Site icon Vistara News

Gautam Gambhir : ಪಾಕಿಸ್ತಾನ ವಿರುದ್ಧ ಸೋತರೆ… ಗಮನ ಸೆಳೆದ ಗಂಭೀರ್ ಹೇಳಿಕೆ

ind vs pak news

ಬೆಂಗಳೂರು: ಭಾರತ ಹಾಗೂ ಪಾಕಿಸ್ತಾನಗಳ ನಡುವಿನ ರಾಜಕೀಯ ಉದ್ವಿಗ್ನತೆಯಿಂದಾಗಿ ಉಭಯ ದೇಶಗಳ ನಡುವಿನ ತೀವ್ರ ಪೈಪೋಟಿಯ ಪಂದ್ಯಗಳಿಂದ ಕ್ರಿಕೆಟ್ ಜಗತ್ತು ವಂಚಿತವಾಗುತ್ತಿದೆ. 2012ರಲ್ಲಿ ತವರಿನಲ್ಲಿ ನಡೆದ ಸೀಮಿತ ಓವರ್​ಗಳ ಸರಣಿಯ ಬಳಿಕ ಭಾರತ ದ್ವಿಪಕ್ಷೀಯ ಸರಣಿಯಲ್ಲಿ ಪಾಕಿಸ್ತಾನ ವಿರುದ್ಧ ಆಡಿಲ್ಲ. ಏತನ್ಮಧ್ಯೆ ವಿಶ್ವಕಪ್ ಮತ್ತು ಏಷ್ಯಾ ಕಪ್ ನಂತಹ ಬಹುರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಮಾತ್ರ ಮುಖಾಮುಖಿಯಾಗಿವೆ.

ಅಹ್ಮದಾಬಾದ್​ನಲ್ಲಿ ನಡೆದ 2023ರ ಏಕದಿನ ವಿಶ್ವಕಪ್​ನಲ್ಲಿ ಭಾರತ ತಂಡ ಪಾಕಿಸ್ತಾನವನ್ನು 7 ವಿಕೆಟ್​ಗಳಿಂದ ಮಣಿಸಿ ಅಜೇಯ ದಾಖಲೆಯನ್ನು ಕಾಯ್ದುಕೊಂಡಿತ್ತು. ಭಾರತದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಅವರು ಪಾಕಿಸ್ತಾನಕ್ಕೆ ಹೋಲಿಸಿದರೆ ಭಾರತವು ಪ್ರಸ್ತುತ “ಉತ್ತಮ” ಎಂದು ಅಭಿಪ್ರಾಯಪಟ್ಟಿದ್ದಾರೆ ಇದರ ಪರಿಣಾಮವಾಗಿ ಪೈಪೋಟಿಯಲ್ಲಿ ಸಮತೋಲನವು ಮೊದಲಿನಂತೆ ಇಲ್ಲ ಎಂಬುದಾಗಿಯೂ ಹೇಳಿದ್ದಾರೆ.

ಪಾಕಿಸ್ತಾನವು ಭಾರತದ ಮೇಲೆ ಸಾಕಷ್ಟು ಬಾರಿ ಪ್ರಾಬಲ್ಯ ಸಾಧಿಸಿದೆ. ಪ್ರಸ್ತುತ, ನೀವು ಎರಡೂ ತಂಡಗಳ ಮಟ್ಟವನ್ನು ನೋಡಿದರೆ, ಭಾರತವು ಎಲ್ಲಾ ಮೂರು ಸ್ವರೂಪಗಳಲ್ಲಿ ಪಾಕಿಸ್ತಾನಕ್ಕಿಂತ ಉತ್ತಮವಾಗಿದೆ. ಪಾಕಿಸ್ತಾನವು ಭಾರತವನ್ನು ಸೋಲಿಸಿದರೆ ಅದು ನಿಜವಾಗಿಯೂ ಅಸಮಾಧಾನಕರ ಸಂಗತಿ. ಭಾರತವು ಪಾಕಿಸ್ತಾನವನ್ನು ಸೋಲಿಸಿದರೆ, ಅದು ಕೊಡುವ ಖುಷಿ ದೊಡ್ಡದು ಎಂಬುದಾಗಿ ಗಂಭೀರ್ ಸ್ಟಾರ್ ಸ್ಪೋರ್ಟ್ಸ್​​​ನಲ್ಲಿ ಹೇಳಿದ್ದಾರೆ.

