IND vs AUS Final: ವಿಶ್ವಕಪ್​ ಸೋಲಿನ ನೋವು ಮರೆಯಲು ಒಂದು ದಿನ ರಜೆ ಕೊಟ್ಟ ಕಂಪನಿ Vistara News

ಕ್ರಿಕೆಟ್

IND vs AUS Final: ವಿಶ್ವಕಪ್​ ಸೋಲಿನ ನೋವು ಮರೆಯಲು ಒಂದು ದಿನ ರಜೆ ಕೊಟ್ಟ ಕಂಪನಿ

ಗುರುಗ್ರಾಮದ ಮಾರ್ಕೆಟಿಂಗ್ ಮೂವ್ಸ್ ಮತ್ತು ಮಾರ್ಕೆಟಿಂಗ್ ಮೂವ್ಸ್ ಏಜೆನ್ಸಿ ಎನ್ನುವ ಹೆಸರಿನ ಕಂಪನಿ ವಿಶ್ವಕಪ್​ನಲ್ಲಿ ಭಾರತದ ತಂಡದ ಸೋಲಿನ ನೋವು ಮರೆಯಲು ಒಂದು ದಿನ ರಜೆ ನೀಡಿದ ಸುದ್ದಿ ವೈರಲ್​ ಆಗಿದೆ.

VISTARANEWS.COM


on

team india
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಗುರುಗ್ರಾಮ: ಭಾನುವಾರ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್​ ಫೈನಲ್ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್​ಗಳ ಸೋಲಿಗೆ ತುತ್ತಾಗಿ ವಿಶ್ವಕಪ್​ ಟ್ರೋಫಿಯಿಂದ ವಂಚಿತವಾಗಿತ್ತು. ಭಾರತ ತಂಡದ ಈ ಸೋಲಿನ ಆಘಾತವನ್ನು ನಿವಾರಿಸಿಕೊಳ್ಳಲು ಗುರುಗ್ರಾಮದ ಕಂಪನಿಯೊಂದು ತಮ್ಮ ಉದ್ಯೋಗಿಗಳಿಗೆ ಒಂದು ದಿನದ ರಜೆ ನೀಡಿತ್ತು. ಈ ಸುದ್ದಿ ಎಲ್ಲಡೆ ವೈರಲ್​ ಆಗಿದೆ.

ಗುರುಗ್ರಾಮದ ಮಾರ್ಕೆಟಿಂಗ್ ಮೂವ್ಸ್ ಮತ್ತು ಮಾರ್ಕೆಟಿಂಗ್ ಮೂವ್ಸ್ ಏಜೆನ್ಸಿ ಎನ್ನುವ ಹೆಸರಿನ ಕಂಪನಿಯೂ ಭಾರತದ ಸೋಲಿಗೆ ಭಾವನಾತ್ಮಕ ಸಂದೇಶ ಬರೆದು ತಮ್ಮ ಸಂಸ್ಥೆಯ ಎಲ್ಲ ಉದ್ಯೋಗಿಗಳು ಕೂಡ ಈ ಸೋಲಿನ ಆಘಾತದಿಂದ ಚೇತರಿಕೊಳ್ಳುವ ಸಲುವಾಗಿ ಒಂದು ದಿನನ ರಜೆ ನೀಡಿತ್ತು.

ದೀಕ್ಷಾ ಗುಪ್ತಾ ಅವರು ರಜೆ ನೀಡಿದ ಸುದ್ದಿಯನ್ನು ತಮ್ಮ ಸಾಮಾಜಿಕ ಜಾಲತಾಣವಾದ ಲಿಂಕ್ಡ್‌ಇನ್‌ ನಲ್ಲಿ ಹಂಚಿಕೊಂಡಿದ್ದಾರೆ. ಅವರ ಪೋಸ್ಟ್‌ನಲ್ಲಿ, ನವೆಂಬರ್ 19, 2023ರಂದು ಟೀಮ್ ಇಂಡಿಯಾ ವಿಶ್ವಕಪ್ ಟ್ರೋಫಿಯನ್ನು ಎತ್ತುವಲ್ಲಿ ವಿಫಲವಾಗಿರುವುದನ್ನು ಕಂಡು ದೇಶ 1.4 ಶತಕೋಟಿ ಜನರ ಹೃದಯ ಭಾರವಾಗಿದೆ. ಈ ಸೋಲಿನ ಆಘಾತದಿಂದ ಎಲ್ಲರೂ ಹೊರಬರುವ ಸಲುವಾಗಿ ಸೋಮವಾರದಂದು ನಮ್ಮ ಕಂಪನಿಗೆ ರಜೆ ನೀಡಲಾಗಿದೆ ಎಂದು ಬರೆಯಲಾದ ಪತ್ರವಿದೆ.

ನರೇಂದ್ರ ಮೋದಿ ಕ್ರಿಕೆಟ್​ ಸ್ಟಡಿಯಂನಲ್ಲಿ ನಡೆದ ಏಕದಿನ ಕ್ರಿಕೆಟ್​ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸುವ ಮೂಲಕ (IND vs AUS Final) ಭಾರತದ ವಿಶ್ವಕಪ್​ ಟ್ರೋಫಿ ಕನಸಿಗೆ ಟ್ರಾವಿಸ್​ ಹೆಡ್​(travis head) ಶತಕ ಬಾರಿಸಿ ಕೊಳ್ಳಿ ಇಟ್ಟಿದ್ದರು.

ಟ್ರಾವಿಸ್​ ಹೆಡ್​​ ಅವರು ಫೈನಲ್​ ಪಂದ್ಯದಲ್ಲಿ ಭಾರತೀಯ ಬೌಲರ್​ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಂತು 15 ಮನಮೋಹಕ ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 120 ಎಸೆತಗಳಲ್ಲಿ 137 ರನ್ ಬಾರಿಸಿ ಆಸೀಸ್​ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಇದನ್ನೂ ಓದಿ IND vs AUS : ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಗೆ ಭಾರತ ತಂಡ ಪ್ರಕಟ

ಫೈನಲ್​ ಪಂದ್ಯದಲ್ಲಿ ಟಾಸ್ ಸೋತ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನ ಪಡೆಯಿತು. ಬ್ಯಾಟಿಂಗ್ ವೈಫಲ್ಯ ಎದುರಿಸಿದ ಭಾರತ ತಂಡ ನಿಗದಿತ 50 ಓವರ್​ಗಳಲ್ಲಿ 240 ರನ್​ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಆಸ್ಟ್ರೇಲಿಯಾ ತಂಡ 43 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 241 ರನ್ ಬಾರಿಸಿ ಗೆಲುವು ಸಾಧಿಸಿತು. ಟ್ರಾವಿಸ್ ಹೆಡ್​ 137 ರನ್​ ಬಾರಿಸಿ ಭಾರತದ ಗೆಲುವನ್ನು ಕಸಿದರು. ಆಸೀಸ್​ ಪಾಲಿಗೆ ಗೆಲುವಿನ ರೂವಾರಿ ಎನಿಸಿಕೊಂಡರು.

