ಬೆಂಗಳೂರು: ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಮೊಹಮ್ಮದ್ ಶಮಿ(Mohammed Shami) ಸೇರಿದಂತೆ 26 ಕ್ರೀಡಾ ಸಾಧಕರಿಗೆ(Ministry of Youth Affairs and Sports) ಇಂದು ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಕ್ರೀಡಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು. ಭಾರತದ ಅಗ್ರಮಾನ್ಯ ಬ್ಯಾಡ್ಮಿಂಟನ್ ಆಟಗಾರರಾದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ-ಕರ್ನಾಟಕ ಮೂಲದ ಚಿರಾಗ್ ಶೆಟ್ಟಿ ಜೋಡಿಗೆ ದೇಶದ ಪರಮೋಚ್ಚ ಕ್ರೀಡಾ ಪ್ರಶಸ್ತಿಯಾದ ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಸರ್ಕಾರದಿಂದ ನೇಮಿಸಲ್ಪಟ್ಟ ಆಯ್ಕೆ ಸಮಿತಿ ಡಿ. 13ರಂದು ಕ್ರೀಡಾಪಟುಗಳ ಪಟ್ಟಿಯನ್ನು ನೀಡಿತ್ತು. ಪ್ರಶಸ್ತಿಗೆ ನಾಮ ನಿರ್ದೇಶಗೊಂಡ ಪಟ್ಟಿಯನ್ನು ಕೇಂದ್ರ ಕ್ರೀಡಾ ಸಚಿವಾಲಯ ಪರಿಶೀಲಿಸಿ ಡಿ.21ರಂದು ಅಧಿಕೃತಗೊಳಿಸಿತ್ತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಈ ಪ್ರಶಸ್ತಿಗಳನ್ನು ನೀಡಿ ದೇಶದ ಕ್ರೀಡಾಪಟುಗಳನ್ನು ಗೌರವಿಸಲಿದ್ದಾರೆ.
ಸಾತ್ವಿಕ್-ಚಿರಾಗ್ ಏಷ್ಯಾಡ್‌ನಲ್ಲಿ ಚಿನ್ನದ ಪದಕ, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದ ಸಾಧನೆಗೈದಿದ್ದಾರೆ. ಮೊಹಮ್ಮದ್ ಶಮಿ ಕಳೆದ ವಿಶ್ವಕಪ್‌ನಲ್ಲಿ ಅತ್ಯಧಿಕ 24 ವಿಕೆಟ್ ಉರುಳಿಸಿದ ಛಾತಿ ಹೊಂದಿದ್ದಾರೆ. ಆರಂಭದಲ್ಲಿ ಶಮಿ ಅವರ ಹೆಸರು ದೇಶದ ಎರಡನೇ ಅತ್ಯುನ್ನತ ಕ್ರೀಡಾ ಗೌರವದ ಪಟ್ಟಿಯಲ್ಲಿ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಬಿಸಿಸಿಐ ವಿಶೇಷ ಮನವಿ ಸಲ್ಲಿಸಿ ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿತ್ತು.
ಇದನ್ನೂ ಓದಿ Steve Smith: ಟೆಸ್ಟ್ನಲ್ಲಿ ಅತಿ ಹೆಚ್ಚು ಬಾರಿ ಸ್ಟೀವ್ ಸ್ಮಿತ್ ವಿಕೆಟ್ ಪಡೆದ ಬೌಲರ್ಗಳು ಇವರು
ಪ್ರಶಸ್ತಿ ಸ್ವೀಕರಿಸಲಿರುವ ಕ್ರೀಡಾ ಸಾಧಕರು
ಮೇಜರ್ ಧ್ಯಾನ್‌ಚಂದ್ ಖೇಲ್‌ರತ್ನ: ಚಿರಾಗ್ ಶೆಟ್ಟಿ-ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ.
