವಾಕ್ಸಮರ ನಡೆದಿತ್ತು. ಈ ವಿಷಯ ಹಾಲಿ ಆವೃತ್ತಿಯ ಐಪಿಎಲ್ನಲ್ಲಿ ಗಂಭೀರ ವಿಷಯ ಎನಿಸಿಕೊಂಡಿದೆ. ಹಲವು ದಿನಗಳ ಬಳಿಕವೂ ಅವರಿಬ್ಬರ ನಡುವಿನ ವಾಗ್ವಾದವು ಚರ್ಚೆಯ ವಿಷಯವಾಗಿ ಮುಂದುವರೆದಿದೆ. ಅಲ್ಲದೆ, ಈ ವಿಚಾರದಲ್ಲಿ ವಿರಾಟ್ ಕೊಹ್ಲಿಯ ಅಭಿಮಾನಿಗಳಿಂದ ಗೌತಮ್ ಗಂಭೀರ್ ದೂಷಣೆಗಳನ್ನು ಕೇಳುತ್ತಲೇ ಇದ್ದಾರೆ.
ಅದೇ ರೀತಿ ಇತ್ತೀಚೆಗೆ ವೈರಲ್ ಆಗಿರುವ ವಿಡಿಯೊವೊಂದರಲ್ಲಿ ಅಭಿಮಾನಿಯೊಬ್ಬರು ಗೌತಮ್ ಗಂಭೀರ್ ನಡೆದುಕೊಂಡು ಬರುತ್ತಿದ್ದಂತೆ ವಿರಾಟ್ ಕೊಹ್ಲಿಯ ಹೆಸರನ್ನು ಕೂಗುತ್ತಾರೆ. ಕೋಪಗೊಂಡ ಗಂಭಿರ್ ತಕ್ಷಣ ಅವರತ್ತ ನೋಡಿ ಗದರುವುದು ಕಂಡು ಬಂದಿದೆ. ಲಖನೌನ ಭಾರತ ರತ್ನ ಅಟಲ್ಬಿಹಾರಿ ವಾಜಪೇಯಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಈ ಘಟನೆ ನಡೆದಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ಗಂಭೀರ್ ಬರುತ್ತಿದ್ದಂತೆ ಅಭಿಮಾನಿಗಳು ಈ ಗಂಭೀರ್ ಅವರನ್ನು ಕೆಣಕಿದ್ದಾರೆ.
ಗೌತಮ್ ಗಂಭೀರ್ ಕ್ರೀಡಾಂಗಣದ ಮೆಟ್ಟಿಲುಗಳನ್ನು ಏರುತ್ತಿದ್ದಾಗ ಅಭಿಮಾನಿಯೊಬ್ಬರು ಕೊಹ್ಲಿಯ ಹೆಸರನ್ನು ಜೋರಾಗಿ ಕೂಗಿದ್ದರು. ತಕ್ಷಣ ಅಲ್ಲೇ ನಿಂತ ಗಂಭೀರ್ ಒಂದು ಕ್ಷಣ ಅಲ್ಲೇ ನಿಂತು ಮುಂದಕ್ಕೆ ಸಾಗಿದ್ದಾರೆ. ಈ ವಿಡಿಯೊಗೆ ಸಿಕ್ಕಾಪಟ್ಟೆ ಕಾಮೆಂಟ್ಗಳು ಬಂದಿವೆ.
ಮಳೆಗೆ ಕೊಚ್ಚಿ ಹೋದ ಪಂದ್ಯ
ಲಕ್ನೊ ಹಾಗೂ ಸಿಎಸ್ಕೆ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಮೊದಲ ಇನಿಂಗ್ಸ್ ಪೂರ್ತಿಗೊಳ್ಳಲು ನಾಲ್ಕು ಎಸೆಗಳು ಬಾಕಿ ಇರುವಾಗ ಸುರಿಯಲು ಆರಂಭಿಸಿದ ಮಳೆ ಸುದೀರ್ಘವಾಗಿ ಸುರಿಯಿತು. ತೇವಗೊಂಡಿರುವ ಮೈದಾನದಲ್ಲಿ ಆಟ ಸಾಧ್ಯವಿಲ್ಲ ಎಂದು ನಿರ್ಧರಿಸಿದ ಮ್ಯಾಚ್ ರೆಫಿರಿ ಪಂದ್ಯವನ್ನು ಸ್ಥಗಿತಗೊಳಿಸಿದರು. ಅಲ್ಲದೆ ಇತ್ತಂಡಗಳಿಗೂ ತಲಾ ಒಂದು ಅಂಕ ಹಂಚಿದರು.
ಮಳೆಯಿಂದ ಪಂದ್ಯ ಸ್ಥಗಿತಗೊಳ್ಳುವ ವೇಳೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ 19.2 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 125 ರನ್ ಬಾರಿಸಿತ್ತು. ಆಯುಷ್ ಬದೋನಿ ಅಜೇಯ 59 ರನ್ ಬಾರಿಸಿ ತಂಡಕ್ಕೆ ಆಧಾರವಾಗಿದ್ದರು. ಆದರೂ ಲಕ್ನೊ ತಂಡ ಮತ್ತೊಂದ ಬಾರಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ನಿಕೋಲಸ್ ಪೂರನ್ 20 ರನ್ ಬಾರಿಸುವ ಮೂಲಕ ತಂಡಕ್ಕೆ ಅಲ್ಪ ಪ್ರಮಾಣದಲ್ಲಿ ನೆರವಾದರು.
ಇಲ್ಲಿನ ಭಾರತರತ್ನ ಶ್ರೀ ಅಟಲ್ಬಿಹಾರಿ ವಾಜಪೇಯಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಚೆನ್ನೈ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅಂತೆಯೇ ಬ್ಯಾಟಿಂಗ್ ಮಾಡಿದ ಲಕ್ನೊ ತಂಡ ಮೊದಲು ಬ್ಯಾಟಿಂಗ್ ಮಾಡಿತು.
ರಾಹುಲ್ ಅನುಪಸ್ಥಿತಿಯಲ್ಲಿ ಕೃಣಾಲ್ ಪಾಂಡ್ಯ ಲಕ್ನೊ ತಂಡದ ನೇತೃ