ಬೆಂಗಳೂರು: ಭಾರತ ತಂಡದ ಮಾಜಿ ಆರಂಭಿಕ ಬ್ಯಾಟರ್ ಒಂದಿಲ್ಲೊಂದು ವಿವಾದ ಸೃಷ್ಟಿಸುತ್ತಲೇ ಇರುತ್ತಾರೆ. ತಾವು ನೇರ ಮಾತಿನ ವ್ಯಕ್ತಿ ಎಂದು ಅವರು ಹೇಳಿಕೊಂಡಿರುವ ಹೊರತಾಗಿಯೂ ಅವರ ವಿಮರ್ಶೆಗಳು ಕೆಲವರ ಮೇಲಷ್ಟೇ ಸೀಮಿತವಾಗಿರುತ್ತದೆ. ಅವರ ಪ್ರಮುಖ ಗುರಿ ವಿರಾಟ್ ಕೊಹ್ಲಿಯಾದರೆ ಮತ್ತೊಬ್ಬರು ಮಾಜಿ ನಾಯಕ ಎಂ ಎಸ್ ಧೋನಿ (MS Dhoni). ಇತ್ತೀಚೆಗೆ ಗಂಭೀರ್ ಮಾಜಿ ವೇಗದ ಬೌಲರ್ ಶ್ರೀಶಾಂತ್ ವಿರುದ್ಧ ಮೈದಾನದಲ್ಲೇ ಕಿಡಿಕಾರಿದ ಪ್ರಕರಣವೂ ನಡೆದಿದೆ. ಇದೀಗ ಮತ್ತೊಂದು ಬಾರಿ ಅವರು ಧೋನಿಯ ಸಾಧನೆಯ ವಿರುದ್ಧ ಮಾತನಾಡಿದ್ದು ಅವೆಲ್ಲರೂ ಪಿಆರ್ ತಂತ್ರ ಎಂಬುದಾಗಿ ಹೇಳಿಕೊಂಡಿದ್ದಾರೆ.
ಯುವರಾಜ್ ಸಿಂಗ್ ಅವರ ಮಾರ್ಕೆಟಿಂಗ್ ಪರಾಕ್ರಮದ ಬಗ್ಗೆ ಚರ್ಚಿಸುವಾಗ ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ಮಾಜಿ ನಾಯಕ ಎಂಎಸ್ ಧೋನಿ ವಿರುದ್ಧ ಸೂಕ್ಷ್ಮವಾಗಿ ವ್ಯಂಗ್ಯವಾಡಿ. ಕ್ರಿಕೆಟ್ ಸಮುದಾಯವನ್ನು ಕೆರಳಿಸಿದ್ದಾರೆ. ಪಾಡ್ಕಾಸ್ಟ್ನ ಅವರ ಮಾತುಗಳು ಅಭಿಮಾನಿಗಳು ಮತ್ತು ತಜ್ಞರಲ್ಲಿ ಚರ್ಚೆಗಳನ್ನು ಹುಟ್ಟುಹಾಕಿದೆ.
