ಅಹಮದಾಬಾದ್: ಸೆಮಿಫೈನಲ್ ಬಾಗಿಲಿಗೆ ಬಂದು ನಿಂತಿರುವ ಆಸ್ಟ್ರೇಲಿಯಾ ತಂಡಕ್ಕೆ ದೊಡ್ಡ ಆತಂಕವೊಂದು ಸೃಷ್ಟಿಯಾಗಿದೆ. ವಿಶ್ವಕಪ್ನಲ್ಲಿ ವಿಶ್ವದಾಖಲೆಯ ಶತಕ ಬಾರಿಸಿದ ತಂಡದ ಸ್ಟಾರ್ ಆಲ್‌ರೌಂಡರ್(Australia all-rounder Maxwell) ಗ್ಲೆನ್ ಮ್ಯಾಕ್ಸ್‌ವೆಲ್(Glenn Maxwell) ಅವರು ಗಾಯಗೊಂಡಿದ್ದಾರೆ. ಗಾಲ್ಫ್ ಕಾರ್ಟ್‌ನ ಹಿಂಬದಿಯಲ್ಲಿ ಸವಾರಿ ಮಾಡುತ್ತಿದ್ದಾಗ ಆಯತಪ್ಪಿ ಬಿದ್ದು ತಲೆ ಹಾಗೂ ಮುಖಕ್ಕೆ ಗಂಭೀರ ಗಾಯ ಮಾಡಿಕೊಂಡಿದ್ದಾರೆ. ಇದರಿಂದಾಗಿ ನವೆಂಬರ್ 4ರಂದು ನಡೆಯುವ ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೆ ಅವರು ಅಲಭ್ಯರಾಗಿದ್ದಾರೆ ಎಂದು ತಂಡದ ಮುಖ್ಯ ಕೋಚ್ ಆ್ಯಂಡ್ರ್ಯೂ ಮೆಕ್‌ಡೊನಾಲ್ಡ್ ತಿಳಿಸಿದ್ದಾರೆ.
ಬುಧವಾರ ಗಾಲ್ಫ್ ಆಡಿದ ಬಳಿಕ ಕ್ಲಬ್‌ಹೌಸ್‌ನಿಂದ ತಂಡದ ಬಸ್‌ನತ್ತ ಮರಳುವ ವೇಳೆ ಗ್ಲೆನ್ ಮ್ಯಾಕ್ಸ್‌ವೆಲ್ ಅವರು ಆಯ ತಪ್ಪಿ ಬಿದಿದ್ದಾರೆ. ಬಿದ್ದ ರಭಸಕ್ಕೆ ಅವರ ತಲೆಗೆ ಮತ್ತು ಮುಖಕ್ಕೆ ಪೆಟ್ಟಾಗಿದೆ. ತಲೆಗೆ ಗಾಯವಾದ ಕಾರಣ ಕಂಕಷನ್ ನಿಯಮದ ಅನುಸಾರ ಅವರು ಕೆಲದಿನಗಳ ಕಾಲ ವಿಶ್ರಾಂತಿ ಪಡೆಯಬೇಕಾಗುತ್ತದೆ. ಹೀಗಾಗಿ ಅವರನ್ನು ಇಂಗ್ಲೆಂಡ್ ವಿರುದ್ದದ ಪಂದ್ಯದಿಂದ ಕೈಬಿಡಲಾಗಿದೆ” ಎಂದು ಮೆಕ್‌ಡೊನಾಲ್ಡ್ ತಿಳಿಸಿದ್ದಾರೆ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ IND vs SL: ಇಂಡೋ-ಲಂಕಾ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡಗಳು ಹೀಗಿದೆ
ಟೂರ್ನಿಯಿಂದ ಹೊರಬೀಳುವ ಭೀತಿ
ಮ್ಯಾಕ್ಸ್‌ವೆಲ್ ಅವರ ತಲೆಯ ಭಾಗಕ್ಕೆ ಪೆಟ್ಟಾದ ಕಾರಣ ಒಂದೊಮ್ಮೆ ಅವರು ಇದರಿಂದ ಚೇತರಿಕೆ ಕಾಣದೇ ಹೋದರೆ ಅವರು ಟೂರ್ನಿಯಿಂದ ಹೊರಬೀಳಲಿದ್ದಾರೆ. ಮೂಲಗಳ ಪ್ರಕಾರ ಮ್ಯಾಕ್ಸ್ವೆಲ್ಗೆ ಗಂಭೀರ ಸ್ವರೂಪದ ಗಾಯವಾಗಿದೆ ಎಂದು ತಿಳಿದುಬಂದಿದೆ. ಇದೇ ಕಾರಣಕ್ಕೆ ಅವರನ್ನು ಇಂಗ್ಲೆಂಡ್ ವಿರುದ್ಧದ ಪಂದ್ಯದಿಂದ ಹೊರಗಿಟ್ಟಿದ್ದು ಎನ್ನಲಾಗಿದೆ. ಸದ್ಯಕ್ಕೆ ತಂಡ ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೇ ಮಾತ್ರ ಅಲಭ್ಯ ಎಂದು ತಿಳಿಸಿದೆ.