ಈಡೇರದ 2003ರ ವಿಶ್ವ ಕಪ್​ ಫೈನಲ್​ ಸೋಲಿನ ಸೇಡು

ತವರು ನೆಲದಲ್ಲಿ ನಡೆದ ವಿಶ್ವ ಕಪ್ ಆವೃತ್ತಿಯಲ್ಲಿ ಟ್ರೋಫಿ ಗೆದ್ದೇ ಗೆಲ್ಲುತ್ತೇವೆ ಎಂಬ ಟೀಮ್​ ಇಂಡಿಯಾದ ಹುಮ್ಮಸ್ಸು ಬತ್ತಿ ಹೋಯಿತು. ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ನಡೆದ ಏಕ ದಿನ ವಿಶ್ವ ಕಪ್​ನ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ತಲೆ ಬಾಗಿದ ಟೀಮ್ ಇಂಡಿಯಾದ ಪ್ರಯತ್ನಗಳು ಭಗ್ನವಾಗಿದೆ. 2003ರ ವಿಶ್ವ ಕಪ್​ನ ಫೈನಲ್ ಫಲಿತಾಂಶವು ಮತ್ತೊಂದು ಬಾರಿ ಪುನರಾವರ್ತನೆಯಾಗಿದೆ. ಅಂದು ಭಾರತ ತಂಡ ಆಸ್ಟ್ರೇಲಿಯಾ ತಂಡದ ವಿರುದ್ಧವೇ 125 ರನ್​ಗಳಿಂದ ಸೋಲು ಕಂಡಿತ್ತು.

ಇದನ್ನೂ ಓದಿ ಪಾಕ್​ ಆಟಗಾರನ ಬ್ಯಾಟ್​ನಿಂದ ಭಾರತದ ವಿಶ್ವಕಪ್ ಗೆಲುವು ಕಸಿದ ಟ್ರಾವಿಸ್​ ಹೆಡ್​!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

Mukesh Kumar : ಆಸ್ಟ್ರೇಲಿಯಾ ವಿರುದ್ಧ ಸರಣಿಯ ನಡುವೆಯೇ ಮದುವೆಯಾದ ಮುಕೇಶ್​ ಕುಮಾರ್​

Mukesh Kumar : ಮುಕೇಶ್ ಕುಮಾರ್​ ಅವರು ಆಸ್ಟ್ರೇಲಿಯಾ ವಿರುದ್ಧದ ಮೂರನೇ ಪಂದ್ಯದಲ್ಲಿ ಮುಕೇಶ್​ ಕುಮಾರ್​ ಆಡಿರಲಿಲ್ಲ.

VISTARANEWS.COM


on

mukehs kumar
Koo

ಬೆಂಗಳೂರು: ಭಾರತ ತಂಡದ ಮಧ್ಯಮ ವೇಗದ ಬೌಲರ್ ಮುಖೇಶ್ ಕುಮಾರ್ ಬುಧವಾರ ಉತ್ತರ ಪ್ರದೇಶದ ಗೋರಖ್​ಪುರದಲ್ಲಿ ವಿವಾಹವಾದರು. ಅವರು ಅದಕ್ಕಾಗಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೂರನೇ ಪಂದ್ಯದಲ್ಲಿ ಬಿಡುವು ಪಡೆದುಕೊಂಡದ್ದರು.

30 ವರ್ಷದ ಕ್ರಿಕೆಟಿಗ ತನ್ನ ಪತ್ನಿ ದಿವ್ಯಾ ಸಿಂಗ್ ಎಂಬುವರನ್ನು ಮದುವೆಯಾಗಿದ್ದಾರೆ. ಅವರ ಮದುವೆಯ ಅರಶಿನ ಶಾಸ್ತ್ರ ಕಾರ್ಯಕ್ರಮದ ವಿಡಿಯೊಗಳು ವೈರಲ್ ಆಗಿವೆ. ಸಮಾರಂಭದಲ್ಲಿ ಅವರಿಬ್ಬರೂ ನೃತ್ಯ ಮಾಡಿ ಗಮನ ಸೆಳೆದಿದ್ದರು. ಮುಕೇಶ್ ಕುಮಾರ್ ಅವರ ಮದುವೆಯಲ್ಲಿ ಶೆರ್ವಾನಿ ಧರಿಸಿದ ಸ್ಟೈಲಿಶ್ ಆಗಿ ಪ್ರವೇಶ ಮಾಡಿದ್ದರು. ಈ ವಿಡಿಯೊ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವೈರಲ್ ಆಯಿತು ಡ್ಯಾನ್ಸ್

ನವೆಂಬರ್ 28 ರಂದು ಮುಖೇಶ್ ಕುಮಾರ್ ಮತ್ತು ಅವರ ಪತ್ನಿ ನಡೆಸಿದ ಹಲ್ದಿ ಸಮಾರಂಭದ ನೃತ್ಯ ಮಾಡಿದ್ದರು. ಇದು ನೆಟ್ಟಿಗರ ಗಮನ ಸೆಳೆಯಿತು/ ಸಾಂಪ್ರದಾಯಿಕ ನಡೆದ ಕಾರ್ಯಕ್ರಮದದಲ್ಲಿ ದಂಪತಿ ಭೋಜ್ಪುರಿ ರಾಗಕ್ಕೆ ನೃತ್ಯ ಮಾಡಿದರು. ಈ ನೃತ್ಯವು ದೇಶಾದ್ಯಂತದ ಅಭಿಮಾನಿಗಳಿಂದ ವ್ಯಾಪಕ ಮೆಚ್ಚುಗೆ ಗಳಿಸಿತು.

ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಪೋಸ್ಟ್ ಮಾಡಲಾದ ವೀಡಿಯೊದಲ್ಲಿ, ಹಲ್ದಿ ಸಮಾರಂಭದಲ್ಲಿ ಮುಖೇಶ್ ತನ್ನ ನೃತ್ಯ ಕೌಶಲ್ಯವನ್ನು ಪ್ರದರ್ಶಿಸಿದರು. ಅವನ ದಿವ್ಯಾ ಸಿಂಗ್​ ಅವರೂ ಉತ್ಸಾಹದಿಂದ ನೃತ್ಯದಲ್ಲಿ ಮಾಡಿದ್ದರು ಹತ್ತಿರದ ಸಂಬಂಧಿಗಳು ಮತ್ತು ಸ್ನೇಹಿತರು ಮದುವೆಯ ಸಂಭ್ರಮದ ವಾತಾವರಣವನ್ನು ಹೆಚ್ಚಿಸಿದ್ದರು.