2011 ರ ವಿಶ್ವಕಪ್ನಲ್ಲಿ ಮ್ಯಾನ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಪಡೆದ ಯುವರಾಜ್ ಸಿಂಗ್ ಅವರಿಗೆ ಉತ್ತಮ ಪಿಆರ್ ಏಜೆನ್ಸಿ ಇರಲಿಲ್ಲ. ಹೀಗಾಗಿ ಅವರ ಸಾಧನೆ ನಗಣ್ಯವಾಯಿತು ಗೌತಮ್ ಗಂಭೀರ್ ಗಮನಸೆಳೆದರು. ಮೊದಲ ನೋಟದಲ್ಲಿ ಸರಿ ಎಂದು ತೋರುವ ಈ ಹೇಳಿಕೆಯು ಕೆಲವೊಂದು ಸೂಕ್ಷ್ಮತೆಗಳನ್ನು ಹೊಂದಿರುವುದಂತೂ ನಿಜ. ಎಎನ್ಐ ಜೊತೆಗಿನ ಸಂಭಾಷಣೆಯಲ್ಲಿ ಗಂಭೀರ್ ಅವರನ್ನು 2011 ರ ವಿಶ್ವಕಪ್ ಫೈನಲ್ನಲ್ಲಿ ಗಂಭೀರ್ ನಿರ್ಣಾಯಕ ಇನ್ನಿಂಗ್ಸ್ 97 ರನ್ಗಳ ಬಗ್ಗೆ ಕೇಳಲಾಯಿತು. ಈ ವೇಳೆ ಅವರು ಅಲ್ಲಿ ಎಂಎಸ್ ಧೋನಿ 91* (ಔಟಾಗದೆ) ರನ್ ಬಾರಿಸಿದ ಕಾರಣ ತಮ್ಮ ಇನಿಂಗ್ಸ್ ಕಳೆಗುಂದಿತು ಎಂಬರ್ಥದಲ್ಲ ಮಾತನಾಡಿದ್ದಾರೆ.
“ಯುವರಾಜ್ ಸಿಂಗ್ ಅವರಿಗೆ ಸಿಗಬೇಕಾದ ಮನ್ನಣೆ ಸಿಗಲಿಲ್ಲವೇ” ಎಂದು ಪಾಡ್ಕಾಸ್ಟ್ ಮಾಡುತ್ತಿದ್ದ ಸ್ಮಿತಾ ಪ್ರಕಾಶ್ ಕೇಳಿದರು. ಇದಕ್ಕೆ ಉತ್ತರಿಸಿದ ಗಂಭೀರ್, “ನಿಮಗೆ ತಿಳಿದಿದೆ, ನೀವೇ ಹೇಳಿ. 2011 ರ ವಿಶ್ವಕಪ್ನ ಮ್ಯಾನ್ ಆಫ್ ದಿ ಸೀರಿಸ್ ಗೆದ್ದ ಆಟಗಾರ ಯುವರಾಜ್. ಅವರ ಬಗ್ಗೆ ಎಷ್ಟು ಜನರು ಮಾತನಾಡುತ್ತಾರೆ? ಬಹುಶಃ ಅವರು ಉತ್ತಮ ಪಿಆರ್ ಏಜೆನ್ಸಿಯನ್ನು ಹೊಂದಿಲ್ಲದ ಕಾರಣ ಅವರ ಸಾಧನೆ ಮಂಕಾಯಿತು ಎಂದು ಹೇಳಿದ್ದಾರೆ.
“ಪ್ರಸಾರಕರು ಎಂದಿಗೂ ಪಿಆರ್ ಯಂತ್ರವಾಗಲು ಸಾಧ್ಯವಿಲ್ಲ. ಆ ಡ್ರೆಸ್ಸಿಂಗ್ ರೂಮ್ನಲ್ಲಿ ಕುಳಿತಿರುವ ಪ್ರತಿಯೊಬ್ಬರಿಗೂ ಪ್ರಸಾರಕರು ನ್ಯಾಯಯುತವಾಗಿರಬೇಕು, “ಎಂದು ಅವರು ಹೇಳಿದರು. ವಿಶೇಷವೆಂದರೆ, ಎಂಎಸ್ ಧೋನಿ 2011 ರ ವಿಶ್ವಕಪ್ನಲ್ಲಿ ಭಾರತವನ್ನು ಗೆಲುವಿನತ್ತ ಮುನ್ನಡೆಸಿದ ನಾಯಕ ಮಾತ್ರವಲ್ಲ, ಫೈನಲ್ನಲ್ಲಿ ಪಂದ್ಯಶ್ರೇಷ್ಠರೂ ಆಗಿದ್ದರು.
