ಬೆಂಗಳೂರು: ಶ್ರೀಶಾಂತ್ ಮತ್ತು ಗೌತಮ್ ಗಂಭೀರ್ ನಡುವಿನ ಹೋರಾಟ ಮುಂದುವರಿದಿದೆ. ಗೌತಮ್ ಗಂಭೀರ್ ಅವರು ನಗುವಿನ ಫೋಟೋ ಹಾಕಿಕೊಂಡು ಮಾಡಿದ್ದ ರಹಸ್ಯ ಪೋಸ್ಟ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಶ್ರೀಶಾಂತ್ ತಿರುಗೇಟು ಕೊಟ್ಟಿದ್ದಾರೆ. ಭಾರತದ ಮಾಜಿ ಬ್ಯಾಟರ್ ‘ಕ್ರೀಡಾಸ್ಫೂರ್ತಿಯ ಗಡಿಗಳನ್ನು ಮೀರಿದ್ದಾರೆ’ ಎಂದು ಶ್ರೀಶಾಂತ್ ಹೇಳುವ ಮೂಲಕ ಆರೋಪ ಮಾಡಿದ್ದಾರೆ.
ಗುಜರಾತ್ ಜೈಂಟ್ಸ್ ಮತ್ತು ಇಂಡಿಯಾ ಕ್ಯಾಪಿಟಲ್ಸ್ ನಡುವಿನ ಲೆಜೆಂಡ್ಸ್ ಲೀಗ್ ಕ್ರಿಕೆಟ್ (ಎಲ್ಎಲ್ ಸಿ) ಪಂದ್ಯದ ವೇಳೆ ಇವರಿಬ್ಬರು ಮಾತಿನ ಚಕಮಕಿಯಲ್ಲಿ ನಡೆಸಿದ್ದರು. ಲೈವ್ ಟಿವಿಯಲ್ಲಿ ‘ಎಫ್ *** ಆಫ್ ಫಿಕ್ಸರ್’ ಎಂಬ ಅವಹೇಳನಕಾರಿ ಪದವನ್ನು ಬಳಸಿ ಗಂಭೀರ್ ತಮ್ಮನ್ನು ನಿಂದಿಸಿದ್ದಾರೆ ಎಂದು ಶ್ರೀಶಾಂತ್ ಆರೋಪಿಸಿದ್ದರು.
“ನೀವು ಕ್ರೀಡಾಸ್ಫೂರ್ತಿ ಹಾಗು ಸಹೋದರತ್ವದ ಗಡಿಗಳನ್ನು ಮೀರಿದ್ದೀರಿ. ಎಲ್ಲಕ್ಕಿಂತ ಹೆಚ್ಚಾಗಿ ನೀವು ಜನರನ್ನು ಪ್ರತಿನಿಧಿಸುತ್ತೀರಿ. ಆದರೂ, ನೀವು ಪ್ರತಿಯೊಬ್ಬ ಕ್ರಿಕೆಟಿಗನೊಂದಿಗೆ ಸಂಘರ್ಷದಲ್ಲಿ ತೊಡಗುವುದನ್ನು ಮುಂದುವರಿಸುತ್ತಿದ್ದೀರಿ. ನಿಮಗೆ ಏನಾಗಿದೆ? ನಗುವ ಚಿತ್ರ ಹಾಕಿದ್ದೀರಿ| ನೀವು ನನ್ನನ್ನು ಫಿಕ್ಸರ್ ಎಂದು ಹಣೆಪಟ್ಟಿ ಕಟ್ಟಿದ್ದೀರಾ? ಗಂಭೀರವಾಗಿ? ನೀವು ಸರ್ವೋಚ್ಚ ನ್ಯಾಯಾಲಯಕ್ಕಿಂತ ಮೇಲಿದ್ದೀರಾ? ಈ ರೀತಿ ಮಾತನಾಡಲು ಮತ್ತು ನಿಮಗೆ ಬೇಕಾದುದನ್ನು ಹೇಳಲು ನಿಮಗೆ ಅಧಿಕಾರವಿಲ್ಲ. ನೀವು ಅಂಪೈರ್ ಗಳನ್ನು ಮೌಖಿಕವಾಗಿ ನಿಂದಿಸಿದ್ದೀರಿ, ಆದರೂ ನೀವು ನಗುವ ಬಗ್ಗೆ ಮಾತನಾಡುತ್ತೀರಾ?
