ಮುಂಬಯಿ: ಗುಜರಾತ್ ಜಯಂಟ್ಸ್ ಹಾಗೂ ಯುಪಿ ವಾರಿಯರ್ಸ್ ನಡುವೆ ಮಹಿಳೆಯರ ಪ್ರಿಮಿಯರ್ ಲೀಗ್ನ (WPL 2023) ಮೂರನೇ ಪಂದ್ಯ ಆಯೋಜನೆಗೊಂಡಿದ್ದು, ಟಾಸ್ ಗೆದ್ದಿರುವ ಗುಜರಾತ್ ಬಳಗ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಮೊದಲ ಪಂದ್ಯದಲ್ಲಿ ಮುಂಬಯಿ ಇಂಡಿಯನ್ಸ್ ವಿರುದ್ಧ 143 ರನ್ಗಳ ಹೀನಾಯ ಸೋಲಿಗೆ ಒಳಗಾಗಿರುವ ಗುಜರಾತ್ ಜಯಂಟ್ಸ್ ಈ ಹಣಾಹಣಿಯಲ್ಲಿ ಚೇತರಿಕೆಯ ಉಮೇದು ಹೊಂದಿದೆ. ಯುಪಿ ವಾರಿಯರ್ಸ್ ತಂಡಕ್ಕೆ ಇದು ಟೂರ್ನಿಯ ಮೊದಲ ಪಂದ್ಯವಾಗಿದೆ.
ಮೊದಲ ಪಂದ್ಯದಲ್ಲಿ ಗಾಯಗೊಂಡಿರುವ ಗುಜರಾತ್ ತಂಡದ ನಾಯಕಿ ಬೆತ್ ಮೂನಿ ಈ ಪಂದ್ಯದಲ್ಲಿ ಆಡುತ್ತಿಲ್ಲ. ಅವರಿಗೆ ವಿಶ್ರಾಂತಿ ಕಲ್ಪಿಸಲಾಗಿದೆ. ಮೊದಲ ಪಂದ್ಯದಲ್ಲಿ ಬ್ಯಾಟ್ ಮಾಡುವಾಗ ಅವರ ಕಾಲು ತಿರುಚಿ ಹೋಗಿತ್ತು. ಹೀಗಾಗಿ ಅವರು ಮಧ್ಯದಿಂದಲೇ ಮೈದಾನ ತೊರೆದಿದ್ದರು. ಹೀಗಾಗಿ ಎರಡನೇ ಪಂದ್ಯದಲ್ಲಿ ಆಡಲು ಅವರಿಗೆ ಸಾಧ್ಯವಾಗಿಲ್ಲ. ಹೀಗಾಗಿ ಸ್ನೇಹಾ ರಾಣಾ ತಂಡ ನೇತೃತ್ವ ವಹಿಸಿಕೊಂಡಿದ್ದಾರೆ.
ಇದನ್ನೂ ಓದಿ : WPL 2023: ಆರ್ಸಿಬಿಗೆ ಸೋಲಿನ ಡಿಚ್ಚಿ ಕೊಟ್ಟ ಡೆಲ್ಲಿ; 60 ರನ್ ಅಂತರದ ಗೆಲುವು
ಆಸ್ಟ್ರೇಲಿಯಾದ ಆಟಗಾರ್ತಿ ಅಲಿಸಾ ಹೀಲಿ ಯುಪಿ ವಾರಿಯರ್ಸ್ ತಂಡದ ನಾಯಕಿಯಾಗಿದ್ದಾರೆ. ಸಮರ್ಥ ತಂಡದೊಂದಿಗೆ ಕಣಕ್ಕೆ ಇಳಿಯುವುದಾಗಿ ಹೇಳಿರುವ ಅವರು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಂಡಗಳು
ಯುಪಿ ವಾರಿಯರ್ಸ್: ಅಲಿಸ್ಸಾ ಹೀಲಿ(ಕ್ಯಾಪ್ಟನ್), , ಶ್ವೇತಾ ಸೆಹ್ರಾವತ್, ತಹ್ಲಿಯಾ ಮೆಗ್ರಾತ್, ದೀಪ್ತಿ ಶರ್ಮಾ, ಗ್ರೇಸ್ ಹ್ಯಾರಿಸ್, ಕಿರಣ್ ನವಗಿರೆ, ದೇವಿಕಾ ವೈದ್ಯ, ಸಿಮ್ರಾನ್ ಶೇಖ್, ಸೋಫಿ ಎಕ್ಲೆಸ್ಟೋನ್, ರಾಜೇಶ್ವರಿ ಗಾಯಕ್ವಾಡ್, ಅಂಜಲಿ ಸರ್ವಾಣಿ.
ಗುಜರಾತ್ ಜಯಂಟ್ಸ್: ಸೋಫಿಯಾ ಡಂಕ್ಲಿ, ಸುಷ್ಮಾ ವರ್ಮಾ, ಎಸ್ ಮೇಘನಾ, ಹೇಮಲತಾ ದಯಾಲನ್, ಸ್ನೇಹ ರಾಣಾ (ನಾಯಕಿ), ಹರ್ಲೀನ್ ಡಿಯೋಲ್, ತನುಜಾ ಕನ್ವರ್, ಅನ್ನಾಬೆಲ್ ಸದರ್ಲ್ಯಾಂಡ್, ಮಾನ್ಸಿ ಜೋಶಿ, ಆಶ್ಲೀಗ್ ಗಾರ್ಡ್ನರ್, ಕಿಮ್ ಗಾರ್ತ್.