ಅರ್ಜುನ ಪ್ರಶಸ್ತಿ
ಮೊಹಮ್ಮದ್ ಶಮಿ(ಕ್ರಿಕೆಟ್), ಪಾರುಲ್ ಚೌಧರಿ (ಆ್ಯತ್ಲೆಟಿಕ್ಸ್), ಮೊಹಮ್ಮದ್ ಹುಸ್ಸಮುದ್ದೀನ್ (ಬಾಕ್ಸಿಂಗ್), ಆರ್. ವೈಶಾಲಿ (ಚೆಸ್), ಅನುಷ್ ಅಗರ್ವಾಲ್ (ಈಕ್ವೆಸ್ಟ್ರಿಯನ್), ದಿವ್ಯಾಕೃತಿ ಸಿಂಗ್ (ಈಕ್ವೆಸ್ಟ್ರಿಯನ್ ಡ್ರೆಸ್ಸೇಜ್), ದೀಕ್ಷಾ ಡಾಗರ್ (ಗಾಲ್ಫ್), ಓಜಸ್ ಪ್ರವೀಣ್ ದೇವತಾಲೆ (ಆರ್ಚರಿ), ಅದಿತಿ ಗೋಪಿಚಂದ್ ಸ್ವಾಮಿ (ಆರ್ಚರಿ), ಮುರಳಿ ಶ್ರೀಶಂಕರ್ (ಆರ್ಚರಿ), ಕೃಷ್ಣ ಬಹಾದೂರ್ ಪಾಠಕ್ (ಹಾಕಿ), ಸುಶೀಲಾ ಚಾನು (ಹಾಕಿ), ಪವನ್ ಕುಮಾರ್ (ಕಬಡ್ಡಿ), ರೀತು ನೇಗಿ (ಕಬಡ್ಡಿ), ನಸ್ರಿàನ್ (ಖೋ ಖೋ), ಪಿಂಕಿ (ಲಾನ್ ಬೌಲ್ಸ್), ಐಶ್ವರಿ ಪ್ರತಾಪ್ ಸಿಂಗ್ ತೋಮರ್ (ಶೂಟಿಂಗ್), ಇಶಾ ಸಿಂಗ್ (ಶೂಟಿಂಗ್), ಹರೀಂದರ್ ಪಾಲ್ ಸಿಂಗ್ ಸಂಧು (ಸ್ಕ್ವಾಶ್), ಐಹಿಕಾ ಮುಖರ್ಜಿ (ಟಿಟಿ), ಸುನೀಲ್ ಕುಮಾರ್ (ಕುಸ್ತಿ), ಅಂತಿಮ್ ಪಂಘಲ್ (ಕುಸ್ತಿ), ಎನ್. ರೋಶಿಬಿನಾ ದೇವಿ (ವುಶು), ಶೀತಲ್ ದೇವಿ (ಆರ್ಚರಿ), ಅಜಯ್ ಕುಮಾರ್ ರೆಡ್ಡಿ (ಅಂಧ ಕ್ರಿಕೆಟ್), ಪ್ರಾಚಿ ಯಾದವ್ (ಪ್ಯಾರಾ ಕನೋಯಿಂಗ್).
ದ್ರೋಣಾಚಾರ್ಯ ಪ್ರಶಸ್ತಿ (ಮಾಮೂಲು ವಿಭಾಗ): ಲಲಿತ್ ಕುಮಾರ್ (ಕುಸ್ತಿ), ಆರ್.ಬಿ. ರಮೇಶ್ (ಚೆಸ್), ಮಹಾವೀರ್ ಪ್ರಸಾದ್ ಸೈನಿ (ಪ್ಯಾರ್ಯಾ ಆ್ಯತ್ಲೆಟಿಕ್ಸ್), ಶಿವೇಂದ್ರ ಸಿಂಗ್ (ಹಾಕಿ), ಗಣೇಶ್ ಪ್ರಭಾಕರ್ ದೇವ್ರುಕರ್ (ಮಲ್ಲಕಂಬ).
ದ್ರೋಣಾಚಾರ್ಯ ಪ್ರಶಸ್ತಿ (ಜೀವಮಾನ ಸಾಧನೆ): ಜಸ್ಕೀರತ್ ಸಿಂಗ್ ಗ್ರೆವಾಲ್ (ಗಾಲ್ಫ್), ಭಾಸ್ಕರನ್ (ಕಬಡ್ಡಿ), ಜಯಂತ್ ಕುಮಾರ್ ಪುಶಿಲಾಲ್ (ಟಿಟಿ).
ಧ್ಯಾನ್‌ಚಂದ್ ಪ್ರಶಸ್ತಿ (ಜೀವಮಾನ ಸಾಧನೆ): ಮಂಜುಷಾ ಕನ್ವರ್ (ಬ್ಯಾಡ್ಮಿಂಟನ್), ವಿನೀತ್ ಕುಮಾರ್ ಶರ್ಮ (ಹಾಕಿ), ಕವಿತಾ ಸೆಲ್ವರಾಜ್ (ಕಬಡ್ಡಿ).