ಮುಂಬಯಿ: ನಾಯಕಿ ಹರ್ಮನ್ಪ್ರೀತ್ ಕೌರ್ (51) ಸ್ಫೋಟಕ ಬ್ಯಾಟಿಂಗ್ ನೆರವು ಪಡೆದ ಮುಂಬಯಿ ಇಂಡಿಯನ್ಸ್ ತಂಡ ಮಹಿಳೆಯರ ಪ್ರೀಮಿಯರ್ ಲೀಗ್ನ (WPL 2023) 12ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ 162 ರನ್ ಬಾರಿಸಿದೆ. ಇದರೊಂದಿಗೆ ಎದುರಾಳಿ ಗುಜರಾತ್ ಜಯಂಟ್ಸ್ ತಂಡದ ಗೆಲುವಿಗೆ 163 ರನ್ ಗುರಿ ಎದುರಾಗಿದೆ.
ಇಲ್ಲಿನ ಬ್ರಬೊರ್ನ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಗುಜರಾತ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಮುಂಬಯಿ ಬಳಗ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 160 ರನ್ ಗಳಿಸಿತು. ಆರಂಭಿಕ ಬ್ಯಾಟರ್ ಯಸ್ತಿಕ ಭಾಟಿಯಾ (44) ಹಾಗೂ ನ್ಯಾಟ್ ಸೀವರ್ ಬ್ರಂಟ್ (36) ಕೂಡ ಸ್ಮರ್ಧಾತ್ಮಕ ಮೊತ್ತ ಪೇರಿಸಲು ತಮ್ಮ ನೆರವು ಕೊಟ್ಟರು.
ಮೊದಲು ಬ್ಯಾಟ್ ಮಾಡಿದ ಮುಂಬಯಿ ಬಳಗ ಒಂದು ರನ್ಗೆ ಮೊದಲ ವಿಕೆಟ್ ಕಳೆದುಕೊಳ್ಳುವ ಮೂಲಕ ಆತಂಕ್ಕೆ ಬಿತ್ತು. ಸ್ಫೋಟಕ ಬ್ಯಾಟರ್ ಹೇಲಿ ಮ್ಯಾಥ್ಯೂಸ್ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಎದುರಿಸಿದರು. ಆದರೆ, ಯಸ್ತಿಕಾ ಹಾಗೂ ಬ್ರಂಟ್ ಜೋಡಿ ಎರಡನೇ ವಿಕೆಟ್ಗೆ 74 ರನ್ ಜತೆಯಾಟ ನೀಡುವ ಮೂಲಕ ಆರಂಭಿಕ ಹಿನ್ನಡೆ ತಗ್ಗಿಸಿದರು. ಬಳಿಕ ಹರ್ಮನ್ಪ್ರೀತ್ ಕೌರ್ ಏಳು ಫೋರ್ ಹಾಗೂ 2 ಸಿಕ್ಸರ್ಗಳ ನೆರವಿನಿಂದ ಅರ್ಧ ಶತಕ ಬಾರಿಸಿ ದೊಡ್ಡ ಮೊತ್ತ ಪೇರಿಲು ತಂಡಕ್ಕೆ ನೆರವಾದರು.
ಗುಜರಾತ್ ತಂಡದ ಪರ ಆಶ್ಲೀ ಗಾರ್ಡ್ನರ್ 34 ರನ್ ವೆಚ್ಚದಲ್ಲಿ 3 ವಿಕೆಟ್ ಕಬಳಿಸಿ ಮಿಂಚಿದರು.