Looks like lafda between Gautam Gambhir and S Sreeshant is not gonna stop soon.
— Sujeet Suman (@sujeetsuman1991) December 7, 2023
S Sreeshant insta story #Fixer #T20WorldCup #GautamGambhir #ShanMasood #PSL9 #TriptiDimri #RohitSharma𓃵 #BBL13 #LegendsLeagueCricket #Sreesanth #Pakistan #CricketTwitter #fyp pic.twitter.com/zrZLokxMx3
“ನೀವು ಕ್ರೀಡಾಸ್ಫೂರ್ತಿ ಹಾಗು ಸಹೋದರತ್ವದ ಗಡಿಗಳನ್ನು ಮೀರಿದ್ದೀರಿ. ಎಲ್ಲಕ್ಕಿಂತ ಹೆಚ್ಚಾಗಿ ನೀವು ಜನರನ್ನು ಪ್ರತಿನಿಧಿಸುತ್ತೀರಿ. ಆದರೂ, ನೀವು ಪ್ರತಿಯೊಬ್ಬ ಕ್ರಿಕೆಟಿಗನೊಂದಿಗೆ ಸಂಘರ್ಷದಲ್ಲಿ ತೊಡಗುವುದನ್ನು ಮುಂದುವರಿಸುತ್ತಿದ್ದೀರಿ. ನಿಮಗೆ ಏನಾಗಿದೆ? ನಗುವ ಚಿತ್ರ ಹಾಕಿದ್ದೀರಿ| ನೀವು ನನ್ನನ್ನು ಫಿಕ್ಸರ್ ಎಂದು ಹಣೆಪಟ್ಟಿ ಕಟ್ಟಿದ್ದೀರಾ? ಗಂಭೀರವಾಗಿ? ನೀವು ಸರ್ವೋಚ್ಚ ನ್ಯಾಯಾಲಯಕ್ಕಿಂತ ಮೇಲಿದ್ದೀರಾ? ಈ ರೀತಿ ಮಾತನಾಡಲು ಮತ್ತು ನಿಮಗೆ ಬೇಕಾದುದನ್ನು ಹೇಳಲು ನಿಮಗೆ ಅಧಿಕಾರವಿಲ್ಲ. ನೀವು ಅಂಪೈರ್ ಗಳನ್ನು ಮೌಖಿಕವಾಗಿ ನಿಂದಿಸಿದ್ದೀರಿ. ಆದರೂ ನೀವು ನಗುವಿನ ಮುಖವಾಡ ತೊಟ್ಟಿದ್ದೀರಿ ಎಂದು ಶ್ರೀಶಾಂತ್ ಸೋಶಿಯಲ್ ಮೀಡಿಯಾಗಳಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ : Jasprit Bumrah : ಬುಮ್ರಾ ಚಿತ್ರ ಹಾಕಿ ಎಲ್ಲರಿಗೂ ಸಂದೇಶ ರವಾನಿಸಿದ ಮುಂಬಯಿ ಇಂಡಿಯನ್ಸ್
