ಕೇಪ್ಟೌನ್: ಇಲ್ಲಿ ನಡೆಯುತ್ತಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಭಾರತದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ (Mohammed Siraj) ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ಲೈನ್ಅಪ್ಗೆ ಹಾನಿ ಮಾಡಿದ್ದಾರೆ. ಜನವರಿ 3ರ ಬುಧವಾರ ನಡೆದ ಪಂದ್ಯದಲ್ಲಿ ಸಿರಾಜ್ 9 ಓವರ್ಗಳಲ್ಲಿ 15 ರನ್ಗೆ 6 ವಿಕೆಟ್ ಉರುಳಿಸಿದ್ದಾರೆ. ಈಮ ಮೂಲಕ ದಕ್ಷಿಣ ಆಫ್ರಿಕಾವನ್ನು 24ನೇ ಓವರ್ನಲ್ಲಿ 55 ರನ್ಗಳಿಗೆ ಕಟ್ಟಿ ಹಾಕಿತ್ತು ಭಾರತ ತಂಡ.
ಡೇವಿಡ್ ಬೆಡಿಂಗ್ಹ್ಯಾಮ್ (12) ಮತ್ತು ಕೈಲ್ ವೆರೆನ್ನೆ (15) ಹೊರತುಪಡಿಸಿ, ದಕ್ಷಿಣ ಆಫ್ರಿಕಾದ ಯಾವುದೇ ಬ್ಯಾಟರ್ಗಳು ಎರಡಂಕಿ ಸ್ಕೋರ್ ಮುಟ್ಟಲು ಸಾಧ್ಯವಾಗಲಿಲ್ಲ. ಸೆಂಚೂರಿಯನ್ನಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ ಆಘಾತಕಾರಿ ಇನ್ನಿಂಗ್ಸ್ ಮತ್ತು 32 ರನ್ಗಳ ಸೋಲಿನ ನಂತರ ಭಾರತೀಯ ಕ್ರಿಕೆಟ್ ತಂಡಕ್ಕೆ ಇದು ಅಗತ್ಯ ಚೈತನ್ಯ ನೀಡಿತು.
ಜಸ್ಪ್ರೀತ್ ಬುಮ್ರಾ ಮತ್ತು ಮುಕೇಶ್ ಕುಮಾರ್ ಎರಡನೇ ಟೆಸ್ಟ್ನಲ್ಲಿ ಮೊದಲ ದಿನದಂದು ತಲಾ ಎರಡು ವಿಕೆಟ್ ಪಡೆದರು. ಈ ಎಲ್ಲ ಸಾಧನೆಗಳಿಗೆ ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ವಿಶೇಷ ವಿವರಣೆ ನೀಡಿದ್ದಾರೆ. ಭಾರತದ ವೇಗದ ಪರಾಕ್ರಮವನ್ನು ದಂತಕಥೆ ಕಪಿಲ್ ದೇವ್ ಅವರಿಂದಲೇ ಸೃಷ್ಟಿಯಾಗಿರುವುದು ಎಂದು ಅವರು ಹೇಳಿದ್ದಾರೆ.
ಭಾರತ ಬಲಿಷ್ಠ ಬೌಲಿಂಗ್ ಶಕ್ತಿ
ಕೇಪ್ ಟೌನ್ ನಲ್ಲಿ ಸಿರಾಜ್ ಅವರ ಅಸಾಧಾರಣ ಪ್ರದರ್ಶನವು ಭಾರತವನ್ನು ಅಸಾಧಾರಣ ವೇಗದ ಬೌಲಿಂಗ್ ಶಕ್ತಿಯನ್ನಾಗಿ ಎತ್ತಿ ತೋರಿಸಿದೆ. ಈ ಪ್ರಬಲ ಪ್ರದರ್ಶನವು ವಿಶ್ವದ ಅತ್ಯುತ್ತಮ ವೇಗದ ಬೌಲಿಂಗ್ ತಂಡಗಳಲ್ಲಿ ಒಂದಾಗಿ ಭಾರತದ ಪರಾಕ್ರಮವನ್ನು ಪುನರುಚ್ಚರಿಸಿತು.
