Site icon Vistara News

IND vs AUS Final: ವಿಶ್ವಕಪ್​ ಸೋಲಿನ ನೋವು ಮರೆಯಲು ಒಂದು ದಿನ ರಜೆ ಕೊಟ್ಟ ಕಂಪನಿ

team india

ಗುರುಗ್ರಾಮ: ಭಾನುವಾರ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್​ ಫೈನಲ್ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್​ಗಳ ಸೋಲಿಗೆ ತುತ್ತಾಗಿ ವಿಶ್ವಕಪ್​ ಟ್ರೋಫಿಯಿಂದ ವಂಚಿತವಾಗಿತ್ತು. ಭಾರತ ತಂಡದ ಈ ಸೋಲಿನ ಆಘಾತವನ್ನು ನಿವಾರಿಸಿಕೊಳ್ಳಲು ಗುರುಗ್ರಾಮದ ಕಂಪನಿಯೊಂದು ತಮ್ಮ ಉದ್ಯೋಗಿಗಳಿಗೆ ಒಂದು ದಿನದ ರಜೆ ನೀಡಿತ್ತು. ಈ ಸುದ್ದಿ ಎಲ್ಲಡೆ ವೈರಲ್​ ಆಗಿದೆ.

ಗುರುಗ್ರಾಮದ ಮಾರ್ಕೆಟಿಂಗ್ ಮೂವ್ಸ್ ಮತ್ತು ಮಾರ್ಕೆಟಿಂಗ್ ಮೂವ್ಸ್ ಏಜೆನ್ಸಿ ಎನ್ನುವ ಹೆಸರಿನ ಕಂಪನಿಯೂ ಭಾರತದ ಸೋಲಿಗೆ ಭಾವನಾತ್ಮಕ ಸಂದೇಶ ಬರೆದು ತಮ್ಮ ಸಂಸ್ಥೆಯ ಎಲ್ಲ ಉದ್ಯೋಗಿಗಳು ಕೂಡ ಈ ಸೋಲಿನ ಆಘಾತದಿಂದ ಚೇತರಿಕೊಳ್ಳುವ ಸಲುವಾಗಿ ಒಂದು ದಿನನ ರಜೆ ನೀಡಿತ್ತು.

ದೀಕ್ಷಾ ಗುಪ್ತಾ ಅವರು ರಜೆ ನೀಡಿದ ಸುದ್ದಿಯನ್ನು ತಮ್ಮ ಸಾಮಾಜಿಕ ಜಾಲತಾಣವಾದ ಲಿಂಕ್ಡ್‌ಇನ್‌ ನಲ್ಲಿ ಹಂಚಿಕೊಂಡಿದ್ದಾರೆ. ಅವರ ಪೋಸ್ಟ್‌ನಲ್ಲಿ, ನವೆಂಬರ್ 19, 2023ರಂದು ಟೀಮ್ ಇಂಡಿಯಾ ವಿಶ್ವಕಪ್ ಟ್ರೋಫಿಯನ್ನು ಎತ್ತುವಲ್ಲಿ ವಿಫಲವಾಗಿರುವುದನ್ನು ಕಂಡು ದೇಶ 1.4 ಶತಕೋಟಿ ಜನರ ಹೃದಯ ಭಾರವಾಗಿದೆ. ಈ ಸೋಲಿನ ಆಘಾತದಿಂದ ಎಲ್ಲರೂ ಹೊರಬರುವ ಸಲುವಾಗಿ ಸೋಮವಾರದಂದು ನಮ್ಮ ಕಂಪನಿಗೆ ರಜೆ ನೀಡಲಾಗಿದೆ ಎಂದು ಬರೆಯಲಾದ ಪತ್ರವಿದೆ.