ಎಕಾನಮಿ ಬೌಲರ್​

ತಮ್ಮ ಬೌಲಿಂಗ್ ಕೌಶಲಗಳಿಎ ಹೆಸರುವಾಸಿಯಾದ ಮುಖೇಶ್ ಕುಮಾರ್, ವಿಶೇಷವಾಗಿ ಎಕಾನಮಿ ಸ್ಪೆಲ್​ಗಳನ್ನು ನೀಡುವೆಲ್ಲಿ ನಿಸ್ಸೀಮರು. ಯಾರ್ಕರ್ಗಳನ್ನು ಕರಗತ ಮಾಡಿಕೊಂಡಿರುವ ಅವರು ಪ್ರತಿಭೆಯ ಇನ್ನೊಂದು ಮುಖವನ್ನು ಮದುವೆ ಸಮಾರಂಭದಲ್ಲಿ ಪ್ರದರ್ಶಿಸಿದರು. ಮದುವೆಯ ಸಿದ್ಧತೆಗಳ ನಡುವೆ, ಮುಖೇಶ್ ಕ್ರಿಕೆಟ್​ನಿಂದ ವಿರಾಮ ತೆಗೆದುಕೊಂಡರು, ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟಿ 20 ಪಂದ್ಯಕ್ಕೆ ಮೊದಲು ಬಿಸಿಸಿಐನಿಂದ ಅನುಮತಿ ಪಡೆದು ಮನೆಗೆ ತೆರಳಿದ್ದರು. ಅವರ ಬದಲಿ ದೀಪಕ್ ಚಹರ್ ಅವರನ್ನು ತಂಡಕ್ಕೆ ಕರೆಸಿಕೊಳ್ಳಲಾಗಿತ್ತು.

ಇದನ್ನೂ ಓದಿ : Rinku Singh : ರಿಂಕು ಸಿಂಗ್​ ಉತ್ತಮ ಫಿನಿಶರ್ ಅಲ್ಲ ಎಂದು ಹೇಳಿ ಅಚ್ಚರಿ ಮೂಡಿಸಿದ ಆಶೀಶ್​ ನೆಹ್ರಾ

ಪ್ರಸ್ತುತ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ಟಿ 20 ಐ ಸರಣಿಯಲ್ಲಿ ಮುಖೇಶ್ ಅವರ ಪ್ರದರ್ಶನವು ಏರಿಳಿತಗಳ ಮಿಶ್ರಣವಾಗಿದೆ. ಮೊದಲ ಪಂದ್ಯದಲ್ಲಿ ಅವರು ನಾಲ್ಕು ಓವರ್​ಗಳಲ್ಲಿ ಕೇವಲ 29 ರನ್​ಗಳನ್ನು ಬಿಟ್ಟುಕೊಟ್ಟು ಉತ್ತಮ ಸ್ಪೆಲ್ ಪ್ರದರ್ಶಿಸಿದರೆ, ಎರಡನೇ ಟಿ20 ಐ ಪಂದ್ಯದಲ್ಲಿ 49 ರನ್​ಗಳನ್ನು ನೀಡಿದರು. ಅವರು ರಾಯ್ಪುರದಲ್ಲಿ ನಡೆಯಲಿರುವ ಮುಂಬರುವ ನಾಲ್ಕನೇ ಟಿ20 ಯಲ್ಲಿ ಪಂದ್ಯಕ್ಕೆ ಮರಳುವ ನಿರೀಕ್ಷೆಯಿದೆ.

ಮುಕೇಶ್ ಕುಮಾರ್ 7 ಟಿ20, 3 ಏಕದಿನ ಹಾಗೂ 1 ಟೆಸ್ಟ್ ಪಂದ್ಯವನ್ನಾಡಿದ್ದಾರೆ. ಈ ವರ್ಷದ ಆರಂಭದಲ್ಲಿ ವೆಸ್ಟ್ ಇಂಡೀಸ್​ನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಮುಖೇಶ್ ಕುಮಾರ್ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಪ್ರದರ್ಶಿಸಿದ ಅಸಾಧಾರಣ ಬೌಲಿಂಗ್ ಕೌಶಲ್ಯದಿಂದಾಗಿ ಅವರು ರಾಷ್ಟ್ರೀಯ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಅವರು 40 ಪಂದ್ಯಗಳಲ್ಲಿ ಒಟ್ಟು 151 ವಿಕೆಟ್​​ಗಳನ್ನು ಪಡೆದಿದ್ದಾರೆ.

Continue Reading

ಕ್ರಿಕೆಟ್

IND VS SL : ಟಿ20 ವಿಶ್ವ ಕಪ್​ ಮುಗಿಸಿ ಲಂಕಾಗೆ ಹಾರಲಿದೆ ಭಾರತ ಕ್ರಿಕೆಟ್​ ತಂಡ

IND VS SL : ವಿಶ್ವ ಕಪ್​ನಲ್ಲಿ ಆಡಿರುವ ಆಟಗಾರರಿಗೆ ವಿಶ್ರಾಂತಿ ಕಲ್ಪಿಸಿ ಯುವ ಆಟಗಾರರಿಗೆ ಲಂಕಾಗೆ ಪ್ರವಾಸದ ಅವಕಾಶ ನೀಡುವ ಸಾಧ್ಯತೆಗಳಿವೆ.

VISTARANEWS.COM


on

Srilanka Cricket team
Koo

ನವದೆಹಲಿ: ಮುಂದಿನ ವರ್ಷದ ಮಧ್ಯಂತರದಲ್ಲಿ ಭಾರತವು ಆರು ವೈಟ್-ಬಾಲ್ ಪಂದ್ಯಗಳಿಗಾಗಿ ದ್ವೀಪ ರಾಷ್ಟ್ರ ಶ್ರೀಲಂಕಾಗೆ (IND VS SL) ಪ್ರವಾಸ ಕೈಗೊಳ್ಳಲಿದೆ ಎಂದು ಅಲ್ಲಿನ ಕ್ರಿಕೆಟ್ ಮಂಡಳಿ ಬುಧವಾರ (ನವೆಂಬರ್ 29) ಪ್ರಕಟಿಸಿದೆ. 2024ರ ಜುಲೈನಲ್ಲಿ ಶ್ರೀಲಂಕಾ ತಂಡ ಭಾರತ ವಿರುದ್ಧ 3 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನಾಡಲಿದೆ. ಜೂನ್ 4 ರಿಂದ ಜೂನ್ 30 ರವರೆಗೆ ವೆಸ್ಟ್ ಇಂಡೀಸ್ ಮತ್ತು ಯುನೈಟೆಡ್ ಸ್ಟೇಟ್ಸ್​ನಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ನಂತರ ಸರಣಿ ನಡೆಯಲಿದೆ.

