Site icon Vistara News

‘ನನ್ನ ಚಾಕೊಲೆಟ್ ವಾಪಸ್​​​ ನನಗೆ ಕೊಡು’; ಅಭಿಮಾನಿಗೆ ಧೋನಿ ಕ್ಯೂಟ್​ ಆರ್ಡರ್​

MS Dhonis Chocolate Interaction With Fan Goes Viral

ಬೆಂಗಳೂರು: ಚಾಕೊಲೆಟ್(chocolate) ಎಂದರೆ ಯಾರ ಬಾಯಲ್ಲಿ ನೀರೂರಲ್ಲ ಹೇಳಿ. ಅದರಲ್ಲೂ ಮಕ್ಕಳಿಗಂತೂ ಈ ಸಿಹಿ ತಿನಿಸು ಬಲು ಇಷ್ಟ. ಟೀಮ್​ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ(MS Dhoni) ಅವರಿಗೂ ಚಾಕೊಲೆಟ್ ಎಂದರೆ ಬಲು ಇಷ್ಟ. ಇದಕ್ಕೆ ಸಂಬಂಧಿಸಿದ ವಿಡಿಯೊವೊಂದು ವೈರಲ್(Viral Video)​ ಆಗಿದೆ.

ಅಭಿಮಾನಿಯಿಂದ ಚಾಕೊಲೆಟ್ ಪಡೆದ ಧೋನಿ

ಧೋನಿ ಅವರು ಇತ್ತೀಚೆಗೆ ಯುಎಸ್​ ಓಪನ್ ಟೆನಿಸ್​ ಟೂರ್ನಿಯನ್ನು ನೋಡಲು ನ್ಯೂಯಾರ್ಕ್​ಗೆ ತೆರಳಿದ್ದರು. ಇಲ್ಲಿ ಅಲೆಕ್ಸಾಂಡರ್ ಜ್ವೆರೆವ್ ಮತ್ತು ಕಾರ್ಲೋಸ್ ಅಲ್ಕರಾಜ್ ನಡುವಿನ ಕ್ವಾರ್ಟರ್​ ಫೈನಲ್​ ಪಂದ್ಯವನ್ನು ವೀಕ್ಷಿಸಿದ್ದರು. ಬಳಿಕ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್(former USA President Donald Trump ) ಅವರೊಂದಿಗೆ ಗಾಲ್ಫ್ ಆಡಿ(MS Dhoni played golf with Donald Trump) ಗಮನ ಸೆಳೆದಿದ್ದರು. ಇದೀಗ ಅಭಿಮಾನಿಗೆ ಆಟೋಗ್ರಾಫ್​ ನೀಡಿ ಅವರಿಂದ ಚಾಕೊಲೆಟ್​ ವಾಪಸ್​ ಪಡೆದಿದ್ದಾರೆ.

ಚಾಕೊಲೆಟ್​ ಬಾಕ್ಸ್​ ಮರೆಯದ ಧೋನಿ

ವಾಸ್ತವವಾಗಿ ಧೋನಿಯನ್ನು ಕಂಡ ಅವರ ಅಭಿಮಾನಿಯೊಬ್ಬರು ಪುಟ್ಟ ಬ್ಯಾಟ್​ಗಳಲ್ಲಿ ಧೋನಿ ಅವರ ಆಟೋಗ್ರಾಫ್​ ಪಡೆದಿದ್ದಾರೆ. ಇದೇ ವೇಳೆ ಧೋನಿ ತಮ್ಮ ಕೈಯಲ್ಲಿದ್ದ ಚಾಕೊಲೆಟ್ ಬಾಕ್ಸ್​ ಹಿಡಿದುಕೊಳ್ಳುವಂತೆ ಅಭಿಮಾನಿ ಕೈಗೆ ನೀಡಿದ್ದಾರೆ. ಬಳಿಕ ಆಟೋಗ್ರಾಫ್​ ನೀಡಿದ ಬಳಿಕ ತಮ್ಮ ಚಾಕೊಲೆಟ್​ ಬಾಕ್ಸ್​ ಹಿಂದೆ ನೀಡುವಂತೆ ಕೇಳಿದ್ದಾರೆ. ಈ ವೇಳೆ ಅಭಿಮಾನಿ ಜೋರಾಗಿ ನಗುತ್ತ ತಮ್ಮ ಕೈಯಲ್ಲಿದ್ದ ಧೋನಿಯ ಚಾಕೊಲೆಟ್​ ಬಾಕ್ಸ್​ ಹಿಂದಿರುಗಿಸಿದ್ದಾರೆ.

