ಮೆಲ್ಬೋರ್ನ್: ಬಿಗ್ ಬ್ಯಾಷ್ ಲೀಗ್ 2023-24 (ಬಿಬಿಎಲ್) ನಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ತಂಡದ ನಾಯಕ ಗ್ಲೆನ್ ಮ್ಯಾಕ್ಸ್ವೆಲ್ ಮುಂಗೈ ಗಾಯದಿಂದಾಗಿ ತಂಡದಿಂದ ಹೊರಗುಳಿಯುತ್ತಿದ್ದಾರೆ. ಬ್ರಿಸ್ಬೇನ್ ಹೀಟ್ ವಿರುದ್ಧದ ಆರಂಭಿಕ ಪಂದ್ಯದಲ್ಲಿ 23 ರನ್ ಗಳಿಸಿದ್ದ ಮ್ಯಾಕ್ಸ್ವೆಲ್ ಗಾಯದ ಸಮಸ್ಯೆಯಿಂದ ಬಳಲಿದ್ದಾರೆ. ಹೀಗಾಗಿ ಅವರು ಪರ್ತ್ ಸ್ಕಾರ್ಚರ್ಸ್ ವಿರುದ್ಧದ ನಿರ್ಣಾಯಕ ಪಂದ್ಯದಿಂದ ಹೊರಗುಳಿದಿದ್ದಾರೆ.
❌Maxwell ❌Burns
— Brisbane Heat (@HeatBBL) December 8, 2023
Swepson claimed 2️⃣ HUGE wickets in last night win!#BringTheHEAT #BBL13 pic.twitter.com/vXWRWzts4P
ಮ್ಯಾಕ್ಸ್ವೆಲ್ ಮೈದಾನದಲ್ಲೇ ವೈದ್ಯಕೀಯ ಚಿಕಿತ್ಸೆ ಪಡೆದರು. ಅವರ ಮುಂಗೈಯನ್ನು ಟ್ಯಾಪ್ ಮಾಡಲಾಗಿತ್ತು. ನಂತರ ಔಟ್ ಆದ ನಂತರ ಡಗೌಟ್ನಲ್ಲಿ ಅವರಿಗೆ ಐಸ್ ಥೆರಪಿ ನೀಡಲಾಯಿತು. ಕ್ರಿಯಾತ್ಮಕ ಆಲ್ರೌಂಡರ್ ಅನುಪಸ್ಥಿತಿಯು ಬ್ಯಾಟಿಂಗ್ ವಿಭಾಗಕ್ಕೆ ಹಿನ್ನಡೆಯಾಗಿದೆ. ಅದೇ ಸ್ಟಾರ್ ಬೌಲರ್ನ ಸ್ಪಿನ್-ಬೌಲಿಂಗ್ ಸೇವೆಯನ್ನೂ ಬ್ರಿಸ್ಬೇನ್ ಹೀಟ್ ತಂಡ ಕಳೆದುಕೊಳ್ಳಲಿದೆ. ತಂಡವನ್ನು ಮುನ್ನಡೆಸುವ ಜವಾಬ್ದಾರಿ ಈಗ ಮಾರ್ಕಸ್ ಸ್ಟೊಯಿನಿಸ್ ಅವರ ಮೇಲಿದೆ. ಅವರು ಮ್ಯಾಕ್ಸ್ವೆಲ್ ಅವರ ಸ್ಥಾನವನ್ನು ತುಂಬುವಲ್ಲಿ ನಿರ್ಣಾಯಕರಾಗಲಿದ್ದಾರೆ.
ಇದನ್ನೂ ಓದಿ: Mohammed Shami : ಐಸಿಸಿ ಪ್ರಶಸ್ತಿಗೆ ಮೊಹಮ್ಮದ್ ಶಮಿಯ ಹೆಸರು ನಾಮನಿರ್ದೇಶನ
ಎಂಸಿಜಿಯಲ್ಲಿ ಪರ್ತ್ ಸ್ಕಾರ್ಚರ್ಸ್ ವಿರುದ್ಧದ ಮುಂಬರುವ ಪಂದ್ಯವು ಬ್ರಿಸ್ಬೇನ್ ಹೀಟ್ ತಂಡಕ್ಕೆ ಕಠಿಣ ಪರೀಕ್ಷೆಯಾಗಿದೆ. ಡಿಸೆಂಬರ್ 23 ರಂದು ಸಿಡ್ನಿ ಥಂಡರ್ ವಿರುದ್ಧದ ಮುಂದಿನ ಪಂದ್ಯಕ್ಕೆ ಮೊದಲು 10 ದಿನಗಳ ಅಂತರದಲ್ಲಿ ಮ್ಯಾಕ್ಸ್ವೆಲ್ ಪುನಶ್ಚೇತಗೊಳ್ಳಬೇಕಾಗಿದೆ.