ಶ್ರೀಲಂಕಾ ಕ್ರಿಕೆಟ್ ಮಂಡಳಿ ವೇಳಾಪಟ್ಟಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಕಟಿಸಿದೆ. ಫ್ಯೂಚರ್ ಟೂರ್ಸ್ ಪ್ರೋಗ್ರಾಂನ ಭಾಗವಾಗಿ ಭಾರತವು ತಂಡವು ವೈಟ್-ಬಾಲ್ ಕ್ರಿಕೆಟ್​ಗಾಗಿ ಶ್ರೀಲಂಕಾಕ್ಕೆ ಪ್ರಯಾಣಿಸಲಿದೆ ಎಂದು ಹೇಳಲಾಗಿದೆ. ವೆಸ್ಟ್ ಇಂಡೀಸ್ ಮತ್ತು ಯುಎಸ್ಎಯಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ಮುಗಿದ ನಂತರ ಸರಣಿ ನಡೆಯಲಿದೆ.

ಶ್ರೀಲಂಕಾ ಕ್ರಿಕೆಟ್ ಮಂಡಳಿಯನ್ನು ಐಸಿಸಿ ನಿಷೇಧಿಸಿದ್ದರೂ, ಇದು ದ್ವಿಪಕ್ಷೀಯ ಸರಣಿಗೆ ಅಡ್ಡಿಯಾಗುವುದಿಲ್ಲ. ವೇಳಾಪಟ್ಟಿಯು ಎಫ್ ಟಿಪಿಯ ಭಾಗವಾಗಿರುವುದರಿಂದ ತಂಡಗಳು ಶ್ರೀಲಂಕಾ ವಿರುದ್ಧ ಸ್ವದೇಶದಲ್ಲಿ ಮತ್ತು ವಿದೇಶದಲ್ಲಿ ಆಡಬಹುದು. ಹೀಗಾಗಿ ಭಾರತ ಅಲ್ಲಿಗೆ ಪ್ರವಾಸ ಮಾಡಲಿದೆ. ಅದೇ ರೀತಿ ಟಿ20 ವಿಶ್ವಕಪ್ ಮುಗಿದ ಕೂಡಲೇ ಭಾರತ ತಂಡಕ್ಕೆ ತಕ್ಷಣವೇ ಎದುರಾಗುವ ಪ್ರವಾಸವಾಗಲಿದೆ. ಟಿ 20 ವಿಶ್ವಕಪ್​ನಲ್ಲಿ ಪ್ರಮುಖ ಪಾತ್ರ ವಹಿಸುವ ಕೆಲವು ಹಿರಿಯ ಆಟಗಾರರಿಗೆ ಶ್ರೀಲಂಕಾ ಪ್ರವಾಸದಿಂದ ವಿಶ್ರಾಂತಿ ಸಿಗಬಹುದು.

“ನಾವು ಸಾಕಷ್ಟು ಅಂತರರಾಷ್ಟ್ರೀಯ ಕ್ರಿಕೆಟ್ ಸರಣಿಗಳನ್ನು ಆಡಬೇಕಾಗಿದೆ. ಇದು ನಮಗೆ ಉತ್ತಮ ವರ್ಷವಾಗಿದೆ. ಏಕೆಂದರೆ ನಮ್ಮ ತಂಡವು ವರ್ಷಪೂರ್ತಿ ಸ್ಪರ್ಧಾತ್ಮಕ ಕ್ರಿಕೆಟ್​ನಲ್ಲಿ ತೊಡಗಲಿದೆ” ಎಂದು ಶ್ರೀಲಂಕಾ ಕ್ರಿಕೆಟ್​​ನ ಸಿಇಒ ಆಶ್ಲೆ ಡಿ ಸಿಲ್ವಾ ಹೇಳಿದರು.

“2024 ಕ್ಯಾಲೆಂಡರ್ ನಮ್ಮ ಆಟಗಾರರಿಗೆ ಸಾಕಷ್ಟು ಆಟದ ಅವಕಾಶಗಳು ನೀಡುವ ನಿರೀಕ್ಷೆಯಿದೆ” ಎಂದು ಡಿ ಸಿಲ್ವಾ ಹೇಳಿದರು.

ಲಂಕಾಗೆ ಹಲವು ಸರಣಿಗಳು

ಶ್ರೀಲಂಕಾ ಪುರುಷರ ತಂಡವು ತನ್ನ 2024 ರ ಅಂತಾರರಾಷ್ಟ್ರೀಯ ಕ್ರಿಕೆಟ್ ಕ್ಯಾಲೆಂಡರ್ ಅನ್ನು ಜನವರಿಯಲ್ಲಿ ಜಿಂಬಾಬ್ವೆ ವಿರುದ್ಧ ತವರು ಸರಣಿಯೊಂದಿಗೆ ಪ್ರಾರಂಭಿಸಲಿದೆ. ತಲಾ ಮೂರು ಏಕದಿನ ಮತ್ತು ಟಿ 20 ಪಂದ್ಯಗಳನ್ನು ಈ ಸರಣಿ ಒಳಗೊಂಡಿದೆ. ಇದರ ನಂತರ ಜನವರಿ ಮತ್ತು ಫೆಬ್ರವರಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ ತವರಿನಲ್ಲಿ ಒಂದು ಟೆಸ್ಟ್, ಮೂರು ಏಕದಿನ ಮತ್ತು ಮೂರು ಟಿ 20 ಪಂದ್ಯಗಳು ಸೇರಿದಂತೆ ಎಲ್ಲಾ ಸ್ವರೂಪದ ಸರಣಿಯಲ್ಲಿ ಶ್ರೀಲಂಕಾ ತಂಡ ಪಾಲ್ಗೊಳ್ಳಲಿದೆ.

ಇದನ್ನೂ ಓದಿ : Rinku Singh : ರಿಂಕು ಸಿಂಗ್​ ಉತ್ತಮ ಫಿನಿಶರ್ ಅಲ್ಲ ಎಂದು ಹೇಳಿ ಅಚ್ಚರಿ ಮೂಡಿಸಿದ ಆಶೀಶ್​ ನೆಹ್ರಾ

ಐಸಿಸಿ ಪುರುಷರ ಟಿ 20 ವಿಶ್ವಕಪ್ 2024 ರಲ್ಲಿ ಸ್ಪರ್ಧಿಸುವ ಮೊದಲು ಶ್ರೀಲಂಕಾ ಬಾಂಗ್ಲಾದೇಶ ವಿರುದ್ಧ ಎರಡು ಟೆಸ್ಟ್, ಮೂರು ಏಕದಿನ ಮತ್ತು ಮೂರು ಟಿ 20 ಪಂದ್ಯಗಳನ್ನು ಆಡಲಿದೆ. ತವರಿನಲ್ಲಿ ಭಾರತದ ವಿರುದ್ಧ ಆಡಿದ ನಂತರ, ಶ್ರೀಲಂಕಾ ಮೂರು ಪಂದ್ಯಗಳ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್​ಗೆ ಪ್ರವಾಸ ಮಾಡಲಿದೆ. ನಂತರ, ಅವರು ಸೆಪ್ಟೆಂಬರ್ ನಿಂದ ನವೆಂಬರ್ ವರೆಗೆ ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳಿಎಗ ಆತಿಥ್ಯ ವಹಿಸಲಿದ್ದಾರೆ. 2024ರ ಋತುವಿನ ಕೊನೆಯಲ್ಲಿ ಶ್ರೀಲಂಕಾ ತಂಡವು ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್​​ಗೆ ಭೇಟಿ ನೀಡಲಿದೆ.