ಹಿಂದೊಮ್ಮೆ ಧೋನಿ ಅವರು ವಿಮಾನದಲ್ಲಿ ಪ್ರಯಾಣಿಸುತಿದ್ದ ವೇಳೆ ಗಗನಸಖಿಯಿಂದ ಚಾಕೊಲೆಟ್ ಕೇಳಿ ಪಡೆದ ವಿಡಿಯೊ ಕೂಡ ವೈರಲ್​ ಆಗಿತ್ತು. ಕೆಲವು ತಿಂಗಳುಗಳ ಹಿಂದೆ ನಡೆದ 16ನೇ ಆವೃತ್ತಿಯ ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಐದನೇ ಬಾರಿ ಚಾಂಪಿಯನ್​ ಪಟ್ಟಕೇರಿಸಿದ ಧೋನಿ ಈಗ ತಮ್ಮ ಬಿಡುವನ್ನು ಪ್ರವಾಸದ ಮೂಲಕ ನಿರಂತರವಾಗಿ ಆನಂದಿಸುತ್ತಿದ್ದಾರೆ.

ಇದನ್ನೂ ಓದಿ MS Dhoni: ಡೊನಾಲ್ಡ್ ಟ್ರಂಪ್​ ಜತೆ ಗಾಲ್ಫ್ ಆಡಿದ ಮಹೇಂದ್ರ ಸಿಂಗ್​ ಧೋನಿ

ಟ್ರಂಪ್​ ಜತೆ ಟೆನಿಸ್​ ಆಡಿದ್ದ ಧೋನಿ

ಧೋನಿ ಬಳಿ ಇದೆ ದೊಡ್ಡ ಬೈಕ್​ ಗ್ಯಾರೇಜ್​

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಹೇಳಿದ ಬಳಿಕ ವಿಶ್ರಾಂತ ಜೀವನವನ್ನು ಎಂಜಾಯ್​ ಮಾಡುತ್ತಿರುವ ಧೋನಿ ಅವರು ತಮ್ಮ ಬೈಕ್ ಮತ್ತು ಕಾರ್​ಗಳನ್ನು ಇರಿಸಲು ತಮ್ಮ ಮನೆಯ ಪಕ್ಕದಲ್ಲಿ ದೊಡ್ಡ ಕಟ್ಟಡವನ್ನೇ ಹೊಂದಿದ್ದಾರೆ. ಕೆಳವು ದಿನಗಳ ಹಿಂದೆ ವೆಂಕಟೇಶ್ ಪ್ರಸಾದ್ ಮತ್ತು ಸುನಿಲ್ ಜೋಶಿ ಅವರು ಧೋನಿಯ ರಾಂಚಿಯಲ್ಲಿರುವ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಧೋನಿ ಫಾರ್ಮ್ ಹೌಸ್​ನಲ್ಲಿರುವ ಬೈಕ್​(ms dhoni bike collection) ಮತ್ತು ಕಾರುಗಳ ವಿಡಿಯೊವನ್ನು ಹಂಚಿಕೊಂಡಿದ್ದರು. ಇದನ್ನು ಕಂಡ ಅನೇಕರು ಅಬ್ಬಾ… ಎಂದು ಆಶ್ಚರ್ಯವಾಗಿದ್ದರು. ಈ ಫಾರ್ಮ್​ಹೌಸ್​ನ ವಿಡಿಯೊ ವೈರಲ್​ ಆಗಿತ್ತು.

Exit mobile version