Site icon Vistara News

C K Nayudu Trophy: ಒಂದೇ ಓವರ್​ನಲ್ಲಿ 6 ಸಿಕ್ಸರ್ ಬಾರಿಸಿದ ವಂಶಿ ಕೃಷ್ಣ; ವಿಡಿಯೊ ವೈರಲ್​

Vamshi Krishna hits six sixes

ಆಂಧ್ರಪ್ರದೇಶ: ಸಿ.ಕೆ.ನಾಯ್ಡು ಟ್ರೋಫಿಯಲ್ಲಿ(C K Nayudu Trophy) ಆಂಧ್ರ ತಂಡದ ಆಟಗಾರ ವಂಶಿ ಕೃಷ್ಣ(Vamshhi Krrishna) ಸತತ 6 ಎಸೆತಗಳಿಗೆ 6 ಸಿಕ್ಸರ್(six sixes in an over)​ ಬಾರಿಸಿ ಸುದ್ದಿಯಾಗಿದ್ದಾರೆ. ರೈಲ್ವೇಸ್(Andhra and Railways) ವಿರುದ್ಧದ ಪಂದ್ಯದಲ್ಲಿ ಅವರು ಈ ಪ್ರದರ್ಶನ ತೋರಿದ್ದಾರೆ. ಜತೆಗೆ ಈ ಸಾಧನೆ ಮಾಡಿದ ಭಾರತದ ನಾಲ್ಕನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ರವಿಶಾಸ್ತ್ರಿ (1985), ಯುವರಾಜ್ ಸಿಂಗ್ (2007) ಮತ್ತು ಋತುರಾಜ್ ಗಾಯಕ್ವಾಡ್ (2022) ಅವರು ಈ ಹಿಂದೆ ಒಂದೇ ಓವರ್​ನಲ್ಲಿ ಆರು ಸಿಕ್ಸರ್​ಗಳನ್ನು ಬಾರಿಸಿದ್ದರು. ಇದೀಗ ಈ ಎಲೈಟ್​ ಕ್ಲಬ್​ಗೆ ವಂಶಿ ಕೃಷ್ಣ ಕೂಡ ಸೆರ್ಪಡೆಗೊಂಡಿದ್ದಾರೆ. ವಂಶಿ ಕೃಷ್ಣ ಅವರು ಸಿಕ್ಸ್​ ಸಿಕ್ಸರ್​ ಬಾರಿಸಿದ ವಿಡಿಯೊವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದೆ.

ಆಂಧ್ರಪ್ರದೇಶದ ಕಡಪಾ ಜಿಲ್ಲೆಯಲ್ಲಿ ನಡೆದ ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ವಂಶಿ ಕೃಷ್ಣ ಸ್ಪಿನ್ನರ್ ದಮನ್‌ದೀಪ್ ಸಿಂಗ್(Damandeep Singh) ಅವರ ಒಂದು ಓವರ್​ನಲ್ಲಿ 6 ಸಿಕ್ಸರ್​ಗಳನ್ನು ಬಾರಿಸಿದರು. ಈ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್​ ನಡೆಸಿದ ಅವರು 64 ಎಸೆತಗಳಲ್ಲಿ 110 ರನ್​ ಬಾರಿಸಿ ಗಮನಸೆಳೆದರು.

ಇದನ್ನೂ ಓದಿ Sachin Tendulkar: ಕೊಹ್ಲಿ ಪುತ್ರನಿಗೆ ಸಚಿನ್ ತೆಂಡೂಲ್ಕರ್​ ಇಟ್ಟಿದ್ದಾರೆ ಈ ಕ್ಯೂಟ್ ಹೆಸರು!

1985 ರ ರಣಜಿ ಟ್ರೋಫಿ ಪಂದ್ಯದಲ್ಲಿ ಮುಂಬೈ ಪರ ಆಡಿದ ರವಿಶಾಸ್ತ್ರಿ ಬರೋಡಾ ವಿರುದ್ಧ ಒಂದೇ ಓವರ್​ನಲ್ಲಿ ಆರು ಸಿಕ್ಸರ್​ಗಳನ್ನು ಬಾರಿಸಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಒಂದೇ ಓವರ್​ಗೆ 6 ಸಿಕ್ಸರ್​ ಬಾರಿಸಿದ ಭಾರತೀಯ ದಾಖಲೆ ಯುವರಾಜ್​ ಸಿಂಗ್(yuvraj singh)​ ಹೆಸರಿನಲ್ಲಿದೆ. 2007ರಲ್ಲಿ ನಡೆದ ಚೊಚ್ಚಲ ಟಿ20 ಪಂದ್ಯದಲ್ಲಿ ಇಂಗ್ಲೆಂಡ್​ ತಂಡದ ಸ್ಟುವರ್ಟ್ ಬ್ರಾಡ್ ಅವರ ಓವರ್​ಗೆ ಯುವಿ ಸತತ 6 ಸಿಕ್ಸರ್ ಬಾರಿಸಿದ್ದರು. ಅಚ್ಚರಿ ಎಂದರೆ ಈ ಸಿಕ್ಸರ್​ ಹೊಡೆತಗಳ ಕಾಮೆಂಟ್ರಿ ಮೂಲಕ ವರ್ಣನೆ ಮಾಡಿದ್ದು ರವಿಶಾಸ್ತ್ರಿಯವರೇ.

7 ಸಿಕ್ಸರ್​ ಬಾರಿಸಿದ್ದ ಗಾಯಕ್ವಾಡ್


ಋತುರಾಜ್ ಗಾಯಕ್ವಾಡ್ 2022ರಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಉತ್ತರ ಪ್ರದೇಶ ವಿರುದ್ಧ ಒಂದೇ ಓವರ್​ಗೆ 7 ಸಿಕ್ಸರ್​ ಚಚ್ಚಿದ್ದರು. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗಾಯಕ್ವಾಡ್ ಶಿವ ಸಿಂಗ್ ಅವರ ಓವರ್​ನಲ್ಲಿ ಈ ಸಾಧನೆ ಮಾಡಿದ್ದರು. ಒಂದು ನೋ ಬಾಲ್ ಸಹಿತ ಶಿವ ಸಿಂಗ್ ಎಸೆದ ಏಳೂ ಎಸೆತಗಳನ್ನು ಋತುರಾಜ್ ಸಿಕ್ಸರ್ ಬಡಿದಟ್ಟಿದ್ದರು.

Exit mobile version