ಐಪಿಎಲ್ಗೆ ಲಭ್ಯವೇ?
ಸ್ಫೋಟಕ ಆಲ್ರೌಂಡರ್ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಾಲಿಗೆ ಅದ್ಭುತ ಆಟಗಾರರಾಗಿದ್ದಾರೆ. ಅವರ ಲಭ್ಯತೆಯಿಂದ ಮಾತ್ರ ತಂಡಕ್ಕೆ ಹೆಚ್ಚಿನ ಅನುಕೂಲಗಳಿವೆ. ಆದರೆ, ಗಾಯದ ಸಮಸ್ಯೆಯಿಂದ ಅವರು ಸುಧಾರಿಸಿಕೊಳ್ಳುವರೇ ಎಂಬುದು ಮುಖ್ಯ ಪ್ರಶ್ನೆಯಾಗಿದೆ. ಡಿಸೆಂಬರ್ 19ರಂದು ದುಬೈನಲ್ಲಿ ಐಪಿಎಲ್ 2024ರ ಆವೃತ್ತಿಗಾಗಿ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ. ಆರ್ಸಿಬಿ ತಂಡ ಸ್ಫೋಟಕ್ ಆಲ್ರೌಂಡರ್ ಅವರನ್ನು ತಂಡದಲ್ಲಿ ಉಳಿಸಿಕೊಂಡಿದೆ. ಹೀಗಾಗಿ ಅವರ ಲಭ್ಯತೆ ತಂಡಕ್ಕೆ ಅತ್ಯಗತ್ಯವಾಗಿದೆ. ಆದರೆ, ಐಪಿಎಲ್ ನಡೆಯಲು ಇನ್ನೂ ನಾಲ್ಕು ತಿಂಗಳ ಅವಧಿ ಇರುವ ಕಾರಣ ಅವರ ಲಭ್ಯತೆಯನ್ನು ನಿರೀಕ್ಷೆ ಮಾಡಬಹುದಾಗಿದೆ
ಕೊನೇ ಎರಡು ವರ್ಷ ಒಂದೇ ಕಣ್ಣಿನಲ್ಲಿ ಆಡಿದ್ದ ಎಬಿಡಿ ವಿಲಿಯರ್ಸ್!
ಕ್ರಿಕೆಟ್ ಅನ್ನು ಅತ್ಯಂತ ಸುಲಭವಾಗಿ ಆಡಬಹುದು ಎಂದು ತೋರಿಸಿಕೊಟ್ಟವರಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟರ್ ಎಬಿಡಿ ವಿಲಿಯರ್ಸ್ ಅಗ್ರಗಣ್ಯರು. ಅವರನ್ನು ಈ ಪೀಳಿಗೆಯ ಅಸಾಮಾನ್ಯ ಪ್ರತಿಭೆ ಎಂದೇ ಪರಿಗಣಿಸಲಾಗಿದೆ. 2004-2018ರ ಅವಧಿಯಲ್ಲಿ ದಕ್ಷಿಣ ಆಫ್ರಿಕಾ ಪರ 114 ಟೆಸ್ಟ್, 228 ಏಕದಿನ ಹಾಗೂ 78 ಟಿ20 ಪಂದ್ಯಗಳನ್ನು ಆಡಿದ್ದಾರೆ. ಮೈದಾನದ ಯಾವುದೇ ಮೂಲೆಗೆ ಚೆಂಡನ್ನು ಕಳುಹಿಸಬಲ್ಲ ಅವರ ಸಾಮರ್ಥ್ಯದಿಂದಾಗಿ ಅವರನ್ನು ಮಿಸ್ಟರ್ 360 ಎಂದೂ ಕರೆಯಲಾಗುತ್ತದೆ.