ನೀವು ಅಹಂಕಾರಿ ಮತ್ತು ಸಂಪೂರ್ಣವಾಗಿ ಗೌರವ ಕಳೆದುಕೊಂಡ ವ್ಯಕ್ತಿಯಾಗಿದ್ದೀರಿ. ನಿಮ್ಮನ್ನು ಬೆಂಬಲಿಸಿದವರಿಂದಲೂ ಯಾವುದೇ ಗೌರವ ಪಡೆಯಲು ಅನರ್ಹರಾಗಿದ್ದೀರಿ. ನಿನ್ನೆಯವರೆಗೆ, ನಾನು ಯಾವಾಗಲೂ ನಿಮ್ಮ ಬಗ್ಗೆ ಮತ್ತು ನಿಮ್ಮ ಕುಟುಂಬದ ಬಗ್ಗೆ ಗೌರವವನ್ನು ಹೊಂದಿದ್ದೆ. ಆದಾಗ್ಯೂ, ನೀವು “ಫಿಕ್ಸರ್” ಎಂಬ ಅವಹೇಳನಕಾರಿ ಪದವನ್ನು ಒಮ್ಮೆ ಅಲ್ಲ, ಏಳು ಅಥವಾ ಎಂಟು ಬಾರಿ ಬಳಸಿದ್ದೀರಿ. ಅಂಪೈರ್ಗಳನು ಮತ್ತು ನನ್ನ ಕಡೆಗೆ ಎಫ್-ಪದವನ್ನು ಪದೇಪದೇ ಬಳಸಿದ್ದೀರಿ. ನನ್ನನ್ನು ಪ್ರಚೋದಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದೀರಿ. ನಾನು ಸಹಿಸಿಕೊಂಡದ್ದೇನೆ. ನಿಮ್ಮನ್ನು ಎಂದಿಗೂ ಯಾರೂ ಕ್ಷಮಿಸುವುದಿಲ್ಲ. ಆಳದಲ್ಲಿ, ನೀವು ಹೇಳಿದ್ದು ಮತ್ತು ಮಾಡಿದ್ದು ತಪ್ಪು ಎಂದು ನಿಮಗೆ ತಿಳಿದಿದೆ. ದೇವರು ಸಹ ನಿಮ್ಮನ್ನು ಕ್ಷಮಿಸುವುದಿಲ್ಲ ಎಂದು ನನಗೆ ಖಾತ್ರಿಯಿದೆ ಎಂದ ಶ್ರೀಶಾಂತ್ ಬರೆದುಕೊಂಡಿದ್ದಾರೆ.
ಜಗಳಕ್ಕೆ ಕಾರಣವೇನು?
ಆರಂಭದಲ್ಲಿ ಇದು ಶ್ರೀಶಾಂತ್ ಮಾಡಿದ ಕಿತಾಪತಿ ಎನ್ನಲಾಗಿತ್ತು. ಇದೇ ಕಾರಣಕ್ಕೆ ಗಂಭೀರ್ ಅವರು ಕೆರಳಿದ್ದು ಎಂದು ಹೇಳಲಾಗಿತ್ತು. ಆದರೆ ಇದೀಗ ನೈಜ ವಿಚಾರವನ್ನು ಶ್ರೀಶಾಂತ್ ಬಹಿರಂಗಪಡಿಸಿದ್ದಾರೆ. ಲೈವ್ ವಿಡಿಯೊ ಮೂಲಕ ಮಾತನಾಡಿದ ಶ್ರೀಶಾಂತ್, ನಾನು ಗಂಭೀರ್ ಅವರಿಗೆ ಒಂದು ಸಣ್ಣ ಕಟ್ಟ ಪದ ಬಳಸಿಯೂ ಬೈದಿಲ್ಲ. ಈ ವಿಚಾರ ಫೀಲ್ಡ್ ಅಂಪೈರ್ಗೂ ತಿಳಿದಿದೆ. ಅವರೇ ನನ್ನನ್ನು ನೋಡಿ ನೀನೊಬ್ಬ ಫಿಕ್ಸರ್ ಎಂದು ಪದೇಪದೆ ಹೇಳುವ ಮೂಲಕ ನನ್ನನ್ನು ಹೀಯಾಳಿಸಿದರು. ಆಗ ನಾನು ಅವರ ಬಳಿ ಪ್ರಶ್ನೆ ಮಾಡಿ ಏನು ಇನ್ನೊಮ್ಮೆ ಈ ಮಾತನ್ನು ಹೇಳಿ ಎಂದು ಹೇಳುತ್ತ ಅವರ ಬಳಿಗೆ ಬಂದೆ ಈ ವೇಳೆ ಸಹ ಆಟಗಾರರ ತಡೆದರು. ನಾನು ನಿಜವಾಗಿಯೂ ಯಾವುದೇ ಕಿರಿಕ್ ಮಾಡಿಲ್ಲ” ಎಂದು ಶ್ರೀಶಾಂತ್ ಈ ವಿಡಿಯೊದಲ್ಲಿ ಹೇಳಿದ್ದಾರೆ.
“ಗಂಭೀರ್ ನನ್ನನ್ನು ಫೀಕ್ಸರ್ ಎಂದು ಕರೆಯುವ ಜತೆಗೆ ಇನ್ನೂ ಕೆಲ ಅವಾಚ್ಯ ಪದಗಳಿಂದ ನಿಂದಿಸಿದರು. ನಾನ್ನ ಮೇಲಿದ್ದ ಫಿಕ್ಸಿಂಗ್ ಆರೋಪ ಸುಳ್ಳು ಎನ್ನುವುದು ಈಗಾಗಕಲೇ ಸಾಭೀತಾಗಿದೆ. ನಾನು ನನ್ನ ಕುಟುಂಬದ ಜತೆ ಮಾನ್ಯವಾಗಿ ಜೀವಿಸುವ ವ್ಯಕ್ತಿಯಾಗಿದ್ದೇನೆ” ಎಂದು ಶ್ರೀಶಾಂತ್ ಹೇಳಿದ್ದಾರೆ.
ಇದನ್ನೂ ಓದಿ Gautam Gambhir: ʼಯಾಕೋ ಗುರಾಯಿಸ್ತೀಯಾ?ʼ ಕ್ರೀಡಾಂಗಣದಲ್ಲಿ ಶ್ರೀಶಾಂತ್- ಗಂಭೀರ್ ಕಿರಿಕ್
ಭಾರತ ತಂಡದ ಮಾಜಿ ವೇಗಿ ಶ್ರೀಶಾಂತ್, ಐಪಿಎಲ್ ಪಂದ್ಯದ ಸ್ಪಾಟ್ ಫಿಕ್ಸಿಂಗ್ ಮಾಡಿದ ಆರೋಪಕ್ಕೆ ಗುರಿಯಾದ ಬಳಿಕ ಅಂತಾರಾಷ್ಟ್ರೀಯ, ರಾಷ್ಟ್ರೀಯ ಕ್ರಿಕೆಟ್‌ನಿಂದ ನಿಷೇಧಕ್ಕೊಳಗಾಗಿದ್ದರು. ಕೆಲವು ವರ್ಷಗಳ ಹಿಂದೆ ನ್ಯಾಯಾಲಯ ಈ ನಿಷೇಧವನ್ನು ತೆಗೆದುಹಾಕಿದ್ದು, ಶ್ರೀಶಾಂತ್ ನಂತರ ವಿವಿಧ ಲೀಗ್‌ಗಳನ್ನು ಆಡುತ್ತಿದ್ದಾರೆ. ಪಂದ್ಯದ ವೇಳೆ ಗಂಭೀರ್ ತನಗೆ ನಿಖರವಾಗಿ ಏನು ಹೇಳಿದರು ಎಂಬುದನ್ನು ಬಹಿರಂಗಪಡಿಸುವುದಾಗಿ ಶ್ರೀಶಾಂತ್ ಹೇಳಿದ್ದು, ಈ ಮಾತುಗಳು ತನಗೆ ಮತ್ತು ತನ್ನ ಕುಟುಂಬಕ್ಕೆ ನೋವುಂಟು ಮಾಡಿದೆ ಎಂದಿದ್ದಾರೆ.