ಇದನ್ನೂ ಓದಿ NZ vs SA: ಕಿವೀಸ್ ಕಿವಿ ಹಿಂಡಿದ ಹರಿಣ ಪಡೆ; 190 ರನ್ ಗೆಲುವಿನೊಂದಿಗೆ ಅಗ್ರಸ್ಥಾನಕ್ಕೆ ಜಿಗಿತ
ಇದು ಎರಡನೇ ಬಾರಿ
ಮ್ಯಾಕ್ಸ್‌ವೆಲ್ ಅವರು ಈ ರೀತಿ ಗಂಭೀರ ಗಾಯಕ್ಕೀಡಾಗುತ್ತಿರುವುದು ಇದು 2ನೇ ಬಾರಿ. ಕಳೆದ ವರ್ಷ ಮೆಲ್ಬೋರ್ನ್‌ನಲ್ಲಿ ಗೆಳೆಯನ ಹುಟ್ಟುಹಬ್ಬದ ಆಚರಣೆ ವೇಳೆ ಜಾರಿ ಬಿದ್ದು ಕಾಲು ಮುರಿದುಕೊಂಡಿದ್ದರು. ಬಳಿಕ ಹಲವು ತಿಂಗಳುಗಳ ಕಾಲ ವಿಶ್ರಾಂತಿ ಪಡೆದಿದ್ದರು. ಇದೀಗ ಮತ್ತೆ ಜಾರಿ ಬಿದ್ದು ಮುಖಕ್ಕೆ ಮತ್ತು ತಲೆಗೆ ಗಾಯ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ IND vs SL: ‘ಲಂಕಾ ದಹನ’ ಮಾಡಿ ಸೆಮಿಫೈನಲ್ ಪ್ರವೇಶಿಸಲಿ ಟೀಮ್ ಇಂಡಿಯಾ
ಆಲ್‌ರೌಂಡರ್ ಆಗಿರುವ ಮ್ಯಾಕ್ಸ್‌ವೆಲ್ ಬ್ಯಾಟಿಂಗ್ ಜತೆಗೆ ಸ್ಪಿನ್ನ್ ಬೌಲಿಂಗ್ನಲ್ಲಿಯೂ ಮಿಂಚುವ ಮೂಲಕ ತಂಡಕ್ಕೆ ನೆರವಾಗುತ್ತಿದ್ದರು. ಕಳದ ವಾರ ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 40 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆಯನ್ನು ಬರೆದಿದ್ದರು. ವಿಶ್ವಕಪ್ ಕ್ರಿಕೆಟ್ನಲ್ಲಿ ಅತಿ ವೇಗದ ಶತಕ ಬಾರಿಸಿದ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದರು. ಒಂದೊಮ್ಮೆ ಅವರು ಟೂರ್ನಿಯಿಂದ ಹೊರಬಿದ್ದರೆ ಆಸೀಸ್ಗೆ ದೊಡ್ಡ ಹಿನ್ನಡೆಯಾಗಲಿದೆ. ಅದರಲ್ಲೂ ಆಸೀಸ್ಗೆ ಸೆಮಿಗೆ ಪ್ರವೇಶ ಪಡೆಯಬೇಕಿದ್ದರೆ ಮುಂದಿನ ಮೂರು ಪಂದ್ಯಗಳಲ್ಲಿ ಕನಿಷ್ಠ 2 ಪಂದ್ಯ ಗೆಲ್ಲಲೇ ಬೇಕು.
ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ
ದಕ್ಷಿಣ ಆಫ್ರಿಕಾ ವಿರುದ್ಧ ಇಂದು ನಡೆದ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಸೋಲು ಕಂಡ ಪರಿಣಾಮ ಆಸ್ಟ್ರೇಲಿಯಾ ಮೂರನೇ ಸ್ಥಾನಕ್ಕೇರಿದೆ. ಈ ಸೋಲಿನಿಂದ ಕಿವೀಸ್ ರನ್ರೇಟ್ನಲ್ಲಿ ಕುಸಿತವಾಗಿದೆ. ಇದರ ಲಾಭ ಆಸ್ಟ್ರೇಲಿಯಾ ತಂಡಕ್ಕೆ ಲಭಿಸಿದೆ. ಈ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾ 4ನೇ ಸ್ಥಾನದಲ್ಲಿತ್ತು. ಈಗ ಮೂರಕ್ಕೆ ಬಂದು ನಿಂತಿದೆ. ನ್ಯೂಜಿಲ್ಯಾಂಡ್ ನಾಲ್ಕನೇ ಸ್ಥಾನಕ್ಕೆ ಕುಸಿಯಿತು.
ನೂತನ ಅಂಕಪಟ್ಟಿ ಹೀಗಿದೆ
ತಂಡ | ಪಂದ್ಯ | ಗೆಲುವು | ಸೋಲು | ಅಂಕ | ನೆಟ್ ರನ್ರೇಟ್ |
ದಕ್ಷಿಣ ಆಫ್ರಿಕಾ | 7 | 6 | 1 | 12 | +2.290 |
ಭಾರತ | 6 | 6 | 0 | 12 | +1.405 |
ಆಸ್ಟ್ರೇಲಿಯಾ | 6 | 4 | 2 | 8 | +0.970 |
ನ್ಯೂಜಿಲ್ಯಾಂಡ್ | 7 | 4 | 3 | 8 | +0.484 |
ಪಾಕಿಸ್ತಾನ | 7 | 3 | 4 | 6 | -0.024 |
ಅಫಘಾನಿಸ್ತಾನ | 6 | 3 | 3 | 6 | -0.718 |
ಶ್ರೀಲಂಕಾ | 6 | 2 | 4 | 4 | -0.275 |
ನೆದರ್ಲ್ಯಾಂಡ್ಸ್ | 6 | 2 | 4 | 4 | -1.277 |
ಬಾಂಗ್ಲಾದೇಶ | 7 | 1 | 6 | 2 | -1.446 |
ಇಂಗ್ಲೆಂಡ್ | 6 | 1 | 5 | 2 | -1.652 |