ಎಂಎಸ್ ಧೋನಿ ವಿರುದ್ಧ ಗೌತಮ್ ಗಂಭೀರ್?
ಗೌತಮ್ ಗಂಭೀರ್ ಮತ್ತು ಎಂಎಸ್ ಧೋನಿ ನಡುವಿನ ಮುನಿಸುಗಳು ಇವೆ ಎಂಬುದು ಊಹಾಪೋಹಗಳಿಗೆ ಕಾರಣವಾಗಿದೆ. ಅವರು ತಮ್ಮ ಆಟದ ದಿನಗಳಲ್ಲಿ ಮೈದಾನದಲ್ಲಿ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರು ಎನ್ನಲಾಗಿದೆ. ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಎಂದಿಗೂ ಹಿಂಜರಿಯದ ಗಂಭೀರ್, ಯುವರಾಜ್ ಸಿಂಗ್ ಅವರ ಕೊಡುಗೆಗಳನ್ನು ಗುರುತಿಸುವ ವೇಳೆ ಧೋನಿಯನ್ನು ತೆಗಳಿದ್ದಾರೆ.
ಇದನ್ನೂ ಓದಿ : U19 Asia Cup: ಕುಲಕರ್ಣಿ ಆಲ್ರೌಂಡರ್ ಪ್ರದರ್ಶನ; ಭಾರತಕ್ಕೆ 7 ವಿಕೆಟ್ ಜಯಭೇರಿ
2011 ರ ವಿಶ್ವ ಕಪ್ನಲ್ಲಿ ಯುವರಾಜ್ ಸಿಂಗ್ ಅವರ ಅಸಾಧಾರಣ ಪ್ರದರ್ಶನವು ಕ್ರಿಕೆಟ್ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿದೆ. ಅವರ ಗಮನಾರ್ಹ ಆಲ್ರೌಂಡ್ ಕೌಶಲ್ಯಗಳು ಭಾರತದ ವಿಜಯದಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತು. ಆದಾಗ್ಯೂ, ಗೌತಮ್ ಗಂಭೀರ್ ಹೇಳಿದಂತೆ ಅವರಿಗೆ ಅದರ ಸಂಪೂರ್ಣ ಗೌರವ ಸಿಗಲಿಲ್ಲ. ಅದಕ್ಕೆ ಕಾರಣಗಳು ಕ್ರಿಕೆಟ್ ಅಭಿಮಾನಿಗಳು ಎಂಬುದರಲ್ಲಿ ಎರಡು ಮಾತಿಲ್ಲ.
ಗಂಭೀರ್ ಅವರ ಹೇಳಿಕೆಯನ್ನು ವಿವಿಧ ರೀತಿಯಲ್ಲಿ ವ್ಯಾಖ್ಯಾನಿಸಬಹುದಾದರೂ, ಆಟಗಾರರು ಮೈದಾನದಿಂದ ನಿವೃತ್ತರಾದ ನಂತರವೂ ಮುಂದುವರಿಯಬಹುದಾದ ಮುನಿಸುಗಳನ್ನು ಇದು ವಿವರಿಸುತ್ತದೆ. ಕ್ರಿಕೆಟ್ ಜಗತ್ತು ಗಂಭೀರ್ ಅವರ ಮಾತುಗಳನ್ನು ಗಂಭೀರವಾಗಿಯೇ ತೆಗೆದುಕೊಳ್ಳುತ್ತಿದೆ. ಯಾಕೆಂದರೆ ಕೆಲವು ಸಂಗತಿಗಳು ಹಾಗೆಯೇ ಮರೆಮಾಚಿ ಹೋಗುತ್ತವೆ. ಆದರೆ, ಗಂಭೀರ್ ಅವರ ಮಾತುಗಳು ಸಾಧನೆಗಳು ಹಾಗೂ ತಂಡದ ಒಳ ನೋಟವನ್ನು ವಿವರಿಸುತ್ತದೆ.