Site icon Vistara News

CWG- 2022 | ಗುರ್ದೀಪ್‌ಗೆ ಕಂಚಿನ ಗೌರವ, ಭಾರತಕ್ಕೆ ವೇಟ್‌ಲಿಫ್ಟಿಂಗ್‌ನಲ್ಲಿ 10ನೇ ಪದಕ

CWG- 2022

ಬರ್ಮಿಂಗ್ಹಮ್‌ : ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಭಾರತ ವೇಟ್‌ಲಿಫ್ಟರ್ ಗುರ್ದೀಪ್‌ ಸಿಂಗ್‌ ೧೦೯+ ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಇದು ವೇಟ್‌ಲಿಫ್ಟಿಂಗ್‌ನಲ್ಲಿ ಭಾರತಕ್ಕೆ ಲಭಿಸಿರುವ ೧೦ನೇ ಪದಕವಾಗಿದೆ. ಒಟ್ಟಾರೆಯಾಗಿ ಭಾರತದ ಪದಕಗಳ ಸಂಖ್ಯೆ ೧೭ಕ್ಕೇರಿದೆ.

ಬುಧವಾರ ರಾತ್ರಿ ನಡೆದ ವೇಟ್‌ಲಿಫ್ಟಿಂಗ್‌ ಫೈನಲ್‌ ಸ್ಪರ್ಧೆಯಲ್ಲಿ ಸ್ನ್ಯಾಚ್‌ ವಿಭಾಗದಲ್ಲಿ ೧೬೭ ಕೆ.ಜಿ ಭಾರ ಎತ್ತಿದ ಗುರ್ದೀಪ್‌, ಕ್ಲೀನ್‌ ಆಂಡ್‌ ಜರ್ಕ್‌ ವಿಭಾಗದಲ್ಲಿ ೨೨೩ ಕೆ.ಜಿ ಭಾರ ಎತ್ತುವ ಮೂಲಕ ಒಟ್ಟಾರೆ ೩೯೦ ಕೆ.ಜಿ ಭಾರವನ್ನು ಮೇಲಕ್ಕೆತ್ತಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.

Exit mobile version