Continue Reading

ಕ್ರಿಕೆಟ್

Rinku Singh : ರಿಂಕು ಸಿಂಗ್​ ಉತ್ತಮ ಫಿನಿಶರ್ ಅಲ್ಲ ಎಂದು ಹೇಳಿ ಅಚ್ಚರಿ ಮೂಡಿಸಿದ ಆಶೀಶ್​ ನೆಹ್ರಾ

Rinku Singh : ರಿಂಕು ಸಿಂಗ್ ಯಾವುದೇ ಕ್ರಮಾಂಕದಲ್ಲಿ ಆಡಬಲ್ಲರು ಎಂಬುದಾಗಿ ಆಶೀಶ್ ನೆಹ್ರಾ ಹೇಳಿಕೊಂಡಿದ್ದಾರೆ.

VISTARANEWS.COM


on

Rinku Singh
Koo

ಬೆಂಗಳೂರು: ಐಪಿಎಲ್ 2023 ಋತುವಿನಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ರಿಂಕು ಸಿಂಗ್ (Rinku Singh) ಅವರಿಗೆ ಐರ್ಲೆಂಡ್ ಟಿ20ಐ ಪ್ರವಾಸ ಮತ್ತು ಚೀನಾದ ಹ್ಯಾಂಗ್ಜೌನಲ್ಇಲ ಏಷ್ಯನ್ ಕ್ರೀಡಾಕೂಟಕ್ಕಾಗಿ ಭಾರತದ ತಂಡದಲ್ಲಿ ಸ್ಥಾನ ಪಡೆದುಕೊಂಡರು. ರಾಷ್ಟ್ರೀಯ ತಂಡದಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಯುವ ಆಟಗಾರ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅವರೀಗ ಭಾರತ ತಂಡದ ಮಧ್ಯಮ ಕ್ರಮಾಂಕದ ಉತ್ತಮ ಆಟಗಾರ ಎಂಬ ಖ್ಯಾತಿ ಪಡೆದುಕೊಂಡಿದ್ದಾರೆ.

ರಿಂಕು ಪ್ರಸ್ತುತ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಐದು ಟಿ 20ಐ ಸರಣಿಯಲ್ಲಿ ಆಡುತ್ತಿದ್ದಾರೆ. ವಿಶಾಖಪಟ್ಟಣಂನಲ್ಲಿ ನಡೆದ ಆರಂಭಿಕ ಪಂದ್ಯದಲ್ಲಿ ಅವರು 14 ಎಸೆತಗಳಲ್ಲಿ 22* ರನ್ ಗಳಿಸಿ ಭಾರತವನ್ನು ಗೆಲುವು ತಂದುಕೊಟ್ಟಿದ್ದರು. ಎರಡನೇ ಟಿ 20 ಐನಲ್ಲಿ, ಎಡಗೈ ಬ್ಯಾಟರ್​​ 9 ಎಸೆತಗಳಲ್ಲಿ 31* ರನ್ ಗಳಿಸಿದ್ದರು. ಆದರೆ ಮೂರನೇ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ಸಿಗಲಿಲ್ಲ. ಅವರ ಫಿನಿಶಿಂಗ್ ಸಾಮರ್ಥ್ಯದಿಂದ ಪ್ರಭಾವಿತರಾದ ಕೆಲವು ಮಾಜಿ ಕ್ರಿಕೆಟಿಗರು ರಿಂಕು ಸಿಂಗ್ ಅವರಿಗೆ ವಿಶ್ವಾಸಾರ್ಹ ಫಿನಿಶರ್ ಎಂಬ ಟ್ಯಾಗ್ ನೀಡಿದ್ದಾರೆ. ಕೆಲವರು ಅವರನ್ನು ದಂತಕಥೆ ಎಂಎಸ್ ಧೋನಿಗೆ ಹೋಲಿಸುತ್ತಿದ್ದಾರೆ.

ಎಲ್ಲ ಕ್ರಮಾಂಕಕ್ಕೆ ಫಿಟ್​

ಭಾರತದ ಮಾಜಿ ವೇಗಿ ಆಶಿಶ್ ನೆಹ್ರಾ ರಿಂಕುಗೆ ‘ಫಿನಿಶರ್’ ಎಂಬ ಟ್ಯಾಗ್ ಕೊಡುವುದನ್ನನು ಒಪ್ಪುತ್ತಿಲ್ಲ. ರಿಂಕು ಅವರು ಎಲ್ಲ ಕ್ರಮಾಂಕದಲ್ಲಿ ಆಡಬಲ್ಲರು ಹಾಗೂ ಯಾವುದೇ ತಂಡದಲ್ಲಿ ಆಡುವ ಸಾಮರ್ಥ್ಯ ಹೊಂದಿದ್ದಾರೆ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ.

“ರಿಂಕು ಈ ರೀತಿ ಪ್ರದರ್ಶನ ನೀಡುತ್ತಿರುವುದು ಇದೇ ಮೊದಲಲ್ಲ. ನಾವೆಲ್ಲರೂ ಅವರ ಪಾತ್ರ, ಅವರ ಶಕ್ತಿಯ ಬಗ್ಗೆ ಚರ್ಚಿಸುತ್ತಿದ್ದೇವೆ. ಅವರ ಬ್ಯಾಟಿಂಗ್ ಬಗ್ಗೆ ಮಾತ್ರವಲ್ಲ, ಅವರು ಮೈದಾನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುವದರ ಬಗ್ಗೆಯೂ ಮಾತನಾಡುತ್ತಿದ್ದೇವೆ. ಅವರು ಭಾರತೀಯ ಕ್ರಿಕೆಟ್​ಗೆ ದೊಡ್ಡ ಆಸ್ತಿಯಾಗಲಿದ್ದಾರೆ. ಹೌದು, ನಾವು ಟಿ 20 ಕ್ರಿಕೆಟ್ ಬಗ್ಗೆ ಮಾತ್ರ ಮಾತನಾಡುತ್ತಿದ್ದೇವೆ. ಆದರೆ ನಾಳೆ ಅವರು ಏಕದಿನ ಕ್ರಿಕೆಟ್ ಕೂಡ ಆಡಬಹುದು”ಎಂದು ನೆಹ್ರಾ ಜಿಯೋ ಸಿನೆಮಾ ಜತೆ ಮಾತನಾಡುತ್ತಾ ಹೇಳಿದ್ದಾರೆ.

ಫಿನಿಶರ್ ಪದದ ಅಭಿಮಾನಿ ಅಲ್ಲ

“ನಾನು ‘ಫಿನಿಶರ್’ ಪದದ ದೊಡ್ಡ ಅಭಿಮಾನಿಯಲ್ಲ. ಓಪನರ್ ಫಿನಿಶರ್ ಆಗಬಹುದು. ಅವರು ಶತಕ ಗಳಿಸಿದರೆ ಅವರು ಕೂಡ ಫಿನಿಶರ್​ ಕೆಲವೊಮ್ಮೆ, ಇದು ಕಠಿಣವಾಗಬಹುದು. ಅದೇ ರಿಂಕು ಸಿಂಗ್ ಒಂದು ಅಥವಾ ಎರಡು ಬಾರಿ ಆಟವನ್ನು ಮುಗಿಸದಿದ್ದರೆ ಅವರನ್ನು ಫಿನಿಶರ್ ಎಂದು ಹೇಳುವುದು ಸಾಧ್ಯವೇ ರಿಂಕು ಸಿಂಗ್ ಬಗ್ಗೆ ಹೇಳುವುದಾದರೆ, ಅವರು ಯಾವುದೇ ಕ್ರಮಾಂಕದಲ್ಲಿ ಆಡಬಲ್ಲ ವ್ಯಕ್ತಿ. ಅವರು ಮುಂದೆ 50 ಓವರ್​ಗಳ ಕ್ರಿಕೆಟ್​ನಲ್ಲಿ ಆಡುವುದನ್ನು ನಾನು ನೋಡಬಹುದು. ಅವರು 4, 5 ಅಥವಾ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಲ್ಲರು, “ಎಂದು ನೆಹ್ರಾ ಹೇಳಿದ್ದಾರೆ.

ಟಿ20ಐ ವೃತ್ತಿಜೀವನದಲ್ಲಿ, ರಿಂಕು ಸಿಂಗ್ ಎಂಟು ಪಂದ್ಯಗಳು ಮತ್ತು ನಾಲ್ಕು ಇನ್ನಿಂಗ್ಸ್​ಗಳಲ್ಲಿ 128.00 ಸರಾಸರಿಯಲ್ಲಿ 128 ರನ್ ಗಳಿಸಿದ್ದಾರೆ. ಅವರ ರನ್​ಗಳು 216.95 ಕ್ಕೂ ಹೆಚ್ಚು ಸ್ಟ್ರೈಕ್ ರೇಟ್​​ನಲ್ಲಿ ಬಂದಿವೆ. ಅವರು ಮೂರು ಸಂದರ್ಭಗಳಲ್ಲಿ ಅಜೇಯರಾಗಿ ಉಳಿದಿದ್ದಾರೆ.

ಭಾರತ 5-6 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 40 ರನ್ ಗಳಿಸಬಹುದು. ರಿಂಕು ಸಿಂಗ್ ಯಾವುದೇ ಪಾತ್ರವನ್ನು ನಿರ್ವಹಿಸಲು ಸಿದ್ಧರಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅವರು ತಮ್ಮನ್ನು ಫಿನಿಶರ್ ಎಂದು ಟ್ಯಾಗ್ ಮಾಡಲು ಬಯಸುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಎಲ್ಲಾ ವಿಭಾಗಗಳಲ್ಲಿ ಉತ್ತಮ ಸಾಧನೆ ಮಾಡಲು ನೋಡಬೇಕು, ಎಂದು ನೆಹ್ರಾ ಹೇಳಿದರು.

Continue Reading

ಕ್ರಿಕೆಟ್

Eng vs Aus : ಇಂಗ್ಲೆಂಡ್​, ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳಿಗೆ ಪ್ರೇಕ್ಷಕರಿಗೆ ಫ್ರೀ ಟಿಕೆಟ್​​!

ind vs aus : ಭಾರತೀಯ ಮಹಿಳಾ ತಂಡದ ಪಂದ್ಯಗಳನ್ನು ವೀಕ್ಷಿಸಲು ಅಭಿಮಾನಿಗಳನ್ನು ಉತ್ತೇಜಿಸಲು ಉಚಿತ ಟಿಕೆಟ್ ನೀಡುವ ನಿರ್ಧಾರವನ್ನು ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ತೆಗೆದುಕೊಂಡಿದೆ.

VISTARANEWS.COM


on

Womens Cricke team
Koo

ಬೆಂಗಳೂರು: ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಇಂಗ್ಲೆಂಡ್ (Eng vs Aus ) ಮತ್ತು ಆಸ್ಟ್ರೇಲಿಯಾ ವಿರುದ್ಧದ ಭಾರತೀಯ ಮಹಿಳಾ ತಂಡದ ಟಿ20 ಪಂದ್ಯಗಳನ್ನು ವೀಕ್ಷಿಸಲು ಪ್ರೇಕ್ಷಕರಿಗೆ ಉಚಿತ ಪ್ರವೇಶ ಅವಕಾಶವನ್ನು ಬಿಸಿಸಿಐ ಕಲ್ಪಿಸಿದೆ. ಮಹಿಳಾ ಕ್ರಿಕೆಟ್​ ಮೇಲೆ ಅಭಿಮಾನಿಗಳಿಗೆ ಪ್ರೀತಿ ತೋರಿಸಲು ಹಾಗೂ ಮಹಿಳೆಯರ ಕ್ರಿಕೆಟ್​ಗೆ ಉತ್ತೇಜನ ನೀಡಲು ಬಿಸಿಸಿಐ ಈ ಕ್ರಮ ಕೈಗೊಂಡಿದೆ. ಎಂಸಿಎ ಅಧ್ಯಕ್ಷ ಅಮೋಲ್ ಕಾಳೆ ಮತ್ತು ಅಪೆಕ್ಸ್ ಕೌನ್ಸಿಲ್ ಭಾರತದಲ್ಲಿ ಮಹಿಳಾ ಕ್ರಿಕೆಟ್ ಅನ್ನು ಪ್ರೋತ್ಸಾಹಿಸುವ ಮತ್ತು ಉತ್ತೇಜಿಸುವ ನಿರ್ಧಾರವನ್ನು ಸರ್ವಾನುಮತದಿಂದ ಅಂಗೀಕರಿಸಿದೆ.

ಮಹಿಳಾ ಕ್ರಿಕೆಟ್​ಗೆ ನೀಡುವ ನಿರ್ಧಾರವನ್ನು ಎಂಸಿಎ ಅಧ್ಯಕ್ಷ ಅಮೋಲ್ ಕಾಳೆ ಮತ್ತು ಅಪೆಕ್ಸ್ ಕೌನ್ಸಿಲ್ ಸರ್ವಾನುಮತದಿಂದ ಅಂಗೀಕರಿಸಿದೆ” ಎಂದು ಕಾರ್ಯದರ್ಶಿ ಅಜಂಕ್ಯಾ ನಾಯಕ್ ತಿಳಿಸಿದ್ದಾರೆ.

ಉಚಿತ ಪ್ರವೇಶಕ್ಕಾಗಿ ಗೇಟ್​ಗಳನ್ನು ಮುಕ್ತವಾಗಿಡುವ ಕಾರಣ ಕ್ರೀಡಾಂಗಣವು ಭರ್ತಿಯಾಗುವುದಲ್ಲದೆ, ಮಹಿಳಾ ಟಿ 20 ಕ್ರಿಕೆಟ್ ಮೂಲಕ ಸಬಲೀಕರಣದ ಜಗತ್ತಿಗೆ ಬಾಗಿಲು ತೆರೆಯುತ್ತಿದ್ದೇ ಎ ಎಂದು ನಾಯಕ್ ಅವರು ಹೇಳಿದ್ದಾರೆ.

ತವರಿನ ಬೇಸಿಗೆ ಋತು ಆರಂಭ

ನವೆಂಬರ್ 29 ರಿಂದ ಡಿಸೆಂಬರ್ 1 ರವರೆಗೆ ಇಂಗ್ಲೆಂಡ್ ಎ ವಿರುದ್ಧ ಮೂರು ಟಿ20 ಪಂದ್ಯಗಳನ್ನು ಆಡಲು ಭಾರತ ಎ ತಂಡ ಸಜ್ಜಾಗಿದೆ. ಇದರೊಂದಿಗೆ ತವರು ಬೇಸಿಗೆಯನ್ನು ಪ್ರಾರಂಭಿಸಲಿದೆ. ಈ ಪಂದ್ಯಗಳ ಆರಂಭದ ಸಮಯ ಮಧ್ಯಾಹ್ನ 1.30. ಎಲ್ಲಾ ಪಂದ್ಯಗಳು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿವೆ. ಹರ್ಮನ್ಪ್ರೀತ್ ಕೌರ್ ನೇತೃತ್ವದ ಭಾರತ ತಂಡವು ಡಿಸೆಂಬರ್ 6 ರಿಂದ ಪ್ರಾರಂಭವಾಗುವ ಮೂರು ಪಂದ್ಯಗಳ ಟಿ 20 ಐ ಸರಣಿಗಾಗಿ ಹೇದರ್​ ನೈಟ್ ನೇತೃತ್ವದ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಎರಡನೇ ಮತ್ತು ಮೂರನೇ ಟಿ 20 ಪಂದ್ಯಗಳು ಕ್ರಮವಾಗಿ ಡಿಸೆಂಬರ್ 9 ಮತ್ತು 10 ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿವೆ.

ಡಿಸೆಂಬರ್ 14 ರಿಂದ 17 ರವರೆಗೆ ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಏಕೈಕ ಟೆಸ್ಟ್ ಪಂದ್ಯ ನಡೆಯಲಿದೆ. ಇಂಗ್ಲೆಂಡ್ ಸರಣಿ ಮುಗಿದ ನಂತರ ಭಾರತ ಮಹಿಳೆಯರ ತಂಡ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಮೊದಲಿಗೆ ಡಿಸೆಂಬರ್ 21 ರಿಂದ 24 ರವರೆಗೆ ಏಕೈಕ ಟೆಸ್ಟ್ ಪಂದ್ಯವನ್ನು ಆಡಲಿದ್ದು, ನಂತರ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ.

ಇದನ್ನೂ ಓದಿ : Rahul Dravid: ಭಾರತ ಕ್ರಿಕೆಟ್‌ ತಂಡ ಕೋಚ್‌ ಆಗಿ ಮುಂದುವರಿಯಲು ರಾಹುಲ್‌ ದ್ರಾವಿಡ್‌ಗೆ ಬಿಸಿಸಿಐ ಆಫರ್‌

ಮೊದಲ ಏಕದಿನ ಪಂದ್ಯ ಡಿಸೆಂಬರ್ 28 ರಂದು ಎರಡನೇ ಏಕದಿನ ಪಂದ್ಯ ಡಿಸೆಂಬರ್ 30 ರಂದು ಮತ್ತು ಮೂರನೇ ಮತ್ತು ಅಂತಿಮ ಏಕದಿನ ಪಂದ್ಯ ಜನವರಿ 2, 2024 ರಂದು ನಡೆಯಲಿದೆ. ಎಲ್ಲಾ ಮೂರು ಏಕದಿನ ಪಂದ್ಯಗಳು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿವೆ.

ಭಾರತ ತಂಡಕ್ಕೆ ಅಭಿಮಾನಿಗಳ ಬೆಂಬಲದ ನಿರೀಕ್ಷೆ

ಉಚಿತ ಟಿಕೆಟ್ ಗಳೊಂದಿಗೆ, ಮುಂಬೈನ ಅಭಿಮಾನಿಗಳು ಮಹಿಳೆಯರ ಕ್ರಿಕೆಟ್​ ಪಂದ್ಯವನ್ನು ತೊಂದರೆಯಿಲ್ಲದೆ ವೀಕ್ಷಿಸಬಹುದು. ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧದ ಟಿ 20 ಸರಣಿಯ ಸಮಯದಲ್ಲಿ ಹರ್ಮನ್ಪ್ರೀತ್ ಕೌರ್ ಮತ್ತು ತಂಡವನ್ನು ಹುರಿದುಂಬಿಸಲು ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಟಿ20 ಸರಣಿಯ ಫಲಿತಾಂಶವು ಭಾರತಕ್ಕೆ ಪೂರಕವಾಗಿ ಬಂದಿಲ್ಲವಾದರೂ ಎರಡೂ ತಂಡಗಳು ಗುಣಮಟ್ಟದ ಕ್ರಿಕೆಟ್ ಅನ್ನು ಆಡಿದವು.

Continue Reading
Advertisement
Fashion Show
ದೇಶ28 mins ago

Fashion Show : ಏಕತೆಗೆ ಧಕ್ಕೆ; ಫ್ಯಾಶನ್​ ಶೋದಲ್ಲಿ ಬುರ್ಖಾ ಹಾಕಿದ್ದಕ್ಕೆ ಮುಸ್ಲಿಂ ನಾಯಕನ ಆಕ್ಷೇಪ!

kalpamrutha cold pressed oil production unit inaugurated
ಕರ್ನಾಟಕ29 mins ago

ಕಲ್ಪಾಮೃತ ಶುದ್ಧ ಗಾಣದ ಎಣ್ಣೆ ಉತ್ಪಾದನಾ ಘಟಕಕ್ಕೆ ಚಾಲನೆ

Gadaga accident two bike riders dead
ಕರ್ನಾಟಕ29 mins ago

Road Accident : ಸೋದರನ ನಿಶ್ಚಿತಾರ್ಥ ಮುಗಿಸಿ ಹೊರಟ ಇಬ್ಬರು ಅಪಘಾತದಲ್ಲಿ ಮೃತ್ಯು

Anju who went to Pakistan for to marry her lover, returns to India
ದೇಶ32 mins ago

Anju Love Story: ಪಾಕ್‌ಗೆ ಹೋಗಿ ಪ್ರಿಯಕರನ ಮದ್ವೆಯಾಗಿದ್ದ ಅಂಜು ಭಾರತಕ್ಕೆ ವಾಪಸ್!

vijaypura accident
ಕರ್ನಾಟಕ45 mins ago

Road Accident : ಕಬ್ಬು ತುಂಬಿದ ಟ್ರ್ಯಾಕ್ಟರ್‌ಗೆ ಬೈಕ್‌ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು

Task force committee meeting at Kottur
ವಿಜಯನಗರ56 mins ago

Vijayanagara News: ಮೂಲ ಸೌಕರ್ಯಗಳಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಿ: ಶಾಸಕ ನೇಮಿರಾಜ ನಾಯ್ಕ

Pooja Gandhi and Vijay Ghorpade
ಕರ್ನಾಟಕ1 hour ago

Pooja Gandhi: ಮಳೆ ಹುಡುಗಿಗೆ ಮಂತ್ರ ಮಾಂಗಲ್ಯ; ಹೊಸ ಬಾಳಿಗೆ ಕಾಲಿಟ್ಟ ಪೂಜಾ ಗಾಂಧಿ

Bombay High court orders to son to vacate his mother flat
ಕೋರ್ಟ್1 hour ago

ಆರೈಕೆ ಮಾಡದ ಮಗನಿಗೆ ತಾಯಿಯ ಫ್ಲ್ಯಾಟ್ ಖಾಲಿ ಮಾಡಲು ಬಾಂಬೆ ಹೈಕೋರ್ಟ್ ಆದೇಶ

TV Mohandas Pai Priyank Kharge
ಕರ್ನಾಟಕ1 hour ago

Mohandas Pai : ಐಟಿ ಸಿಟಿ ಗರಿ ಉದುರೀತು ಎಂದ ಮೋಹನ್‌ ದಾಸ್‌ ಪೈ, ಪ್ರಿಯಾಂಕ್‌ ತಿರುಗೇಟು

physical abuse
ದೇಶ2 hours ago

Physical Abuse : ನೀಚ ಕೃತ್ಯ; ನರ್ಸರಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಸ್ಕೂಲ್ ವ್ಯಾನ್ ಡ್ರೈವರ್​

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Bigg Boss- Saregamapa 20 average TRP
ಕಿರುತೆರೆ1 month ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ4 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Sphoorti Salu
ಸುವಚನ6 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Dina Bhavishya
ಪ್ರಮುಖ ಸುದ್ದಿ17 hours ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ಈ ರಾಶಿಯವರಿಗೆ ಬೇಸರ ತರಲಿದೆ ಸಂಗಾತಿಯ ಕಹಿ ಮಾತು

Cm Siddaramaiah in Janatha Darshan
ಕರ್ನಾಟಕ2 days ago

Janatha Darshan : ಜನಸ್ಪಂದನದಲ್ಲಿ ಸ್ವೀಕಾರವಾಗಿದ್ದು 3812 ಅರ್ಜಿ; ಇವುಗಳ ಸ್ಟೇಟಸ್‌ ಈಗ ಹೇಗಿದೆ?

CM Siddaramaiah Janatha Darshan
ಕರ್ನಾಟಕ2 days ago

Janatha Darshan : ಸಮಸ್ಯೆಗಳ ಪರಿಹಾರಕ್ಕೆ ಹದಿನೈದು ದಿನ ಗಡುವು ಕೊಟ್ಟ ಸಿಎಂ; ಕುಳಿತಲ್ಲೇ ಸಿದ್ದು ಊಟ!

Cm Siddaramaiah in Janatha Darshan
ಕರ್ನಾಟಕ2 days ago

Janatha Darshan : ಜಿಲ್ಲಾ ಮಟ್ಟದ ಸಮಸ್ಯೆ ಬೆಂಗಳೂರಿಗೆ ಬಂದರೆ ಸಹಿಸಲ್ಲ; ಸಿಎಂ ಖಡಕ್‌ ಎಚ್ಚರಿಕೆ

CM Janatha Darshana solved mysore citizens problem
ಕರ್ನಾಟಕ2 days ago

Janatha Darshan : ಮಾಲೀಕನ ಮನೆ ಹರಾಜು; ಲೀಸ್‌ ದುಡ್ಡಿಗೆ ಯಾರು ಗ್ಯಾರಂಟಿ? ಕಂಗೆಟ್ಟ ಕುಟುಂಬಕ್ಕೆ ಸಿಎಂ ರಕ್ಷಣೆ!

Shivajingar School building collapses The children escaped unhurt
ಕರ್ನಾಟಕ2 days ago

Building collapse : ಏಕಾಏಕಿ ಕುಸಿದು ಬಿದ್ದ ಶಾಲಾ ಕಟ್ಟಡ; ಪ್ರಾಣಾಪಾಯದಿಂದ ಚಿಣ್ಣರು ಪಾರು

CM Siddaramaiah Janatha Darshan
ಕರ್ನಾಟಕ2 days ago

Janatha Darshan : ಸಿಎಂಗೆ ದೂರು ನೀಡಬೇಕೇ? ಜನತಾ ದರ್ಶನಕ್ಕೆ ಹೋಗಬೇಕಿಲ್ಲ; ಈ ನಂಬರ್‌ಗೆ ಕರೆ ಮಾಡಿ!

read your daily horoscope predictions for november 27 2023
ಪ್ರಮುಖ ಸುದ್ದಿ3 days ago

Dina Bhavishya: ನಿಮ್ಮನ್ನು ಉರುಳಿಸಲು ಪಿತೂರಿ ಮಾಡ್ತಾರೆ ಹುಷಾರ್‌!

Danger Influenza People are suffering from the flu
ಆರೋಗ್ಯ3 days ago

Viral fever: ಡೆಡ್ಲಿ ಚೀನಾ ವೈರಸ್‌; ಮಕ್ಕಳಿಗೆ ಇದರಿಂದ ಅಪಾಯ ಇದೆಯಾ?

ಟ್ರೆಂಡಿಂಗ್‌