ಸ್ಟಾರ್ ಸ್ಪೋರ್ಟ್ಸ್ನಲ್ಲಿ ಮಾತನಾಡಿದ ಸುನಿಲ್ ಗವಾಸ್ಕರ್, “ಕಪಿಲ್ ದೇವ್ ಅವರಿಗೆ ಧನ್ಯವಾದಗಳು. ಭಾರತದಲ್ಲಿ ನೀವು ಸ್ಪಿನ್ ಬೌಲರ್ ಆಗಬೇಕಾಗಿಲ್ಲ ಎಂದು ಅವರು ಮೊದಲು ತೋರಿಸಿಕೊಟ್ಟವರು. ಭಾರತೀಯ ಪಿಚ್ಗಳಲ್ಲಿಯೂ ವೇಗಿಗಳು ವಿಕೆಟ್ ಪಡೆಯಬಹುದು. ಸಹಜವಾಗಿ, ನೀವು ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ನಂತ ದೇಶಗಳಿಗೆ ಹೋದಾಗ, ನೀವು ಹೊಸ ಬಾಲ್ ಎಸೆಯಲು ಕಲಿತರೆ ಹೆಚ್ಚಿನ ನೆರವಾಗಲಿದೆ. ಅಂದಿನಿಂದ ಭಾರತವು ವೇಗದ ಬೌಲರ್ಗಳಿಗೆ ನೆರವಾಗುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : Virat kohli : ಶ್ರೇಯಾಂಕದಲ್ಲಿ ಭರ್ಜರಿ ಪ್ರಗತಿ ಸಾಧಿಸಿದ ವಿರಾಟ್ ಕೊಹ್ಲಿ
“ಆದರೆ ವಿಶೇಷವಾಗಿ ಕಳೆದ 10-12 ವರ್ಷಗಳಲ್ಲಿ, ಐಪಿಎಲ್ ಟೂರ್ನಿಗಳಿಗೆ ಧನ್ಯವಾದಗಳನ್ನು ಹೇಳಬೇಕು. ಸಾಕಷ್ಟು ವೇಗದ ಬೌಲರ್ಗಳು ಈ ಮೂಲಕ ಮುಂಚೂಣಿಗೆ ಬಂದಿದ್ದಾರೆ. ಈಗ ಭಾರತವು ವೇಗದ ಬೌಲರ್ಗಳ ಬೆಂಚ್ ಬಲವನ್ನು ಹೆಚ್ಚಿಸಿಕೊಂಡಿದೆ. ಇದು ಬಹುಶಃ ಕ್ರಿಕೆಟ್ ಜಗತ್ತಿಗೆ ಅಸೂಯೆಯಾಗಲಿದೆ. ಎಡಗೈ, ಬಲಗೈ ಬ್ಯಾಟರ್ಗಳಿದ್ದಾರೆ. ಆಟಗಾರರಲ್ಲಿ ಯಾರಾದರೂ ವಿರಾಮ ತೆಗೆದುಕೊಳ್ಳಲು ಬಯಸಿದರೆ ಸಾಕಷ್ಟು ಪ್ರತಿಭೆಗಳು ಲಭ್ಯವಿದೆ, “ಎಂದು ಅವರು ಹೇಳಿದರು.
W W W W W W 🙌🏻
— Star Sports (@StarSportsIndia) January 3, 2024
Wreaking 🔥 ft. Mohammed Siuuuraajjj! Watch all his 6️⃣ scalps 👆🏻
Tune in to #SAvIND 2nd Test
LIVE NOW | Star Sports Network#Cricket pic.twitter.com/t7bT3pCRLl
“ಜಸ್ಪ್ರೀತ್ ಬುಮ್ರಾ ಇಲ್ಲದಿದ್ದಾಗ, ಭಾರತೀಯ ಬೌಲರ್ಗಳು ಹೇಗೆ ಪ್ರದರ್ಶನ ನೀಡಿದರು ಎಂಬುದನ್ನು ನೀವು ನೋಡಿದ್ದೀರಿ. ವಿಶೇಷವಾಗಿ ಮೊಹಮ್ಮದ್ ಶಮಿ ಈ ವಿಚಾರದಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಇದು ಕಪಿಲ್ ದೇವ್ ಅವರಿಗೆ ಸಲ್ಲಿಸುವ ಗೌರವ ಎಂದು ನಾನು ಭಾವಿಸುತ್ತೇನೆ. ಅನೇಕ ವರ್ಷಗಳ ನಂತರ ಮೊದಲ ಬಾರಿಗೆ ಜನವರಿ 6 ರಂದು ಅವರ ಜನ್ಮದಿನದಂದು ಭಾರತ ಪಂದ್ಯವನ್ನು ಗೆಲ್ಲುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದರು.