Site icon Vistara News

Gautam Gambhir : ಕೊಹ್ಲಿ ಜತೆ ಮೈದಾನದಲ್ಲಿ ಮಾತ್ರ ಜಗಳ; ಯೂಟರ್ನ್ ಹೊಡೆದ ಗಂಭೀರ್​

Gautam Gambhir

ನವದೆಹಲಿ: ಕೆಕೆಆರ್ ತಂಡದ ಮಾಜಿ ನಾಯಕ ಗೌತಮ್ ಗಂಭೀರ್ ಅವರು ವಿರಾಟ್ ಕೊಹ್ಲಿ ವಿರುದ್ಧ ಪಕ್ಷಪಾತ ಧೋರಣೆ ತೋರುತ್ತಾರೆ ಎಂಬುದನ್ನು ನಿರಾಕರಿಸಿದ್ದಾರೆ. ನಮ್ಮ ಜಗಳ ಏನಿದ್ದರೂ ಮೈದಾನದೊಳಗೆ ಮಾತ್ರ. ಆಚೆ ಏನೂ ಇಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಜನರ ಆರೋಪಗಳಿಗೆ ಪ್ರತ್ಯುತ್ತರ ಕೊಟ್ಟಿದ್ದಾರೆ. ಸ್ಟಾರ್ ಸ್ಪೋರ್ಟ್ಸ್​​ನ ಕಾರ್ಯಕ್ರಮವೊಂದರಲ್ಲಿ ಕೊಹ್ಲಿಯ ಬಗ್ಗೆ ಹೊಂದಿರುವ ಪೂರ್ವಾಗ್ರಹದ ಬಗ್ಗೆ ಆರಂಭಿಕ ಬ್ಯಾಟರ್​ ಗೌತಮ್ ಗಂಭೀರ್ ಅವರನ್ನು ಕೇಳಲಾಯಿತು. ಅದನ್ನು ಸಂಪೂರ್ಣವಾಗಿ ತಳ್ಳಿ ಹಾಕಿದ ಅವರು ಕೊಹ್ಲಿಯ ಎಲ್ಲ ಸಾಧನೆಗಳ ಬಗ್ಗೆ ನನಗೆ ಅರಿವಿದೆ ಎಂಬುದನ್ನು ಹೇಳುವ ಮೂಲಕ ಎಲ್ಲರ ಬಾಯಿ ಮುಚ್ಚಿಸಿದರು.

ವಿರಾಟ್ ಕೊಹ್ಲಿ ಇತ್ತೀಚೆಗೆ ಮುಕ್ತಾಯಗೊಂಡ ವಿಶ್ವ ಕಪ್​​ನಲ್ಲಿ ತಮ್ಮ 50ನೇ ಏಕದಿನ ಶತಕವನ್ನು ಬಾರಿಸಿದ್ದರು. ಅವರು ಈ ಸಾಧನೆ ಮಾಡಿರುವುದು ಯಾವ ಬೌಲರ್ ವಿರುದ್ಧ ಎಂಬ ಪ್ರಶ್ನೆಯನ್ನು ಸ್ಟುಡಿಯೊದಲ್ಲಿ ಕೇಳಲಾಯಿತು. ಈ ಬಗ್ಗೆ ಯಾರಿಗೂ ಉತ್ತರ ಗೊತ್ತಿರಲಿಲ್ಲ. ಆದರೆ, ಗಂಭೀರ್​ಗೆ ಗೊತ್ತಿತ್ತು. ನ್ಯೂಜಿಲ್ಯಾಂಡ್ ಬೌಲರ್​​ ಲಾಕಿ ಫರ್ಗ್ಯೂಸನ್​ ವಿರುದ್ಧ ಅವರು ಶತಕದ ಸಾಧನೆ ಮಾಡಿದ್ದರು. ಅದನ್ನು ಹೇಳುವ ಮೂಲಕ ಕೊಹ್ಲಿ ವಿರುದ್ಧ ತಮಗೇನೂ ಇಲ್ಲ ಎಂದು ಹೇಳಿಕೊಂಡಿದ್ದಾರೆ.

ಎರಡೆರಡು ಬಾರಿ ಜಗಳವಾಡಿದ್ದ ಕೊಹ್ಲಿ- ಗಂಭೀರ್​

ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ಮೈದಾನದಲ್ಲಿ ಎರಡು ಬಾರಿ ಜಗಳವಾಡಿದ್ದಾರೆ. ಎರಡೂ ಸಂದರ್ಭಗಳು ಐಪಿಎಲ್​ನಲ್ಲಾಗಿದ್ದವು. 2013 ರಲ್ಲಿ ಆಟಗಾರರಾಗಿ ಮತ್ತು ನಂತರ ಒಂದು ದಶಕದ ನಂತರ 2023 ರಲ್ಲಿ, ಆಯಾ ತಂಡಗಳ ಆಟಗಾರ ಮತ್ತು ತರಬೇತುದಾರರಾಗಿ ಅವರಿಬ್ಬರ ನಡುವೆ ವಾಗ್ವಾದ ನಡೆದಿತ್ತು.

ಕೊಹ್ಲಿ ತಮ್ಮ 50 ನೇ ಶತಕವನ್ನು ಗಳಿಸಿದ್ದು ಲಾಕಿ ಫರ್ಗುಸನ್ ಎಂದು ನೆನಪಿಸಿಕೊಂಡ ಗಂಭೀರ್, ಪ್ರಶ್ನೆಗೆ ಸರಿಯಾಗಿ ಉತ್ತರಿಸಿದರು. ಬಳಿಕ ಮಾತು ಮುಂದುವರಿಸಿದ ಅವರು “ಈ ಕ್ಲಿಪ್ ಅನ್ನು ಮತ್ತೆ ಮತ್ತೆ ತೋರಿಸಿ ಇದರಿಂದ ಎಲ್ಲರೂ ವಿಷಯನ್ನು ನೆನಪಿಸಿಕೊಳ್ಳುತ್ತಾರೆ. ಕೊಹ್ಲಿ ವಿರುದ್ಧ ನನಗೆ ಯಾವುದೇ ಕೆಟ್ಟ ಉದ್ದೇಶ ಇಲ್ಲ; ನಾವು ಹೊಂದಿದ್ದ ಸಮಸ್ಯೆಗಳು ಮೈದಾನದಲ್ಲಿ ಮಾತ್ರ ಇವೆ.”. ಎಂಬದು ಗಂಭೀರ್​ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್

ಐಪಿಎಲ್​​ನ ಕಳೆದ ಆವೃತ್ತಿಯಲ್ಲಿ ಇಬ್ಬರು ಭಾರತೀಯ ಶ್ರೇಷ್ಠರ ನಡುವಿನ ವಾಕ್ಸಮರ ನಡೆದಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಮತ್ತು ನವೀನ್ ಉಲ್ ಹಕ್ ನಡುವೆ ಜಗಳ ಆರಂಭವಾಗಿತ್ತು.

ಇದನ್ನೂ ಓದಿ : ಹಾರ್ದಿಕ್‌ಗೆ ಮುಂಬೈ ನಾಯಕತ್ವ ನೀಡಿದ್ದನ್ನು ಸಮರ್ಥಿಸಿಕೊಂಡ ಜಯವರ್ಧನೆ

ವಿರಾಟ್ ಕೈಕುಲುಕಲು ನವೀನ್ ನಿರಾಕರಿಸಿದ ನಂತರ ವಿಷಯಗಳು ಗಂಭೀರಗೊಂಡವು. ಶೀಘ್ರದಲ್ಲೇ, ಎರಡೂ ಕಡೆಯ ಹಲವಾರು ಆಟಗಾರರು ಭಾಗಿಯಾಗಿದ್ದರು. ಆದಾಗ್ಯೂ, ಕೊಹ್ಲಿಯ ಹಳೆಯ ಶತ್ರು ಆ ಸಮಯದಲ್ಲಿ ಎಲ್ಎಸ್​ಜಿ ತರಬೇತುದಾರರಾಗಿದ್ದ ಗಂಭೀರ್ ತಮ್ಮ ಆಟಗಾರರು ಕೊಹ್ಲಿಯೊಂದಿಗೆ ಸಂವಹನ ನಡೆಸುವುದನ್ನು ತಡೆಯಲು ಮುಂದಾದರು. ಆಗ ಇಬ್ಬರ ನಡುವೆ ಜಗಳ ಪ್ರಾರಂಭವಾಯಿತು.

Exit mobile version