ವಿಶ್ವಕಪ್ ವಿಜಯದ ಹೊರತಾಗಿ ಏಷ್ಯಾ ಕಪ್ 2023 ರಲ್ಲಿ ಭಾರತವು ಪಾಕಿಸ್ತಾನವನ್ನು 228 ರನ್​ಗಳಿಂದ ಸೋಲಿಸಿತು ಮತ್ತು ಕಾಂಟಿನೆಂಟಲ್ ಪಂದ್ಯಾವಳಿಯನ್ನು ಸಹ ಗೆದ್ದಿತ್ತು. 2023 ರ ವಿಶ್ವಕಪ್​ನಲ್ಲಿ ಭಾರತವು ಸತತ 10 ಪಂದ್ಯಗಳನ್ನು ಗೆದ್ದ ನಂತರ ಫೈನಲ್ ತಲುಪಿತ್ತು. ಆದರೆ ನವೆಂಬರ್ 19 ರಂದು ಅಹಮದಾಬಾದ್​ನಲ್ಲಿ ನಡೆದ ಪ್ರಶಸ್ತಿ ಹೋರಾಟದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಿತು.

ಇದನ್ನೂ ಓದಿ : Virat Kohli : ಕೊಹ್ಲಿಯನ್ನು ಹೊಗಳಿದ ಮಾಜಿ ವೇಗದ ಬೌಲರ್​

ಗಂಭೀರ್ ಅವರ ಪ್ರಕಾರ, ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವೈರತ್ವವು ಇತ್ತೀಚಿನ ದಿನಗಳಲ್ಲಿ ಅಗ್ರಗಣ್ಯವಾಗಿ ಹೊರಹೊಮ್ಮಿದೆ. ಇದು ಭಾರತ-ಪಾಕಿಸ್ತಾನ ಕ್ರಿಕೆಟ್ ಪೈಪೋಟಿಯನ್ನು ಮೀರಿಸಿದೆ ಎಂದು ಹೇಳಿದ್ದಾರೆ.

“ಕ್ರಿಕೆಟ್ ದೃಷ್ಟಿಕೋನದಿಂದ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಉತ್ತಮ ಪೈಪೋಟಿ ಇದೆ. ನಿಜವಾದ ಪೈಪೋಟಿ ಏನು ಎಂದು ನೀವು ಕ್ರಿಕೆಟ್ ಅಭಿಮಾನಿಯನ್ನು ಕೇಳಿದರೆ, ಅವರು ಭಾರತ ಮತ್ತು ಆಸ್ಟ್ರೇಲಿಯಾ ಎಂದು ಹೇಳುತ್ತಾರೆ, “ಎಂದು ಅವರು ಹೇಳಿದರು.

ಶಾರುಖ್ ಖಾನ್ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಗಂಭೀರ್​​

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಮುಂದಿನ ಆವೃತ್ತಿಗೆ ಮುಂಚಿತವಾಗಿ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಫ್ರಾಂಚೈಸಿಯ ಮಾರ್ಗದರ್ಶಕರಾಗಿ ಸೇರಿರುವುದಕ್ಕೆ ಗೌತಮ್ ಗಂಭೀರ್ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಫ್ರಾಂಚೈಸಿ ಸಹ ಮಾಲೀಕ ಮತ್ತು ಜಾಗತಿಕ ಸಿನಿಮಾ ಐಕಾನ್ ಶಾರುಖ್ ಖಾನ್ (Shahrukh Khan) ಅವರೊಂದಿಗೆ ಮತ್ತೆ ಕೆಲಸ ಮಾಡಲು ಅವಕಾಶ ಪಡೆದಿರುವ ಕುರಿತು ಕೆಲವೊಂದು ಹೇಳಿಕೆಗಳನ್ನು ನೀಡಿದ್ದಾರೆ. ಅಭಿಮಾನಿಗಳ ಜತೆ ಮಾತನಾಡುವ ವೇಳೆ ಅವರು ಈ ಹೇಳಿಕೆಗಳನ್ನು ಕೊಟ್ಟಿದ್ದಾರೆ.

2012 ಮತ್ತು 2014 ರಲ್ಲಿ ಎರಡು ಬಾರಿ ಕೆಕೆಆರ್​ಗೆ ಪ್ರಶಸ್ತಿ ತಂದುಕೊಟ್ಟಿದ್ದ ಗೌತಮ್​ ಗಂಭೀರ್​ ಆ ತಂಡ ಪ್ರಮುಖ ಆಟಗಾರ ಎಂಬ ಖ್ಯಾತಿ ಹೊಂದಿದ್ದಾರೆ. ನಿವೃತ್ತಿ ಪಡೆದ ಬಳಿಕ ಅವರು ಅವರು ಲಕ್ನೊ ತಂಡದ ಮಾರ್ಗದರ್ಶಕರಾಗಿ ಮತ್ತೆ ಐಪಿಎಲ್​​ಗೆ ಪ್ರವೇಶ ಪಡೆದುಕೊಂಡರು. ಇತ್ತೀಚಿನ ಐಪಿಎಲ್ 2024 ಮಿನಿ ಹರಾಜಿನಲ್ಲಿ ಕೆಕೆಆರ್​​ ತಂಡದ ಮೆಂಟರ್ ಆಗಿ ಆಯ್ಕೆಯಾಗಿದ್ದಾರೆ.

Exit mobile version