ಎಬಿಡಿ ವಿಲಿಯನ್ಸ್ ದಕ್ಷಿಣ ಆಫ್ರಿಕಾದ ನಾಯಕರಾಗಿದ್ದರು. ವಿಶೇಷವಾಗಿ 2015 ರ ವಿಶ್ವಕಪ್ನಲ್ಲಿ ಅವರು ತಂಡವನ್ನು ಮುನ್ನಡೆಸಿದ್ದರು. ಅಲ್ಲಿ ದಕ್ಷಿಣ ಆಫ್ರಿಕಾವು ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್ನಲ್ಲಿ ಹೃದಯ ವಿದ್ರಾವಕ ಸೋಲನ್ನು ಅನುಭವಿಸಿತು. 2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಲು ಕಾರಣವಾದ ಹಲವು ಅಂಶಗಳಲ್ಲಿ ಇದೂ ಒಂದು ಎಂದು ಹೇಳಲಾಗಿದೆ.
ಅವರು 2019 ರ ವಿಶ್ವಕಪ್ಗೆ ದಕ್ಷಿಣ ಆಫ್ರಿಕಾ ತಂಡಕ್ಕೆ ಮರಳಲು ಪ್ರಯತ್ನಿಸಿದರೂ, ವಿಷಯಗಳು ಕಾರ್ಯರೂಪಕ್ಕೆ ಬರಲಿಲ್ಲ. ಐಪಿಎಲ್ 2021 ರ ನಂತರ ಎಲ್ಲಾ ಕ್ರಿಕೆಟ್ನಿಂದ ನಿವೃತ್ತರಾಗುವ ಮೊದಲು ಅವರು ಈ ಮಧ್ಯೆ ಫ್ರ್ಯಾಂಚೈಸ್ ಕ್ರಿಕೆಟ್ ಆಡುವುದನ್ನು ಮುಂದುವರಿಸಿದರು. ತಮ್ಮ ಕೊನೆಯ ವೃತ್ತಿಪರ ಪಂದ್ಯಗಳ ಎರಡು ವರ್ಷಗಳ ಕರಾಳ ದಿನವನ್ನು ಅವರು ಇದೀಗ ಬಹಿರಂಗಗೊಳಿಸಿದ್ದಾರೆ. ತಮ್ಮ ಬಲ ಕಣ್ಣು ಬಲ ದೃಷ್ಟಿ ಕಳೆದುಕೊಳ್ಳುತ್ತಿದ್ದ ಕಾರಣ ಒಂದೇ ಕಣ್ಣಿನಲ್ಲಿ ಆಡಿದ್ದೆ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ.
ಏನಾಗಿತ್ತು ಅವರಿಗೆ?
ಮಗು ಒದ್ದ ಕಾರಣ ಕಣ್ಣಿಗೆ ಪೆಟ್ಟು ಬಿದ್ದು ಹಾನಿಯಾಗಿತ್ತು. ಅದರಿಂದ ವರ್ಷದಿಂದ ವರ್ಷಕ್ಕೆ ಕಣ್ಣಿನ ದೃಷ್ಟಿ ಕಳೆದುಕೊಳ್ಳಲು ಆರಂಭಿಸಿದ್ದೆ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ. “ನನ್ನ ಮಗ ಆಕಸ್ಮಿಕವಾಗಿ ತನ್ನ ಹಿಮ್ಮಡಿಯಿಂದ ನನ್ನ ಕಣ್ಣಿಗೆ ಒದೆದಿದ್ದ. ನಾನು ಬಲಗಣ್ಣಿನ ದೃಷ್ಟಿಯನ್ನು ಕಳೆದುಕೊಳ್ಳಲು ಪ್ರಾರಂಭಿಸಿದೆ. ನಾನು ಶಸ್ತ್ರಚಿಕಿತ್ಸೆ ಮಾಡಿದಾಗ ವೈದ್ಯರು ನನ್ನನ್ನು ಕೇಳಿದರು, ‘ನೀವು ಇಷ್ಟು ಈ ರೀತಿ ಕ್ರಿಕೆಟ್ ಆಡಿದ್ದು ಹೇಗೆ?’. ಅದೃಷ್ಟವಶಾತ್ ನನ್ನ ವೃತ್ತಿಜೀವನದ ಕೊನೆಯ ಎರಡು ವರ್ಷಗಳಲ್ಲಿ ನನ್ನ ಎಡಗಣ್ಣು ಉತ್ತಮ ಕೆಲಸ ಮಾಡಿದೆ. ಹೀಗಾಗಿ ಒಂದೇ ಕಣ್ಣಿನಲ್ಲಿ ಆಡಲು ಸಾಧ್ಯವಾಯಿತು ಎಂದು ಎಬಿಡಿ ವಿಲಿಯರ್ಸ್ ಹೇಳಿಕೊಂಡಿದ್ದಾರೆ.