ನರೇಂದ್ರ ಮೋದಿ ಕ್ರಿಕೆಟ್​ ಸ್ಟಡಿಯಂನಲ್ಲಿ ನಡೆದ ಏಕದಿನ ಕ್ರಿಕೆಟ್​ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸುವ ಮೂಲಕ (IND vs AUS Final) ಭಾರತದ ವಿಶ್ವಕಪ್​ ಟ್ರೋಫಿ ಕನಸಿಗೆ ಟ್ರಾವಿಸ್​ ಹೆಡ್​(travis head) ಶತಕ ಬಾರಿಸಿ ಕೊಳ್ಳಿ ಇಟ್ಟಿದ್ದರು.

ಟ್ರಾವಿಸ್​ ಹೆಡ್​​ ಅವರು ಫೈನಲ್​ ಪಂದ್ಯದಲ್ಲಿ ಭಾರತೀಯ ಬೌಲರ್​ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಂತು 15 ಮನಮೋಹಕ ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 120 ಎಸೆತಗಳಲ್ಲಿ 137 ರನ್ ಬಾರಿಸಿ ಆಸೀಸ್​ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಇದನ್ನೂ ಓದಿ IND vs AUS : ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಗೆ ಭಾರತ ತಂಡ ಪ್ರಕಟ

ಫೈನಲ್​ ಪಂದ್ಯದಲ್ಲಿ ಟಾಸ್ ಸೋತ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನ ಪಡೆಯಿತು. ಬ್ಯಾಟಿಂಗ್ ವೈಫಲ್ಯ ಎದುರಿಸಿದ ಭಾರತ ತಂಡ ನಿಗದಿತ 50 ಓವರ್​ಗಳಲ್ಲಿ 240 ರನ್​ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಆಸ್ಟ್ರೇಲಿಯಾ ತಂಡ 43 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 241 ರನ್ ಬಾರಿಸಿ ಗೆಲುವು ಸಾಧಿಸಿತು. ಟ್ರಾವಿಸ್ ಹೆಡ್​ 137 ರನ್​ ಬಾರಿಸಿ ಭಾರತದ ಗೆಲುವನ್ನು ಕಸಿದರು. ಆಸೀಸ್​ ಪಾಲಿಗೆ ಗೆಲುವಿನ ರೂವಾರಿ ಎನಿಸಿಕೊಂಡರು.

ಈಡೇರದ 2003ರ ವಿಶ್ವ ಕಪ್​ ಫೈನಲ್​ ಸೋಲಿನ ಸೇಡು

ತವರು ನೆಲದಲ್ಲಿ ನಡೆದ ವಿಶ್ವ ಕಪ್ ಆವೃತ್ತಿಯಲ್ಲಿ ಟ್ರೋಫಿ ಗೆದ್ದೇ ಗೆಲ್ಲುತ್ತೇವೆ ಎಂಬ ಟೀಮ್​ ಇಂಡಿಯಾದ ಹುಮ್ಮಸ್ಸು ಬತ್ತಿ ಹೋಯಿತು. ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ನಡೆದ ಏಕ ದಿನ ವಿಶ್ವ ಕಪ್​ನ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ತಲೆ ಬಾಗಿದ ಟೀಮ್ ಇಂಡಿಯಾದ ಪ್ರಯತ್ನಗಳು ಭಗ್ನವಾಗಿದೆ. 2003ರ ವಿಶ್ವ ಕಪ್​ನ ಫೈನಲ್ ಫಲಿತಾಂಶವು ಮತ್ತೊಂದು ಬಾರಿ ಪುನರಾವರ್ತನೆಯಾಗಿದೆ. ಅಂದು ಭಾರತ ತಂಡ ಆಸ್ಟ್ರೇಲಿಯಾ ತಂಡದ ವಿರುದ್ಧವೇ 125 ರನ್​ಗಳಿಂದ ಸೋಲು ಕಂಡಿತ್ತು.

ಇದನ್ನೂ ಓದಿ ಪಾಕ್​ ಆಟಗಾರನ ಬ್ಯಾಟ್​ನಿಂದ ಭಾರತದ ವಿಶ್ವಕಪ್ ಗೆಲುವು ಕಸಿದ ಟ್ರಾವಿಸ್​ ಹೆಡ್​!

Exit mobile version