Site icon Vistara News

Diksha Dagar : ಗಾಲ್ಫರ್​ ದೀಕ್ಷಾ ದಾಗರ್​ ಪ್ರಯಾಣಿಸುತ್ತಿದ್ದ ಕಾರು ಪ್ಯಾರಿಸ್​​ನಲ್ಲಿ ಅಪಘಾತ

Diksha Daga

ಬೆಂಗಳೂರು: ಒಲಿಂಪಿಕ್ಸ್​ಗಾಗಿ (Paris Olympics 2024) ಫ್ರಾನ್ಸ್​ಗೆ ತೆರಳಿದ್ದ ಭಾರತೀಯ ಗಾಲ್ಫ್ ಆಟಗಾರ್ತಿ ದೀಕ್ಷಾ ದಾಗರ್ (Diksha Dagar) ಜುಲೈ 30 ರಂದು ರಾParis Olympics: ಕ್ವಾರ್ಟರ್‌ ಫೈನಲ್‌ನಲ್ಲಿ ಸಾತ್ವಿಕ್​-ಚಿರಾಗ್​ ಜೋಡಿಗೆ ಆಘಾತಕಾರಿ ಸೋಲುಜಧಾನಿ ಪ್ಯಾರಿಸ್​​ನಲ್ಲಿ ಕಾರು ಅಪಘಡಕ್ಕೆ ಒಳಗಾಗಿದ್ದಾರೆ. ಅದೃಷ್ಟವಶಾತ್​ 23 ವರ್ಷದ ಗಾಲ್ಫ್ ಆಟಗಾರ್ತಿ ಗಾಯಗಳಿಂದ ಪಾರಾಗಿದ್ದಾರೆ. ಅಲ್ಲದೆ, ಪ್ಯಾರಿಸ್ ಒಲಿಂಪಿಕ್ಸ್​​ನ ಮಹಿಳಾ ವೈಯಕ್ತಿಕ ಗಾಲ್ಫ್ ಸ್ಪರ್ಧೆಗೆ ಇಳಿಯುವುದಾಗಿ ಹೇಳಿದ್ದಾರೆ. ದೀಕ್ಷಾ ಅವರ ಸ್ಪರ್ಧೆಯು ಆಗಸ್ಟ್ 7ರಂದು ಪ್ರಾರಂಭವಾಗಲಿದೆ.

ಮಂಗಳವಾರ ಸಂಜೆ ಅವಘಡ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಈ ವೇಳೆ ಆಕೆಯ ಪೋಷಕರು ಮತ್ತು ಸಹೋದರ ಕಾರಿನಲ್ಲಿದ್ದರು. ದೀಕ್ಷಾ ಮತ್ತು ಆಕೆಯ ತಂದೆ ಸ್ವಲ್ಪವೂ ಗಾಯಗಳು ಇಲ್ಲದೇ ಪಾರಾಗಿದ್ದಾರೆ. ಆದರೆ ತಾಯಿ ಬೆನ್ನುನೋವಿಗೆ ಒಳಗಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಘಾತದ ಸಮಯದಲ್ಲಿ ದೀಕ್ಷಾ ಅವರ ಸಹೋದರನಿಗೆ ತರಚು ಗಾಯಗಳಾಗಿವೆ.

ಅದೃಷ್ಟದ ಅವಕಾಶ

ಕುತೂಹಲಕಾರಿ ಸಂಗತಿಯೆಂದರೆ, ದಕ್ಷಿಣ ಆಫ್ರಿಕಾದ ಗಾಲ್ಫ್ ಆಟಗಾರ್ತಿ ಪೌಲಾ ರೆಟೊ ಹಿಂದೆ ಸರಿದ ಕಾರಣ ಅವರಿಗೆ ಟೋಕಿಯೊ 2020ರಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕಿತ್ತು. ಅಲ್ಲಿ ದೀಕ್ಷಾ ಟಿ -50 ಅನ್ನು ಪೂರ್ಣಗೊಳಿಸಿದ್ದರು. ಇದೀಗ ಪ್ಯಾರಿಸ್​ನಲ್ಲಿ ಉತ್ತಮ ಪ್ರದರ್ಶನ ನೀಡುವ ಗುರಿಯನ್ನು ಹೊಂದಿದ್ದಾರೆ. ಕಿವುಡರ ಒಲಿಂಪಿಕ್ಸ್ ಎರಡರ ಭಾಗವಾಗಿದ್ದ ಏಕೈಕ ಗಾಲ್ಫ್ ಆಟಗಾರ್ತಿ ದೀಕ್ಷಾ. ಅವರು 2017 ರಲ್ಲಿ ಬೆಳ್ಳಿ ಮತ್ತು 2022 ರಲ್ಲಿ ಕಿವುಡರ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು.

ಇದನ್ನೂ ಓದಿ: Rohit Sharma : ಟಿ20 ನಿವೃತ್ತಿಯಲ್ಲ, ಅದು ವಿಶ್ರಾಂತಿ; ಕೌತುಕ ಮೂಡಿಸಿದ ರೋಹಿತ್ ಶರ್ಮಾ ಹೇಳಿಕೆ

ಇದೇ ವೇಳೆ ಶುಭಂಕರ್ ಶರ್ಮಾ ಮತ್ತು ಗಗನ್ಜೀತ್ ಭುಲ್ಲರ್ ಪುರುಷರ ವೈಯಕ್ತಿಕ ಸ್ಪರ್ಧೆಗೆ ಇಳಿಯಲಿದ್ದಾರೆ. ಭಾರತವು ಆಗಸ್ಟ್ 7 ರ ಗುರುವಾರ ಗಾಲ್ಫನ್​ನಲ್ಲಿ ತನ್ನ ಅಭಿಯಾನ ಪ್ರಾರಂಭಿಸಲಿದೆ. ಈ ಸವಾಲಿನ ಸಮಯದಲ್ಲಿ ದೀಕ್ಷಾ ಮತ್ತು ಅವರ ಕುಟುಂಬಕ್ಕೆ ಬೆಂಬಲವಾಗಿ ಭಾರತೀಯ ಕ್ರೀಡಾ ಸಮುದಾಯವು ಒಗ್ಗಟ್ಟಿನಿಂದ ನಿಂತಿದೆ.

Exit mobile version