Site icon Vistara News

WPL 2023 : ಗುಜರಾತ್​ ತಂಡಕ್ಕೆ 11 ರನ್​ ವಿಜಯ, ಬ್ಯಾಟಿಂಗ್​ ಬೌಲಿಂಗ್​ನಲ್ಲಿ ವೈಫಲ್ಯ ಎದುರಿಸಿದ ಡೆಲ್ಲಿ

Gujarat team won by 11 runs, Delhi faced failure in batting and bowling

#image_title

ಮುಂಬಯಿ: ಬ್ಯಾಟಿಂಗ್ ಹಾಗೂ ಬೌಲಿಂಗ್​ನಲ್ಲಿ ಸರ್ವತೋಮುಖ ಪ್ರದರ್ಶನ ನೀಡಿದ ಗುಜರಾತ್​ ಜಯಂಟ್ಸ್​ ತಂಡ ಮಹಿಳೆಯರ ಪ್ರೀಮಿಯರ್​ ಲೀಗ್​ನ (WPL 2023) 14ನೇ ಪಂದ್ಯದಲ್ಲಿ ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್​ ತಂಡಕ್ಕೆ 11 ರನ್​ಗಳಿಂದ ಸೋಲುಣಿಸಿತು. ಇದರೊಂದಿಗೆ ಗುಜರಾತ್​ ಜಯಂಟ್ಸ್​ ತಂಡ ಒಟ್ಟು ಎರಡು ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು. ಇದುವರಗೆ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದ್ದ ಡೆಲ್ಲಿ ಕ್ಯಾಪಿಟಲ್ಸ್ ಬಳಗ ಈ ಹಣಾಹಣಿಯಲ್ಲಿ ತನ್ನ ದೌರ್ಬಲ್ಯ ಪ್ರದರ್ಶಿಸಿತು.

ಇಲ್ಲಿನ ಬ್ರಬೊರ್ನ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಸೋತು ಮೊದಲು ಬ್ಯಾಟ್​ ಮಾಡಿದ ಗುಜರಾತ್​ ಜಯಂಟ್ಸ್​ ತಂಡ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ಗೆ 147 ರನ್​ ಬಾರಿಸಿತು. ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಬಳಗ 18.4 ಓವರ್​ಗಳಲ್ಲಿ 136 ರನ್​ಗಳಿಗೆ ಆಲ್​ಔಟ್ ಆಯಿತು.

ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಲು ಮುಂದಾದಾಗ ಗುಜರಾತ್​ ಜಯಂಟ್ಸ್​ ತಂಡ ಉತ್ತಮ ಆರಂಭ ಪಡೆಯಲಿಲ್ಲ. ಮೆಗ್​ಲ್ಯಾನಿಂಗ್​ (18 ರನ್​), ಶಫಾಲಿ ವರ್ಮಾ (08) ಬೇಗನೆ ವಿಕೆಟ್ ಒಪ್ಪಿಸಿದರು. ಅಲೈಸ್​ ಕಾಪ್ಸಿ 22 ಪೇರಿಸಿ ಶಕ್ತಿ ತುಂಬಿದರೂ ಜೆಮಿಮಾ ರೋಡ್ರಿಗಸ್​ 1 ರನ್​ಗೆ ವಿಕೆಟ್​ ಒಪ್ಪಿಸುವ ಮೂಲಕ ಮತ್ತೊಂದು ಬಾರಿ ಹಿನ್ನಡೆಗೆ ಕಾರಣರಾದರು.

ಇದನ್ನೂ ಓದಿ : WPL 2023 : ಆರ್​ಸಿಬಿ ಮಹಿಳಾ ತಂಡದ ಕ್ಯಾಂಪ್​ಗೆ ಭೇಟಿ ನೀಡಿ ಸಲಹೆ ಕೊಟ್ಟ ವಿರಾಟ್​ ಕೊಹ್ಲಿ

ಮಧ್ಯಮ ಕ್ರಮಾಂಕದಲ್ಲಿ ಮರಿಜನೆ ಕಾಪ್​, 36 ರನ್​ ಬಾರಿಸಿ ರನ್​ ಗಳಿಕೆಗೆ ಪುಷ್ಟಿ ಕೊಟ್ಟರು. ಜೆಸ್​ ಜೊನಾಸೆನ್​ (4), ತಾನಿಯಾ ಭಾಟಿಯಾ (1) ಬೇಗನೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಅರುಂಧತಿ ರೆಡ್ಡಿ 25 ರನ್​ ಬಾರಿಸಿ ಚೈತನ್ಯ ಮೂಡಿಸಿದರು ಅವರಿಗೆ ಗೆಲುವಿನ ದಡ ದಾಟಿಸಲು ಸಾಧ್ಯವಾಗಲಿಲ್ಲ. ಶಿಖಾ ಪಾಂಡೆ 8 ರನ್​ ಬಾರಿಸಿದರು.

ಲಾರಾ ಆ್ಯಶ್ಲೀ ಅರ್ಧ ಶತಕ

ಮೊದಲು ಬ್ಯಾಟ್​ ಮಾಡಿದ ಗುಜರಾತ್ ತಂಡದ ಪರ ಗುಜರಾತ್​ ಪರ ಲಾರಾ ವೋಲ್ವರ್ತ್​​ (57) ಹಾಗೂ ಆ್ಯಶ್ಲೀ ಗಾರ್ಡ್ನರ್​ ( ಅಜೇಯ 51) ಅರ್ಧ ಶತಕಗಳನ್ನು ಬಾರಿಸಿದರು. ಆದರೆ, ಸೋಫಿ ಡಂಕ್ಲಿ (4) ವಿಕೆಟ್​ ಔಟಾಗುವುದರೊಂದಿಗೆ ಆತಂಕಕ್ಕೆ ಸಿಲುಕಿತು. ಈ ವೇಳೆ ಜತೆಯಾದ ಲಾರಾ ಹಾಗೂ ಹರ್ಲಿನ್ ಡಿಯೋಲ್​ (31) ನಿಧಾನಗತಿಯಲ್ಲಿ ಬ್ಯಾಟ್​ ಮಾಡಿ ಇನಿಂಗ್ಸ್​ ಕಟ್ಟಿದರು. ಆದರೆ ಜೊನಾಸೆನ್​ ಎಸೆತಕ್ಕೆ ಭಾಟಿಯಾಗೆ ಕ್ಯಾಚ್ ನೀಡಿದ ಹರ್ಲಿನ್​ ಪೆವಿಲಿಯನ್​ ಕಡೆಗೆ ನಿರಾಸೆಯಿಂದ ನಡೆದರು. ಈ ವೇಳೆ ಕ್ರೀಸ್​ಗೆ ಇಳಿದ ಆ್ಯಶ್ಲೀ ಗಾರ್ಡ್ನರ್​ ಸ್ಫೋಟಕ ಬ್ಯಾಟ್​ ಮಾಡಿ 33 ಎಸೆತಗಳಲ್ಲಿ 9 ಫೋರ್​ಗಳ ಸಮೇತ ಅರ್ಧ ಶತಕ ಬಾರಿಸಿದರು.

Exit mobile version